Police Bhavan Kalaburagi

Police Bhavan Kalaburagi

Tuesday, March 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 01-03-2015 ರಂದು ಪಿರ್ಯಾದುದಾರರ ತಮ್ಮನಾದ ಮಂಜುನಾಥ ಈತನು ತನ್ನ ಟಂಟಂ. ವಾಹನ ನಂ. ಕೆ.ಎ.37/ಎ.5080 ನೇದ್ದರಲ್ಲಿ ಜಬ್ಬಲಗುಡ್ಡ ಗ್ರಾಮದ ಹತ್ತಿರ ಇವರು ದೊಡ್ಲಾ ಹಾಲಿನ ಡೈರಿಗೆ ಹಾಲು ಹಾಕಲು ಹೋಗಿ ಡೈರಿಯಿಂದ ವಾಪಾಸ ಟಂಟಂ ವಾಹನ ನಂ.ಕೆ.ಎ.37/ಎ.5038 ನೇದ್ದರಲ್ಲಿ ವಾಪಸ ಊರಿಗೆ ಬರುತ್ತಿರುವಾಗ ಗಂಗಾವತಿ - ಕೊಪ್ಪಳ ರಸ್ತೆಯ ಮೇಲೆ ಬೂದೇಶ್ಡರ ಕ್ರಾಸ ಹತ್ತಿರ ಯಾವುದೋ ವಾಹನ ಚಾಲಕನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಂಟಂ ವಾಹನಕ್ಕೆ ಎದರುಗಡೆಯಿಂದ ಠಕ್ಕರ್ ಕೊಟ್ಟು ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ.ಸದರಿ ಅಪಘಾತದಲ್ಲಿ ಪಿರ್ಯಾದುದಾರರ ತಮ್ಮನಾದ ಮಂಜುನಾಥನಿಗೆ ಸಾದಾ ಮತ್ತು  ಬಾರಿ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಳ್ಳಲಾಗಿದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 16/2015 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 02-03-2015 ರಂದು ರಾತ್ರಿ 9-45 ಗಂಟೆಗೆ ಠಾಣೆಯ ಹೆಚ್.ಸಿ 148 ರುದ್ರಯ್ಯ ರವರು ಗಂಗಾವತಿಯ ಶ್ರೀ ಮಲ್ಲನಗೌಡ್ರು ಆಸ್ಪತ್ರೆಯಿಂದ ವಾಪಾಸು ಬಂದು ಅಲ್ಲಿ ರಸ್ತೆ ಅಫಘಾತದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ ಗಾಯಾಳು ಫಿರ್ಯಾದಿದಾರರಾದ ಶ್ರೀ ಬಸವರಾಜರೆಡ್ಡಿ ತಂದೆ ಮುದ್ದಣ್ಣರೆಡ್ಡಿ ರೆಡ್ಡೆರ್, ವಯ: 35 ವರ್ಷ, ಜಾತಿ: ಲಿಂಗಾಯತ, ಉ: ವ್ಯವಸಾಯ, ಸಾ: ಪುರಾ ರವರ ನುಡಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ: 01-03-2015 ರಂದು ಫಿರ್ಯಾದಿದಾರರು ಮತ್ತು ಅವರ ಅಳಿಯ ನಾಗನಗೌಡ ಕೋಳುರು ಇಬ್ಬರು ಕೂಡಿ ಸಂಜೆ 5-30 ಗಂಟೆ ಸುಮಾರಿಗೆ ನಾಗನಗೌಡನ ಹೊಂಡಾ ಸೈನ್ ಮೋಟಾರು ಸೈಕಲ್ ನಂ: ಕೆ.ಎ-36/ಇಡಿ-6561 ನೇದ್ದನ್ನು ತೆಗೆದುಕೊಂಡು ಹೋಗಿ ಪುರಾ ಗ್ರಾಮ ಸೀಮಾದಲ್ಲಿರುವ ತಮ್ಮ ಹೊಲವನ್ನು ನೋಡಿಕೊಂಡು ವಾಪಾಸು ಯತ್ನಟ್ಟಿ-ಪುರಾ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯ ತಿರುವಿನಲ್ಲಿ  ನಾಗನಗೌಡನು ತನ್ನ ಮೋಟಾರು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿದ್ದು ದಾರಿಯಲ್ಲಿ ಒಮ್ಮೇಲೆ ಒಂದು ಎಮ್ಮೆ ಬಲಗಡೆಯಿಂದ ಅಡ್ಡ ಬಂದಿದ್ದು ನಾಗನಗೌಡನು ತನ್ನ ಮೋಟಾರು ಸೈಕಲ್ ಎಮ್ಮೆಗೆ ಠಕ್ಕರು ಮಾಡಿದ್ದರಿಂದ ಇಬ್ಬರು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ನೋಡಲಾಗಿ  ಮೋಟಾರು ಸೈಕಲ ಹಿಂದೆ ಕುಳಿತಿದ್ದ ಫಿರ್ಯಾದಿದಾರರಿಗೆ ಎಡಗಾಲ ಮೋಣಕಾಲಿಗೆ ಭಾರಿ ಒಳಪೆಟ್ಟು ಮತ್ತು ಬಲಗಾಲ ಮೋಣಕಾಲಿಗೆ ಭಾರಿ ಒಳಪೆಟ್ಟು ಮತ್ತು  ರಕ್ತಗಾಯವಾಗಿದ್ದು, ಮೋಟಾರು ಸೈಕಲ್ ನ್ನು ನಡೆಸಿದ ನಾಗನಗೌಡ ತಂದೆ ಬಸನಗೌಡ ಕೋಳುರು ಈತನಿಗೆ ಯಾವುದೇ ರೀತಿಯ ಗಾಯಗಳು ಆಗಿರಲ್ಲಿಲ್ಲ, ಸದರಿ ಘಟನೆ ನಡೆದಾಗ ದಿನಾಂಕ: 01-03-2015 ರಂದು ಸಂಜೆ 06-00 ಗಂಟೆಯಾಗಿರಬಹುದು. ನಂತರ ಫಿರ್ಯಾದಿದಾರರ ಅಳಿಯ ಯಾವುದೋ ಒಂದು ಖಾಸಗಿ ವಾಹನದಲ್ಲಿ ಫಿರ್ಯಾದಿದಾರರನ್ನು ಮಲ್ಲನಗೌಡ್ರು ಆಸ್ಪತ್ರೆ ಗಂಗಾವತಿಗೆ ಇಲಾಜು ಕುರಿತು ಸೇರಿಕೆ ಮಾಡಿದ್ದು ಅಂತಾ ಮುಂತಾಗಿ ನೀಡಿದ ನುಡಿ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 16/2015 ಕಲಂ: 279, 337, 338 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.

No comments: