Police Bhavan Kalaburagi

Police Bhavan Kalaburagi

Friday, April 17, 2015

Kalaburagi District Reported Crimes

ಕೊಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ:16/04/2015 ರಂದು ರಾತ್ರಿ.9.30 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ಕಿರಿಯ ಮಗನಾದ  ಇಮ್ರಾನ ಮತ್ತು ಮೊಹ್ಮದ ಅಹ್ಮದನ ಹೆಂಡತಿ ಹಿನಾ ಕೌಸರ ಹಾಗೂ ಬಾಜು ಮನೆಯ ಪ್ರಕಾಶ ಕಟ್ಟಿಮನಿ ಕೂಡಿ  ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಅದೇ ವೇಳೆಗೆ ನನ್ನ  ಮಗನಾದ ಮೊಹ್ಮದ ಅಹ್ಮದ ಇತನು ಹೊರಗಿನಿಂದ ಮನೆಯ ಅಂಗಳದಲ್ಲಿ ಬರುತ್ತಿರುವಾಗ  ನಮ್ಮ ಬಾಜು ಮನೆಯವನಾದ ಮಲ್ಲಿಕಾರ್ಜುನ ತಂದೆ ಹೊನ್ನಪ್ಪಾ ಕೊಂಬಿನ ಇತನು ಬಂದವನೇ ನನ್ನ ಮಗನಿಗೆ ಏ ಬೊಸಡಿ ಮಗನೇ ಅಹ್ಮದ್ಯಾ  ನನ್ನ ಹತ್ತಿರ ಮೊದಲು ಕೆಲಸಕ್ಕೆ ಬರುತ್ತಿದ್ದಿ ಈಗ ಯಾಕೆ ನನ್ನ ಹತ್ತಿರ ಕೆಲಸ ಬರುತ್ತಿಲ್ಲಾ ರಂಡಿ ಮಗನೇಅಂತಾ ಬೈಯುತ್ತಿದ್ದಾಗ ಅದಕ್ಕೆ ನನ್ನ ಮಗ ಮಲ್ಲಿಕಾರ್ಜುನ ಇತನಿಗೆ ನನಗೆ ಯ್ಯಾಕೆ ಬೈಯುತ್ತಿ ನನಗೆ ಮನಸ್ಸಿಗೆ ಬಂದಲ್ಲಿ ನಾನು ಕೆಲಸ ಹೊಗುತ್ತೇನೆ ನೀನು ಯಾರು ಕೇಳಲಿಕ್ಕೆಅಂತಾ ಅಂದಾಗ ಅದಕ್ಕೆ ಮಲ್ಲಿಕಾರ್ಜುನ ಇತನು ನನ್ನ ಮಗನಿಗೆ ಏ ಬೊಸಡಿ ಮಗನೇ ನೀನು ನನಗೆ ಎದರು ಮಾತನಾಡುತ್ತಿಯಾಅಂದು ತನ್ನ ಕೈಯಿಂದ ನನ್ನ ಮಗನ ಕಪಾಳದ ಮೇಲೆ ಹೊಡೆಯುತ್ತಿ ದ್ದಾಗ ಅದಕ್ಕೆ ನಾನು ಮಲ್ಲಿಕಾರ್ಜುನ ಇತನಿಗೆ ಯಾಕೆ ನನ್ನ ಮಗನಿಗೆ ಬೈಯ್ದು ಹೊಡೆಯುತ್ತಿದ್ದಿ ಏನು ತಪ್ಪು ಮಾಡಿದ್ದಾನೆಅಂತಾ ಅಂದಿದ್ದಕ್ಕೆ ಅದಕ್ಕೆ ಸದರಿ ಮಲ್ಲಿಕಾರ್ಜುನ ಇತನು ನನ್ನ ಮಗನಿಗೆ ಹೆಡಕಿಗೆ ಕೈ ಹಾಕಿ ಜೊರಾಗಿ ನೇಲಕ್ಕೆ ನೂಕಿಸಿಕೊಟ್ಟು ತನ್ನ  ಕಾಲಿನಿಂದ ನನ್ನ ಮಗನ ತರಡಿಗೆ ಜೊರಾಗಿ ಒದೆಯ ಹತ್ತಿದ್ದನು.  ಆಗ ನನ್ನ ಮಗನು ಅಲ್ಲಾ ಮೈ ಮರಗೈರೆ ಮೇರಕೊ ಬಚಾವೂ  ಅಂತಾ ಚಿರಾಡುತ್ತಿದ್ದಾಗ ನಾನು ಮತ್ತು ನನ್ನ ಮಗ ಇಮ್ರಾನ , ಸೊಸೆಯಾದ ಹಿನಾಕೌಸರ ಹಾಗೂ ಪ್ರಕಾಶ ಕಟ್ಟಿಮನಿ ,ಶೆಟ್ಟೆಪ್ಪಾ ತಂದೆ ಕಲ್ಯಾಣಿ  ಕೂಡಿ ಅವನಿಂದ ಬಿಡಿಸಿಕೊಂಡೆವು. ಸದರಿ ಮಲ್ಲಿಕಾರ್ಜುನ ಇತನು ಹೊಡೆದರಿಂದ ನನ್ನ ಮಗನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಮರಿ ರಸೀದಾ ಬೇಗಂ ಗಂ ಮಹಮ್ಮದ ಜಾಜಿ ಸಾ|| ಶಾಸ್ತ್ರಿ ಚೌಕ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-04-2015 ರಂದು ಘತ್ತರಗಾ ಗ್ರಾಮದ ಶ್ರೀ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮಕ್ಕೆ ಹೋಗಿ ಲಕ್ಷ್ಮೀ ಗುಡಿಯಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಗುರುಸಂಗಪ್ಪಾ ತಂದೆ ಗೊಲ್ಲಾಳಪ್ಪಾ ಪಟ್ಟಣಶಟ್ಟಿ ಸಾ|| ಓಂಶಾಂತಿ ನಗರ ಸಿಂದಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1420/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ರಾಘವೇಂದ್ರ ನಗರ ಠಾಣೆ : ದಿನಾಂಕ:16/04/2015 ರಂದು ಎಂ.ಎಸ್.ಕೆ.ಮೀಲ್ ಬಡಾವಣೆಯ ಮದೀನಾ ಕಾಲೋನಿಯ ಮಕ್ಕಾ-ಮಜೀದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮದೀನಾ ಕಾಲೋನಿಯ ಗ್ರೀನ್ ಸರ್ಕಲ್ ಹತ್ತಿರ ಸ್ವಲ್ಪ ದೂರ ಇದ್ದಂತೆ ಜೀಪ ನಿಲ್ಲಿಸಿ ಎಲ್ಲರೂ ಜೀಪನಿಂದ ಇಳಿದು ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಮಕ್ಕಾ-ಮಜೀದ ಹತ್ತಿರ ಒಬ್ಬ ಮನುಷ್ಯನು ರಸ್ತೆ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ಸಾರ್ವಜನಿಕರಿಗೆ ಕೊಟ್ಟು ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ಖಚಿತ ಪಡಿಸಿಕೊಂಡು ಎಲ್ಲರೂ ಕೂಡಿಕೊಂಡು ಏಕಕಾಲಕ್ಕೆ ದಾಳಿ ಮಾಡಿ ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿದ್ದು ಅವನು ತನ್ನ ಹೆಸರು ನೂರ ಮಹ್ಮದ  ತಂದೆ ಅಬ್ದುಲ್ ಗಫೂರ ಸಾ:ವಿದ್ಯಾನಗರ ಕಲಬುರಗಿ ಹಾ:ವ:ನೌರಂಗ ಥೇಟರ ಜನತಾ ಗೀಲ್ ಬೀಟ್ ರಸ್ತೆ ಮಮ್ಮದಿ ಮಜೀದ ಹತ್ತಿರ ಅಂದೇರಿ ಮುಂಬಯಿ ಅಂತಾ ತಿಳಿಸಿದ್ದು ಆತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1435/-ರೂ ಒಂದು ಬಾಲಪೇನ್ ಹಾಗೂ 6 ಮಟಕಾ ನಂಬರ ಬರೆದ ಚೀಟಿಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆ ಬಂದು  ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ಮೊಹ್ಮದ ಆಜಮ ತಂದೆ ಅಬ್ದುಲ ಅಜೀಜ ಬಾದಲ ಸಾ: ಭಾರತ ಚೌಕ ಶಹಾಬಾದ ರವರಿಗೆ  6 ಜನ ಗಂಡು ಮಕ್ಕಳು  ಒಂದು ಹೆಣ್ಣು ಮಗಳಿದ್ದು ಅದರಲ್ಲಿ ಫಾರುಕ ಬಾದಲ ಇತನು  ನಮ್ಮ  ಮನೆಯ ಆಸ್ತಿಯ ಸಂಭಂದ ಆಗಾಗ ಜಗಳ ತೆಗೆಯುತ್ತಾ ಹೊಡೆಯುವದು ಬೈಯುವದು ಮಾಡುತ್ತಿದ್ದು ದಿನಾಂಕ : 16/04/2015 ರಂದು ಹೊರಗಿನಿಂದ ಮನೆಯ ಹತ್ತಿರ ಬರುತ್ತಿದ್ದಾಗ ನನ್ನ ಮಗನಾದ ಫಾರೂಕ ಇತನು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಯುತ್ತಿದ್ದಾಗ ನಾನು ನನಗೆ ಯಾಕೆ ಹೋಡೆಯುತ್ತಿದ್ದಿ ಅಂತಾ ಅಂದಿದ್ದಕ್ಕೆ ಉಲ್ಟಾ ಬಾತ ಕರತೇ ಸಾಲೇಅಂತಾ ಅಂದು ಅಲ್ಲಿಯೇ ಬಿದ್ದ ಕಲ್ಲಿನಿಂದ ಬೆನ್ನಿಗೆ, ಎಡಗಾಲಿಗೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಸದರಿ ಜಗಳದ ಸಪ್ಪಳ ಕೇಳಿ ನನ್ನ ಮಕ್ಕಳಾದ ಸಿರಾಜ ಅಹ್ಮದ ಮತ್ತು ಇಮ್ತಿಹಾಜ ಇವರು ಬಿಡಸಲು ಬಂದಾಗ ಆಗ ಫಾರೂಕ ಇತನು ಅಲ್ಲಿಯೇ ಬಿದ್ದ ರಾಡಿನಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ಬಲಗಾಲಿನ ಮೇಲೆ ಮತ್ತು ಹೆಡಕಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದನು. ಮತ್ತು ಸಿರಾಜ ಇತನಿಗೆ ಅದೇ ರಾಡಿನಿಂದ ಬೆನ್ನಿಗೆ , ಎಡಗೈ, ಹೊಡೆದು ಒಳಪೆಟ್ಟು ಮಾಡಿದನು. ಮತ್ತು ಇಮ್ತಿಹಾಜ ಇತನಿಗೆ ಬಡಿಗೆಯಿಂದ ಎಡ ಎದೆಗೆ ಮತ್ತು ಎಡಗಣ್ಣಿನ ಕೆಳಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಜೈನೊದ್ದಿನ ತಂದೆ ರಹಮತುಲ್ಲಾ ಮಂತ್ರಾಲ ಸಾ|| ಕಾನಾಗುಡುರ (ಹಳ್ಳಿ) ದೂವೂರ ಮಂಡಲ ತಾ|| ಪ್ರೊದ್ದುಟೂರ  ಜಿಲ್ಲಾ|| ಕಡಪಾ (ಎ.ಪಿ) ರವರು ಎಸ್.ಆರ್.ಕೆ ಕಂಪನಿಯಲ್ಲಿ ಕ್ರಸರ್ ಇಂಚಾರ್ಜ ಅಂತಾ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಈಗ ಸದ್ಯ 5 ತಿಂಗಳಿಂದ ಬಡದಾಳ-ಅರ್ಜುಣಗಿ ರೋಡಿಗೆ ಬರುವ ಧರ್ಮು ರಾಠೋಡ ರವರ ಹೊಲದಲ್ಲಿ ಎಸ್.ಆರ್.ಕೆ. ಕ್ಯಾಂಪ ಇದ್ದು ಅಲ್ಲಿ ಕೆಲಸ ಮಾಡುತ್ತಿರುತ್ತೇನೆ. ನಮ್ಮ ಕಂಪನಿಯಲ್ಲಿ ಪಂಜಾಬ ರಾಜ್ಯದಿಂದ ಕೆಲವು ಜನರು ಬಂದು ಕೆಲಸ ಮಾಡುತ್ತಿದ್ದು, ಸದರಿಯವರಿಗೆ ಅರ್ಜುಣಗಿ ತಾಂಡಾದಿಂದ ಎರಡು ಜನ ಹೆಣ್ಣು ಮಕ್ಕಳು ಬಂದು ಅಡುಗೆ ಮಾಡಿ ಕೊಡುತ್ತಿದ್ದರು. ಅವರ ಹೆಸರು ರೇಷ್ಮಾ ಮತ್ತು ಕವೀತಾ ಅಂತಾ ಇದ್ದವು. ದಿನಾಂಕ 29-03-2014 ರಂದು ಸದರಿ ರೆಷ್ಮಾ ಮತ್ತು ಕವೀತಾ ಇವರು ಕಾಣೆಯಾಗಿರುತ್ತಾರೆ ಹಾಗು ಈ ಬಗ್ಗೆ ರೆವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಅಂತಾ ತಿಳಿದು ಬಂದಿದ್ದು ದಿನಾಂಕ 15-04-2015 ರಂದು 6;30 ಪಿ.ಎಂ ಸುಮಾರಿಗೆ ನಾನು ಮತ್ತು ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ತಂದೆ ಈಶ್ವರಯ್ಯಾ ಚಿರ್ರಾ ಮತ್ತು ಇತರರು ಕೂಡಿ ನಮ್ಮ ಕಂಪನಿಯಲ್ಲಿ ನಿಂತಾಗ. ಅದೇ ಸಮಯಕ್ಕೆ ಅರ್ಜುಣಗಿ ತಾಂಡಾದ ದತ್ತು ಚವ್ಹಾಣ, ಶಂಕರ ಚವ್ಹಾಣ, ರಾಜು ಮತ್ತು ಬೈರು ಎನ್ನುವವರು ನಮ್ಮ ಹತ್ತಿರ ಬಂದು ನಮಗೆ ಅವಾಚ್ಯ ಶಬ್ದಗಳಿಂದ ನೀವು ಇಲ್ಲಿ ಕೆಲಸಾ ಮಾಡಲು ಬಂದಿರಿ ಏನು ಹುಡಗಿಯರಿಗೆ ಓಡಿಸಿಕೊಂಡು ಹೋಗಲು ಬಂದಿರಿ ಅಂತಾ ಅಂದರು ಅದಕ್ಕೆ ನಾವು ಅವರಿಗೆ ಯಾವ ವಿಷಯ ಮಾತಾಡುತ್ತಿದ್ದಿರಿ ನಮಗ ಏನು ಗೊತ್ತಿರುವುದಿಲ್ಲಾ ಅಂತಾ ಅಂದಾಗ ದತ್ತು ಇವನು ಅಲ್ಲೆ ಬಿದ್ದಿದ ಒಂದು ಬಡಿಗೆ ತೆಗೆದುಕೊಂಡು ಶ್ರೀನಿವಾಸ ಇವರಿಗೆ ಬಲಗಾಲಿನ ತೊಡೆಯ ಮೇಲೆ ಹೊಡೆದು ಗುಪ್ತ ಪೆಟ್ಟು ಪಡಿಸಿದರು. ನಂತರ ಶಂಕರ ಮತ್ತು ರಾಜು ಇವರು ನನಗೆ ಕೈಯಿಂದ ಮೈ ಕೈಗೆ ಹೊಡೆದು ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಭೀಮಶಾ ತಂದೆ ಸಂಗಪ್ಪಾ ಜಮಶೇಟ್ಟಿ, ಸಾಃ ಡೆಂಗಿಗಲ್ಲಿ, ಶಾಹಬಜಾರ ಕಲಬುರಗಿ ರವರು ದಿನಾಂಕ 15-04-2015 ರಂದು ಆಳಂದ ರೋಡಿಗೆ ಇರುವ ಶೆಟ್ಟಿ ಕಾಂಪ್ಲೆಕ್ಸ ಎದರುಗಡೆ ಇರುವ ಇಂಡಿಯನ್ ಜೂಸ್ ಸೆಂಟರ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆಳಂದ ಚೆಕ್ ಪೊಸ್ಟ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32 ಯು 6286 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಚಪ್ಪೆಗೆ ಮತ್ತು ಸೊಂಟಕ್ಕೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೊಕ ನಗರ ಠಾಣೆ : ಶ್ರೀ ಅಮರದೀಪ ತಂದೆ ಶ್ರೀರಂಗ ಮಸ್ತಕರ ಸಾ:ಮನೆ ನಂ. 11/6438/2 ಘಾಟಗೇ ಲೇಔಟ ಕಾಂತಾ ಕಾಲೋನಿ ಕಲಬುರಗಿ ರವರು ಬಜಾಜ ಪಲ್ಸರ ಮೋಟರ ಸೈಕಲ್ ನಂ. ಕೆಎ- 32 ಇಹೆಚ್- 6379 ನೇದ್ದು ಉಪಯೋಗಿಸುತಿದ್ದು ಇದರ ಇಂಜಿನ ನಂ.DHZCEH33307 ಚೆಸ್ಸಿ ನಂ.MD2A11CZ3ECH53753  ಕಪ್ಪು ಬಣ್ಣದ್ದು ಮಾಡೆಲ್ 2014 ಅ.ಕಿ. 30,000/- ರೂ. ನೇದ್ದನ್ನು ದಿನಾಂಕ 11/04/2015 ರಂದು 8-30 ಪಿ.ಎಮ್ ಮನೆಯ ಮುಂದುಗಡೆ ನಿಲ್ಲಿಸಿ ನಂತರ ದಿನಾಂಕ 12/04/2015 ರಂದು ಬೆಳಿಗ್ಗೆ 6 ಎ.ಎಂ.ಕ್ಕೆ ನೋಡಲು  ನಾನು ಮನೆ ಮುಂದೆ ನಿಲ್ಲಿಸಿದ ಸ್ಥಳದಲ್ಲಿ ನನ್ನ ಬಜಾಜ ಪಲ್ಸರ ಮೋಟರ ಸೈಕಲ್ ಇರಲಿಲ್ಲ. ಇದರ ಬಗ್ಗೆ ಎಲ್ಲಾ ಕಡೆ ಮಾಹಿತಿ ತಿಳಿಸಿ ಮತ್ತು ನನ್ನ ಸಂಬಂಧಿಕರಲ್ಲಿ ಮನೆಯ ಅಕ್ಕಪಕ್ಕದವರಲ್ಲಿ ಗೆಳೆಯರಲ್ಲಿ ಮೊಟರ ಸೈಕಲ್ ಬಗ್ಗೆ ವಿಚಾರಿಸಲಾಗಿ ನನ್ನ ಮೊಟರ ಸೈಕಲ್ ಎಲ್ಲಿ ಸಿಗಲಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: