ಅಫಜಲಪೂರ
ಪೊಲೀಸ್ ಠಾಣೆ : ನನಗೆ ಒಟ್ಟು ಒಂದು ಗಂಡು ಮತ್ತು ಒಂದು ಹೆಣ್ಣು ಈ ರೀತಿ ಮಕ್ಕಳು ಇರುತ್ತಾರೆ, ನನ್ನ ಮಗಳು ಭಾಗ್ಯಶ್ರೀ ವಯಾ: 16
ವರ್ಷ ಇವಳು ಈ ವರ್ಷ ಎಸ್.ಎಸ್.ಎಲ್.ಸಿ ಪಾಸಾಗಿರುತ್ತಾಳೆ, ನನ್ನ ಕಾಲಿನ ನರಗಳು ಬೇನೆಯಾಗುತ್ತಿದ್ದರಿಂದ ದಿನಾಂಕ 13-05-2015 ನಾನು ಮತ್ತು ನನ್ನ ಹೆಂಡತಿ ಇಂದುಬಾಯಿ ಇಬ್ಬರು ಮೀರಜ ಆಸ್ಪತ್ರೆಗೆ ಹೋಗಿ ಅಲ್ಲೆ ಉಪಚಾರ ಪಡೆಯುತ್ತಾ
ಇದ್ದಿರುತ್ತೆವೆ. ಅಫಜಲಪೂರದ ನಮ್ಮ ಮನೆಯಲ್ಲಿ ನನ್ನ ಮಗಳು ಭಾಗ್ಯಶ್ರೀ ಮತ್ತು ನಮ್ಮ ಅತ್ತೆ ಶಾಂತಾಬಾಯಿ
ಇವರು ಇದ್ದಿರುತ್ತಾರೆ, ದಿನಾಂಕ 18-05-2015
ರಂದು ಸಾಯಂಕಾಲ 5:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಮೀರಜ ಆಸ್ಪತ್ರೆಯಲ್ಲಿದ್ದಾಗ ನನಗೆ ಪರಿಚಯವಿದ್ದ ರಮೇಶ ತಂದೆ
ಗಾಂದಿ ನಿಂಬರ್ಗಿ ಈತನು ನನಗೆ ಪೋನ ಮಾಡಿ, ನಾನು ಮತ್ತು ನನ್ನ ಗೆಳೆಯ ಹಣಮಂತ ತಂದೆ ಗಾಳೆಪ್ಪ ಜಮಾದಾರ ಇಬ್ಬರು ಅಫಜಲಪೂರದ ಲಕ್ಷ್ಮೀ ಗುಡಿಯ ಮುಂದೆ ಕುಳಿತಿದ್ದಾಗ 4:30
ಪಿ ಎಮ್ ಸುಮಾರಿಗೆ ನಿಮ್ಮ ಮಗಳು ಬಾಗ್ಯಶ್ರೀ ಇವಳು ನಿಮ್ಮ ಮನೆಯಿಂದ
ಬರ್ಹಿರದೇಸೆಗೆ ಹೋಗುತ್ತಿದ್ದಾಗ, ಲಕ್ಷ್ಮೀ ಗುಂಡಿಯ ಮುಂದಿನಿಂದ ವಿಠ್ಠಲ ನಾಟಿಕಾರ ಸಾ: ಹವಳಗಾ ಈತನ ಸ್ಕಾರ್ಪಿಯೊ ವಾಹನದಲ್ಲಿ 1)
ಮಲ್ಕಪ್ಪ ತಂದೆ ಶಂಕರ ದೊಡ್ಡಮನಿ ಸಾ: ಶಿವಪೂರ 2)
ಭಾಗಪ್ಪ ತಂದೆ ಸಿದ್ದಪ್ಪ ಪ್ಯಾಟಿ ಸಾ: ಬನ್ನೇಟ್ಟಿ 3) ಗುರಪ್ಪ ತಂದೆ ಮಲ್ಲಪ್ಪ
ದೊಡ್ಡಮನಿ ಸಾ: ಶಿವಪೂರ ಇವರುಗಳು ನಿಮ್ಮ ಮಗಳನ್ನು ಅಫಹರಣ ಮಾಡಿಕೊಂಡು ಹೋಗಿರುತ್ತಾರೆ, ಫಹರಣ ಮಾಡಲು ವಿಠ್ಠಲ ತಂದೆ ಅಡಿವೆಪ್ಪ ನಾಟಿಕಾರ ಸಾ: ಹವಳಗಾ, ಮಲ್ಕಪ್ಪ ದೊಡ್ಡಮನಿ ಈತನ
ತಂದೆ ಶಂಕರ ತಂದೆ ದತ್ತಪ್ಪ ದೊಡ್ಡಮನಿ ಸಾ: ಶಿವಪೂರ ಇವರಿಬ್ಬರು ಮುಂದೆ ನಿಂತು ಸ್ಕಾರ್ಪಿಯೊ ವಾಹನದಲ್ಲಿ ಕಳುಹಿಸಿಕೊಟ್ಟು, ಅಫಹರಣ ಮಾಡಲು ಸಹಾಯ ಮಾಡಿರುತ್ತಾರೆ ಅಂತಾ
ತಿಳಿಸಿದನು. ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರು ಅಫಜಲಪೂರಕ್ಕೆ ಬಂದಿರುತ್ತೆವೆ. ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಸದರಿ ಮಲ್ಕಪ್ಪ ತಂದೆ ಶಂಕರ ಜಮಾದಾರ ಈತನು 6-7 ತಿಂಗಳಿನಿಂದ ಪ್ರೀತಿಸುತ್ತಿದ್ದು, ಅವಳು ಅದಕ್ಕೆ ಒಪ್ಪದ ಕಾರಣ ಸದರಿ ಮಲ್ಕಪ್ಪನು
ನನ್ನ ಮಗಳು ಅಪ್ರಾಪತ್ರ ವಯಸ್ಸಿನವಳೀರುತ್ತಾಳೆ ಎಂದು ತಿಳಿದರು ಮದುವೆ ಮಾಡಿಕೊಳ್ಳಬೆಕೆಂಬ ಉದ್ದೇಶದಿಂದ, ದಿನಾಂಕ 18-05-2015
ರಂದು 4:30 ಪಿ ಎಮ್ ಕ್ಕೆ, ಅಫಜಲಪೂರ ಪಟ್ಟಣದ ಲಕ್ಷ್ಮೀ ಗುಡಿಯ
ಮುಂದಿನಿಂದ ಮಲ್ಕಪ್ಪ ತಂದೆ ಶಂಕರ ದೊಡ್ಡಮನಿ ಸಾ: ಶಿವಪೂರ, ಭಾಗಪ್ಪ ತಂದೆ ಸಿದ್ದಪ್ಪ ಪ್ಯಾಟಿ
ಸಾ: ಬನ್ನೇಟ್ಟಿ, ಗುರಪ್ಪ ತಂದೆ ಮಲ್ಲಪ್ಪ
ದೊಡ್ಡಮನಿ ಸಾ: ಶಿವಪೂರ, ಇವರುಗಳು ವಿಠ್ಠಲ ತಂದೆ
ಅಡಿವೆಪ್ಪ ನಾಟಿಕಾರ ಸಾ: ಹವಳಗಾ ಮತ್ತು ಶಂಕರ ತಂದೆ ದತ್ತಪ್ಪ ದೊಡ್ಡಮನಿ ಸಾ: ಶಿವಪೂರ ಇವರ
ಸಹಾಯದಿಮದ ನನ್ನ ಮಗಳನ್ನು ಅಫಹರಣ ಮಾಡಿಕೊಂಡು ಹೋಗಿರುತ್ತಾರೆ, ನನ್ನ ಮಗಳು ಅಫಹರಣವಾದ ದಿನದಿಂದ
ನಾನು ಮತ್ತು ಲಚ್ಚಪ್ಪ ಜಮಾದಾರ, ಸಿದ್ದಪ್ಪ ಸಿನ್ನೂರ, ಪುಂಡಲಿಕ ಮ್ಯಾಕೇರಿ, ಸಾಯಬಣ್ಣ ಮ್ಯಾಕೇರಿ
ಎಲ್ಲರೂ ಕೂಡಿ ಎಲ್ಲಾ ಕಡೆ ಹುಡುಕಾಡಿರುತ್ತೆವೆ. ನನ್ನ ಮಗಳು ಎಲ್ಲಿಯೂ ಸಿಗದಿದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದಿರುತ್ತೆವೆ, ಕಾರಣ ಸದರಿ ನನ್ನ ಮಗಳನ್ನು ಅಫಹರಣ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಮತ್ತು ನನ್ನ ಮಗಳನ್ನು ಪತ್ತೆ ಮಾಡಬೆಕೆಂದು
ಹೇಳಿಕೆ ನೀಡಿದ್ದು ಮೆಲೆ ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ್ ಠಾಣೆ ಕಲಬುರಗಿ:ದಿನಾಂಕ|| 18/02/2015 ರಂದು 4-30 ಪಿಎಂಕ್ಕೆ ಮೃತ ಇಲಿಯಾಸ್ ಹೈದರ್ ಹಾಗೂ ಫಿರ್ಯಾದಿ
ಆಬೀದ ಅಲಿ ಇವರು ಹೊಂಡಾ ಎಕ್ಟೀವಾ ಡಿಯೋ ಮೋ.ಸೈ ನಂ-ಕೆಎ-32-ಇಡಿ-9639 ರ ಮೇಲೆ
ಹೊಡಲ್ ಗ್ರಾಮದಿಂದ ಕಲಬುರಗಿಗೆ ಬರುವಾಗ ತಾಜ ಸುಲ್ತಾನಪುರ ಗ್ರಾಮದ ಹತ್ತಿರ ಎದುರಿನಿಂದ ಅಂದರೆ ಕಲಬುರಗಿ
ಕಡೆಯಿಂದ ಮಹೇಂದ್ರ ಮೋ.ಸೈ ನಂ-ಕೆಎ-32-ಇಎಫ್-9431 ನೇದ್ದರ ಚಾಲಕನು ತನ್ನ ಮೋಟಾರ್ ಸೈಕಲನ್ನು
ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಗಡೆಯಿಂದ
ನಡೆಯಿಸಿಕೊಂಡು ಬರುತ್ತಿದ್ದ, ಮೃತನ ಮೋ.ಸೈ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿಗೂ & ಮೃತನಿಗೆ ಭಾರಿ ಗಾಯಗಳಾಗಿ ಮೃತ ಲಿಯಾಸ್ ಹೈದರ್ ಈತನಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ
ಹಾಗೂ ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಗಂಗಾಮಯಿ
ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಅಶ್ವೀನಿ ಆಸ್ಪತ್ರೆ ಸೋಲಾಪುರದಲ್ಲಿ ಸೇರಿಕೆ
ಮಾಡಿದಾಗ ಸದರಿಯವನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ|| 12/05/2015 ರಂದು ಬೆಳಿಗ್ಗೆ 07:45 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾನೆ
ಅಂತಾ ಮೃತನ ತಂದೆಯಾದ ಶ್ರೀ ಹಾರೂನ್ ಪಟೇಲ್ ತಂದೆ ಮಶಾಕ ಪಟೇಲ್ ವಯಾ|| 57ವರ್ಷ ಸಾ|| ರೆಹಮತ್ ನಗರ ಕಲಬುರಗಿ ಈತನು ಇಂದು ದಿನಾಂಕ||
20/05/2015 ರಂದು 07:30 ಪಿ,ಎಂಕ್ಕೆ ಠಾಣೆಗೆ ಹಾಜರಾಗಿ ತನ್ನ ಪುರವಣಿ ಹೇಳಿಕೆ ನೀಡಿದ್ದು ಆದ್ದರಿಂದ ಈ ಪ್ರಕರಣ ದಾಖಲಾಗಿರುತ್ತದೆ..
ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 20.05.2015 ರಂದು 15:30
ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ “ ಇಂದು ದಿನಾಂಕ 20.05.2015 ರಂದು ಮಧ್ಯಾಹ್ನ 12:45 ಗಂಟೆಗೆ ಮೇಲೆ ಪ್ರಕಾಶ ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ28ಎಕ್ಷ್2274 ನೇದ್ದರ ಮೇಲೆ ಕುಳಿತುಕೊಂಡು ಜೆವರಗಿಯ ಜೋಪಡಿ ಪಟ್ಟಿಯಿಂದ ಅಖಂಡೇಶ್ವರ ಕಾಲೋನಿಯ ಕಡೆಗೆ ಜೇವರಿಗ ವಿಜಯಪುರ
ಹೆದ್ದಾರಿ ಮೇಲೆ ಸೋಪಿ ಕಾಲೋನಿಯ ಹತ್ತಿರ ರೋಡಿನ ಮೇಲೆ
ಹೋಗುತ್ತಿದ್ದ ವೇಳೆಗೆ ಎದುರುಗಡೆಯಿಂದ ಅಂದರೆ ಸಿಂದಗಿ ಕಡೆಯಿಂದ ಬಂದ ಕಾರ್ ನಂ ಕೆ.ಎ37ಎಮ್6242 ನೇದ್ದರ ಚಾಲಕನು ತನ್ನ ಕಾರ್ ಅನ್ನು ಅತಿ ವೇಗ ಮತ್ತು
ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು
ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿ ನನಗೆ ಮತ್ತು ಪ್ರಕಾಶ ಈತನಿಗೆ ಸಾದಾ ಮತ್ತು ಭಾರಿ
ಗಾಯಪಡಿಸಿ ತನ್ನ ಕಾರಿನೊಂದಿಗೆ ಓಡಿ ಹೋದವನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ವಗೈರೆ ಫಿರ್ಯಾದಿ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 138/2015 ಕಲಂ 279. 337 338 ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ
ಗುನ್ನೆ ದಾಖಲಾಗಿರುತ್ತದೆ.
C¥sÀd®¥ÀÆgÀ
ಪೊಲೀಸ್ oÁuÉ : ಇಂದು ದಿನಾಂಕ 20-05-2015
ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಯಲ್ಲಪ್ಪ ತಂದೆ ದುಂಡಪ್ಪ ವಗ್ಗೆ ಇಬ್ಬರೂ ಕೂಡಿ ಓಟಿಂಗ ಲಿಸ್ಟ ತಗೆದುಕೊಂಡು ಹೋಗಲು ನಮ್ಮ
ಕಾಕನ ಮಗ ನಾಗರಾಜ ಕಟ್ಟಿಮನಿ ಈತನ
ಪಲ್ಸರ ಮೋಟಾರ ಸೈಕಲ ನಂಬರ ಕೆಎ-32 ಇಬಿ-2521
ನೇದ್ದರ ಮೇಲೆ ಅಫಜಲಪೂರಕ್ಕೆ ಬಂದಿರುತ್ತೆವೆ. ಅಫಜಲಪೂರದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ನಾವಿಬ್ಬರು ಸದರಿ ಮೋ/ಸೈ ಮೇಲೆ ದೇವಲ
ಗಾಣಗಾಪೂರಕ್ಕೆ ಹೊರಟಿರುತ್ತೆವೆ. ಮೋ/ಸೈ ನಾನೆ ನಡೆಸುತ್ತಿದ್ದೆನು. ಅಂದಾಜು ಸಾಯಂಕಾಲ 5:30
ಗಂಟೆ ಸುಮಾರಿಗೆ ಡಿಗ್ರಿ ಕಾಲೇಜ ದಾಟಿ ಗಾಣಗಾಪೂರ ರೋಡಿಗೆ ರವಿ ನಂದಿ
ಇವರ ಹೊಲದ ಸಮೀಪ ರೋಡಿನ ಮೇಲೆ
ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಮಹೆಂದ್ರಾ ಬೋಲೆರೊ ಜೀಪಿನ ಚಾಲಕ, ತನ್ನ ಜೀಪನ್ನು ಅತಿವೇಗವಾಗಿ
ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಮೋ/ಸೈ ಕ್ಕೆ ಡಿಕ್ಕಿ ಪಡಿಸಿದನು. ಆಗ ನಾವಿಬ್ಬರು ಮೋ/ಸೈ ದೊಂದೆಗೆ ಕೇಳಗೆ ಬಿದ್ದೆವು. ಡಿಕ್ಕಿಯಿಂದ ನನ್ನ
ಬಲಗಾಲಿನ ಮೋಳಕಾಲಿನ ಕೇಳಗೆ ಕಾಲು
ಮುರಿದಂತೆ ಆಗಿರುತ್ತದೆ, ಹಾಗೂ ಮೂಗಿಗೆ, ಏಡಗೈ ಮುಂಗೈಗೆ ಮತ್ತು ಬಲ ಹುಬ್ಬಿನ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ. ಮೋ.ಸೈ ಮೇಲೆ ಹಿಂದೆ ಕುಳಿತಿದ್ದ ಯಲ್ಲಪ್ಪ ವಗ್ಗೆ ಇವನಿಗೆ ಬಲಗಾಲು
ಮೋಳಕಾಲಿನ ಕೇಳಗೆ ಒಳಪೆಟ್ಟು ಮತ್ತು ತರಚಿದ ಗಾಯಗಳು ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿದ್ದವು. ನಂತರ ಅದೆ ಸಮಯಕ್ಕೆ ಗಾಣಗಾಪೂರಕ್ಕೆ ಹೋಗುತ್ತಿದ್ದ ನಮ್ಮೂರಿನ ಗುಂಡುರಾವ ಹೊಸಮನಿ, ಖಾಜೇಸಾಬ ಚೌಗಡ ಇವರುಗಳು ನಮ್ಮನ್ನು ರೋಡಿಗೆ ಬರುತ್ತಿದ್ದ ಯಾವುದೊ ಒಂದು ವಾಹನದಲ್ಲಿ ಹಾಕಿಕೊಂಡು
ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ, ಸದರಿ ನಮಗೆ ಡಿಕ್ಕಿ ಪಡಿಸಿದ
ಬೊಲೆರೊದ ನಂಬರ ಎಮ್.ಹೆಚ್-13 ಬಿ.ಎನ್-4143
ಅಂತಾ ಇರುತ್ತದೆ. ಸದರಿ ಚಾಲಕ ನಮಗೆ ಡಿಕ್ಕಿ ಪಡಿಸಿದ ತಕ್ಷಣ ತನ್ನ ಜೀಪನ್ನು ತಗೆದುಕೊಂಡು ಓಡಿ ಹೋಗಿರುತ್ತಾನೆ. ಸದರಿ ಬೊಲೆರೊ ಜೀಪ ಚಾಲಕ
ತನ್ನ ಜೀಪನ್ನು ಅತಿವೇಗವಾಗಿ ಮತ್ತು
ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಮೋ/ಸೈ ಡಿಕ್ಕಿ ಪಡಿಸಿ ನನಗೆ ಬಾರಿ ಒಳಪೆಟ್ಟು ಮತ್ತು ತರಚಿದ
ರಕ್ತಗಾಯಗಳು ಹಾಗೂ ನನ್ನ ಜೋತೆಗೆ ಇದ್ದ ಯಲ್ಲಪ್ಪ ವಗ್ಗೆ ಈತನಿಗೆ ಸಾದಾ ಒಳಪೆಟ್ಟು ಮತ್ತು ಸಾದಾ ತರಚಿದ ಗಾಯಗಳನ್ನು ಪಡಿಸಿ ತನ್ನ ವಾಹನದೊಂದಿಗೆ ಓಡಿ
ಹೋಗಿರುತ್ತಾನೆ. ಕಾರಣ ಸದರಿ ಬೋಲೆರೊ
ವಾಹನ ನಂ ಎಮ್.ಹೆಚ್-13 ಬಿ.ಎನ್-4143ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಎಂದು ಹೇಳಿಕೆ ನೀಡಿದ್ದ ಮೆರೆಗೆ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ್ ಠಾಣೆ ಕಲಬುರಗಿ : ಫಿರ್ಯಾದಿದಾರರಾದ ಶ್ರೀ ಬಸವರಾಜ ತಂದೆ ಗುಂಡುರಾಯ ಕೋಟನೂರ
ವಯಾ|| 32ವರ್ಷ ಉ|| ಎಮ್.ಟಿ.ಎಸ್ ಮೊಬೈಲ್ ಏಜೇನ್ಸಿ ಸಾ|| ಕೋಟನೂರ ತಾ|| ಜಿ|| ಕಲಬುರಗಿ
ಹಾ|| ವ|| ಎಲ್.ಐ.ಜಿ ನಂ-89 ಕೆ.ಹೆಚ್.ಬಿ ಕಾಲೋನಿ ಕಲಬುರಗಿ ಇವರು ಕೊಟ್ಟ ಫಿರ್ಯಾದು ಸಾರಾಂಶವೆನೆಂದರೆ,
ದಿನಾಂಕ|| 19/05/2015 ರಂದು ರಾತ್ರಿ
10:30 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು & ನನ್ನ ಹೆಂಡತಿ ನಾಗವೇಣಿ ಕೂಡಿಕೊಂಡು ಊಟ ಮಾಡಿ ಮನೆಯಲ್ಲಿ ಬಹಳಷ್ಟು ಗರಮಿ ಆಗುತ್ತಿದ್ದರಿಂದ
ಮನೆಯ ಬಾಗಿಲದ ಕೀಲಿ ಹಾಕಿ ಮನೆಯ ಮೇಲಗಡೆ ಮಲಗಿಕೊಂಡಿರುತ್ತೇವೆ. ಇಂದು
ದಿನಾಂಕ|| 20/05/2015 ರಂದು ಬೆಳಿಗ್ಗೆ 07:00 ಗಂಟೆಯ ಸುಮಾರಿಗೆ ಬಾಗಿಲಿಗೆ ಪ್ರತಿ ನಿತ್ಯದಂತೆ ಹಾಲಿನವರು ಬಂದು ಸಪ್ಪಳ ಮಾಡಿದ್ದರಿಂದ
ನಾನು & ನನ್ನ ಹೆಂಡತಿ ನಾಗವೇಣಿ ಕುಡಿಕೊಂಡು ಮನೆಯ ಮೇಲಗಡೆಯಿಂದ
ಕೆಳಗಿಳಿದು ಬಂದು ಮನೆಯ ಬಾಗಿಲು ನೋಡಲು ಬಾಗಿಲು ಅರ್ಧ ತೆರದಿತ್ತು , ಯಾರೂ ತೆಗೆದಿರುಬಹುದು ಅಂತಾ ಸಂಶಯ ಬಂದು ಒಳಗಡೆ ಹೋಗಿ ನೋಡಲು ಬೆಡ ರೂಮ್ ಪಕ್ಕದಲ್ಲಿದ್ದ
ಕಬ್ಬೀಣದ ಆಲಮಾರಿ ತೆರೆದಿತ್ತು ಅದರಲ್ಲಿಯ ಲಾಕರ್ ಕೂಡ ತೆರೆದಿತ್ತು & ಆಲಮಾರದಲ್ಲಿಯ ಬಟ್ಟೆ ಬರೆಗಳು ನೆಲದ ಮೇಲೆ ಚೆಲ್ಲಾ ಪಿಲ್ಲಿಯಾಗಿ ಕೆಳಗಡೆ ಬಿದ್ದಿದ್ದವು
, ಲಾಕರದಲ್ಲಿದ್ದ ಅರ್ಧ ಕಿಲೊ ಬೆಳ್ಳಿಯ ಆರ್ಥಿ ಸಟ್ ಅ,ಕಿ: 16000/- & ಪಾವ ಕೆ.ಜಿ ಬೆಳ್ಳಿಯ ಲಕ್ಷ್ಮೀ ಮುಖದ ಮೂರ್ತಿ ಅ,ಕಿ:
8000/- ರೂಪಾಯಿ ಹೀಗೆ ಒಟ್ಟು 24 ಸಾವಿರ ರೂಪಾಯಿ
ಬೆಲೆಯ ಬೆಳ್ಳಿಯ ಸಾಮಾನುಗಳು ನಾವೂಗಳು 2010 ನೇ ಸಾಲಿನಲ್ಲಿ ಖರೀದಿ
ಮಾಡಿದ ಸಾಮಾನುಗಳು ಕಳುವಾಗಿದ್ದು ಕಂಡಿತು . ಸದರಿ ಘಟನೆಯೂ ದಿನಾಂಕ||
19/05/2015 ರಂದು ರಾತ್ರಿ ಸಮಯದಲ್ಲಿ ಯಾರೊ ಅಪರಿಚಿತ ಕಳ್ಳರು ಮನೆಯ ಬಾಗಿಲದ
ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಬೆಡರೂಮದಲ್ಲಿದ್ದ ಕಬ್ಬೀಣದ ಆಲಮಾರಿ ಲಾಕರದಲ್ಲಿಟ್ಟ ಬೆಳ್ಳಿಯ
ಮೇಲ್ಕಂಡ ಆರ್ಥಿ ಸಟ್ಟು ಮತ್ತು ಬೆಳ್ಳಿಯ ಮೂರ್ತಿ ಅ,ಕಿ:
24000/- ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
, ಕಾನೂನು ಕ್ರಮ ಕೈಕೊಂಡು ಕಳುವಾಗಿ ಹೋದ ಮೇಲ್ಕಂಡ ಸಾಮಾನುಗಳನ್ನು ಪತ್ತೆ ಹಚ್ಚಿ
ವಾಪಸ್ಸು ಕೊಡಿಸಲು ಕೋರುತ್ತೇನೆ. ಅಂತಾ ವಗೈರೆ ಫಿರ್ಯಾದಿ ಅರ್ಜಿಯ ಸಾರಾಂಶದ
ಮೇಲಿಂದ
ಠಾಣೆ ಗುನ್ನೆ ನಂ: 216/2015 ಕಲಂ-
457, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 20.05.2015 ರಂದು 12:30 ಗಂಟೆಗೆ ಠಾಣೆಯ
ಶ್ರೀ. ಬಸವರಾಜ
ಸಿ.ಹೆಚ್.ಸಿ 160 ರವರು
ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ಸ.ತರ್ಫೇ ಫಿರ್ಯಾದಿ ವರದಿ ಹಾಜರುಪಡಿಸಿದ್ದು ಸಾರಾಂಶವೆನೆಂಧರೆ “ ಇಂದು ದಿ: 20-05-2015
ರಂದು
ಮುಂಜಾನೆ 8.00 ಗಂಟೆಗೆ
ಠಾಣೆಯಿಂದ ಪೆಟ್ರೊಲಿಂಗ್ ಕರ್ತವ್ಯಕ್ಕೆ ಹೋಗಿದ್ದು. ಜೇವರಗಿ ಪಟ್ಟಣದ ತಹಸೀಲ್ದಾರ ಕಚೇರಿ ಎದುರು ರೊಡಿನಲ್ಲಿ
ಪೆಟ್ರೊಲಿಂಗ್ ಕರ್ತವ್ಯದ ಮೇಲೆ ಇದ್ದಾಗ
ಸಾರ್ವಜನಿಕ ರೊಡಿನ ಸ್ಥಳದಲ್ಲಿ ಮದ್ಯಾನ್ಹ 12.00 ಗಂಟೆಯ ಸುಮಾರಿಗೆ ಒಬ್ಬ ಮನುಷ್ಯನು ನಿಂತು ಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ನೋಡಿ
ಚೀರಾಡುವುದು ಓದರಾಡುವುದು ಮತ್ತು ಅವಾಚ್ಯವಾಗಿ ಬೈದಾಡುತ್ತಿರುವದು ಮಾಡುವುದು ಆಲ್ಲದೇ ಸಾರ್ವಜನಿಕರಿಗೆ
ತೊಂದರೆ ಕೊಟ್ಟು ಗುಂಡಾಗಿರಿ
ಮಾಡುತ್ತಿದ್ದಾಗ
ನಾನು ಅವನಿಗೆ ನೋಡಿ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ಬಾಬಾ ತಂದೆ ಅಬ್ದುಲ್ ಹಮೀದ್
ಇನಾಮದಾರ ವಯ: 21 ವರ್ಷ ಉ: ಗ್ಯಾರೇಜ್ ಕೆಲಸ ಸಾ: ಮುಸ್ಲಿಂ ಬಸ್ತಿ
ಜೇವರಗಿ ಅಂತಾ
ತಿಳಿಸಿದನು. ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಸದರ ಪಟ್ಟಣದಲ್ಲಿ ಸಾರ್ವಜನಿಕರಿಗೆ
ತೊಂದರೆ ಕೊಟ್ಟು ಸಾರ್ವಜನಿಕ ಶಾಂತತೆ
ಭಂಗವನ್ನುಂಟು ಮಾಡುವ ಎಲ್ಲಾ ಸಾದ್ಯತೆ ಕಂಡುಬಂದಿದ್ದರಿಂದ ಅವನಿಗೆ ವಶಕ್ಕೆ ತಗೆದುಕೊಂಡು ಮರಳಿ ಠಾಣೆಗೆ ಬಂದು ಮುಂದಿನ
ಕ್ರಮಕ್ಕಾಗಿ ವರದಿ” ಅಂತ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ 134/2015 ಕಲಂ 110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment