Police Bhavan Kalaburagi

Police Bhavan Kalaburagi

Monday, February 16, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 27/2015 ಕಲಂ. 323, 324, 448, 504 ಸಹಿತ 34  ಐ.ಪಿ.ಸಿ:.
ದಿನಾಂಕ. 15-02-2015 ರಂದು 08-00 J.ಎಂ.ಕ್ಕೆ ಫಿರ್ಯಾದಿದಾರ ಮತ್ತು ಫಿರ್ಯಾದಿ ಹೆಂಡತಿ ಲಕ್ಷ್ಮವ್ವ, ಮಗಳು ಹನಮವ್ವ ಮೂರು ಜನರು ಇಂದರಗಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಇರುವಾಗ ಫಿರ್ಯಾದಿದಾರರ ಅಳಿಯ ಕರಿಯಪ್ಪ ಮತ್ತು ಮಗಳು ಮಂಜವ್ವ ಇವರು ಇಬ್ಬರು ಮನೆಗೆ ಬಂದು ಫಿರ್ಯಾದಿ ಹೆಸರಿನಲ್ಲಿರುವ ಹೊಲ ಮನೆ ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಜಗಳ ತೆಗೆದು ಅವಾಚ್ಯ ಬೈದು ಫಿರ್ಯಾದಿಗೆ ಮತ್ತು ಫಿರ್ಯಾದ ಹೆಂಡತಿ ಲಕ್ಷ್ಮವ್ವಳಿಗೆ ಹಾಗೂ ಹನಮವ್ವಳಿಗೆ ಮನೆಯಿಂದ ಹೊರಗೆ ಹಾಕಿ ಮನೆಯ ಬೀಗ ಹಾಕಿದ್ದು ನಂತರ ಫಿರ್ಯಾದಿಗೆ ಕರಿಯಪ್ಪನು ಕಲ್ಲಿನಿಂದ ತಲೆಗೆ ಹೊಡೆದಿರುತ್ತಾನೆ. ಲಕ್ಷ್ಮವ್ವಳಿಗೆ ಮತ್ತು ಹನಮವ್ವಳಿಗೆ ಮಂಜವ್ವಳು ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2)  ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 37/2015  ಕಲಂ 323, 324, 354, 504 ಐ.ಪಿ.ಸಿ:.  
ದಿನಾಂಕ 15-02-2015 ರಂದು 13-00 ಗಂಟೆಗೆ ಸಂದೀಪ ತಂದೆ ದಾವಲಪ್ಪ ಚಿತ್ರಗಾರ ವಯ 25 ವರ್ಷ ಉ: ಷಟರ್ಸ್ ಕೆಲಸ ಸಾ: ದೊಡ್ಡಿ ಲೇಔಟ್ ಗುಂಡಮ್ಮ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 14-02-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಆರೋಪಿ ಪ್ರಶಾಂತ ಇವನು  ದೊಡ್ಡಿ ಲೇಔಟ್ ಗುಂಡಮ್ಮ ಕ್ಯಾಂಪಿನಲ್ಲಿರುವ ಫಿರ್ಯಾದಿದಾರರ ಮನೆ ಹತ್ತಿರ ಬಂದು ಫಿರ್ಯಾದಿದಾರನ ಸಹೋದರನಾದ ಮಾರುತಿಯನ್ನು ಕರೆದು  ತನ್ನ ಮೋಟಾರ ಸೈಕಲ್ ಮೇಲೆ ಹತ್ತು ಅಂತಾ ಹೇಳಿದ್ದು, ಆಗ ಫಿರ್ಯಾದಿಯ ತಂದೆ ಅದನ್ನು ಕೇಳಿ ಮನೆಯೊಳಗಿನಿಂದ ಹೊರಗಡೆಗೆ ಹೋಗಿ ಇಷ್ಟೋತ್ತಿನಲ್ಲಿ ಏನು ಕೆಲಸವಿದೆ ಅಂತಾ ಕೇಳುತ್ತಾ ಮಾರುತಿಯನ್ನು ಮನೆಯೊಳಗೆ ಕಳಿಸುತ್ತಾ ಆರೋಪಿತನಿಗೆ ಕೇಳಿದಾಗ ಆರೋಪಿತನು ಫಿರ್ಯಾದಿಯ ತಂದೆಗೆ ಮುದೇನು ಆಗಿದ್ದಿ ಸೈಡಿಗೆ ಇರು ಅಂತಾ ಹೇಳುತ್ತಾ ಇದ್ದಕ್ಕಿದ್ದಂತೆ ತನ್ನ ಕೈಯಲ್ಲಿ ಹಾಕಿಕೊಂಡಿದ್ದ ಕಡಗದಿಂದ ಮೂಗಿಗೆ ಗುದ್ದಿದ್ದರಿಂದ ಫಿರ್ಯಾದಿಯ ತಂದೆಯು ನೆಲ್ಲಕೆ ಬಿದ್ದಿದ್ದು, ನೆಲಕ್ಕೆ ಬಿದ್ದರು ಸಹ ಬಿಡದೆ ಕಾಲಿನಿಂದ ಒದೆಯುತ್ತಿದ್ದು ಇದನ್ನು ನೋಡಿ ಫಿರ್ಯಾದಿಯು ತನ್ನ ತಾಯಿ ಹಾಗೂ ತಮ್ಮ ಮತ್ತು ಅತ್ತಿಗೆಯೊಂದಿಗೆ ಮನೆಯೊಳಗಿನಿಂದ ಹೊರಗೆ ಬಂದು ತನ್ನ ತಂದೆಯನ್ನು ಬಿಡಿಸಿಕೊಳ್ಳಲು ಹೋದಾಗ ಆರೋಪಿತನು ಫಿರ್ಯಾದಿಗೆ ಲೇ ಚೂತೆ ಸೂಳೇಮಕ್ಕಳೆ ನೀವು ಎಷ್ಟು ಜನ ಇದ್ದೀರಿ ಬರ್ರಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಅಂತಾ ಬೈದಾಡುತ್ತಾ ಅಲ್ಲಿ ಇದ್ದ ಇಟ್ಟಂಗಿ ತೆಗೆದುಕೊಂಡು ಫಿರ್ಯಾದಿಯ ಎಡಗಡೆಯ ಕಿವಿಗೆ ಹೊಡೆದಿದ್ದು ಹಾಗೂ ಫಿರ್ಯಾದಿಯ ಸಹೋದರನಿಗೆ ಕೈಯಿಂದ ದೂಕಿದ್ದು ಅಲ್ಲದೇ ಫಿರ್ಯಾದಿಯ ತಾಯಿಗೆ ಸೀರೆ ಹಿಡಿದು ಎಳೆದಾಡಿ ಕೈಯಿಂದ ಎದೆ ಹತ್ತಿರ, ಭುಜದ ಹತ್ತಿರ ಗುದಿದ್ದು ಅಲ್ಲದೇ ಫಿರ್ಯಾದಿಯ ಅತ್ತಿಗೆಗೂ ಸಹ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡಿ-ಬಡಿ ಮಾಡಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಠಾಣೆ ಗುನ್ನೆ ನಂ. 37/15 ಕಲಂ. 323, 324, 354, 504 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 38/2015  ಕಲಂ 323, 324, 354, 506 ಸಹಿತ 34 ಐ.ಪಿ.ಸಿ:.  
ದಿನಾಂಕ 15-02-2015 ರಂದು 17-00 ಗಂಟೆಗೆ ಶ್ರೀಮತಿ ಲಕ್ಷ್ಮೀಬಾಯಿ ಗಂಡ ದಿ: ಲಕ್ಷ್ಮಣ ಚಿತ್ರಗಾರ ವಯ 55 ವರ್ಷ, ಜಾ: ಚಿತ್ರಗಾರ, ಉ: ಕೂಲಿ ಕೆಲಸ ಸಾ: ಗುಂಡಮ್ಮ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 14-02-2015 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಮಗನು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಂ: 01 ನೇದ್ದವನು ಪಿರ್ಯಾದಿಗೆ ಕೊಡಬೇಕಾಗಿದ್ದ 50 ಸಾವಿರ ರೂಪಾಯಿಗಳನ್ನು ಕೇಳಲು ಹೋದಾಗ ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ ಆರೋಪಿತರು ಪಿರ್ಯಾಧಿಯ ಮಗನಿಗೆ ಏಕಾಏಕಿ ಜಗಳ ತೆಗೆದು ಅವನಿಗೆ ಕೈಯಿಂದ ಮತ್ತು ಇಟ್ಟಿಗೆಯಿಂದ ಹೊಡೆ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಠಾಣೆ ಗುನ್ನೆ ನಂ. 38/15 ಕಲಂ. 323, 324, 504 506 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  
4)  ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 20/2015  ಕಲಂ 279, 338, 304(ಎ) ಐ.ಪಿ.ಸಿ:.  

 ದಿನಾಂಕ: 15-02--2015 ರಂದು 7-45 ಪಿಎಂ.ಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಸಾರಾಂಶವೆನೇಂದರೆ, ಇಂದು ದಿನಾಂಕ 15/02/2015 ರಂದು 5-30 ಪಿ..ಎಂ. ಕ್ಕೆ ಆರೋಪಿತನು ತನ್ನ ಮಸ್ಸಿ ಫರ್ಗಿಷನ್ ಟ್ರಾಕ್ಟರ್ ಇಂಜನ್ ನಂ: SJ32751923 ಚೆಸ್ಸಿನಂ: MEA4C33FFE100845 ನೇದ್ದರಲ್ಲಿ ತಾನು & ಗಾಯಾಳು ಯಂಕನಗೌಡ ಇವನಿಗೆ ಸದರ ಟ್ರಾಕ್ಟರ್ ಇಂಜನ್ ದಲ್ಲಿ ಕೂಡ್ರಿಸಿಕೊಂಡು ಇಟಗಿಯಿಂದ ವಾಪಸ್ ಮನ್ನಾಪೂರಿಗೆ  ಕುಕನೂರ- ಬನ್ನಿಕೊಪ್ಪ ರಸ್ತೆಯ ಮೇಲೆ,ಹೋರಟಾಗ ಸದರ ಟ್ರಾಕ್ಟರ್ ನ್ನು ಆರೋಪಿತನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ಟ್ರಾಕ್ಟರ್ ವೇಗ ಹತೋಟೆಗೆ ಬಾರದೇ ಸದರ ರಸ್ತೆಯ ಎಡಮಗ್ಗಲು ತೆಗ್ಗಿನಲ್ಲಿ ಇಳಿದು ಬೋರಲಾಗಿ ಪಲ್ಟಿ ಆಗಿದ್ದರಿಂದ ಸದರ ಟ್ರಾಕ್ಟರ್ ಇಂಜಿನ್ ದಲ್ಲಿ ಚಾಲಕನ ಹತ್ತಿರ ಬಾಜು ಕುಳಿತ ಯಂಕನಗೌಡ ಇವನು ಟ್ರಾಕ್ಟರ್ ಕೆಳಗೆ ಸಿಕ್ಕು ಭಾರೀ ಗಾಯಗೊಂಡಿದ್ದು, ಆರೋಪಿತನು ಚಾಲಕನ ಸೀಟಿನಲ್ಲಿ ಸಿಕ್ಕು ಭಾರೀ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ., ಗಾಯಾಳುವಿಗೆ  ಹೊರಗೆ ತೆಗೆದು ಚಿಕಿತ್ಸೆಗಾಗಿ 108 ವಾಹನದಲ್ಲಿ ಗದಗ ಆಸ್ಪತ್ರೆಗೆ ಕಳುಹಿಸಿರುತ್ತೇವೆ.ಸದರ ಅಪಘಾತವು  ಟ್ರಾಕ್ಟರ ಚಾಲಕ ಪ್ರವೀಣ ಇವನ ಅಲಕ್ಷ್ಯತನದಿಂದ ಜರುಗಿದ್ದು, ಸದರಿಯವನ  ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:20/15 ಕಲಂ:279,,338,304(ಎ) ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

No comments: