Police Bhavan Kalaburagi

Police Bhavan Kalaburagi

Tuesday, February 10, 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ  :
ಕಮಲಾಪೂರ ಠಾಣೆ : ದಿನಾಂಕ 09-02-2015 ರಂದು ಮಳಸಾಪೂರ ತಾಂಡದ ಧರ್ಮಬಾಯಿ ಇವಳ ಹೋಟೆಲ್ ಮುಂದೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಹಾರ ಜೂಜಾಟ ಆಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಿಸಲು 1) ಕುಮಾರ ತಂದೆ ಮಿಠು ಚವ್ಹಾಣ 2) ತುಕಾರಾಮ ತಂದೆ ಚಂದ್ರು ಚವ್ಹಾಣ, 3) ಸಂಜು ತಂದೆ ತುಕರಾಮ ರಾಠೊಡ  4) ಸೋಮ್ಲಾ ತಂದೆ ಲಾಲು ರಾಠೊಡ 5) ಹೋನ್ನು ತಂದೆ ರೂಪ್ಲಾ ಚವ್ಹಾಣ , 6) ಶಿವರಾಮ  ತಂದೆ ನೂರೂ ಚವ್ಹಾಣ , 7) ಶಿವಾಜಿ ತಂದೆ ಮಾರುತಿ ಚವ್ಹಾಣ 8) ರಾಜು ತಂದೆ ಲಾಲು ಜಾಧವ  ಸಾ; ಎಲ್ಲರೂ ಮಳಸಾಪೂರ ತಾಂಡಾ ಇವರನ್ನುವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಟೀಟ ಎಲೆಗೆಳನ್ನು  ಮತ್ತು ನಗದು ಹಣ 1350/- ರೂ ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸಪ್ಪ ತಂದೆ ದೇವಪ್ಪ ಹಕಾರೆ ವ:35 ವರ್ಷ ಜಾ:ಲಿಂಗಾಯತ ಉ:ಲಾರಿಚಾಲಕ ಸಾ:ನೆರೆಗಲ ಗ್ರಾಮ ತಾ:ರೋಣ ಜಿ:ಗದಗ  ದಿನಾಂಕ:08-02-2015 ರಂದು ರಾತ್ರಿ 22-26 ಗಂಟೆಗೆ ಕಪನೂರ ಇಂಡಸ್ಟ್ರೀಯಲ ಏರಿಯಾ ಕಲಬುರ್ಗಿಯಿಂದ ಲಾರಿ ನಂ- ಕೆಎ-25 ಬಿ- 7573 ನೇದ್ದರಲ್ಲಿ 50 ಕೆ.ಜಿಯ 320 ಕಡ್ಲಿ ಬಿಜಗಳು ತುಂಬಿದ ಬ್ಯಾಗಗಳನ್ನು ಲಾರಿಯಲ್ಲಿ ಲೋಡ ಮಾಡಿಕೊಂಡು ಕೋಲ್ಕತ್ತಾದ ದೋಲಾಗಾಡಾ  ಊರಿಗೆ ಹೋಗುವ ಕುರಿತು ಸಂಗಡ ಇನ್ನಿಬ್ಬರು ಡ್ರೈವರಗಳಾದ ಸಿದ್ದಾರೋಡ ಕುಂಬಾರ ಮತ್ತು ಬಸವರಾಜ ಕಳಕಣ್ಣನವರ ಇವರನ್ನು ಕರೆದುಕೊಂಡು ದೋಲಾಗಾಡಾಕ್ಕೆ ಹೊರಟಿದ್ದೇವು. ದಿನಾಂಕ: 08-02-2015 ರಂದು ರಾತ್ರಿ 11-30 ಗಂಟೆ ಸುಮಾರಿಗೆ ನಮ್ಮ ಲಾರಿ ಕಲಬುರ್ಗಿ ಹುಮನಾಬಾದ ಹೆದ್ದಾರಿಯ ಮುಖಾಂತರ ಕುದರೆಮುಖ ಹೋಡ್ಡಿನ ಹತ್ತೀರ ಹೋಗುತ್ತಿದ್ದಾಗ ಲೋಡ ಇದ್ದುದರಿಂದ ಲಾರಿ ನಿಧಾನವಾಗಿ ನಡೆಸುತ್ತ ಹೋಡ್ಡು ಏರುತ್ತಿತ್ತು.  ಆ ವೇಳೆಗೆ ಲಾರಿಯ ಹಿಂದುಗಡೆಯಿಂದ ಒಬ್ಬ ಕಾರ ಚಾಲಕ ನಮ್ಮ ಲಾರಿಗೆ ಓವರಟೇಕ ಮಾಡಿ ಪಕ್ಕಕ್ಕೆ ಬಂದು ಹಿಂದೆ ಲಾರಿಯಿಂದ ಯಾರೋ ನಾಲ್ಕು ಜನರು ಚೀಲಗಳನ್ನು ಕೆಳಗೆ ಕೆಡವಿ ಕಳ್ಳತನ ಮಾಡುತ್ತಿದ್ದಾರೆ ಅಂತಾ ಹೇಳಿ ಹೋದನು. ಆಗ ಗಾಬರಿಗೊಂಡು ನಾನು ಲಾರಿ ನಿಲ್ಲಿಸಿ ನಾನು ಮತ್ತು ಸಿದ್ದಾರೊಢ ಹಾಗೂ ಬಸವರಾಜ ಲಾರಿಯಿಂದ ಇಳಿದು ಕೆಳಗೆ ಹೋಗಿ ನೋಡುತ್ತಿದ್ದಾಗ ಲಾರಿಯ ಮೇಲಿದ್ದ 4 ಜನರು ಕೆಳಗೆ ಇಳಿದು ಕತ್ತಲಲ್ಲಿ ಓಡಿ ಹೋದರು. ಅವರು ಅಂದಾಜ 25 ರಿಂದ 30 ವರ್ಷ ವಯಸ್ಸಿನವರದಿದ್ದರು. ಆ ಮೇಲೆ ನಾವು ಲಾರಿಯ ಮೇಲೆ ಏರಿ ನೋಡಲು ಕಳ್ಳರು ಚೀಲದ ಮೇಲೆ ಕಟ್ಟಿದ್ದ ತಾಡಪತ್ರಿ ಮತ್ತು ಅದಕ್ಕೆ ಕಟ್ಟಿದ ಹಗ್ಗ ಕತ್ತರಿಸಿದ್ದರು. ಲಾರಿಯಲ್ಲಿದ್ದ 7 ಕಡ್ಲಿ  ಚೀಲಗಳು ಇರಲಿಲ್ಲ. ಆಗ ನಾವು ಕಳ್ಳರು ರೋಡಿನ ಮೇಲೆ ಚೀಲಗಳನ್ನು ಒಗೆದಿರಬೇಕು ಅಂತಾ ತಿಳಿದು ರೋಡಿಗೆ ಹೋಗಿ ಹುಡುಕಾಡಲಾಗಿ ರೋಡಿನ ಮೇಲೆ ಅಲ್ಲಲ್ಲಿ ಕಡ್ಲಿ ಬೀಜಗಳು ಬಿದ್ದಿದ್ದವು. ಆದರೆ ಚೀಲಗಳು ಕಾಣಲಿಲ್ಲ.ಮುಂದೆ ಬಂದು ನೋಡಲಾಗಿ ಒಂದು ಬಿಳಿ ಬಣ್ಣದ ಬುಲೆರೋ ಗಾಡಿ ನಿಂತಿದ್ದು, ಟಾರ್ಚ ಹಾಕಿ ನೋಡಲು ಅದರ ನಂ. ಕೆಎ-32-ಬಿ-6722 ಇದ್ದು, ನಮ್ಮಗೆ ನೋಡಿ ಗಾಡಿ ನಡೆಸಿಕೊಂಡು ಹೋಗಿರುತ್ತಾರೆ, ನಮ್ಮ ಲಾರಿಯಲ್ಲಿದ್ದ 7 ಕಡಲಿ  ಚೀಲಿಗಳು ಕಳವು ಮಾಡಿದ್ದು, ಅದರ ಅಂದಾಜು ಅ.ಕಿ 15,578=00ರೂ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ   ಕಮಲಾಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಶಿಕಾಂತ ತಂದೆ ಶರೆಣಯ್ಯ ಗುತ್ತೇದಾರ ಸಾ: ಶಿವ ಮಂದಿರ ಹತ್ತೀರ ಬಸವೇಶ್ವರ ಕಾಲೋನಿ ಕಲಬುರಗಿ  ರವರು ದಿನಾಂಕ 09-02-15 ರಂದು ನಾನು ಕೆಲಸ ಮಾಡುವ ಚೈತನ್ಯ ವೈನ ಶಾಪದಿಂದ ಮನೆಗೆ ಊಟಕ್ಕೆ ಹೋಗುವ ಕುರಿತು ನನ್ನ ಮೋಟಾರ ಸೈಕಲ ನಂ ಕೆಎ-32-ಆರ-3160 ನೇದ್ದರ ಮೆಲೆ ಎಸ,ವಿ,ಪಿ, ಸರ್ಕಲ ಮುಖಾಂತರವಾಗಿ ಜಗತ ಸರ್ಕಲ ಕಡೆಗೆ ಹೋಗುವಾಗ ಟೌನ ಹಾಲ ಕ್ರಾಸ ಹತ್ತೀರ ಬರುವ ಅಪ್ನಾ ಬಾರ ಎದುರಿನ ರೋಡ ಮೇಲೆ ಹಿಂದಿನಿಂದ ಬುಲೇರೊ ಜೀಪ ನಂ ಕೆಎ-32-ಸಿ-2294 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಸಿಕೊಂಡು ಬಂದು ಹಿಂದಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ  ಅಪಘಾತ ಮಾಡಿ ನನಗೆ ಎಡಗಾಲು ಮೊಳಕಾಲಿಗೆ ಭಾರಿಗಾಯ ಮತ್ತು ಎಡ ಹಣೆಯ ಮೇಲೆ ಗುಪ್ತಪೆಟ್ಟು ಗೊಳಿಸಿ ಬೊಲೆರೊ ವಾಹನ ಅಲ್ಲಿಯೆ  ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸಪ್ಪ ತಂದೆ ತಮ್ಮಣ್ಣ  ಲಶ್ಕರ ಸಾ : ಶಿರವಾಳ ರವರ  ಮಗಳು ರೇಷ್ಮಾ ಇವಳಿಗೆ ಮಾಶಾಳ ಗ್ರಾಮದ ಸಂತೋಷ ತಂದೆ ದುರ್ಗಪ್ಪಾ ಇಟಕರ್ ಇವರೊಂದಿಗೆ ಇಂದು ದಿನಾಂಕ 09-02-2015 ರಂದು ಮದುವೆ ಸಮಾರಂಭ ಇದ್ದು, ಮದುವೇಯು ಮಶಾಳ ಗ್ರಾಮದಲ್ಲಿ ಇದ್ದಿರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 08-02-2015 ರಂದು ಮದ್ಯಾಹ್ನ 12-00 ಪಿ.ಎಂ ಕ್ಕೆ ನಾನು ಮತ್ತು ನನ್ನ ಹೆಂಡತಿ ಕಮಲಾಬಾಯಿ ಹಾಗು ನಮ್ಮ ಮಕ್ಕಳು ಎಲ್ಲರು ಮನೆಯಲ್ಲಿ ನನ್ನ ಮಗಳು ರೇಷ್ಮಾ ಇವಳ ಮದುವೆ ಕೆಲಸದಲ್ಲಿ ಇದ್ದಾಗ ನನ್ನ ಮಗಳು ರೇಷ್ಮಾ ಇವಳು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ. ನಂತರ ಎಷ್ಟೊತ್ತಾದರು ನಮ್ಮ ಮಗಳು ಮರಳಿ ಮನೆಗೆ ಬರಲಿಲ್ಲಾ. ನಂತರ ನಾನು ಮತ್ತು ನನ್ನ ಹೆಂಡತಿ ಕೂಡಿ ಹುಡಕಾಡಲು ಬೈಹಿರದೇಸೆ ಕಡೆ ಹೋದಾಗ ನಮ್ಮೂರ ಮಹಾದೇವಿ ಗಂಡ ಬೀರಪ್ಪ ಪೂಜಾರಿ ಇವರು ನಮಗೆ ತಿಳಿಸಿದ್ದೇನೆಂದರೆ, ನಿಮ್ಮ ಮಗಳು ರೇಷ್ಮಾ ಇವಳನ್ನು ನಿಮ್ಮೊಣಿಯವರಾದ 1] ಯಲ್ಲಪ್ಪ ತಂದೆ ಶಾಮರಾವ ಪವಾರ, 2] ಅನೀಲಕುಮಾರ ತಂದೆ ಗಿಡ್ಡಪ್ಪ ವಡ್ಡರ, 3] ರವಿಕುಮಾರ ತಂದೆ ಚಿದಾನಂದ ವಡ್ಡರ, 4] ದುರ್ಗಪ್ಪ ತಂದೆ ಯಂಕಪ್ಪಾ ವಡ್ಡರ ರವರು ಸೇರಿಕೊಂಡು ಒತ್ತಾಯ ಪೂರ್ವಕವಾಗಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು, ನಂತರ ನಾನು ಮತ್ತು ನನ್ನ ಮಗ ಅಶೋಕ ಹಾಗು ನಮ್ಮ ಅಣ್ಣತಮ್ಮಂದಿರರಾದ ಖಾಜಪ್ಪ ತಂದೆ ತಮ್ಮಣ್ಣ ಲಶ್ಕರ, ಅಶೋಕ ತಂದೆ ಬಸಣ್ಣ ಲಶ್ಕರ ರವರು ಸೇರಿಕೊಂಡು ನಮ್ಮೂರ ಸುತ್ತ ಮುತ್ತಿನ ಹಳ್ಳಿಗಳಾದ ಅಳ್ಳಗಿ (ಬಿ), ಗೌರ (ಬಿ),(ಕೆ), ಬಳೂಂಡಗಿ, ಕರಜಗಿ ಗ್ರಾಮಗಳಿಗೆ ಹೋಗಿ ನಮ್ಮ ಮಗಳನ್ನು ಹೂಡಕಾಡಿದರು ಸಿಕ್ಕಿರುವುದಿಲ್ಲಾ. ಅಂಥಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: