ಮಟಕಾ ಜೂಜಾಟದಲ್ಲಿ ನಿರತ
ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 17/04/2015 ರಂದು ಭೂಸನೂರ
ಗ್ರಾಮದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಗ್ರಾಮದ ಹಳೆ ಬಸ್ ಸ್ಟ್ಯಾಂಡ ಹತ್ತಿರ ಇರುವ ಸರಕಾರಿ ಭಾವಿಯ ಹತ್ತಿರ
ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ
ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ
ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ
ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ
ಹೆಸರು ಗೈಬಗಿರಿ ತಂದೆ ಗೋವಿಂದಗಿರಿ ಗೋಸಾಯಿ ಸಾ: ಭೂಸನೂರ ಇತನ ಹತ್ತಿರ ಚಕ್ ಮಾಡಲಾಗಿ
ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 870/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು
ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ:12-04-2015 ರಂದು ಸಂತೋಷ ತಂದೆ ಸಿದ್ರಾಮಪ್ಪ
ಚಿಟ್ನಳ್ಳಿ ಸಾ:ಕೊಡ್ಲಾ ಗ್ರಾಮ. ಈತನು, ಚಂದ್ರಕಾಂತ ತಂದೆ ನಾಗಪ್ಪ ಕಟ್ಟಿಮನಿ ಇತನ ಬೆಂಬಲವಿದೆ
ಅಂತ ಹೇಳಿಕೊಂಡು, 1] ಶಿಲ್ಪ ಗಂಡ ದೇವಿಂದ್ರಪ್ಪ ನೂಲಿ, ಸಾ:ಕೊಡ್ಲಾ 2] ವಿಶಾಲ ತಂದೆ
ದೇವಿಂದ್ರಪ್ಪ ನೂಲಿ ಸಾ:ಕೊಡ್ಲಾ ಗ್ರಾಮ. ಇವರನ್ನು ಬರದೇ ಹೋದರೆ ನಿನಗೆ ಖಲಾಸ ಮಾಡುತ್ತೇನೆ ಅಂತ
ಹೇಳುತ್ತಾ ನನ್ನ ಹೆಂಡತಿ ಶಿಲ್ಪಾ ಇತಳಿಗೆ ಮತ್ತು ನನ್ನ ಮಗ ವಿಶಾಲಗೆ ಜಬರದಸ್ತಿಯಿಂದ ಎಳೆದುಕೊಂಡು ಹೋಗಿದ್ದು ಇದಕ್ಕೆ
ಚಂದ್ರಕಾಂತ ಕಟ್ಟಿಮನಿ ಇತನ ಪ್ರಚೋದನೆ ಇರುತ್ತದೆ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ
ಶ್ರೀ ದೇವಿಂದ್ರಪ್ಪ ತಂದೆ ಕಾಶಪ್ಪ ನೂಲಿ, ಸಾ:ಕೊಡ್ಲಾ ಗ್ರಾಮ. ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment