ಪತ್ರಿಕಾ ಪ್ರಕಟಣೆ.
ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಪಡಿತರ
ಸೀಮೆ ಎಣ್ಣೆ ಜಪ್ತಿ, - ಒಬ್ಬನ ಬಂಧನ
ಶ್ರೀ. ಎಂ.ಎನ್. ನಾಗರಾಜ್, ಬಾಪೋಸೇ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮೇಲ್ವಿಚಾರಣೆಯಲ್ಲಿ
ಶ್ರೀಶೈಲ. ಬಿ. ಮಠಪತಿ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ.ಐ.ಬಿ. ಘಟಕ ರಾಯಚೂರು ಮತ್ತು ಅವರ
ಸಿಬ್ಬಂದಿಯವರು ಇಂದು ದಿನಾಂಕ. 8-4-2015 ರಂದು ರೇಲ್ವೆ ಟ್ರಾಕ್ ಮಂಚಲಾಪೂರ ರಸ್ತೆಯ
ಪಕ್ಕದ ಸುರೇಶ್ @ಸೂರಿ ಅನ್ನುವವರ ಮೋಟಾರ್ ಗ್ಯಾರೇಜಿನಲ್ಲಿ
ದಾಳಿ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ಪಡಿತರ ಸೀಮೆ ಎಣ್ಣೆ ಸುಮಾರು 500 ಲೀಟರಗಳಷ್ಟು ಒಂದು ಬ್ಯಾರೆಲ್ ಮತ್ತು ಹತ್ತು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ
ಇದ್ದದ್ದು ಜಪ್ತ ಮಾಡಿ ಆರೋಪಿತನಾದ ರಿಯಾಜ್ ಖಾನ್
ತಂದೆ ವಲಿಖಾನ್ 23 ವರ್ಷ, ಸಾ: ಝೇಂಡಾ ಕಟ್ಟೆ ಕುರಡಿ ಗ್ರಾಮ ತಾ:ಮಾನವಿ
ಇತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ. ಇದರಲ್ಲಿ ಮುನಿ ತಂದೆ ನಾಗೇಶ್ ಅನ್ನುವವನು ತನ್ನ ನ್ಯಾಯ
ಬೆಲೆ ಅಂಗಡಿಗೆ ಸರಬರಾಜು ಆಗಿದ್ದ ಸೀಮೆ ಎಣ್ಣೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದಾಗಿ
ತಿಳಿದು ಬಂದಿದ್ದು, ಆತನ ಬಂಧನಕ್ಕಾಗಿ ಬಲೆ
ಬೀಸಲಾಗಿರುತ್ತದೆ. ಜಿಲ್ಲಾ ಅಪರಾಧ ಪತ್ತೆ ದಳದ
ಕಾರ್ಯವನ್ನು ಎಸ್.ಪಿ. ರವರು ಪ್ರಶಂಸಿಸಿರುತ್ತಾರೆ.
No comments:
Post a Comment