ಅಪಘಾತ ಪ್ರಕರಣಗಳು :
ಗ್ರಾಮೀಣ
ಠಾಣೆ : ದಿನಾಂಕ 19/2/15 ರಂದು
ಮುಂಜಾನೆ 10:30 ಗಂಟೆಯ ಸುಮಾರಿಗೆ ಮೃತರಾದ ಬಸವರಾಜ ಮತ್ತು ಅವರ ಗೆಳೆಯ ಸಿದ್ಧಾರೋಡ ಇವರಿಬ್ಬರು ಕಲ್ಯಾಣಿ
ಕುಂಬಾರ ಎಂಬುವರ ದೇವರ ಕಾರ್ಯಕ್ರಮಕ್ಕೆ ದಣ್ಣೂರ ಗ್ರಾಮದ ಮಲ್ಲಿಸಾಬ ದೇವರ ಕಾರ್ಯಕ್ರಮಕ್ಕೆ ಹಾಜರಾಗಿ. ಕಲಬುರಗಿ
ಕಡೆಗೆ ಹೊಂಡಾ ಎಕ್ಟೀವ ಕೆಎ. 32 ವಿ 5315 ಬರುತ್ತಿರುವಾಗ
ಪಟ್ಟಣ ಸಿಮೇಯ ಜವಳಿ ಧಾಬಾ ಹತ್ತಿರ ಬಂದಾಗ ಯಾವುದೋ ವಾಹನ ಚಾಲಕ ಅತೀವೇಗದಿಂದ ಮತ್ತು
ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಅವರ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ಬಾರಿ ರಕ್ತಗಾಯಗೊಳಿಸಿ ಓಡಿ ಹೋಗಿರುತ್ತಾನೆ ಅಘಾತದಿಂದ ಪಿರ್ಯಾದಿದಾರಳ ಗಂಡ
ಬಸವರಾಜ ಕಾನಶೆಟ್ಟಿ ಮತ್ತು ಅವರ ಗೆಳೆಯ ಸಿದ್ಧಾರೂಢ
ಇವರುಗಳ ತಲೆ ಒಡೆದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತ್ತಪಟ್ಟಿರುತ್ತಾರೆ ಎಂದು ಕೇಳಿ
ಗೊತ್ತಾಗಿದ್ದು ಪಿರ್ಯಾದಿದಾರಳು ಗಂಡ ಮತ್ತು ಅವರ ಗೆಳೆಯ ಸಿದ್ಧಾರೂಢ ಇವರಿಗೆ ಅಪಘಾತ ಪಡಿಸಿ
ಹಾಗೇ ಓಡಿಸಿಕೊಂಡು ಹೋದ ಯಾವುದೋ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು
ಕ್ರಮಜರುಗಿಸಬೇಕೆಂದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 19.02.2015 ರಂದು ನಿಂಗಪ್ಪ ತಂದೆ ಶಂಕ್ರೇಪ್ಪ ಸಾಲೋಡಗಿ ಸಾ|| ಅಫಜಲಪೂರ ಮತ್ತು ನಮ್ಮ ಫೈನಾನ್ಸನಲ್ಲಿ ಕೇಲಸ ಮಾಡುತ್ತಿದ್ದ ನಾಗರಾಜ ತಂದೆ ಸುರೇಶ ಪಾಟೀಲ ಸಾ|| ಶಾಹಾ ಬಜಾರ್ ಕಲಬುರಗಿ ಈತನೊಂದಿಗೆ ಚಾಮನಾಳ ಗ್ರಾಮಕ್ಕೆ ಹೋಗಿ
ಅಲ್ಲಿ ಫೈನಾನ್ಸ ಹಣ ನೀಡದ್ದಕ್ಕೆ ಪಾರ್ಟೀಯಿಂದ ದ್ವಿಚಕ್ರ ವಾಹನ ಪಡೆದುಕೊಂಡು ನಾನು ಪಾರ್ಟಿಯ ದ್ವಿಚಕ್ರ ವಾಹನವನ್ನು ಮತ್ತು
ನಾಗರಾಜ ಈತನು ತನ್ನ ಮೋಟಾರು ಸೈಕಲ್ ಕೆ.ಎ33ಎಲ್999 ನೇದ್ದನ್ನು ನಡೆಸಿಕೊಂಡು ಬರುತ್ತಿದ್ದು
ನಾಗರಾಜ ಈತನು ತನ್ನ ದ್ವಿಚಕ್ರ ವಾಹನದ ಮೇಲೆ ಬರುತ್ತಿದ್ದಾಗ ಜೇವರ್ಗೀ ಹೊರವಲಯದ ಸಂಪತ್ ಲಕ್ಷ್ಮಿ
ದೇವಸ್ಥಾನ ಎದುರುಗಡೆ ರಸ್ಥೆಯ ಮೇಲೆ ಸಾಯಂಕಾಲ 06:00 ಗಂಟೆಯ ಸುಮಾರಿಗೆ ಎದುರುಗಡೆ ಜೇವರ್ಗಿ ಕಡೆಯಿಂದ ಬಂದ ಬಸ್ ನಂ
ಕೆ.ಎ32ಎಫ್1625 ನೇದ್ದರ ಚಾಲಕನು ತನ್ನ ಬಸ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿಕೊಂಡು ಬಂದು
ನಾಗರಾಜ ಈತನು ಕೂಳಿತುಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿ ನಾಗರಾಜ ಈತನಿಗೆ ತಲೆಗೆ, ಕೈಗೆ ಮತ್ತು ಕಾಲಿಗೆ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ
ಸಲ್ಲಿಸಿದ ದುರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ವೆಂಕಟಸ್ವಾಮಿ ತಂದೆ ಗೊಲ್ಲಪ್ಪ ಬಂಡಿವಡ್ಡರ್ ಸಾ|| ಬಸವೇಶ್ವರ ನಗರ ಜೇವರ್ಗಿ
ರವರು ದಿನಾಂಕ ೦1.೦2.2015
ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ 02.02.2015 ರ ಬೇಳಗ್ಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ
ಜೇವರ್ಗಿ ಪಟ್ಟಣದ ಬಸವೇಶ್ವರ ನಗರದ ನನ್ನ
ಮನೆಯ ಮುಂದೆ ನಿಲ್ಲಿಸಿದ ನನ್ನ ಒಂದು ಹಿರೊ ಹೊಂಡಾ ಸ್ಪ್ಲೇಂಡರ್ ಪ್ಲಸ್
ಮೋಟಾರು ಸೈಕಲ್ ನಂ ಕೆ.ಎ37ಆರ್2729 ಅಂ.ಕಿ 24.000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment