Police Bhavan Kalaburagi

Police Bhavan Kalaburagi

Friday, May 1, 2015

KALABURAGI DISTRICT REPORTED CRIMES

ಹಲ್ಲೆ ಪ್ರಕರಣ;
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 30/04/2015 ರಂದು ಶ್ರೀ ಸುಮೇಧ ಕುಲಕರ್ಣಿ ಡೇಪ್ಯೂಟಿ ಮ್ಯಾನೇಜರ ಎನ್.ಎಸ್.ಎಲ್ ಸುಗರ ಪ್ಯಾಕ್ಟರಿ ಭುಸನೂರ ಇವರು ಠಾಣೆಗೆ ಹಾಜರಾಗಿ ದಿನಾಂಕ 20-04-2015  ಕ್ಕೆ ಪ್ಯಾಕ್ಟರಿ ಆವರದಲ್ಲಿ ಜನರ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಿರುವಾಗ ಜಗದೀಶ ಕೆ ಸಾ: ಭೂಸನೂರ ಹಾಗೂ ಆತನ ಸಂಗಡ ಇತರರು ಬಂದವರೆ ವಿನಾಕಾರಣ ಅವಾಚ್ಯವಾಗಿ ಬೈದು ತನಗೆ ಹೊಡೆ ಬಡೆ ಮಾಡಿರುತ್ತಾರೆ ಸದರಿಯವರ ಮೇಲೆ ಸೂಕ್ತಕಾನೂನು ಕ್ರಮ ಕೈಕೊಳ್ಳುವ ಕುರಿತು ಸಲ್ಲಿಸಿದ ದೂರು ಸಾಋಆಂಶದ ಮೇಲಿಂಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಪೊಲೀಸ್ ಠಾಣೆ:ದಿನಾಂಕ 28-04-2015 ರಂದು ಅಣ್ಣರಾವ ತಂದೆ ಹಣಮಂತರಾವ ಪಾಟೀಲ, ಸಾಃ ಸಾಯಿ ನಗರ ಕಲಬುರಗಿ  ತನ್ನ ಮೋಟಾರ ಸೈಕಲ ಕೆ.ಎ 32 ಡಬ್ಲು 7013 ನೇದ್ದನ್ನು ಸೇಡಂ ರಿಂಗ ರಿಂಗ ರೋಡ ಕಡೆಯಿಂದ ಆರ್.ಟಿ.ಓ ಆಫೀಸ್ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ ಬಡೆಪೂರ ಕ್ರಾಸ್ ಹತ್ತಿರ ಒಮ್ಮೆಲೆ ಕಟ್ ಹೊಡೆದು ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ತಲೆಗೆ ಮತ್ತು ಎಡಬುಜಕ್ಕೆ ಗಾಯಮಾಡಿಕೊಂಡ ಬಗ್ಗೆ ಶ್ರೀ ಅಮರೇಶ ತಂದೆ ಶಿವರಾಯ ಕಲ್ಲೂರ, ಸಾಃ ಅಂದೊಲಾ, ತಾಃ ಜೇವಗಿ  ರವರು ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 30-04-2015 ರಂದು ಬಂದೇನವಾಜ ತಂದೆ ಸೈಪನಸಾಬ ಮುಜಾವರ ಸಾ|| ನಾಗಠಾಣ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 30-04-2015 ರಂದು ನನ್ನ ಮಗನ ಜವಳದ ಕಾರ್ಯಕ್ರಮ ಕುರಿತು ಹೈದ್ರಾ ಗ್ರಾಮದ ಸೈಪನಮುಲುಕ ದರ್ಗಾಕ್ಕೆ ಮಾಂತು @ ಮಾಂತಪ್ಪ ತಂದೆ ಬಸಪ್ಪ ಹಡಲಗಿ ಸಾ: ಗುಣಕಿ ಈತನ 407 ಟೆಂಪೊ ನಂ ಕೆಎ-23 5087 ನೇದ್ದರಲ್ಲಿ ಹೈದ್ರಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಕರಜಗಿ - ಮಣೂರ ಮುಖ್ಯ ರಸ್ತೆಯಲ್ಲಿ ಟೆಂಪು ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಟೆಂಪುವನ್ನು ಚಲಾಯಿಸಿ ಒಮ್ಮೇಲೆ ಕಟ್ಟ ಮಾಡಲು ಹೋಗಿ ಬಲಗಡೆ  ತಗ್ಗಿನಲ್ಲಿ ಪಲ್ಟಿ ಮಾಡಿದನು. ನಂತರ ನೋಡಲಾಗಿ ನಮ್ಮ  ತಮ್ಮ ಮಹಿಬೂಬಸಾಬ ಮತ್ತು ಅಳಿಯ ಇಲಾಯಿ ಇವರು ಇಬ್ಬರು ಟೆಂಪೊದ ಕೆಳಗೆ ಸಿಕ್ಕಿಬಿದ್ದು ಮಹಿಬುಬಸಾಬನಿಗೆ ಬಲಗಾಲ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿರುತ್ತದೆ, ತಲೆಯ ಹಿಂದೆ ರಕ್ತಗಾಯವಾಗಿರುತ್ತದೆ. ಇಲಾಯಿ ತಂದೆ ಮಹಿಬೂಬ ಗೋಳಸಗಾಂವ ಇವನ ಬಲಕಿವಿ ಇಂದ ರಕ್ತ ಸೋರುತ್ತಿದ್ದು, ಬಲಗಡೆ ಎದೆಯ ಮೇಲೆ ಭಾರಿ ಒಳಪೆಟ್ಟಾಗಿರುತ್ತದೆ, ನಮ್ಮ ತಾಯಿ ಜೈಬುನಬಿ ಇವಳಿಗೆ ತಲೆಯ ಮೇಲೆ ಮತ್ತು ಎಡಗಾಲ ಮೊಳಕಾಲ ಕೆಳಗೆ ಒಳಪೆಟ್ಟಾಗಿರುತ್ತದೆ, ದಾವಲಬಿ ಮುಜಾವರ ಇವರಿಗೆ ಬಲಗಡೆ ಹಣೆಯ ಮೇಲೆ ರಕ್ತಗಾಯವಾಗಿ ಮೈ ಕೈಗೆ ಒಳಪೆಟ್ಟಾಗಿರುತ್ತದೆ, ಅಬ್ದುಲರಜಾಕ ಗೋಳಸಗಾಂವ ರವರಿಗೆ ಎಡಗಡೆ ಭುಜದ ಮೇಲೆ ಭಾರಿ ಒಳಪೆಟ್ಟಾಗಿದ್ದು, ಎಡಗಣ್ಣಿನ ಮೇಲೆ ರಕ್ತಗಾಯ ವಾಗಿರುತ್ತದೆ. ರಮಜಾನ ನಿಂಬಾಳ ರವರಿಗೆ ಬಲಗಾಲ ಪಾದದ ಮೇಲೆ ಒಳಪೆಟ್ಟಾಗಿರುತ್ತದೆ.  ಇನ್ನು ಕೆಲವು ಜನರಿಗೆ ಸಣ್ಣ ಪುಟ್ಟ ಒಳ ಪೆಟ್ಟುಗಳು ಮತ್ತು ರಕ್ತಗಾಯಗಳು ಆಗಿದ್ದು. ಎಲ್ಲರನ್ನು 108 ಅಂಬ್ಯೂಲೆನ್ಸದಲ್ಲಿ ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಗಂಬಿರವಾಗಿ ಗಾಯಗೊಂಡಿದ್ದ ಮಹಿಬೂಬಸಾಬ ಮತ್ತು ಇಲಾಯಿ ಇವರು ಮಾರ್ಗ ಮದ್ಯ ಮೃತ ಪಟ್ಟಿರುತ್ತಾರೆ, ಸದರಿ 407 ಟೆಂಪೊ ಚಾಲಕನಾದ ಮಾಂತು @ ಮಾಂತಪ್ಪ ತಂದೆ ಬಸಪ್ಪ ಹಡಲಗಿ ಸಾ: ಗುಣಕಿ ಈತನು ತನ್ನ ಟೆಂಪೊವನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಟೆಂಪುವನ್ನು ಚಲಾಯಿಸಿ ಒಮ್ಮೇಲೆ ಕಟ್ಟ ಮಾಡಲು ಹೋಗಿ ಬಲಗಡೆ  ತಗ್ಗಿನಲ್ಲಿ ಪಲ್ಟಿ ಮಾಡಿ, ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: