ಅಪಘಾತ
ಪ್ರಕರಣಗಳು :
ನರೋಣಾ ಠಾಣೆ
: ದಿನಾಂಕ: 06-01-2015 ರಂದು ನಮ್ಮ ಚಿಕ್ಕಪ್ಪನ ಅಳಿಯನಾದ
ಶಿವಾನಂದನು ಬಂದು ಗಣೇಶನಿಗೆ ದೇವಲಗಾಣಗಾಪೂರಕ್ಕೆ ದೇವರ ದರ್ಶನಕ್ಕಾಗಿ ಹೋಗಿ ಬರೋಣ ಅಂತಾ ತಿಳಿಸಿದ
ಮೇರೆಗೆ ನನ್ನ ತಮ್ಮ ಗಣೇಶನು ಒಪ್ಪಿಕೊಂಡು ಶಿವಾನಂದನ ಮೊಟರಸೈಕಲ ನಂಬರ ಎಮ್.ಹೆಚ್ 12 ಜಿಯು 3473
ರ ಮೇಲೆ ಇಬ್ಬರು ಕೂಡಿ ಮುಂಜಾನೆ 9 ಗಂಟೆ ಸುಮಾರಿಗೆ ಲಾತೂರಿನಿಂದ ಮನೆಯಿಂದ ಹೋಗಿದ್ದು ರುತ್ತಾರೆ.
ರಾತ್ರಿ 11:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಮ್ಮ ಗಣೇಶನ ಹೆಂಡತಿಯಾದ ಸಂಧ್ಯಾ ಇವಳು
ನನ್ನ ಹತ್ತಿರ ಬಂದು ತನ್ನ ಗಂಡ ಗಣೇಶ ಹಾಗು ತಮ್ಮನಾದ ಶಿವಾನಂದ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಟ್ಟಿರುತ್ತಾರೆ
ಎಂದು ತಿಳಿಸಿದ ಮೇರೆಗೆ ನಾನು ಅಪಘಾತವಾದ ಸ್ಥಳವಾದ ಲಾಡಚಿಂಚೋಳಿ ಮತ್ತು ಕಡಗಂಚಿ ಮಧ್ಯ ಬಂದು ನೋಡಲಾಗಿ
ನಮ್ಮ ಸಂಬಧಿಕರಾದ ಶಿವಾನಂದ ಇವರ ಮೊಟರಸೈಕಲ ನಂಬರ
ಎಮ್.ಹೆಚ್ 12 ಜಿಯು 3473 ನೇದು ಜಕಮಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದು ರಸ್ತೆ ಮೇಲೆ ರಕ್ತದ ಕಲೆಗಳು
ಇದ್ದವು ನನ್ನ ತಮ್ಮ ಗಣೇಶ ಹಾಗು ಶಿವಾನಂದ ನ ಶವವು ಕಲಬುರ್ಗಿಯ ಸರಕಾರಿ ಸರಕಾರಿ ಆಸ್ಪತ್ರೆಯಲ್ಲಿ
ಇರುವ ಬಗ್ಗೆ ತಿಳಿದುಕೊಂಡು ಮುಂಜಾನೆ ಕಲಬುರ್ಗಿಯ
ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಗಣೇಶನಿಗೆ ಎಡಗಡೆ ಹಣೆಗೆ, ತಲೆಯಮೇಲೆ ಭಾರಿ ರಕ್ತ ಗಾಯ ಬಲಗೈ ಅಂಗೈ ಹಿಂದೆ ತರಚಿದ ಗಾಯ ಎಡಗಡೆ
ಪಕ್ಕೆಗೆ ಒಳಪೆಟ್ಟು ಆಗಿರುತ್ತದೆ ಹಾಗು ಶಿವಾನಂದನಿಗೆ ಹಣೆ ತಲೆಯ ಮೇಲೆ ಭಾರಿ ರಕ್ತ ಗಾಯ ಎದೆಗೆ ಒಳಪೆಟ್ಟು
ಎರಡು ಮೊಳಕಾಲು ಕೆಳಗೆ ರಕ್ತಗಾಯ ಹಾಗು ಮುಖಕ್ಕೆ ಜಜ್ಜಿದಂತಾಗಿ ಚಪ್ಪಟೆಯಾಗಿದ್ದು ದಿನಾಂಕ 06/01/2015 ರಂದು ದೇವಲಗಾಣಗಾಪೂರಕ್ಕೆ ಹೋಗಿ ದೇವರ ದರ್ಶನ ಪೆಡೆದು ಮರಳಿ ಅದೇ
ಮೊಟರಸೈಕಲ ಮೇಲೆ ಲಾತೂರಗೆ ಹೋಗುತ್ತಿರುವಾಗ ಕಡಗಂಚಿ ದಾಟಿ ಸುಮಾರು ಎರಡು ಕಿ.ಮೀ. ಅಂತರದಲ್ಲಿ ರಸ್ತೆ
ಮೇಲೆ ರಾತ್ರಿ 11:00 ಸುಮಾರಿಗೆ ಯಾವುದೋ ಒಂದು ವಾಹನ ಮೋಟರ ಸೈಕಲಗೆ ಡಿಕ್ಕಿ ಹೊಡೆದು ಮಾಹಿತಿ ನೀಡದೆ
ವಾಹನ ಸಮೇತವಾಗಿ ಓಡಿಹೋಗಿರುತ್ತಾನೆ ಅಂತಾ ಶ್ರೀ ಚಂದ್ರಶೇಖರ ತಂದೆ ಸೋಮನಾಥ ರೂಯಿಕರ ಸಾ ಲೋಖಂಡ ಗಲ್ಲಿ
ಹನುಮಾನ ದೇವಸ್ಥಾನದ ಹತ್ತಿರ ಲಾತೂರ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ
: ಶ್ರೀ ಮಲ್ಲಿಕಾರ್ಜುನ ತಂದೆ
ನಾಗಪ್ಪ ಕಲ್ಲಬೇನೂರ, ಸಾಃ ಆಂಜನೇಯ ನಗರ ಕಲಬುರಗಿ, ರವರು ದಿನಾಂಕ 06-01-2015 ರಂದು ಸೇಡಂ ರೋಡಿನಲ್ಲಿ ಇರುವ
ಆಂಜನೇಯ ಕ್ರಾಸ್ ಹತ್ತಿರ ರೋಡಿನ ಮೇಲೆ ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ. 6725 ನೇದ್ದರ
ಮೇಲೆ ಹಿಂದೆ ತನ್ನ 6 ವರ್ಷದ ಮಗ ಈತನ್ನನ್ನು ಕೂಡಿಸಿಕೊಂಡು ಮನೆಗೆ ಹೋಗಲು ಮೋಟಾರ ಸೈಕಲ ಬಲಗಡೆ
ಟರ್ನ ಮಾಡಿಕೊಳ್ಳುತ್ತಿದ್ದಾಗ ಸೇಡಂ ರಿಂಗ ರೋಡ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32 ಎಸ್ 5214
ನೇದ್ದರ ಚಾಲಕ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿಯ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ಎಡಗಾಲು ಮೊಳಕಾಲಿಗೆ
ಭಾರಿ ಗುಪ್ತಗಾಯ ಪೆಟ್ಟುಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಧನರಾಜ ತಂದೆ ಶಿವಪ್ಪ ಸರಡಗಿ ಸಾ : ಶಾಸ್ತ್ರಿ ಚೌಕ್ ಜೇವರ್ಗಿ
ಇವರು ದಿನಾಂಕ 07.01.2015 ತನ್ನ ಮೋಟಾರು ಸೈಕಲ್
ನಂ ಕೆ.ಎ-34 ಯು-8273 ನೇದ್ದರ ಮೇಲೆ ತನ್ನ ತಮ್ಮ ಚಿರತೆಗೌಡ ಹಾಗು ಗೆಳೆಯ ಅನೀಲ ತಂದೆ ಶಂಕರ
ಎಲ್ಲರು ಕೂಡಿ ಜೇವರ್ಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ರೋಡಿನಲ್ಲಿ ಹೋಗುತ್ತಿದ್ದಾಗ ಆ
ವೇಳೆಗೆ ಫಿರ್ಯಾದಿ ನಡೆಸುತ್ತಿದ್ದ ಮೋಟಾರು ಸೈಕಲ್ ಮುಂದುಗಡೆ ಹೋಗುತ್ತಿದ್ದ ಟಿಪ್ಪರ್ ನಂ
ಕೆಎ33-1884 ನೇದ್ದರ ಚಾಲಕನು ತನ್ನ ಟಿಪ್ಪರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ
ನಡೆಸಿಕೊಂಡು ಹಿಂದೆ ನೋಡದೆ ಅಲಕ್ಷ್ಯತನದಿಂದ ಒಮ್ಮೆಲೆ ಹೊರಳಿಸಿ ಮೋಟಾರು ಸೈಕಲ್‌ಗೆ ಡಿಕ್ಕಿ
ಪಡಿಸಿ ತನ್ನ ಟಿಪ್ಪರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment