Police Bhavan Kalaburagi

Police Bhavan Kalaburagi

Tuesday, March 24, 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಗಿತಾ ಗಂಡ ನಾಗರಾಜ ಸಾ:ಹದನೂರ ಇವರನ್ನು 5 ವರ್ಷಗಳ ಹಿಂದೆ ಹದನೂರ ಗ್ರಾಮದ ನಾಗರಾಜ ಎಂಬುವರೋಂದಿಗೆ ತಂದೆ ತಾಯಿಂದಿರರು ನಮ್ಮ ಮನೆ ಮುಂದೆ ಮದುವೆ ಮಾಡಿಕೋಟ್ಟಿದ್ದು ಮದುವೆಯ ಸಮಯದಲ್ಲಿ 1 ತೋಲೆ ಬಂಗಾರ ಮದುವೆಗೆ ಬೇಕಾದ ಎಲ್ಲಾ ಸಾಮಾನುಗಳು ಕೋಟ್ಟಿದ್ದು ಗಂಡನ ಮನೆಗೆ ಹೋದ 3-4 ತಿಂಗಳಲ್ಲಿ ಗಂಡ ರಾತ್ರಿ ಸರಾಯಿ ಕುಡಿದು ಮನೆಗೆ ಬಂದು ಇನ್ನು 2 ತೋಲಿ ಬಂಗಾರ ಹಾಗೂ 1ಲಕ್ಷ ರೂಪಾಯಿ ನಿಮ್ಮ ತಂದೆ ತಾಯಿಯವರಿಂದ ತೆದುಕೊಂಡು ಬಾ ಎಂದು ನನಗೆ ಹೋಡೆ ಬಡೆಮಾಡುತ್ತಾ ಇದ್ದರಿಂದ ನನ್ನ ತವರು ಮನೆಗೆ ತಂದೆ ತಾಯಿ ಕರೆದುಕೋಂಡು ಹೋಗಿರುತಾರೆ ಅಲ್ಲಿಯಿಂದ ಗಂಡನ ಮನೆಗೆ ಹೋಗಿರುವುದಿಲ್ಲಾ.ಕಳೆದ ತಿಂಗಳು ನನಗೆ  ತಂದೆ ತಾಯಿ ಅಣ್ಣ ತಂಮ್ಮದಿರು ನನ್ನ ಗಂಡನ ಮನೆಗೆ ಕರೆದು ಕೊಂಡು ಹೋದಾಗ ಗಂಡ ಮಾರ್ಚ 21 22 ದಿನಾಂಕ ರಂದು ಹಣಕೋಡಬೆಕೆಂದು ಹೆಳಿದ್ದು.ಅದಕ್ಕೆ ದಿನಾಂಕ 22/03/2015 ರಂದು 4 ಜನರ ಸಮ್ಮಖದಲ್ಲಿ ಹದನೂರ ಗ್ರಾಮದಲ್ಲಿ ನ್ಯಾಯ ಪಂಚಾಯತ ಮಾಡಿದರು ನನ್ನ ಗಂಡ ಒಪ್ಪದೆ ನನಗೆ ಮನೆಯಲ್ಲಿ ಕೂಡಿ ಹಾಕಿ ಬಾಗಿಲು ಹಾಕಿ ಒದ್ದು ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-03-2015 ರಂದು ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಅಂಬೆಡ್ಕರ ಸರ್ಕಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಮೀನಸಾಬ ತಂದೆ ಹುಸೇನಸಾಬ ಅತ್ತಾರ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 920/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 23-03-2015 ರಂದು ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ನಜೀರ ಅಹ್ಮದ .ಎಸ್.  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾಗ್ಯವಂತಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಶೈಲ ತಂದೆ ಶರಣಪ್ಪ ಹೋಸೂರ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1760/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಜೇವರ್ಗಿ ಠಾಣೆ : ದಿನಾಂಕ  23-03-2015 ರಂದು ಜೇವರ್ಗಿ-ಬಿಜಾಪೂರ ರೋಡಿನ ಪಕ್ಕದಲ್ಲಿ ಇರುವ ಜ್ಯೊತಿ ಹೊಟೇಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು  ಮನುಷ್ಯರು  ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು  ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ ಠಾಣೆಯಿಂದ ಹೊರಟು  ಸದರಿ ಸ್ಥಳಕ್ಕೆ ಹೋಗಿ ಸದರ ಜ್ಯೊತಿ ಹೋಟಲ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆ ಮೇಲೆ ಇಬ್ಬರು ಮನುಷ್ಯರು 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ ಅಂತ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ  ಸಂಖ್ಯೆ  ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು, ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವರಲ್ಲಿ ಒಬ್ಬನು  ತನ್ನ ಹೆಸರು 1] ಸಾಯಿಬಣ್ಣಾ ತಂದೆ  ಧರ್ಮಣ್ಣಾ  ತಳವಾರ ಸಾ: ಮಾವನೂರ, ತಾ: ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 1050/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು  ಸಿಕ್ಕಿರುತ್ತವೆ, ನಂತರ ಮತ್ತೊಬ್ಬನ ಹೆಸರು ಕೆಳಲಾಗಿ ಅವನು ತನ್ನ ಹೆಸರು 2] ಸಿದ್ದಪ್ಪ ತಂದೆ  ರವಿಕುಮಾರ ತಳವಾರ ವಯ: 20 ವರ್ಷ ಜಾ: ಕಬ್ಬಲಿಗ  : ಕೂಲಿ ಕೆಲಸ ಸಾ: ಮಾವನೂರ, ತಾ: ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 1080/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನುಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 24-03-2015 ರಂದು ಕರಜಗಿ ಗ್ರಾಮದಲ್ಲಿ ಕೊಳ್ಳೂರ ರವರ ಹೋಟೇಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮಕ್ಕೆ ಹೋಗಿ ಅಲ್ಲಿ ಕೊಳ್ಳುರ ರವರ ಹೋಟೆಲದಿಂದ ಸ್ವಲ್ಪ ದೂರು ನಮ್ಮ ವಾಹನ ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ,  ಕೊಳ್ಳೂರ ರವರ ಹೋಟೇಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ಜನರಿಂದ ಹಣ ಪಡೆದು ಬಾಕ್ಸನಲ್ಲಿದ್ದ ಮದ್ಯದ ಪೌಚಗಳನ್ನು ಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸ ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಓರಜಿನಲ್ ಚಾಯ್ಸ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 28 ರಟ್ಟಿನ ಪೌಚಗಳು ಇದ್ದವು ಅ||ಕಿ|| 1,344/- ರೂ ರಷ್ಟು ದೊರೆತವು. ಸದರಿಯವನಿಗೆ ಮದ್ಯದ ಬಗ್ಗೆ ವಿಚಾರಿಸಲಾಗಿ ತಾನು ಯಾವುದೆ ಪರವಾನಿಗೆ ಇಲ್ಲದೆ ಮದ್ಯದ ಪೌಚಗಳನ್ನು ಅಕ್ರಮವಾಗಿ ರಸ್ತೆಯ ಮೇಲೆ ಇಟ್ಟುಕೊಂಟು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿಯವನ ಹೆಸರು ವಿಳಾಸ ವಿಚಾರಿಸಲು ತಮ್ಮ ಹೆಸರು ಭಗವಂತ ತಂದೆ ಸಾಯಬಣ್ಣಾ ಕೊಳ್ಳೂರ ಸಾ|| ಕರಜಗಿ ಅಂತಾ ತಿಳಿಸಿದ್ದು ಸದರಿವನನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 24-03-2015 ರಂದು ಉಡಚಾಣ ಹಟ್ಟಿ ಗ್ರಾಮದಲ್ಲಿ ಲಕ್ಷ್ಮಣ ಕಾಳೆ ರವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಾಣ ಹಟ್ಟಿ ಗ್ರಾಮಕ್ಕೆ ಹೋಗಿ ಅಲ್ಲಿ ಲಕ್ಷ್ಮಣ ಕಾಳೆ ರವರ ಮನೆಯಿಂದ ಸ್ವಲ್ಪ ದೂರು ನಮ್ಮ ವಾಹನ ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಲಕ್ಷ್ಮಣ ಕಾಳೆ ರವರ ಮನೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಹತ್ತಿರ ಒಂದು ರಟ್ಟಿನ ಬಾಕ್ಸ   ಇಟ್ಟುಕೊಂಡು ಜನರಿಂದ ಹಣ ಪಡೆದು ಬಾಕ್ಸನಲ್ಲಿದ್ದ ಮದ್ಯದ ಪೌಚಗಳನ್ನು ಕೊಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಮೇಲೆ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಒಬ್ಬ ವ್ಯಕ್ತಿ ಓಡಿ ಹೋದನು, ಇನ್ನೊಬ್ಬ ವ್ಯಕ್ತಿ ಸಿಕ್ಕಿಬಿದ್ದಿದ್ದು, ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸ ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಓಲ್ಡ್ ಟವೇರನ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 40 ರಟ್ಟಿನ ಪೌಚಗಳು ಇದ್ದವು ||ಕಿ|| 2,240/- ರೂ ಇದ್ದು ಸದರಿಯವನಿಗೆ ಮದ್ಯದ ಬಗ್ಗೆ ವಿಚಾರಿಸಲಾಗಿ ನಾವು ಯಾವುದೆ ಪರವಾನಿಗೆ ಇಲ್ಲದೆ ಮದ್ಯದ ಪೌಚಗಳನ್ನು ಅಕ್ರಮವಾಗಿ ರಸ್ತೆಯ ಮೇಲೆ ಇಟ್ಟುಕೊಂಟು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿಯವನ ಹೆಸರು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಜೋತಿಬಾ ತಂದೆ ಬಸವರಾಜ ಕತಾಳೆ ಸಾ|| ಉಡಚಾಣ ಹಟ್ಟಿ ಅಂತಾ ತಿಳಿಸಿದನು. ಸದರಿ ಜೋತಿಬಾ ಇವನಿಗೆ ಓಡಿ ಹೋದವನ ಹೆಸರು ವಿಚಾರಿಸಲಾಗಿ ಅವನ ಹೆಸರು ಬೀರಣ್ಣಾ ತಂದೆ ಅಂಬೋಜಿ ಪಾಲವೆ ಸಾ|| ಉಡಚಾಣ ಹಟ್ಟಿ ಅಂತಾ ತಿಳಿಸಿದನು ನಂತರ ಸದಿರಿಯವನನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶರಣಬಸಪ್ಪ ತಂದೆ ಗುರುಲಿಂಗಪ್ಪ ದುಗುಂಡ ಸಾ|| ನಿಂಬರ್ಗಾ ಇವರ ಸೋದರ ಮಾವನಾದ ಶಿವಶರಣಪ್ಪ ತಂದೆ ಶಿವರಾಯ ವಗ್ದರ್ಗಿ ಇವರು ತಮ್ಮ ಕುಟುಂಬ ಸಮೇತ ರಾಯಚೂರಿನಲ್ಲಿ ವಾಸಿಸುತ್ತಿದ್ದು ಅವರ ಮನೆ ಕಸ ಉಡುಗಲು ಮತ್ತು ಪೂಜೆ ಮಾಡಲು ಅಂತ ಚಾವಿ ನನ್ನ ಹತ್ತಿರ ಇದ್ದು ದಿನಾಂಕ 22/03/2015 ರಂದು ರಾತ್ರಿ 0830 ಕ್ಕೆ ಮನೆಯಲ್ಲಿ ಪೂಜೆ ಮಾಡಿ ಚಾವಿ ಹಾಕಿಕೊಂಡು ಮರಳಿ ದಿನಾಂಕ 23/03/2015 ರಂದು ಬೆಳಿಗ್ಗೆ 0530 ಕ್ಕೆ ಕಸ ಉಡುಗಲು ಅಂತ ಹೋದಾಗ ಸದರಿ ಮನೆಯ ಚಾವಿಯನ್ನು ಮುರಿದು ಯಾರೊ ಕಳ್ಳರು ಮನೆಯ ಒಳಗೆ ಹೋಗಿ ಮನೆಯಲ್ಲಿರುವ ಟೀಜೂರಿ ಮುರಿದು ಅದರಲ್ಲಿನ ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿ ಒಗೆದು ಕಳ್ಳತನ ಮಾಡಲು ಯತ್ನಿಸಿ ಹೋಗಿರುತ್ತಾರೆ. ಇದರ ಬಗ್ಗೆ ನನ್ನ ಸೋದರ ಮಾವನಿಗೆ ಫೋನ ಮಾಡಿ ಕೇಳಿದ್ದು ಮನೆಯಲ್ಲಿ ಯಾವುದೆ ರೀತಿಯ ಹಣ, ಬಂಗಾರ ವಗೈರೆ ಇಟ್ಟಿರುವದಿಲ್ಲ, ಉಪಯೋಗಕ್ಕೆ ಬಾರದ ಹಳೆಯ ಬಟ್ಟೆಗಳನ್ನು ಮಾತ್ರ ಟಿಜೂರಿಯಲ್ಲಿ ಇಟ್ಟಿರುತ್ತೇವೆ ಅಂತ ತಿಳಿಸಿದ್ದು, ಅಲ್ಲದೆ ಇದೇ ರೀತಿ ನಮ್ಮೂರಿನ ಬಾಬುರಾವ ತಂದೆ ಮಹಾಂತಪ್ಪ ಪೊಲೀಸ ಪಾಟೀಲ, ಬಾವಾಸಾಬ ತಂದೆ ಸೈಯ್ಯದ ಸಾಬ ಭೈರಾಮಡಗಿ, ಸೋಮಣ್ಣ ದುರ್ಗದ ಇವರ ಮನೆಗಳನ್ನು ಕೂಡ ಕಳ್ಳತನ ಮಾಡಲು ಯತ್ನಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: