Police Bhavan Kalaburagi

Police Bhavan Kalaburagi

Wednesday, March 25, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2015 ಕಲಂ. 78(1)(A)(VI) Karnataka Police Act & 420 IPC:.
ದಿನಾಂಕ 24-03-2015 ರಂದು 1-00 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ (01) ಅಮರೇಶ. (02) ಅಜ್ಮೀರ್ (03)    ಜಯಪ್ರಕಾಶ. (04) ನಜೀರ. (05) ಕಾಸಿಂ. (06) ಹುಲುಗಪ್ಪ ಮತ್ತು (07) ಪ್ರಸಾದ ಈ 07 ಜನರನ್ನು ಹಾಜರಪಡಿಸಿ    ಸದರಿಯವರ     ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ  ಸಾರಂಶವೇನೆಂದರೆ, ಇಂದು ದಿನಾಂಕ: 24-03-2015 ರಂದು ಬೆಳಿಗ್ಗೆ 11-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ. ಆವರಣದಲ್ಲಿಯ ಗೋದಾಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಂದು ನಡೆಯುತ್ತಿರುವ  ದಕ್ಷಿಣ ಆಪ್ರೀಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ವಿಶ್ವಕಪ್ ಸೆಮಿ ಫೈನಲ್ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 1,000-00 ರೂಗಳಿಗೆ 1300 ರೂಪಾಯಿ ಕೊಡುವುದಾಗಿ ಮತ್ತು ನ್ಯೂಜಿಲ್ಯಾಂಡ್ ಗೆದ್ದರೆ 1,000-00  ರೂಪಾಯಿಗಳಿಗೆ 1500-00 ರೂಪಾಯಿ ಕೊಡುವದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ನಗದು ರೂಪದಲ್ಲಿ ಮತ್ತು ಮೆಸೆಜ್ ಮುಖಾಂತರ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು ಹಣ 37,905-00 ರೂ; ಹಾಗೂ ಜೂಜಾಟ ಆಡಲು ಬಳಸುತ್ತಿದ್ದ ಹೆಚ್.ಟಿ.ಸಿ. ಸ್ಯಾಮಸಂಗ್, ಸೆಲ್ ಕಾನ್, ನೋಕಿಯಾ, ಮತ್ತು ಫ್ಲೈ  ಕಂಪನಿಯ ಒಟ್ಟು 09  ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆದ ದಕ್ಷಿಣ ಆಫ್ರೀಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸೆಮಿಫೈನಲ್ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಸದರಿಯವರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/15 ಕಲಂ. 78 (1)(A)(VI) ಕೆ.ಪಿ. ಆ್ಯಕ್ಟ್ ಮತ್ತು ಕಲಂ 420 ಐ.ಪಿ.ಸಿ.ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 49/2015  ಕಲಂ 34 ಕೆ.ಇ. ಕಾಯ್ದೆ:.

ದಿನಾಂಕಃ-24-03-2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕಾರಟಗಿ ಗ್ರಾಮದ ನವಲಿ ರಸ್ತೆಯ ಪಕ್ಕದಲ್ಲಿ ಎಮ್.ಕೆ ಮೀಲ್ ಎದರುಗಡೆ ಒಂದು ಶೆಡ್ಡಿನಲ್ಲಿ ಆರೋಪಿತನು ತನ್ನ ಹತ್ತಿರ ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಮಾನ್ಯ ಸಿ.ಪಿ.ಐ ಸಾಹೇಬರು ಗಂಗಾವತಿ (ಗ್ರಾ) ಮೃತ್ತ ಮತ್ತು ಪಿ.ಎಸ್.ಐ ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಅಕ್ರಮ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದು ಸದರಿಯವನ ಶೆಡ್ಡಿನಲ್ಲಿ ಒಟ್ಟು ಅಂ.ಕಿ 2823/- ರೂಗಳು ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಮತ್ತು ಆರೋಪಿತನು ಮದ್ಯದ ಬಾಟಲಿಗಳನ್ನು ಮಾರಾಟ ಮಾಡಿ ತನ್ನ ಹತ್ತಿರ ಇಟ್ಟುಕೊಂಡಿದ್ದ ನಗದು ಹಣ ರೂ. 2790/- ಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮತ್ತು ಪಂಚನಾಮೆ ಮಾಡಿಕೊಂಡು ಠಾಣೆಗೆ 8-30 ಬಂದು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

No comments: