ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-03-2015 ರಂದು ಅಫಜಲಪೂರ ಆಶ್ರಯ ಕಾಲೋನಿಯಲ್ಲಿ ಪರಸಪ್ಪಾ ಕುಡಕಿ ರವರ ಮನೆಯ
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆಶ್ರಯ ಕಾಲೋನಿಗೆ ಹೋಗಿ, ಪರಸಪ್ಪಾ ಕುಡಕಿ ರವರ ಮನೆಯಿಂದ
ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ, ಪರಸಪ್ಪಾ ಕುಡಕಿ ರವರ ಮನೆ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಪ್ಲಾಸ್ಟೀಕ ಚೀಲ ಇಟ್ಟುಕೊಂಡು ಹೋಗಿ ಬರುವ
ಜನರಿಗೆ ಕರೆದು ಅವರಿಂದ ಹಣ ಪಡೆದು ಚೀಲದಲ್ಲಿದ್ದ ಮದ್ಯದ ಪೌಚಗಳನ್ನು ಕೊಡುತ್ತಿದ್ದುದನ್ನು
ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ ಚೀಲನ್ನು ಚೆಕ್ ಮಾಡಲಾಗಿ, ಸದರಿ ಚೀಲನಲ್ಲಿ ಓಲ್ಡ್ ಟವೇರನ್
ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 36 ರಟ್ಟಿನ ಪೌಚಗಳು ಇದ್ದವು ಅ||ಕಿ|| 2016/- ರೂ. ಮತ್ತು ಹಾಯ ವರ್ಡ
ಕಂಪನಿಯ 90 ಎಮ್.ಎಲ್ ಅಳತೆಯ ಮದ್ಯ ತುಂಬಿದ 72 ರಟ್ಟಿನ ಪೌಚಗಳು ಅ||ಕಿ|| 1,728/- ರೂ ರಷ್ಟು ದೊರೆತವು. ಸದರಿಯವನಿಗೆ ಮದ್ಯದ ಬಗ್ಗೆ
ವಿಚಾರಿಸಲಾಗಿ ತಾನು ಯಾವುದೆ ಪರವಾನಿಗೆ ಇಲ್ಲದೆ ಮದ್ಯದ ಪೌಚಗಳನ್ನು ಅಕ್ರಮವಾಗಿ ರಸ್ತೆಯ ಮೇಲೆ
ಇಟ್ಟುಕೊಂಟು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ
ವಿಚಾರಿಸಲು ತನ್ನ ಹೆಸರು ಫಕೀರಪ್ಪಾ ಯಮನಪ್ಪಾ ದೊಡಮನಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ
ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ
ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 06-03-2015 ರಂದು ಶ್ರೀ ಮಳೆಪ್ಪಾ ತಂದೆ ಸಿದ್ದಪ್ಪ@ಹುಲೆಪ್ಪಾ ಡಾಂಗೆ ಸಾ||
ಮಲ್ಲಿಕಾರ್ಜುನ ಚೌಕ ಅಫಜಲಪೂರ ರವರು ಮತ್ತು ನಮ್ಮ ತಂದೆ ಹಾಗು ನಮ್ಮೋಣಿಯವರೆಲ್ಲರು ಸೇರಿಕೊಂಡು
ಮಲ್ಲಿಕಾರ್ಜುನ ಗುಡಿಯಲ್ಲಿ ದಾಸೋಗ ಊಟ ಮಾಡುತ್ತಿದ್ದಾಗ ನಮ್ಮ ಅಣ್ಣತಮ್ಮಕಿಯವನಾದ ಬಸವರಾಜ ತಂದೆ
ಮಳೆಪ್ಪಾ ಡಾಂಗೆ ಇವನು ಸರಾಯಿ ಕುಡಿದ ಅಮಲಿನಲ್ಲಿ ನಮ್ಮ ತಂದೆಗೆ ವಿನಾಕಾರಣ ಹೊಡೆಯಲು ಬಂದು ಬಾಯಿ
ತಕರಾರು ಮಾಡಿಕೊಳ್ಳುತ್ತಿದ್ದನು, ಆಗ ಅಲ್ಲಿದ್ದ ಬಸವರಾಜ ತಂದೆ ಶಂಕ್ರೆಪ್ಪಾ ಹಳಿಮನಿ, ಹಣಮಂತ ತಂದೆ ಶಿವಣ್ಣಾ ಡಾಂಗೆ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ 10;15 ಪಿ.ಎಂ ಸುಮಾರಿಗೆ ನಾನು ಸದರಿ ಬಸವರಾಜ ಡಾಂಗೆ ರವರ ಮನೆಗೆ ಹೋಗಿದಾಗ ಮನೆಯ ಮುಂದೆ ಬಸವರಾಜನ
ತಂದೆ ಮಳೆಪ್ಪಾ ತಂದೆ ಸಿದ್ದಪ್ಪಾ ಡಾಂಗೆ ರವರು ಇದ್ದರು ಸದರಿಯವರಿಗೆ ನಿಮ್ಮ ಮಗ ಬಸವರಾಜ ಇವನು
ನಮ್ಮ ತಂದೆಯಿಂದಿಗೆ ಮಲ್ಲಿಕಾರ್ಜುನ ಗುಡಿಯಲ್ಲಿ ಸರಾಯಿ ಕುಡಿದ ಅಮಲಿನಲ್ಲಿ ವಿನಾಕಾರಣ ಯಾಕೇ ಜಗಳ
ತೆಗೆದಿರುತ್ತಾನೆ ಅಂತಾ ಕೇಳಿದಾಗ ಮಳೆಪ್ಪಾ ಇವರು ನನಗೆ ಏ ಸೂಳಿ ಮಗನಾ ನಿಮ್ಮ ಸೊಕ್ಕೆ ಬಹಳ ಆದ
ಸುಮ ಸುಮನೆ ನಮ್ಮೊಂದಿಗೆ ಜಗಳ ತೆಗೆಯಲು ಬರುತ್ತಿರಿ ಅಂತಾ ಅಂದು ನನಗೆ ಕೈಯಿಂದ ಕಪಾಳ ಮೇಲೆ
ಹೊಡೆದನು, ಆಗ ಅಲ್ಲೆ ಇದ್ದ ಧರೆಪ್ಪಾ ತಂದೆ ಮಳೇಪ್ಪಾ ಡಾಂಗೆ ಇವನು ನನ್ನ ಹತ್ತಿರ
ಬಂದು ನನ್ನ ಎಡಗಡೆ ಎದೆಯ ಮೇಲೆ ತನ್ನ ಹಲ್ಲಿಲೆ ಕಚ್ಚಿ ಗಾಯ ಪಡಿಸಿದನು. ಸದರಿ ಮಳೇಪ್ಪಾ ಡಾಂಗೆ
ರವರ ಹೆಂಡತಿ ಮಹಾದೇವಿ ಇವರು ಇವತ್ತ ಈ ಮಗನಿಗಿ ಬಿಡಬ್ಯಾಡರಿ ಹೊಡೆದು ಖಲಾಸ ಮಾಡರಿ ಅಂತಾ
ಅನ್ನುತ್ತಿದ್ದರು, ಬಸವರಾಜ ಮತ್ತು ರೇವಣಪ್ಪಾ ರವರು ಇಬ್ಬರು ಬಂದು ನನಗೆ ನೆಲದ ಮೇಲೆ
ಹಾಕಿ ಕಾಲಿಲೆ ಒದೆಯುತ್ತದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ಹಣಮಂತರಾವ ದಿಗಸಂಗಿ ಸಾ: ದೇವಿ ಗುಡಿ ಹತ್ತಿರ
ದೇವಿ ನಗರ ಕಲಬುರಗಿ ರವರು ದಿನಾಂಕ 06-03-2015 ರಂದು ಮದ್ಯಾಹ್ನ 1-00 ಗಂಟೆಗೆ ಶಿವರಾಜ ಇವರು
ಮೋ/ಸೈಕಲ ನಂಬರ ಕೆಎ-05 ಹೆಚ್.ಎನ್-2581 ರ ಮೇಲೆ ಹಿಂದುಗಡೆ ಕುಳಿತು ಶಹಾಬಜಾರ ನಾಕಾ ಲಾಲಗೇರಿ
ಕ್ರಾಸ ಮುಖಾಂತರವಾಗಿ ಹೋಗುವಾಗ ಎಸ್.ಬಿ.ಟೆಂಪಲ ಹತ್ತಿರ ಬರುವ ನಾಗರಕಟ್ಟಾ ಕ್ರಾಸ ಹತ್ತಿರ ರೋಡ
ಮೇಲೆ ಹಿಂದಿನಿಂದ ಯಾವುದೊ ಒಬ್ಬ ಮೋ/ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ಮೋ/ಸೈಕಲ ಹಿಂದುಗಡೆ ಕುಳಿತ್ತಿದ್ದ ಫಿರ್ಯಾದಿಯ ಬಲಗಾಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ
ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ದಿನಾಂಕ 06-03-2015 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನನ್ನ
ತಮ್ಮನಾದ ಕರಣಪ್ಪಾ ಇತನು ಮದ್ಯ ಸೇವನೆ ಮಾಡಿ ಅಟೋರಿಕ್ಷಾ ನಂಬರ ಕೆಎ-32 ಬಿ-8955 ನೇದ್ದನ್ನು
ಆರ್.ಪಿ. ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡಬಲ ಕಟ್ಟ
ಹೊಡೆದು ಅಟೋ ಶೊ ರೂಮ ಹತ್ತಿರ ಒಮ್ಮೆಲೆ ಬ್ರೇಕ ಹಾಕಿ ಅಟೋರಿಕ್ಷಾ ಪಲ್ಟಿ ಮಾಡಿ ತಲೆಯ ಹಿಂದುಗಡೆ
ರಕ್ತಗಾಯ, ಬಲಗಡೆ ರಿಸ್ಟ ಹತ್ತಿರ ರಕ್ತಗಾಯ, ಎಡಗಣ್ಣಿನ
ಹುಬ್ಬಿನ ಹತ್ತಿರ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದಗಾಯ, ಬಲಗಾಲು
ರಿಸ್ಟ ಹತ್ತಿರ ರಕ್ತಗಾಯ, ಹೊಂದಿರುತ್ತಾನೆ ಅಂತಾ ದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು
ಅಂತಾ ಶ್ರೀಮತಿ ಈರಮ್ಮಾ ಗಂಡ ರಮೇಶ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ
: ಗ್ರಾಮ ಸ್ವರಾಜ ಯೋಜನಾ ಕಛರಿ ಗ್ರಾಮೀಣಾಬಿವೃದ್ದಿ
ಮತ್ತು ಪಂಚಾಯತ ರಾಜ್ ಇಲಾಖೆ ಕಾರ್ಯಾಲಯ ಬೆಂಗಳೂರ
ರವರು ಗ್ರಾಮ ಸ್ವರಾಜ ಕರ್ನಾಟಕ ಪಂಚಾಯತ ಸಬಲಿಕರಣ
ಯೋಜನೆಯಾಗಿದ್ದು, ಈ ಯೋಜನೆಯು ಮಾರ್ಚ -2014 ಕ್ಕೆ ಮುಕ್ತಾಯಗೊಳ್ಳುತ್ತಿದ್ದ,
ಅದರಂತೆ ತಮ್ಮ ತಾಲೂಕಾ ಪಂಚಾಯತ ವ್ಯಾಪ್ತಿಯ ಎಲ್ಲಾ
ಗ್ರಾಮ ಪಂಚಾಯತಿಗಳಿಗೆ 2011-12 ಮತ್ತು 2012-13 ನೇ ಸಾಲಿನಲ್ಲಿ ಬಿಡುಗಡೆಯಾದ ಹೆಚ್ಚುವರಿ
ಅನುದಾನವನ್ನು ಅನುಸ್ಟಾನಗೊಳಿಸಲು ಸಾದ್ಯವಾಗದೆ ಇರುವುದರಿಂದ ಹಾಗೂ ಯೋಜನೆಯು ಮಾರ್ಚ 2014 ಕ್ಕೆ
ಮುಕ್ತಾಯಗೊಳ್ಳುತ್ತಿದ್ದು ಉಳಿಕೆಯಾದ ಬಾಕಿ ಅನುದಾನವನ್ನು ಸರ್ಕಾರ ಹಿಂಪೆಡೆಯಲು ತಿರ್ಮಾನಿಸಿದಂತೆ ಬಾಕಿ ಉಳಿದಿರುವ
ಅನುದಾನದ ಮೊತ್ತವನ್ನು ಮುಖ್ಯಸ್ಥರು ಗ್ರಾಮ ಸ್ವರಾಜ ಯೋಜನೆ ಹೆಸರಿನಲ್ಲಿ ಚೆಕ್ ತಗೆದು,
ಗ್ರಾಮ ಸ್ವರಾಜ ಯೋಜನಾ ಅನುದಾನವನ್ನು ದಿನಾಂಕ
15-08-2014 ರ ಒಳಗಾಗಿ ಸರ್ಕಾರಕ್ಕೆ ಹಿಂದಿರುಗಿಸಲು ಸೂಚಿಸಿ ಮುಖ್ಯ ಕಚೇರಿಯಿಂದ ದಿನಾಂಕ
28-01-2014 ರಂದು ಈ ಮೇಲ್ ಮೂಖಾಂತರ ನಮ್ಮ ಕಾರ್ಯಾಲಯಕ್ಕೆ ಒಂದು ಪತ್ರ ಮತ್ತು ಅದಕ್ಕೆ ಒಂದು
ಮಾದರಿ ನಮೂನೆ ಪತ್ರವನ್ನು ಲಗತ್ತಿಟ್ಟು ಪತ್ರವನ್ನು ಕಳುಹಿಸಿರುತ್ತಾರೆ. ಅದಲ್ಲದೆ ಮತ್ತೆ 3-4
ಸಲ ಸದರಿ ವಿಷಯವಾಗಿ ಬಾಕಿ ಹಣವನ್ನು ಸಂದಾಯ ಮಾಡುವಂತೆ ಪತ್ರವನ್ನು ನಮ್ಮ ಕಳುಹಿಸಿರುತ್ತಾರೆ,
ಅದರಂತೆ ಆ ಸಮಯದಲ್ಲಿ ನಮ್ಮ ಕಾರ್ಯಾಲಯದಲ್ಲಿ ದಿನಗೂಲಿಯ
ಮೇಲೆ ಕೆಲಸ ಮಾಡುವ ಗ್ರಾಮ ಸ್ವರಾಜ ಕಂಪ್ಯೂಟರ ಆಪರೇಟರ ಆದ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ
ಸಾ|| ರಾಮನಗರ ಈತನು ನಮ್ಮ
ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಮುಖ್ಯ ಕಚೆರಿಯಿಂದ ಬಂದ ಪತ್ರ ಮತ್ತು ಮಾದರಿ ನಮೂನೆಯನ್ನು
ಲಗತ್ತಿಟ್ಟ ಪತ್ರವನ್ನು ಕಳುಹಿಸಿರುತ್ತಾನೆ. ದಿನಾಂಕ 04-03-2015 ರಂದು ಬೆಂಗಳೂರಿನ ನಮ್ಮ
ಇಲಾಖೆಯ ಮುಖ್ಯ ಕಚೇರಿಯಿಂದ ನಿಮ್ಮ ತಾಲೂಕ ಪಂಚಾಯತ ಕಾರ್ಯಲಯ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಂದ
ಗ್ರಾಮ ಸ್ವರಾಜ ಯೋಜನೆಯ ಬಾಕಿ ಹಣ ಇನ್ನು ಸಂದಾಯ ವಾಗಿರುವುದಿಲ್ಲ ಎಂದು ಅದಿಕೃತವಾಗಿ ತಿಳಿಸಿದ
ಮೇರೆಗೆ ನಾನು ಗ್ರಾಮ ಪಂಚಾಯತ ಅಬಿವೃದ್ದಿ ಅದಿಕಾರಿಗಳಿಗೆ ಗ್ರಾಮ ಸ್ವರಾಜ ಬಾಕಿ ಹಣವನ್ನು ಸಂದಾಯ
ಮಾಡುವಂತೆ ಸೂಚಿಸಲು ತಿಳಿಸಿದಾಗ ಗ್ರಾಮ ಪಂಚಾಯತ ಪಿ.ಡಿ.ಓ ರವರುಗಳು ಮಾದರಿ ನಮೂನೆಯಲ್ಲಿದ್ದ
62115372832 ಈ ಖಾತೆಗೆ ಹಣ ಸಂದಾಯ ಮಾಡಿದ ಬಗ್ಗೆ ದಾಖಲಾತಿಗಳನ್ನು ಕೊಟ್ಟು ಸಂದಾಯ
ಮಾಡಿರುತ್ತೆವೆ ಎಂದು ತಿಳಿಸಿರುತ್ತಾರೆ. ಅದರಂತೆ ನಾನು ಸದರಿ ಖಾತೆಯ ಬಗ್ಗೆ ವಿಚಾರ ಮಾಡಲಾಗಿ ಈ
ಖಾತೆ ಅಫಜಲಪೂರ ಪಟ್ಟಣದ ಎಸ್,ಬಿ.ಹೆಚ್ ಬ್ಯಾಂಕ ಖಾತೆಯಿದ್ದು, ಆ ಬ್ಯಾಂಕಿಗೆ ಹೋಗಿ ಸದರಿ ಖಾತೆಯ ಬಗ್ಗೆ ಪರಿಶಿಲಿಸಿ ಬ್ಯಾಂಕ
ತಕ್ತೆಯನ್ನು ಪಡೆದುಕೊಂಡು ನೋಡಲಾಗಿ ಅವ್ಯವಹಾರವಾಗಿರುವುದು ಕಂಡುಬಂದಿರುತ್ತದೆ. ಸದರಿ ಖಾತೆಯು
ನಮ್ಮ ಈ ಹಿಂದೆ ನಮ್ಮ ಕಾರ್ಯಲಯದಲ್ಲಿ ದಿನಗೂಲಿ ಆದಾರದ ಮೇಲೆ ಕೆಲಸ ಮಾಡುತ್ತಿದ್ದ ಗ್ರಾಮ ಸ್ವರಾಜ
ಕಂಪ್ಯೂಟರ ಆಪರೇಟರ ಆದ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ರೆಂಜ ಫಾರೆಷ್ಟ ಆಫೀಸ್ ಎಂಬ ಈತನ
ಖಾತೆಗೆ ಅಂದಾಜು 30,51,710/- ರೂ ಜಮಾ ಆಗಿರುವುದು ಗೊತ್ತಾಗಿರುತ್ತದೆ. ಈ ಹಿಂದೆ ದಿನಗೂಲಿಯ ಮೇಲೆ ಗ್ರಾಮ ಸ್ವರಾಜ ಕಂಪ್ಯೂಟರ
ಆಪರೇಟರ ಕೆಲಸ ಮಾಡುವ ಬಸವರಾಜ ತಂದೆ ಸಿದ್ದಾರಾಮ ಅಲ್ಲಾಪೂರ ಸಾ||
ರಾಮನಗರ ಈತನು ಮುಖ್ಯ ಕಚೇರಿಯಿಂದ ಬಂದ ಪತ್ರದ ಜೋತೆಗೆ
ಲಗತ್ತಿಟ್ಟಿದ್ದ ಮಾದರಿ ನಮೂನೆಯ ಪತ್ರದಲ್ಲಿ ತನ್ನ ಸ್ವಂತ ಖಾತೆ ನಂಬರ 62115372832 ಎಸ್,ಬಿ,ಹೆಚ್ ಅಫಜಲಪೂರ ಬ್ಯಾಂಕಿನ ಖಾತೆ ನಂಬರ ಹಾಕಿ ಸೃಷ್ಟಿಸಿ ನಮ್ಮ ತಾಲೂಕಾ
ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಈ ಪತ್ರವನ್ನು ಕಳುಹಿಸಿ 1) ಬಿದನೂರ 2) ಮಣೂರ 3)
ಉಡಚಾಣ 4) ಅತನೂರ 5) ಕೋಗನೂರ 6) ಮಾಶಾಳ 7) ಚೌಡಾಪೂರ 8) ಅಳ್ಳಗಿ (ಬಿ) 9) ಬಂದರವಾಡ 10)
ದೇವಲಗಾಣಗಾಪೂರ 11) ಬಳೂರ್ಗಿ ಗ್ರಾಮ ಪಂಚಾಯತಗಳಿಂದ ಅಂದಾಜು 30,51,710/- ರೂ ಹಣವನ್ನು ತನ್ನ
ಸ್ವಂತಕ್ಕೆ ಪಡೆದು ಸರ್ಕಾರಕ್ಕೆ ಹಾಗೂ ತಾಲೂಕ ಪಂಚಾಯತಿಗೆ ಮತ್ತು ಇಲಾಖೆಗೆ ಹಾಗೂ ಪಿ.ಡಿ.ಓ
ರವರುಗಳಿಗೆ ಮೋಸಮಾಡಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ಅಕಂಡೆ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ ಕಾರ್ಯಾಲಯ ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment