ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ
ಗುನ್ನೆ ನಂ. 85/2015 ಕಲಂ 279, 338, 304(ಎ) ಐ.ಪಿ.ಸಿ:.
ದಿನಾಂಕ : 03-05-2015 ರಂದು ರಾತ್ರಿ 10-00 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತವಾದ
ಬಗ್ಗೆ ಎಮ್.ಎಸ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಗೊಂಡು ಚಿಕಿತ್ಸೆ ಕುರಿತು
ದಾಖಲಾಗಿದ್ದ ಅಶೋಕ ತಂದಿ ಲಕ್ಷ್ಮಣ ಶೆಟ್ ಪಾಲನಕರ ವಯಾ-35 ಸಾ. ಕಾರಟಗಿ ರವರು ಒಂದು
ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಪಿರ್ಯಾದಿದಾರರು ಕಾರಟಗಿಯ ನವಲಿ ರೋಡಿನಲ್ಲಿ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ-03-05-2015 ರಂದು ರಾತ್ರಿ ಸದರಿ ಅಂಗಡಿಯನ್ನು ಬಂದ ಮಾಡಿಕೊಂಡು ಮನೆಗೆ ಹೋಗಲೆಂದು ತಮ್ಮ ಮೋಟಾರ್ ಸೈಕಲ್ ನಂ ಕೆ.ಎ-37 ಎಕ್ಷ್ -8057 ನೆದ್ದರಲ್ಲಿ ರಾಯಚೂರು ಗಂಗಾವತಿ ರಸ್ತೆಯ ಮೇಲೆ ಜವಳಿಯವರ ಕಾಂಪ್ಲೆಂಕ್ಷ ಹತ್ತಿರ ಹೋಗುವಾಗ್ಗೆ ರಾತ್ರಿ 09-30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಮೂತ್ರ ವಿಸರ್ಜನೆಗೆಂದು ರಸ್ತೆಯ ಪಕ್ಕದಲ್ಲಿ ನಿಂತು ಕೊಂಡಿದ್ದಾಗ್ಗೆ ಪಿರ್ಯಾದಿದಾರರಿಗೆ ಪರಿಚಯಸ್ಥರಾದ ಚನ್ನಬಸವ ತಂದಿ ಸಿದ್ದಪ್ಪ ಕೋರಿ ಸಾ. ಕಾರಟಗಿ ಈತನು ಕೂಡಾ ಮೂತ್ರ ವಿಸರ್ಜನೆ ಮಾಡಲೆಂದು ಬಂದು ಮೂತ್ರ ವಿಸರ್ಜೆನೆ ಮಾಡಿ ಪಿರ್ಯಾದಿದಾರರು ಮತ್ತು ಚನ್ನಬಸವ ಇಬ್ಬರು ತಮ್ಮ ಮೋಟಾರ್ ಸೈಕಲ್ ಹಿಡಿದುಕೊಂಡು ಮಾತನಾಡುತ್ತಾ ನಿಂತುಕೊಂಡಿದ್ದಾಗ್ಗೆ ಸಿಂಧನೂರು ಕಡೆಯಿಂದ ಒಂದು ಸ್ಕಾರ್ಪಿಯೋ ಚಾಲಕ ತನ್ನ ವಾಹನವನ್ನು ಅತೀ ವೇಗ ಅಲಕ್ಷತನದಿಂದ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ಚನ್ನಬಸವ ಈತನಿಗೆ ಮತ್ತು ಈತನ ಮೋಟಾರ್ ಸೈಕಲ್ ನಂ. MBLHA10BFEHM47190 ನೆದ್ದಕ್ಕೆ ಮತ್ತು ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರ ಕಾಲಿಗೆ ಗಂಭೀರ ಸ್ವಾರೂಪದ ಗಾಯಗಳಾಗಿದ್ದು ಮತ್ತು ಚನ್ನಬಸವ ಈತನಿಗೆ ಗಂಭೀರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಅಪಘಾತ ಪಡಿಸಿದ ಸ್ಕಾರ್ಪಿಯೋ ವಾಹನ ನಂ ನೋಡಲು ಕೆ.ಎ-37 ಎಮ್ 8778 ಅಂತಾ ಇದ್ದು ಇದರ ಚಾಲಕ ಓಡಿ ಹೋಗಿರುತ್ತಾನೆ ಈ ಬಗ್ಗೆ ಸ್ಕಾರ್ಪಿಯೋ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಸಂಚಾರಿ ಪೊಲೀಸ್ ಠಾಣೆ
ಗಂಗಾವತಿ ಗುನ್ನೆ ನಂ. 17/2015 ಕಲಂ 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ನಿನ್ನೆ ದಿನಾಂಕ 02-05-2015 ರಂದು ಸಂಜೆ 05-30 ಗಂಟೆಗೆ ಪಿರ್ಯಾಧಿದಾರನು
ಮನೆಯಲ್ಲಿ ಕರೆಂಟ್ ರಿಪೇರಿ ಮಾಡಿಸಿ ನಂತರ ನಿಚ್ಚಣಿಕೆಯನ್ನು ಇಟ್ಟು ಬರಲು ಮಸೀದಿ ಹತ್ತಿರ
ಹೋಗುತ್ತಿರುವಾಗ ಪಿರ್ಯಾಧಿದಾರನ ಹಿಂದೆ ಅವರ ಅಣ್ಣನ ಮಗ ಲೋಹಿತ ವ: 04 ಈತನು ಹೊರಟಿದ್ದು ಅದೇ ವೇಳೆಗೆ ಮುಕಾವರ ಕ್ಯಾಂಪ ಕಡೆಯಿಂದ ಶಾಲಂ ತಂದೆ ನಾಸಿರ್ ಸಾ:
ಅಗಡಿ ಸಂಗಣ್ಣ ಕ್ಯಾಂಪ ಈತನು ತನ್ನ ಮೋ/ಸೈ ನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ
ಮಾಡಿಕೊಂಡು ಬಂದು ಲೋಹಿತ ಈತನಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಇದರಿಂದ ಲೋಹಿತ್ ಈತನಿಗೆ
ತಲೆಯ ಹಿಂದೆ ರಕ್ತ ಗಾಯವಾಗಿದ್ದು ಮತ್ತು ಬಲ ಕಿವಿಯ ಒಳಗಡೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ.
ಮೋ/ಸೈ ನಂ ನೊಡಿರುವುದಿಲ್ಲಾ. ವಾಹನ ನೋಡಿದರೆ ಗುರ್ತಿಸುತ್ತೇನೆ. ಅದರ ಸವಾರನ ಹೆಸರು ಶಾಲಂ ತಂದೆ
ನಾಸಿರ್ ಇರುತ್ತದೆ. ಅವರ ಮನೆಯಲ್ಲಿ ವಿಚಾರಿಸಿದಾಗ ಪರಾರಿಯಾಗಿರುತ್ತಾನೆಂದು ಹಾಗೂ
ಪಿರ್ಯಾಧಿದಾರನ ಮನೆಯಲ್ಲಿ ಚರ್ಚಿಸಿ ತಡವಾಗಿ ಬಂದು ಪಿರ್ಯಾಧಿಯನ್ನು ಇಂದು ಸಲ್ಲಿಸಿದ್ದು ಮತ್ತು
ಇಂದು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಮದ್ಯಾಹ್ನ ದಾಖಲು ಮಾಡಿರುವುದಾಗಿ ಮುಂತಾಗಿದ್ದ ಪಿರ್ಯಾಧಿ
ಮೇಲಿಂದ ಠಾಣಾ ಗುನ್ನೆ ನಂ 17/2015 ಕಲಂ 279, 337, 338, ಐಪಿಸಿ 187 ಐಎಮ್.ವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಅದೆ.
3) ಕಾರಟಗಿ ಪೊಲೀಸ್ ಠಾಣೆ
ಗುನ್ನೆ ನಂ 84/2015 ಕಲಂ 143, 147, 323, 354, 504 ಸಹಿತ
149 ಐ.ಪಿ.ಸಿ.:
ಇಂದು ದಿನಾಂಕಃ-03-05-2015 ರಂದು ರಾತ್ರಿ 21-10 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಿಕೀರಣ ಮಾಡಿಸಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಈಗ್ಗೆ ಮೂರು ವರ್ಷಗಳ ಹಿಂದೆ ದೇವಸಮುದ್ರದ ಶರಣಪ್ಪರವರೊಂದಿಗೆ ಹಿರಿಯರ ಸಮಕ್ಷದಲ್ಲಿ ಮದುವೆ ಮಾಡಿಕೊಂಡಿದ್ದು ಗಂಡನ ಮನೆಯವರು ಒಂದು ವರ್ಷ ಚನ್ನಾಗಿ ನೋಡಿಕೊಂಡು ನಂತರ ಗಂಡ ಶರಣಪ್ಪ ಈತನು ದುಷ್ಚಟಕ್ಕೆ
ಅಂಟಿಕೊಂಡು ಪಿರ್ಯಾದಿದಾರರ ಮೇಲೆ ಅನುಮಾನ ಪಡುತ್ತಿರುವುದರಿಂದ ಪಿರ್ಯಾದಿದಾರರು ತಮ್ಮ ತವರು ಮನೆ
ಬೂದಗುಂಪಾ ಗ್ರಾಮಕ್ಕೆ ಬಂದಾಗ ಆರೋಪಿತರೆಲ್ಲರೂ ಪಿರ್ಯಾದಿದಾರರಿಗೆ ಕರೆದುಕೊಂಡು ಹೋಗುವ ನೆಪ
ಮಾಡಿಕೊಂಡು ಸಮಾನ ಉದ್ದೇಶದಿಂದ ಬೂದಗುಂಪಾ ಗ್ರಾಮಕ್ಕೆ ಬಂದು ದಿ-03-05-2015 ರಂದು ಸಾಯಂಕಾಲ
4-00 ಗಂಟೆಯಿಂದ 5-00 ಗಂಟೆಯ ಅವಧಿಯಲ್ಲಿ ಪಿರ್ಯಾದಿದಾರರ ತಾಯಿ ಮನೆಯಲ್ಲಿ ಗ್ರಾಮದ
ಹಿರಿಯರೊಂದಿಗೆ ಪಂಚಾಯಿತಿಗೆ ಕುಳಿತಾಗ ಪಿರ್ಯಾದಿದಾರರ ಗಂಡ ಪಿರ್ಯಾದಿಗೆ ಕಪಾಳಕ್ಕೆ ಹೊಡೆದಾಗ
ಪಿರ್ಯಾದಿದಾರರ ತಾಯಿ ಬಿಡಿಸಿಕೊಳ್ಳಲು ಬಂದಾಗ ಆರೋಪಿ ನಂ 1,2,3 ರವರು ಪಿರ್ಯಾದಿದಾರರ ತಾಯಿಗೆ
ಸೀರೆ ಹಿಡಿದು ಎಳೆದಾಡಿ, ಬಡಿದು ಅವಛ್ಯವಾಗಿ ಬೈದಾಡಿದ್ದು ಅಲ್ಲದೇ ಆರೋಪಿ ನಂ 4, 5 ರವರು
ಪಿರ್ಯಾದಿದಾರರ ಜಡಿ ಹಿಡಿದುಕೊಂಡು ಕೈಯಿಂದ ಬಡಿದು ಅವಛ್ಯವಾಗಿ ಬೈದಾಡಿದ್ದು ಪಿರ್ಯಾದಿದಾರರ ಗಂಡ
ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
No comments:
Post a Comment