Police Bhavan Kalaburagi

Police Bhavan Kalaburagi

Wednesday, January 28, 2015

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 26-01-2015 ರಂದು ಬೆಳಿಗ್ಗೆ ಶ್ರೀ ಸೋಮಶೇಖರ ತಂದೆ ಬಾಬಾಸಾಹೇಬಗೌಡ ಮಾಲೀಪಾಟೀಲ  ಸಾ: ನಗರ ಗುಡಿ ಹತ್ತಿರ ಮಾಣೆಕೇಶ್ವರಿ  ಕಾಲೋನಿ ಕಲಬುರಗಿ ರವರು ಮತ್ತು ತನ್ನ ಮೊಮ್ಮಗ ನಾದ ಆಕಾಶ ಮತ್ತು ಜಗತ ಓಣಿಯ ನನ್ನ ಮೊಮ್ಮಗನ ಗೆಳಯ ಪ್ರತಾಪರೆಡ್ಡಿ ಮೂರು ಜನರು ಕೂಡಿಕೊಂಡು ಡಿ.ಎ.ಆರ್. ಪರೇಡ ಮೈದಾನದಲ್ಲಿ ಗಣರಾಜೋತ್ಸ ನೋಡಿಕೊಂಡು ಹಾಗೇ ಏಷಿಯನ ಮಹಲ ನೋಡುವ ಸಲುವಾಗಿ ಮೂರು ಜನರು ಹಳೆ ಡಿಪಿಓ ಕ್ರಾಸದಿಂದ ಏಷಿಯನ ಮಹಲ ಕಡೆಗೆ ನಡೆದುಕೊಂಡು ಹೋಗುವಾಗ ಏಷಿಯನ ಮಹಲ ಎದುರಿನ ರೋಡ ಮೇಲೆ ಎದುರಿನಿಂದ ಮೋ/ಸೈಕಲ ನಂಬರ ಕೆಎ-32 ಕೆ-9707 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಕಾಶ ಮತ್ತು ಪ್ರತಾಪರೆಡ್ಡಿ ಇಬ್ಬರಿಗೂ ಅಪಘಾತ ಪಡಿಸಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ  : ಶ್ರೀ ಈಶ್ವರ ತಂದೆ ಕೈಲಾಸ ಜಾಧವ ಸಾ|| ಕಿಷನ್ ನಾಯಕ ತಾಂಡಾ ತಾ|| ಉದನೂರ ಜಿಲ್ಲಾ|| ಅದಿಲಾಬಾದ ರವರು  ಎರಡು ತಿಂಗಳ ಹಿಂದೆ ಕಬ್ಬು ಕಡಿಯಲು ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿಗೆ ಬಂದಿದ್ದು ನನ್ನಂತೆ ನಮ್ಮ ಮಾವ ಸವಾಯಿರಾಮ ರಾಠೋಡ, ಹಾಗು ನಮ್ಮ ತಾಂಡಾದವರಾದ ಸಂತೋಷ ರಾಠೋಡ, ಇಂದರ ರಾಠೋಡ, ಗಣೇಶ ರಾಠೋಡ ಹಾಗು ಇತರರು ಬಂದಿದ್ದು ದಿನಾಂಕ 27-01-2015 ರಂದು ಅಫಜಲಪೂರ ತಾಲೂಕಿನ ಶಂಕರ ಸೋಬಾನಿ ರವರ ಹೊಲದಲ್ಲಿ ಕಬ್ಬು ಕಡಿಯುತ್ತಿದ್ದೇವು. ನಂತರ ನಾನು 12;00 ಪಿ.ಎಂ ಸುಮಾರಿಗೆ ಅಫಜಲಪೂರ ಹತ್ತಿರ ಇರುವ ಶ್ರೀಗಿರಿ ಧಾಬಾಕೆ ಹೋಗಿ ಅಲ್ಲಿ ಧಾಬಾ ಮಾಲಕರಾದ ಸೋಮು ಶ್ರೀಗಿರಿ ರವರಿಗೆ ನಾನು ಕಬ್ಬು ಕಡಿಯವ ಕೆಲಸ ಮಾಡುತ್ತೇನೆ. ನಿಮ್ಮ ಹೊಲದಲ್ಲಿ ಕಬ್ಬು ಇದ್ದರೆ ಹೇಳಿ ನಮ್ಮ ಟೋಳಿ ಮಾಲಕರಿಗೆ ಹೇಳಿ ಆದಷ್ಟು ಬೇಗನೆ ಕಬ್ಬು ಕಟಾವ ಮಾಡುತ್ತೇವೆ ಅಂತಾ ಹೇಳಿ ಅಲ್ಲೆ ಧಾಬಾದಲ್ಲೆ ಊಟಾ ಮಾಡಿದೆನು, ನಾನು ಊಟಾ ಮಾಡಿದ ಬಿಲ್ಲು ತೆಗೆದುಕೊಂಡಿರುವುದಿಲ್ಲಾ. ನಂತರ ನಮ್ಮ ಟೋಳಿ ಮಾಲಿಕರಿಗೆ ಬೇಟಿಯಾಗಲು ಸೋಮು ಮತ್ತು  ಅವರ ತಮ್ಮ ಚಂದು ಶ್ರೀಗಿರಿ ಹಾಗು ಇನ್ನು ಒಬ್ಬನನ್ನು ಕರೆದುಕೊಂಡು ನಾವು ಕೆಲಸ ಮಾಡುತ್ತಿದ್ದ ಶಂಕರ ಸೋಬಾನಿ ರವರ ಹೊಲಕ್ಕೆ ಹೋದೆವು. ಆಗ ಸೋಮು ರವರು ನಮ್ಮ ಟೋಳಿದವರಿಗೆ ವಿಚಾರಿಸಿದಾಗ ಇನ್ನು ಇಲ್ಲಿ ಕೆಲಸ ಬಹಳ ಇದೆ ನಿಮ್ಮ ಹೊಲದ ಕಬ್ಬು ಕಟಾವ ಮಾಡುವುದಿಲ್ಲಾ ಅಂತಾ ಅಂದರು, ಅದಕ್ಕೆ ಸೋಮು ಇವನು ನನ್ನ ಮೇಲೆ ಸಿಟ್ಟಿಗೆ ಬಂದು ನನಗೆ ಏ ಸೂಳಿ ಮಗನಾ ಲಮಾಣ್ಯಾ ನಮಗೇ ಮೋಸಮಾಡತಿಯಾ ಮಗನಾ ಅಂತಾ ಅಂದು ಅಲ್ಲೆ ಬಿದ್ದಿದ ಒಂದು ಬಡಿಗೆ ತೆಗೆದುಕೊಂಡು ನನ್ನ ಎಡಗಡೆ ಕುತ್ತಿಗಿಯ ಮೇಲೆ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದನು, ಆಗ ನಾನು ಒಮ್ಮೇಲೆ ನೆಲದ ಮೇಲೆ ಬಿದ್ದಾಗ ಅದೆ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಅವನೊಂದಿಗೆ ಇದ್ದ ಎರಡು ಜನರು ನನ್ನ ಹೊಟ್ಟೆಯ ಮೆಲೆ ಒದ್ದು ಗಾಯಗೊಳಿಸಿ ಜಾತಿ ನಿಂದನೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: