ಅಪಘಾತ ಪ್ರಕರಣ
:
ಸಂಚಾರಿ ಠಾಣೆ : ದಿನಾಂಕ 11.01.2015 ರಂದು 7.30 ಪಿಎಮ್ ಕ್ಕೆ ಸೇಡಂ ರೋಡಿನಲ್ಲಿ
ಇರುವ ಸ್ಮಶಾನ ಹನುಮಾನ ಗುಡಿ ಹಿಂದಿನ ಕ್ರಾಸ್ ಹತ್ತಿರ ರೋಡಿನ ಮೇಲೆ ಆರೋಪಿ ತನ್ನ ಮೋಟಾರ ಸೈಕಲ
ನಂ ಕೆ ಎ 32. ವಿ 8979 ನೇದ್ದನ್ನು ಸೇಡಂ ರಿಂಗ
ರೋಡ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಜಿಲ್ಲಾ ಸರ್ಕಾರಿ
ಆಸ್ಪತ್ರೆಕಡೆಯಿಂದ ರೋಡಿನ ಎಡಗಡೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಶ್ರೀ ಶರತ ತಂದೆ ಚಂದ್ರಪ್ಪಾ ಒಂಟಿ ಸಾ, ಪ್ರಗತಿ ಕಾಲೊನಿ ಕಲಬುರಗಿ ರವರ ಮೋಟಾರ ಸೈಕಲ ನಂ ಕೆ.ಎ 32. ಇಬಿ 5453 ನೇದ್ದಕ್ಕೆ ಬಲಗಡೆ ಭಾಗಕ್ಕೆ ಡಿಕ್ಕಿ ಹೊಡೆದು
ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಬಲಗಾಲು
ಮೋಳಕಾಲು ಕೆಳಗೆ ಪಾದಕ್ಕೆ ಮತ್ತು ಬಲಗೈ ತೋರು ಬೆರಳಿಗೆ ಹಾಗು ಹಣೇಗೆ ಭಾರಿ ಪೆಟ್ಟಾಗಿ ರಕ್ತಗಾಯಗಳಾಗಿರುತ್ತವೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಬಸಲಿಂಗಪ್ಪಾ ತಂದೆ ಶಿವಬಸಪ್ಪಾ ನಿರಡಿ
ಸಾ: ಮನೆ ನಂ. 85 ಶಾಂತಿ ನಗರ ಗಾರ್ಡನ ಹತ್ತಿರ ಕಲಬುರಗಿ ರವರು ಟಾಟಾ ಎಸ ವಾಹನ ನಂ. ಕೆಎ 32-ಎ-9256 ಚಸ್ಸಿ ನಂ.445051ಜಿಆರಝೆಡವಿ40943 ಇಂಜಿನ ನಂ.
275ಐಡಿಐ05ಜಿಆರ್‌ಜೆಡ್‌ಎಸ್39993 ನೇದ್ದನ್ನು ಖರಿದಿಸಿದ್ದು ವಿಜಯಕುಮಾರ ರವರಿಗೆ ಚಾಲಕನಾಗಿ
ನೇಮಿಸಿದ್ದು ಅವನು ವಾಹನವನ್ನು ರಾತ್ರಿ ವೇಳೆಯಲ್ಲಿ ಮನೆಯ ಮುಂದೆ ನಿಲ್ಲಿಸಿ ತನ್ನ ಮನೆಗೆ ಹೊಗಿರುತ್ತಾನೆ
ದಿನಾಂಕ 11/01/2015 ರಂದು ರಾತ್ರಿ ವೇಳೆ ಸದರಿ
ವಾಹನವನ್ನು ನಮ್ಮ ಮನೆಯ ಮುಂದೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು ರಾತ್ರಿ ವೇಳೆ ಯಾರೋ
ಕಳ್ಳರು ವಾಹನವನ್ನು ಕಳವು ಮಾಡಿಕೊಂಡು
ಹೊಗಿರುತ್ತಾರೆ. ವಾಹನದ ಬೆಲೆ ಸುಮಾರು 2-50 ಲಕ್ಷ ಇರಬಹುದು.4-5 ತಿಂಗಳ ಹಿಂದೆ ನಮ್ಮ ಹತ್ತಿರ
ಡ್ರೈವರ ಕೆಲಸ ಬಿಟ್ಟು ಹೊಗಿದ್ದ ಸಾಜೀದನ ಮೇಲೆ ಸಂಶಯವಿದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment