ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 17/02/2015 ರಂದು ಶ್ರೀ ಕಿಶನ ಸಿಂಗ ತಂದೆ ದೇವಿಲಾಲ ತಿವಾರಿ ಸಾ; ಅವರಾಧ (ಬಿ)ತಾ;ಜಿ;ಕಲಬುರಗಿ ಇವರು ದಿನಾಂಕ. 17-2-2015ರಂದು ಶಿವರಾತ್ರಿ ನಿಮಿತ್ಯ ಸ್ವಾಮಿ ಸಮರ್ಥ ದೇವಸ್ಥಾನಕ್ಕೆ ಹೋಗಿ ಬರುವ ಕುರಿತು ನಾನು ಮತ್ತು ನನ್ನ ತಾಯಿ ಗಂಗೂಬಾಯಿ ಗಂಡ ದೇವಿಲಾಲ ತಿವಾರಿ ನನ್ನ ಅಕ್ಕನ ಮಗ ಅನೀಲ್ ಕುಮಾರ ತಂದೆ ಭಾರತಸಿಂಗ ತಿವಾರಿ ಹಾಗೂ ನನ್ನ ಮಗಳು ಭಾಗ್ಯಶ್ರೀ ಎಲ್ಲರೂ ಕೂಡಿಕೊಂಡು ಅವರಾಧ(ಬಿ)ಗ್ರಾಮದ ನಮ್ಮ ಮನೆಯಿಂದ ಸಂಜೆ ನಡೆದುಕೊಂಡು ಹೋಗಿದ್ದು ಕಲಬುರ್ಗಿ ಹುಮನಾಬಾದ ಮೇನ ರೋಡಿನ ಸ್ವಾಮೀ ಸಮರ್ಥ ಗುಡಿಯ ಎದರುಗಡೆ ಎಲ್ಲರೂ ರೋಡ ಕ್ರಾಸ ಮಾಡಿ ರೋಡಿನ ಎಡಬದಿಗೆ ನಿಂತಿರುವಾಗ ಅದೇ ವೇಳಗೆ ಕಲಬುರಗಿ ಕಡೆಯಿಂದ ಒಂದು ಟವೇರದಂತೆ ಇರುವ ವಾಹನದ ಚಾಲಕ ತನ್ನ ವಾಹನವನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರೋಡಿನ ಬದಿಗೆ ನಿಂತಿರುವ ನನ್ನ ತಾಯಿ ಗಂಗೂಬಾಯಿಗೆ ಜೋರಾಗಿ ಡಿಕ್ಕಿಹೊಡೆದನು ಆಗ ನನ್ನ ತಾಯಿ ಜೋರಾಗಿ ಕೆಳಗೆ ಬಿದ್ದಳು ಆಗ ನಾನು ಮತ್ತು ನನ್ನ ಅಳಿಯ ಹಾಗೂ ನನ್ನ ಮಗಳು ಕೂಡಿಕೊಂಡು ನೋಡಲು ನನ್ನ ತಾಯಿಯ ತಲೆಯ ಎಡಭಾಗದಲ್ಲಿ ಮತ್ತು ಹಣೆ ಮೇಲ್ಬಾಗದಲ್ಲಿ
ಭಾರಿ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು. ಎಡಗೈ ಮೋಳಕೈಗೆ ಭಾರಿ ಪೆಟ್ಟಾಗಿ ಮುರಿದಂತಾಗಿ ಅಲುಗಾಡುತ್ತಿತ್ತು , ಬಲಕೈಗೆ ಭಾರಿ ಪೆಟ್ಟಾಗಿತ್ತು , ಆಗ ಅವಳನ್ನು ರೋಡಿನ ಬದಿಗೆಮಲಗಿಸಿದ್ದು ಸದರಿ ಟವೇರ ವಾಹನ ಅಲ್ಲಿಯೇ ರೋಡಿನ ಬದಿಗೆ ನಿಲ್ಲಿಸಿದನು
ರೋಡಿಗೆ ಹೋಗಿಬರುವ ವಾಹನಗಳ ಬೆಳಕಿನಲ್ಲಿ ಅಪಘಾತ ಪಡಿಸಿದ ಟವೇರವಾಹನ ನಂಬರ ನೋಡಲು ಕೆ.ಎ.08. ಎಂ.0860 ನೆದ್ದು ಅದರ ಚಾಲಕನು ಕೂಡಾ ಅಲ್ಲಿಯೇ ನಿಂತಿದ್ದನು ವಿಚಾರಿಸಲ ಆತನ ಹೆಸರು ಈರಣ್ಣಾ ತಂದೆ ಬಸವರಾಜ ಮುಸ್ತಾಪೂರ ಸಾ;ಶಿವಾಜಿನಗರ ಕಲಬುರಗಿ ಅಂತಾ ಹೇಳಿದನು ಸದರಿ ನಾನು ಮತ್ತು ನನ್ನ ಅಳಿಯ ಅನೀಲ್ ಕುಮಾರ ಹಾಗೂ ನನ್ನ ಮಗಳು ಭಾಗ್ಯಶ್ರೀ ಎಲ್ಲರೂಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ತಾಯಿ ಗಂಗೂಬಾಯಿಯನ್ನು ಕೂಡಿಸಿಕೊಂಡು
ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವ್ಯದ್ಯರಿಗೆ ತೋರಿಸಲಾಗಿ ವೈದ್ಯರು ನೋಡಿ ಮೃತ ಪಟ್ಟಿರುವದಾಗಿ
ತಿಳಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ 17-02-2015 ರಂದು ಶ್ರೀ ವಿಠ್ಠಲ ತಂದೆ ಶಿವರಾಯಗೌಡ ಮಸಳಿ ಸಾ : ಸುಂಗಠಾಣ ತಾ|| ಸಿಂದಗಿ ಜಿ|| ವಿಜಯಪೂರ ರವರ ಸಂಭಂಧಿ ರೇವಣಸಿದ್ದ ಸಂಕಾಲಿ ನನಗೆ ಪೋನ ಮಾಡಿ
ತಿಳಿಸಿದ್ದೆನೆಂದರೆ, ಇದೀಗ ನಾನು ಮತ್ತು ನಮ್ಮ ಸಂಬಂಧಿ ಸಿಲಾಧರ ಇಬ್ಬರೂ ಕೂಡಿ ನಮ್ಮ ಕಾರಿನಲ್ಲಿ
ಹೋಗುತ್ತಿರುವಾಗ ಮಾವನೂರ ಕ್ರಾಸ ಹತ್ತಿರ ರಾಷ್ಟ್ರೀಯ ಹೆದ್ದಾರಿ 218 ರ ಮೇಲೆ ರಸ್ತೆ ಅಪಘಾತ
ಸಂಭವಿಸಿದ್ದು ಅದರಲ್ಲಿ ನಿಮ್ಮ ತಮ್ಮ ಕಾಂತಪ್ಪನು ತನ್ನ ಏಸರ್ ಲಾರಿ ನಂ. ಕೆಎ-28 /9759 ನೇದ್ದು
ಜೇವರ್ಗಿಯಿಂದ ಬರುತಿದ್ದಾಗ ಸೊನ್ನ ಕಡೆಯಿಂದ ಅಶೋಕ ಲಾಯಿಲಂಡ ಲಾರಿ ನಂ, ಎಮ್.ಹೆಚ್.-25 ಬಿ-9015 ನೇದ್ದರ ಚಾಲಕ ತನ್ನ
ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಿಮ್ಮ ತಮ್ಮ ನಡೆಸಿಕೊಂಡು ಬರುತ್ತಿದ್ದ ಏಸರ್ ಲಾರಿಗೆ ಡಿಕ್ಕಿ ಪಡಿಸಿದ್ದು ನಿಮ್ಮ
ತಮ್ಮನಿಗೆ ಎದೆಗೆ ಬಾರಿ ಒಳಪೆಟ್ಟಾಗಿ ಅವನಿಗೆ ಜೇವರ್ಗಿ ದಾವಾಖಾನೆಗೆ ಕರೆದುಕೊಂಡು
ಹೋಗುತಿದ್ದೆವೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ತಂದೆ ಶಿವರಾಯಗೌಡ ಇಬ್ಬರೂ ಕೂಡಿ ಜೇವರ್ಗಿ
ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ನನ್ನ ತಮ್ಮನು ಮೃತಪಟ್ಟಿದ್ದನು, ನನ್ನ ತಮ್ಮನಿಗೆ ನೋಡಲಾಗಿ ನನ್ನ ತಮ್ಮನ ಹಣೆಯ ಮೇಲೆ
ಹಾಗೂ ಎದೆಯ ಮೇಲೆ ಬಾರಿ ಗುಪ್ತ ಪೆಟ್ಟಾಗಿಮಾರ್ಗ ಮದ್ಯೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಚಂದ್ರಕಾಂತ ತಂದೆ ನಾಗಪ್ಪ ಸಾಃ ಮನೆ
ನಂ. 4-601/100 ಇ/109/42/1 ಗಣೇಶ ನಗರ ಗ್ರೀನ್ ಹಿಲ್ಸ್ ಕಾಲೋನಿ ಕಲಬುರಗಿ ಇವರು
ದಿನಾಂಕಃ 15/02/2015 ರಂದು ಸಹ ಕುಟುಂಬ ಸಮೇತ ಗೃಹ ಪ್ರವೇಶ ಸಂಬಂಧ ತಮ್ಮ ಮನೆಗೆ ಕೀಲಿ
ಹಾಕಿಕೊಂಡು ಬೀದರಕ್ಕೆ ಹೋಗಿದ್ದು ದಿನಾಂಕಃ
16/02/2015 ರಂದು ಬೆಳಗ್ಗೆ 09:30 ಗಂಟೆಗೆ ಫಿರ್ಯಾದಿಯ ಮನೆಯ ಪಕ್ಕದಲ್ಲಿರುವ ಅವರ ಚಿಕ್ಕಪ್ಪ
ಫೋನ್ ಮಾಡಿ ತಿಳಿಸಿದ್ದು ಮನೆಗೆ ಬಂದು ನೋಡಲಾಗಿ ಮನೆಯಲ್ಲಿದ್ದ 1) ನಗದು ಹಣ 60,000/- ರೂ. 2) 05 ಗ್ರಾಂ ಬಂಗಾರದ ಚಿಕ್ಕ ಚಿಕ್ಕ
ಉಂಗುರುಗಳು 3) 02 ಜೊಲೆ ಹೊಸ ಬಟ್ಟೆಗಳು ಹಾಗು 02 ಸೀರೆಗಳು ಯಾರೋ ಕಳ್ಳರು 15/02/15 ರಂದು ರಾತ್ರಿ 10:00 ಪಿ.ಎಂ ದಿಂದ ದಿಃ
16/02/15 ರಂದು 09:30 ಎ.ಎಂ ರ ಅವಧಿಯಲ್ಲಿ ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ ಈ
ಮೇಲಿನ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹೆಮೂದ ಅಲಿ ತಂದೆ ಮಹ್ಮದ ಹುಸೇನ್ ಮರತೂರ ಸಾಃ ಪ್ಲಾಟ
ನಂ. 36, ಗ್ರೀನ್
ಹಿಲ್ಸ್ ಕಾಲೋನಿ ಕಲಬುರಗಿ ಇವರು ದಿನಾಂಕಃ 12/02/2015 ರಂದು ಮನೆಗೆ ಕೀಲಿ ಹಾಕಿಕೊಂಡು
ಪುನಾಃಕ್ಕೆ ಹೋಗಿದ್ದು, ದಿನಾಂಕಃ 15/02/15 ರಂದು ರಾತ್ರಿ 11:30 ಪಿ.ಎಂ ದಿಂದ
ದಿಃ 16/02/15 ರಂದು 07:00 ಎ.ಎಂ ರ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬಾಗಿಲ ಕೊಂಡಿ
ಮುರಿದು ಮನೆಯಲ್ಲಿದ್ದ 1) ಒಂದು ಗ್ರಾಮ್
ಬಂಗಾರದ ಸೆಟ್ ಅಃಕಿಃ 25,000/- ರೂ. 2) ಆರ್ಟಿಫೀಸಿಯಲ್
ಜುವೆಲರಿ ಬಾಕ್ಸ್ ಅಃಕಿಃ 20,000/- ರೂ. 3) ಕಂಕರ ಕೆ ಜೂಡೆ ಅಃಕಿಃ 10,000/- 4) ) 50 ಗ್ರಾಂ ಬೆಳ್ಳಿಯ ಸಾಮಾನುಗಳು ಅಃಕಿಃ 2,000/- 5) ಡ್ರೆಸ್ ಮಟಿರಿಯಲ್ ಅಃಕಿಃ 20,000/- 6) ಸಾರಿ (30
ಸಿಲ್ಕ್ ಉಲ್ ವರ್ಕ) ಅಃಕಿಃ 1,00,000/- ರೂ. 7) ರಾಡೋ
ಕಪಲ್ ವಾಚ್ ಅಃಕಿಃ 30,000/- 8) ನಗದು ಹಣ 2,000/- ರೂ. ಹೀಗೆ ಒಟ್ಟು 2,09,000/- ರೂ. ಬೆಲೆ ಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಶಾಹಾಬಾದ ನಗರ
ಠಾಣೆ : ಶ್ರೀಮತಿ ರಾಚಮ್ಮಾ ಗಂಡ
ಸದಾಶಿವ ಅರಳಿ ಸಾ||
ರಾಮಾಮೊಹಲ್ಲಾ ಶಹಾಬಾದ ಇವರ ಮಗ ನಾಗೇಶ ತಂದೆ ಸದಾಶಿವ ಅರಳಿ ವ||
21 ವರ್ಷ ಈತನು ದಿನಾಂಕ 10.02.2015
ರಂದು 6.00 ಪಿ.ಎಮ್. ಗಂಟೆಸುಮಾರಿಗೆ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು
ಮರಳಿ ಮನೆಗೆ ಬಂದಿರುವದಿಲ್ಲಾ. ನನ್ನ ಮಗ ಅಸ್ವಸ್ಥನಿದ್ದು ಬುಧ್ಧಿಮಾಂಧ್ಯನಿರುತ್ತಾನೆ. ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಹುಸೇನ ಸಾಬ ತಂದೆ ಸೈಪಾನಸಾಬ್ ಮೂಲಗಿ ಸಾ: ಖಾಜಿ ಮೊಹಲ್ಲಾ ಆಳಂದ ಜಿ: ಕಲಬುರಗಿ ರವರು ದಿನಾಂಕ: 20-01-2015 ರಂದು ರಾತ್ರಿ ಲಾರಿ ನಂ ಬಂಕ ಪಕ್ಕದ ಮೈದಾನದಲ್ಲಿ ನಿಲ್ಲಿಸಿದ ಕೆಎ-32
ಎ-9582 ಅಶೋಕ ಲೈಲೆಂಡ ಕಂಪನಿಯ ಕೆಂಪು ಬಣ್ಣ(ನ್ಯಾಷನಲ್ ಕಲರ್)ನ ಚೆಸ್ಸಿ ನಂ FNH134034 ಮತ್ತು ಇಂಜಿನ ನಂ FNH547599 ಇರುವ ಅ.ಕಿ= 700000/- ರೂ. ಬೆಲೆಬಾಳುವ ಲಾರಿ ನಿಲ್ಲಿಸಿ ದಿನಾಂಕ: 21/01/2015ರಂದು ಬೆಳಿಗ್ಗೆ 7-00 ಗಂಟೆಗೆ ಬಂದು ನೋಡಲು ತಾನು ನಿಲ್ಲಿಸಿದ ಲಾರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ತನ್ನ ಸ್ನೇಹಿತರಾದ ಜಹೀರಖಾನ ಮತ್ತು ಶೇಖ ಮೆಹತಾಬರೊಂದಿಗೆ
ಅವರೊಂದಿಗೆ ಹಾಗರಗಾ ಕ್ರಾಸ್, ಉಪಳಾಂವ, ಆಳಂದ ಚೆಕ್ ಪೊಸ್ಟ, ಟೋಲನಾಕಾ, ಆಳಂದ, ಪೂನಾ, ಉಸಮಾನಾಬಾದ ,ಜಾಲನಾ, ಟಿಂಬೂರನಿ ಮುಂತಾದ ಕಡೆಗಳಲ್ಲಿ ಹೋಗಿ ಎಲ್ಲಾ ಕಡೆ ಹುಡುಕಾಡಿದರೂ ಲಾರಿ ಪತ್ತೆಯಾಗಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment