ಅಪಘಾತ
ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ದಿನಾಂಕ 20.02.2015 ರಂದು ರಾತ್ರಿ ಮಮ್ಮ ತಮ್ಮನಾದ ಮಹಿಬೂಬ ಶೇಖ
ಇತನು ಲಾರಿ ಡ್ರೈವರ ಕೆಲಸದಿಂದ ಕಲಬುರಗಿಯಲ್ಲಿ ಇಳಿದು ನಮ್ಮ ಮೊ.ಸೈ
ನಂ ಕೆಎ-32 ಯು-7960 ಮೇಲೆ ಕಲಬುರಗಿದಿಂದ ನಂದೂರ ಮಾರ್ಗವಾಗಿ ಶಹಾಬಾದ ಕ್ಕೆ ಬರುವಾಗ ಮರತೂರ ಕ್ರಾಸ ದಾಟಿ
ಸೀಮೆ ಮರಗಮ್ಮಾ ಗುಡಿಯ ಹತ್ತಿರ ರೋಡಿನ ತಗ್ಗಿನಲ್ಲಿ ನಮ್ಮ ಮೊ.ಸೈ ನ್ನು ಅತಿವೇಗ ಮತ್ತು ನಿಷ್ಕಳಜಿತನದಿಂದ
ಚಲಾಯಿಸಿಕೊಂಡು ರೋಡಿನ ತಗ್ಗಿನಲ್ಲಿ ಸ್ಕಿಡಾಗಿ
ರೋಡಿನ ಬಲಗಡೆ ಬಿದ್ದಿರುತ್ತಾನೆ ಅಂತಾ ಗೊತ್ತಾಗಿ
ನಾನು ಮತ್ತು ನನ್ನ ದೊಡ್ಡಪ್ಪನ ಮಗನಾದ ಅಬ್ದುಲ
ರೌಫ ಹಾಗೂ ಮೊಹಮ್ಮದ ಸಾಬ ಪಟೇಲ ರವರು ಕೂಡಿಕೊಂಡು ದೇವನ ತೆಗನೂರ ದಾಟಿ ಸಿಮೆ ಮರಗಮ್ಮಾ ಗುಡಿಯ
ಹತ್ತಿರ 8 ಪಿ.ಎಮ್. ಕ್ಕೆ ಹೋಗಿ ನೋಡಲಾಗಿ
ರೋಡಿನ ಎಡಗಡೆ ರಕ್ತದ ಕಲೆ ಬಿದ್ದಿದ್ದು
ನೋಡಲಾಗಿ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ತಲೆಯ ಮೇಲೆ ಬಾವು ಬಂದು
ಒಳಪೆಟ್ಟಾಗಿದ್ದು ಮತ್ತು ಎಡ ಕಿವಿಯಿಂದ
ರಕ್ತ ಸೋರುತ್ತಿದ್ದು ಪ್ರಜ್ಞೆ ತಪ್ಪಿದನು ಗಾಯ ಪೆಟ್ಟು
ಹೊಂದಿದ್ದು ನನ್ನ ತಮ್ಮನಿಗೆ 108 ಅಂಬುಲೆನ್ಸದಲ್ಲಿ ಕಲಬುರಗಿ ವಾತ್ಸಲ್ಯ ಆಸ್ಪತ್ರೆಗೆ
ಸೇರಿಕೆಮಾಡಿ ಅಂದೆ ರಾತ್ರಿ ಹೆಚ್ಚಿನ ಉಪಚಾರ ಕುರಿತು
ಸೊಲ್ಲಪೂರದ ಗಂಗಾಮಾಯಿ ಆಸ್ಪತ್ರೆಗೆ ನಾವೆಲ್ಲರು ಕೂಡಿ ಸೇರಿಕೆ ಮಾಡಿರುತ್ತೇವೆ. ಸದರಿ
ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ದಿನಾಂಕ:
24.02.2015 ರಂದು ಬೆಳಿಗ್ಗೆ ಉಪಚಾರ ಫಲಕಾರಿ
ಆಗದೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಅಬ್ದುಲ ರಹೀಮ ತಂದೆ
ಭಾಷುಮಿಯ್ಯಾ ಶೇಖ ಸಾ|| ಶರಣ ನಗರ ಶಹಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ವೆಂಕಟರಾವ ಕುಲಕರ್ಣಿ ಸಾ: ವಿಧ್ಯಾನಗರ ಕಲಬುರಗಿ ರವರು ದಿನಾಂಕ:
10/03/2015 ರಂದು ತನ್ನ ಮೋ/ಸೈಕಲ್ ನಂ; ಕೆಎ 32 ಕ್ಯೂ 8530 ನೆದ್ದರ ಮೇಲೆ ಮಹಾನಗರ ಪಾಲಿಕೆ
ಕಾರ್ಯಾಲಯದಿಂದ ಎಸ್.ವಿ.ಪಿ.ಸರ್ಕಲ್ ರೋಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಶಾಹಾ
ಆಸ್ಪತ್ರೆಯ ಎದುರಿನ ರೋಡ ಮೇಲೆ ಜಗತ ಸರ್ಕಲ್ ಕಡೆಯಿಂದ ಮೊ/ಸೈಕಲ್ ನಂ: ಟಿ.ಎಸ್. 06 ಇಸಿ 5430 ರ
ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ
ಮೋ/ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಗಾಯಗೊಳಿಸಿ ಮೋ/ಸೈಕಲ
ಸ್ಥಳದಲ್ಲೇ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣಗಳು :
ಆಳಂದ ಠಾಣೆ : ಶ್ರೀ.ಮನೋಹರ ತಂದೆ ನಾರಾಯಣರಾವ ದಳವಿ ಸಾ||
ಶೇರಿಕಾರ ಕಾಲೋನಿ ಉಮರ್ಗಾ ರೋಡ ಆಳಂದ ಇವರು ದಿನಾಂಕ:10/03/2015 ರಂದು ಎಂದಿನಂತೆ ಮನೆಯಲ್ಲಿ ಯಾರು ಇಲ್ಲದಿರುವುದರಿಂದ ವರ್ಕಶಾಪ್
ಕ್ಕೆ ಹೋಗುವಾಗ ಮನೆಯ ಬಾಗಿಲು ಮುಚ್ಚಿ ವರ್ಕಶಾಪ್
ದಲ್ಲಿ ಮದ್ಯಾಹ್ನ 12 ಗಂಟೆಯವರೆಗೆ ಕೆಲಸ ಮಾಡಿ ನಂತರ ಮನೆಗೆ ನೀರು ಕುಡಿಯಲು ಹೋದಾಗ ಮನೆಯ ಕೀಲಿ
ಮುರಿದು ಕೆಳಗಡೆ ಬಿದ್ದಿದನ್ನು ನೋಡಿ ಗಾಬರಿಯಾಗಿ ಮನೆಯೊಳಗೆ ಹೋಗಿ ಮನೆಯಲ್ಲಿನ ಅಲಮಾರಿಯಲ್ಲಿನ
ಎಲ್ಲಾ ಸಾಮಾನುಗಳು ಚೆಲ್ಲಾಪಿಲಿಯಾಗಿ ಬಿದ್ದಿರುವದನ್ನು ನೋಡಿ ಅಲಮಾರಿಯಲ್ಲಿ ನಗದು ಹಣ ಬಂಗಾರದ
ಆಭರಣಗಳು ಒಟ್ಟು 2,50,000/- ರೂ ಕಿಮ್ಮತ್ತಿನವುಗಳನ್ನು ದಿನಾಂಕ:10/03/2015 ರಂದು ಬೇಳಗ್ಗೆ
10:00 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯ ಮಧ್ಯದಲ್ಲಿ ಮನೆಯಲ್ಲಿ ಯಾರೋ ಇಲ್ಲದನ್ನು ನೋಡಿ ಮನೆಯ
ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪುಲ್ಲಾರಾಮ ತಂದೆ ಜೇತರಾಮ ಪಟೇಲ ರವರು ದಿನಾಂಕ 08-03-2015 ರಂದು
ದಿನಂಪ್ರತಿಯಂತೆ ಬೆಳಿಗ್ಗೆ 8:00 ಗಂಟೆಗೆ ನನ್ನ ಕಿರಾಣಿ ಅಂಗಡಿಗೆ ಬಂದು ಅಂಗಡಿಯ ಬಾಗಿಲು ತಗೆದು
ನಂತರ ನಾನು ಮತ್ತು ರಮೇಶ ಇಬ್ಬರು ನಮ್ಮ ಅಂಗಡಿಯ ಮೇಲೆ ಇರುವ ನಮ್ಮ ಕಿರಾಣಿ ಮಾಲು ಇಟ್ಟಿದ
ರೂಮಿನಲ್ಲಿ ಹೋಗಿ ನೋಡಲು, ಸದರಿ ರೂಮಿನ ಬಾಗಿಲಿನ ಕೊಂಡಿ
ಮುರಿದಿತ್ತು, ನಾನು ಒಳಗೆ ಹೋಗಿ ನೋಡಲು ಸದರಿ ರೂಮಿನಲ್ಲಿ ಇಟ್ಟಿದ 75
ಬಂಡಲ ಮುನ್ಸಿ ಬೀಡಿ ಅಂದಾಜು 13,950/- ರೂ ಕಿಮ್ಮತ್ತಿನದು. 2) ಅಗ್ನಿ
ಕಂಪನಿಯ ಚಾಪಡಿ ಪಾಕೇಟಗಳಿರುವಂತಹ ಒಂದು ಬಾಕ್ಸ ಅಂದಾಜು 5100/- ರೂ ಕಿಮ್ಮತ್ತಿನ ಸಾಮಾನುಗಳನ್ನು
ದಿನಾಂಕ 07-03-2015 ರಂದು ರಾತ್ರಿ 11:30 ಪಿ ಎಮ್ ಗಂಟೆಯಿಂದ ದಿನಾಂಕ 08-03-2015 ರಂದು
ಬೆಳಿಗ್ಗೆ 6:00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಅಂಗಡಿಯ ಮೇಲೆ ಇದ್ದ ನಮ್ಮ ಕಿರಾಣಿ
ಸಾಮಾನುಗಳನ್ನು ಇಟ್ಟಿದ್ದ ರೂಮಿನ ಬಾಗಿಲು ಕೀಲಿ ಮುರಿದು ರೂಮಿನಲ್ಲಿಟ್ಟಿದ್ದ 75 ಬಂಡಲ ಮುನ್ಸಿ
ಬೀಡಿಗಳನ್ನು ಹಾಗೂ ಒಂದು ಬಾಕ್ಸ ಅಗ್ನಿ ಚಾಪಡಿಯನ್ನು ಒಟ್ಟು 19,050/-
ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment