Police Bhavan Kalaburagi

Police Bhavan Kalaburagi

Friday, March 13, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 12/2015 ಕಲಂ. 78(3) Karnataka Police Act.
ದಿನಾಂಕ 13.03.2015 ರಂದು ಸಂಜೆ 4:45 ಗಂಟೆ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮದ ದೊಡ್ಡ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 1) ಭೂಪತಿ ತಂದೆ ರಾಮಯ್ಯ ಈಳಗೇರ ವ: 24 : ಜಾ: ಈಳಗೇರ ಉ:ವ್ಯಾಪಾರ ಸಾ: ಹಿರೆವಂಕಲಕುಂಟಾ, 2) ಶಂಕ್ರಪ್ಪ ತಂದೆ ಭೀಮಪ್ಪ ಕೋತಿ ವ: 42, ಜಾ: ಗಾಣಗೇರ : ಕೂಲಿ ಸಾ: ವಣಗೇರಿ ಓ/ಸಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ ಐ ಹಾಗೂ ಸಿಬ್ಬಂದಿಯವರು, ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಇಬ್ಬರೂ ಆರೋಪಿತರು ಸಿಕ್ಕಿ ಬಿದ್ದಿದ್ದು ಆರೋಪಿ ನಂ 1 ನೆದ್ದವನಿಂದ 3270/-ರೂ  ಆರೋಪಿ ನಂ 2 ನೆದ್ದವನಿಂದ 675/- ರೂ ಈ ರೀತಿ ಒಟ್ಟು ಓಸಿ ಜೂಜಾಟದ ನಗದು ಹಣ 3945/- ರೂ, ಎರಡು ಬಾಲ ಪೇನ್ನ ಎರಡು ಓಸಿ ಪಟ್ಟಿಗಳನ್ನು ಜಪ್ತ ಮಾಡಿಕೊಂಡು ಪಿ,ಎಸ್,ಐ ರವರು ಸದರಿ ಓ,ಸಿ ಜೂಜಾಟದ ಸಾಮಗ್ರಿಗಳು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಮೇಲಿಂದ ಕ್ರಮ ಜರುಗಿಸಿದ್ದು ಅದೆ.
2)  ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 49/2015 ಕಲಂ. 78(6) Karnataka Police Act.
ದಿ: 12-03-2015 ರಂದು ಮಧ್ಯಾಹ್ನ 2-10 ಗಂಟೆಗೆ ಫಿರ್ಯಾದಿದಾರರಾದ ಪಿ. ಮೋಹನಪ್ರಸಾದ ಪಿ.ಐ. ನಗರ ಠಾಣೆ ಕೊಪ್ಪಳ ರವರು ಆರೋಪಿ ಸಮೇತ ತಮ್ಮ ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸುವ ಬಗ್ಗೆ ಮಾನ್ಯ ಸಿ.ಜೆ.ಎಂ. ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಠಾಣೆ ಪಿಸಿ-414 ರವರ ಸಂಜೆ 06-45 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯಲ್ಲಿ  ದಿ: 12-03-15 ರಂದು ಕೊಪ್ಪಳ ನಗರದ ಆಜಾದ ಸರ್ಕಲ್ ಹತ್ತಿರ  ನಮೂದು ಆರೋಪಿತರು  ಕೂಡಿಕೊಂಡು ಈಗ ನಡೆಯುತ್ತಿರುವ ವಿಶ್ವಕಪ್ ಕ್ರಿಕೇಟ ನಡೆಯುವ ಪಂದ್ಯಾವಳಿಗಳಲ್ಲಿ ತಮಗೆ ಫೇವರೇಟ್ ಎನಿಸಿದ ಟೀಮ್ ಮೇಲೆ ಹಣವನ್ನು ಬಿಡ್ ಮಾಡಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ದಾಳಿಯ ಕಾಲಕ್ಕೆ ಸದರಿ ಆರೋಪಿತರಿಂದ ಪಂಚರ ಸಮಕ್ಷಮ ಕ್ರಿಕೇಟ್ ಬೆಟ್ಟಿಂಗ್ ನಗದು ಹಣ 48,200/- ರೂ ಹಾಗೂ 04 ಮೊಬೈಲ್ ಪೋನಗಳನ್ನು ಜಪ್ತ ಮಾಡಿಕೊಂಡು ಬಂದು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 50/2015 ಕಲಂ. 279, 304(ಎ)  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.

ದಿನಾಂಕ. 12-03-2015 ರಂದು 8-00 ಪಿ.ಎಂ. ದಿಂದ 8-30 ಪಿ.ಎಂ.ಅವದಿಯಲ್ಲಿ ಫಿರ್ಯಾದಿದಾರರ ತಮ್ಮನಾದ ಅಲ್ಲಮಪ್ರಭು ಇವರು ಹೊಸಪೆಟೆಯಿಂದ ತಮ್ಮ ಮೋ.ಸೈ. ನಂ. ಕೆ.ಎ.35/ಈ.ಎ.189 ನೇದ್ದರಲ್ಲಿ ಮುನಿರಾಬಾದಕ್ಕೆ ಹೋಗುತ್ತಿರುವಾದ ಹೊಸಪೇಟೆ ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಮೇಲೆ ಮೂನಲೈಟ ಡಾಬಾ ಹತ್ತಿರ ಯಾವುದೋ ಒಂದು ವಾಹನ ಚಾಲಕನು ವಾಹನವನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಲ್ಲಮಪ್ರಭು ಇವರ ಮೋಟಾರ ಸೈಕಲ್ ಹಿಂದೆ ಠಕ್ಕರ ಕೊಟ್ಟು ಅಪಘಾತ ಮಾಡಿ ವಾಹನ ನಿಲ್ಲಿಸದೆ ಹೋಗಿದ್ದು, ಅಲ್ಲಮಪ್ರಭು ಇವರ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದು ತಲೆಯ ಹಿಂದೆ ಭಾರಿ ಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

No comments: