ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ 30-04-2015
ಸಂತಪೂರ ಪೊಲೀಸ್ ಠಾಣೆ
ಗುನ್ನೆ ನಂ. 38/2015, ಕಲಂ 279, 338, 304(ಎ) ಐಪಿಸಿ :-
ದಿನಾಂಕ 29-04-2015 ಸುಭಾಷ ತಂದೆ ಹೀರಾ ಪವಾರ ಸಾ: ಬನಸ್ಸಿ ತಾಂಡಾ ಮತ್ತು ಅವಿನಾಶ ತಂದೆ ಧನಸಿಂಗ ರಾಠೋಡ ಸಾ: ಪಿಚಾರಗಡ ತಾಂಡಾ ಇಬ್ಬರೂ ಮೋಟಾರ ಸೈಕಲ ನಂ. ಎಪಿ-28/ಎಸ್-156 ನೇದರ ಮೇಲೆ ವಡಗಾಂವದಿಂದ ತಾಂಡಾಕ್ಕೆ ಹೋಗುತ್ತಿದ್ದಾಗ ವಡಗಾಂವ ಸಂತಪೂರ
ರೋಡಿನ ಮೇಲೆ ವಡಗಾಂವ ಗ್ರಾಮದ ಹತ್ತಿರ ಸದರಿ ಮೋಟಾರ
ಸೈಕಲ ಚಲಾಯಿಸುತ್ತಿದ್ದ ಆರೋಪಿ ಅವಿನಾಶ ತಂದೆ ಧನಸಿಂಗ ರಾಠೋಡ ವಯ:
25 ವರ್ಷ, ಸಾ: ಪಿಚಾರಗಡ ತಾಂಡಾ
ಇತನು ಸದರಿ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ
ಚಲಾಯಿಸಿ ತನ್ನ ಹಿಡಿತ ಕಳೆದುಕೊಂಡು ಮೋಟಾರ ಸೈಕಲ ಸಮೇತ ಬಿದ್ದಿರುತ್ತಾರೆ, ಇದರಿಂದ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ್ತಿದ್ದ ಸುಭಾಷ ತಂದೆ
ಹೀರಾ ಪವಾರ ವಯ: 30 ವರ್ಷ, ಇತನಿಗೆ ಭಾರಿ ಗಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಮೋಟಾರ ಸೈಕಲ ಚಲಾಯಿಸುತ್ತಿದ್ದ ಅವಿನಾಶ ಇತನಿಗೆ ಸಹ ಭಾರಿ ಗಾಯವಾಗಿದ್ದು ಚಿಕಿತ್ಸೆ ಕುರಿತು
ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ
ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು
ದಿನಾಂಕ 30-04-2015 ರಂದು ಫಿರ್ಯಾದಿ ಶ್ರಾವಣಕುಮಾರ ತಂದೆ ಬನಸ್ಸಿಲಾಲ
ಪವಾರ ಸಾ: ಬನಸ್ಸಿ ತಾಂಡಾ ಆಲೂರ (ಕೆ) ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment