¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 16-02-2015
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ
ನಂ. 13/2015, ಕಲಂ 279, 337, 338, 304(ಎ) ಐಪಿಸಿ :-
ದಿನಾಂಕ 15-02-2015 ರಂದು ಫಿರ್ಯಾದಿ ಶರಣಬಸಪ್ಪಾ
ತಂದೆ ವೀರಶೆಟ್ಟೆಪ್ಪಾ ರಜೋಳೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ತ್ರಿಪುರಾಂತ ಬಸವಕಲ್ಯಾಣ ರವರು
ಪ್ರತಿ ದಿವಸದಂತೆ ಇಂದು ಸಹ ತನ್ನ ಗೆಳೆಯನಾದ ಶ್ರೀಕಾಂತ ತಂದೆ ಸದಾನಂದ ಮೆಟಗೆ ವಯ: 28 ವರ್ಷ, ಜಾತಿ:
ಲಿಂಗಾಯತ, ಸಾ: ಶಹಾಪೊರಗಲ್ಲಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ತನ್ನ ಮೋಟರ ಸೈಕಲ ಮೇಲೆ
ಹುಮನಾಬಾದ ಜೆಸ್ಕಾಂ ಶಾಖೆಗೆ ಹೋಗಿ ನೌಕರಿ ಮುಗಿಸಿಕೊಂಡು ಮರಳಿ ತಮ್ಮ ಮನೆಗೆ ಬರಲು ಮೋಟರ ಸೈಕಲ
ನಂ. ಕೆಎ-56/ಇ-6680 ನೇದರ ಮೇಲೆ ಫಿರ್ಯಾದಿಯವರು ಹಿಂದೆ ಕುಳಿತುಕೊಂಡು ಸದರಿ ಮೋಟರ ಸೈಕಲನ್ನು
ಶ್ರೀಕಾಂತ ಮೆಟಗೆ ಈತನು ಚಲಾಯಿಸುತ್ತಾ ಹುಮನಾಬಾದದಿಂದ ಬಸಕವಲ್ಯಾಣಕ್ಕೆ ರಾ.ಹೆ ನಂ. 9 ರ
ಮುಖಾಂತರ ತಮ್ಮ ಸೈಡಿನಿಂದ ತಾವು ನಿಧಾನವಾಗಿ ಬರುತ್ತಿರುವಾಗ ಇಂಜಿನಿಯರಿಂಗ್ ಕಾಲೇಜ ಹತ್ತಿರ ಎದುರುಗಡೆಯಿಂದ
ಅಂದರೆ ಸಸ್ತಾಪೂರ ಬಂಗ್ಲಾ ಕಡೆಯಿಂದ ಬರುತ್ತಿರುವ ಮೋಟರ ಸೈಕಲ ನಂ. ಎಮ್.ಹೆಚ್-24/ಎನ್-8364 ನೇದರ
ಚಾಲಕನಾದ ಆರೋಪಿ ನಿತೀಶ ತಂದೆ ಬಂಡೆಪ್ಪಾ ನಾಗಶೆಮಕರಯ್ಯಾ ವಯ: 28 ವರ್ಷ, ಸಾ: ಡೋಣಗಾಪೊರ, ತಾ: ಭಾಲ್ಕಿ
ಇತನು ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಸೈಡಿಗೆ
ಬಂದು ತನ್ನ ವಾಹನ ಕಂಟ್ರೋಲ ಮಾಡದೇ ಒಮ್ಮೆಲೆ ಡಿಕ್ಕಿ ಮಾಡಿದನು, ಸದರಿ ರಸ್ತೆ ಅಪಘಾತದಿಂದಾಗಿ
ಕೆಳಗೆ ಬಿದ್ದ ಫಿರ್ಯಾದಿಯವರ ತಲೆಯ ಹಿಂಭಾಗದ ಬಲಗಡೆಗೆ ಭಾರಿ ರಕ್ತಗಾಯ ಮತ್ತು ಎಡಗಾಲ ಹಿಮ್ಮಡಿ
ಹತ್ತಿರ ತರಚಿದ ಗಾಯವಾಗಿರುತ್ತದೆ ಮತ್ತು ಮೋಟರ ಸೈಕಲ ಚಾಲಕ ಶ್ರೀಕಾಂತನಿಗೆ ಎಡಗಡೆ ಹಣೆಯಲ್ಲಿ
ಭಾರಿ ರಕ್ತಗಾಯವಾಗಿ ತೂತು ಬಿದ್ದಿದ್ದು ಅಲ್ಲದೇ ಅವನ ಬಾಯಿಗೆ ಭಾರಿ ಗುಪ್ತಗಾಯವಾಗಿ ಹಲ್ಲುಗಳು
ಬಿದ್ದಿದ್ದು ಮತ್ತು ಬಲಗಡೆ ಭುಜಕ್ಕೆ ಭಾರಿ ಗುಪ್ತಗಾಯ ಮತ್ತು ತರಚಿದಗಾಯ ಹಾಗು ಅವನ ಎಡಗಾಲ
ಮೋಣಕಾಲಿಗೆ ಭಾರಿ ಗುಪ್ತಗಾಯವಾಗಿ ಮೋಳೆ ಮುರಿದಂತೆ ಕಂಡು ಬಂದಿದ್ದು, ಅವನ ಎಡಗಾಲ ಬೆರಳುಗಳಿಗೆ
ಭಾರಿ ರಕ್ತಗಾಯಗಳಾಗಿ ಒಂದೆರಡು ನಿಮಿಷದಲ್ಲಿ ಒದ್ದಾಡಿ ಸ್ಥಳದಲ್ಲಿಯೇ ಮೃತಪಟ್ಟನು, ಆರೋಪಿಯ ಮುಖಕ್ಕೆ
ಭಾರಿ ರಕ್ತಗಾಯವಾಗಿರುತ್ತದೆ ಹಾಗು ಅವನ ಹಿಂದೆ ಮೋಟರ ಸೈಕಲ ಮೇಲೆ ಕುಳಿತಿದ್ದ ಸಿದ್ದೇಶ್ವರ ತಂದೆ
ನಾಗನಾಥ ಎಂಬುವವನಿಗೆ ಬಲಗಡೆ ಹಣೆಗೆ, ಬಲಗಣ್ಣಿನ ಕೆಳಗೆ ರಕ್ತಗಾಯ, ಎದೆಯಲ್ಲಿ ಭಾರಿ
ಗುಪ್ತಗಾಯವಾಗಿದ್ದು ಮತ್ತು ಹಿಂದೆ ಕುಳಿತ ಇನ್ನೊಬ್ಬನ ಹೆಸರು ಸಾಗರ ತಂದೆ ಶಿವಾನಂದ ಕಡಾಜೆ
ಎಂಬುವವನಿಗೆ ಎಡಗೈ ಮುಂಗೈಗೆ ಭಾರಿ ಗುಪ್ತಗಾಯ, ಎಡಗಡೆ ಹಣೆ ಮತ್ತು ಎಡ ಗಣ್ಣಿಗೆ ರಕ್ತಗಾಯಗಳಾಗಿರುತ್ತವೆ
ಅಂತ ಫಿರ್ಯಾದಿಯವರು ದಿನಾಂಕ 16-02-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment