Police Bhavan Kalaburagi

Police Bhavan Kalaburagi

Saturday, February 28, 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಹಗಂವ ಠಾಣೆ : ಶ್ರೀ ಸುಬ್ಬಣ್ಣಾ ತಂದೆ ಪ್ರಭು ಮುಗಳಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ ಇವರು ದಿನಾಂಕ: 27/02/2015 ರಂದು ನಾನು ನನ್ನ ಮಗ ಶಿವಕುಮಾರ ಮತ್ತು ಸಂಜೀವ ಎಲ್ಲರೂ ವಿಕೆ ಸಲಗರ ರೋಡಿಗೆ ಇರುವ ಹೊಲಕ್ಕೆ ಹೋಗಿ ಸಾಯಂಕಾಲ ಹೊಲದಲ್ಲಿ ಕೆಲಸ ಮಾಡಿ, ಮರಳಿ ಮನೆಗೆ ಬರುತ್ತಿದ್ದಾಗ ಸಂಜೀವ ಈತನು ನಾನು ಇನ್ನೂ ಸ್ವಲ್ಪ ತಡ ಮಾಡಿ ತಾನು ತಂದಿರುವ ಹೊಂಡಾ ಸೈನ ಮೋಟಾರ ಸೈಕಲ ನಂ. ಕೆಎ: 32/ಈಎ:8666 ನೇದ್ದರ ಮೇಲೆ ಬರುತ್ತೇನೆ. ನೀವು ಹೋಗಿರಿ ಅಂತಾ ತಿಳಿಸಿದಾಗ ನಾವಿಬ್ಬರು ಮನೆಗೆ ಬಂದಿದ್ದು. ನಮ್ಮೂರಿನ ಚನ್ನಪ್ಪಾ ಹೊಳಕುಂದಿ ಈತನು ಫೋನ ಮಾಡಿ ವಿಷಯ ತಿಳಿಸಿದ್ದೇನೇಂದರೆ, ಮಹಾಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹತ್ತಿರ ಇರುವ ರೋಡಿನ ಮೇಲೆ ಅಪಘಾತವಾಗಿ ನಿನ್ನ ಮಗ ಸಂಜೀವ ಈತನು ತಲೆಗೆ ಭಾರಿಗಾಯ ಮೃತ ಪಟ್ಟಿದ್ದು ಆತನ ಪಕ್ಕದಲ್ಲಿ ಹೊಂಡಾ ಶೈನ ಮೋ.ಸೈ ಕೆಎ:32, ಈಎ:8666 ನೇದ್ದು ಬಿದಿದ್ದು. ಬಹುಶಾ ಆತನಿಗೆ ಯಾವುದೋ ವಾಹನದ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ಅಪಘಾತಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ಮಗ ಶಿವಕುಮಾರ ಹಾಗು ಈತರರೊಂದಿಗೆ ಹೋಗಿ ನೋಡಲಾಗಿ ನಿಜವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 27-02-2015 ರಂದು ನನ್ನ ಮೋಟಾರ ಸೈಕಲ ನಂ ಎಪಿ-23-ಎಡಿ-0665 ನೇದ್ದರ ಮೇಲೆ ಕಲಬುರಗಿಗೆ ಬಂದು  ಮದ್ಯಾಹ್ನ 3-00 ಗಂಟೆ ಸುಮಾರಿಗೆ ನಾನು ನನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಕಣ್ಣಿ ಮಾರ್ಕೇಟ ಹತ್ತೀರ ಒಬ್ಬರನ್ನು ಬೆಟಿಯಾಗಿ ಹೀರಾಪೂರಕ್ಕೆ ಹೋಗುವ ಕುರಿತು ಆರ.ಪಿ.ಸರ್ಕಲ ಮುಖಾಂತರವಾಗಿ ಹೋಗುವಾಗ   ಕೆಂಧ್ರ ಬಸ ನಿಲ್ದಾಣದ ಎದುರುಗಡೆ ಎನ್,,ಕೆ,ಆರ,ಟಿ,ಸಿ ಬಸ ನಂ ಕೆಎ-32-ಎಫ್-1108 ರ ಚಾಲಕ ಶರಣಪ್ಪಾ ಇತನು ಬಸನ್ನು ಆರ.ಪಿ.ಸರ್ಕಲ ಕಡೆಯಿಂದ ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಎಡಗಾಲು ರಿಸ್ಟ ಹತ್ತೀರ ತರಚಿದ ಗಾಯ ಎಡಗಾಲು ಮೊಳಕಾಲಿಗೆ ತರಚಿದಗಾಯ ಹಾಗೂ ಬಲಗಾಲು ಮೊಳಕಾಲಗೆ ತರಚಿದ ಗಾಯಗೊಳಿಸಿರುತ್ತಾರೆ ಅಂತಾ ಶ್ರೀ ಸಿದ್ದಣ್ಣ ತಂದೆ ರಾಮಯ್ಯ ಚೌಧರಿ ಸಾ: ಪೇಠ ಶಿರೂರ ತಾ: ಚಿತ್ತಾಪೂರ ಜಿ: ಕಲಬುರಗಿ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಬಸವರಾಜ ಡಾಂಗೆ ವಲಯ ಅರಣ್ಯ ಅಧಿಕರಾರಿಗಳು ಯಾದಗೀರ ಇವರು ದಿನಾಂಕ 15-02-2015 ರಂದು ಕಲಬುರಗಿ ವೃತ್ತ ಮಟ್ಟದ ಪ್ರಾದೇಶಿಕ ಅರಣ್ಯ ಇಲಾಖೆಯ ಕಾರ್ಯಾಲಯಕ್ಕೆ ಆಫೀಸ ಕೆಲಸ ಕುರಿತು ಬುಲೇರೊ ಜೀಪ ನಂಬರ ಕೆಎ-33 ಜಿ-0080 ನೇದ್ದನ್ನು ವೆಂಕಟೇಶ ಇತನು ಚಲಾಯಿಸುತ್ತಿರುವ ಜೀಪಿನಲ್ಲಿ ನಾನು ಮತ್ತು ಮಹ್ಮದ ರಿಜ್ವಾನ ಮತ್ತು ಈರಣ್ಣಾ ರವರು ಬಂದು ಆಫೀಸದಿಂದ ಸುಪರ ಮಾರ್ಕೆಟಕ್ಕೆ ಹೋಗಿ ವಾಪಸ್ಸ ಲಾಲಗೇರಿ ಕ್ರಾಸ್ ಗೋವಾ ಹೋಟಲ ಕ್ರಾಸ ಮುಖಾಂತರ ಕಲಬುರಗಿ ವೃತ್ತ  ಮಟ್ಟದ ಅರಣ್ಯ ಕಾರ್ಯಾಲಯಕ್ಕೆ ಹೋಗುವಾಗ ಜೀಪ ಚಾಲಕ ವೆಂಕಟೇಶ ಇತನು ಅತೀವೆಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು ನಾನು ಆತನಿಗೆ ನಿಧಾನವಾಗಿ ಚಲಾಯಿಸುವಂತೆ ತಿಳಿಸಿದರು ಕೂಡಾ ಜೀಪ ಅತೀಜೋರಿನಿಂದ ಚಲಾಯಿಸಿ ರೋಡ ಡಿವೈಡರಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬುಲೇರೊ ಜೀಪ ಡ್ಯಾಮೇಜ ಮಾಡಿರುತ್ತಾನೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: