ಅಫಜಲಪೂರ ಪೊಲೀಸ್
ಠಾಣೆ : ದಿನಾಂಕ 28-05-2015
ರಂದು 06:00 ಎ ಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ವಿಶ್ವನಾಥ ಎ.ಎಸ್.ಐ, ನಾಗರಾಜ ಪಿಸಿ-816, ರಮೇಶ ಪಿಸಿ-596, ರವರೊಂದಿಗೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ನಿಂಬಾಳ ಪೆಟ್ರೋಲ ಬಂಕ
ಹತ್ತಿರ ಇದ್ದಾಗ ಬಾತ್ಮಿ ಬಂದಿದ್ದೇನೆಂದರೆ, ಘತ್ತರಗಾ ಗ್ರಾಮದಲ್ಲಿ
ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ಹೊಗಿ
ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ
ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ
ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸದರಿ
ವ್ಯಕ್ತಿಯ ಮೇಲೆ ದಾಳಿ ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾದೀಶರು
ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರಿಗೆ ಪರವಾನಿಗೆ ಕುರಿತು ವಿನಂತಿಸಿಕೊಂಡೆನು.
ಸದರಿ ವಿಷಯವನ್ನು ಮಾನ್ಯ ಸಿ.ಪಿ.ಐ ಸಾಹೇಬರಿಗೆ ತಿಳಿಸಿ ನಂತರ ಇಬ್ಬರು ಪಂಚರಾದ 1) ಶಿವಪ್ಪ ತಂದೆ
ಗಿರಿಮಲ್ಲಪ್ಪ ಕಡ್ಲೇವಾಡ 2) ಚಂದಪ್ಪ ತಂದೆ ರಮೇಶ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಫಜಲಪೂರ ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯವನ್ನು
ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ, ಮಾನ್ಯ ಸಿ.ಪಿ.ಐ ಸಾಹೇಬರಾದ ಸಂಗಮೇಶ ಪಾಟೀಲ ಸಾಹೇಬರು ಹಾಗೂ ನಾನು ಮತ್ತು ನಮ್ಮ
ಸಿಬ್ಬಂದಿಯವರಾದ ವಿಶ್ವನಾಥ ಎ.ಎಸ್.ಐ, ನಾಗರಾಜ ಪಿಸಿ-816, ರಮೇಶ ಪಿಸಿ-596 ಸಿಬ್ಬಂದಿಯವರು ಹಾಗು ಪಂಚರೊಂದಿಗೆ 07:00 ಎ ಎಮ್ ಕ್ಕೆ ನಮ್ಮ
ಇಲಾಖಾ ವಾಹನದಲ್ಲಿ ಹೊರಟು. 07;30 ಎ ಎಮ್ ಕ್ಕೆ ಘತ್ತರಗಾ ಗ್ರಾಮದಲ್ಲಿ ಭಾಗ್ಯವಂತಿ
ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಒಬ್ಬ ವ್ಯಕ್ತಿ ಕುಳಿತುಕೊಂಡು ಹೋಗಿ ಬರುವ
ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ
ಹಣ ಪಡೆದು ಅವರಿಗೆ ಅಂಕಿ ಸಂಕ್ಯ ಬರೆದುಕೊಟ್ಟು, ಮಟಕಾ
ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿ ಹಣ
ಕೇಳುತ್ತಿದ್ದರು, ಆಗ ಸದರಿ ವ್ಯಕ್ತಿ ಯಾವ ಹಣ ನೀನು ಹಚ್ಚದ ನಂಬರ ಬಂದಿಲ್ಲ
ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ಸಿ.ಪಿ.ಐ ಸಾಹೇಬರು ಮತ್ತು ನಾನು
ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ
ಹೆಸರು ವಿಳಾಸ ವಿಚಾರಿಸಲಾಗಿ ನೀಜಾಮ @ ನೀಜಾಮ ಪಟೇಲ ತಂದೆ
ಖಾದರಸಾಬ ಅತ್ತರ ವ: 36 ವರ್ಷ ಜಾ: ಮುಸ್ಲೀಂ ಉ: ಕೂಲಿ ಸಾ: ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3250/- ರೂಪಾಯಿ ನಗದು ಹಣ
ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ, ಒಂದು ಮೋಬೈಲ ಪೋನ ಅಕಿ-1000/- ರೂ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ 07;40 ಎ.ಎಮ್ ದಿಂದ 08:40 ಎ.ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ
ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ ಠಾಣೆಗೆ 09:10 ಎ.ಎಮ್
ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲಾಗಿರುತ್ತದೆ.
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕಃ 27/05/2015 ರಂದು 10:30 ಪಿ.ಎಂ ಕ್ಕೆ
ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೇ, ಇಂದು
ದಿನಾಂಕ 27/05/2015 ರಂದು ರಾತ್ರಿ 09:30 ಪಿ.ಎಂ. ಸುಮಾರಿಗೆ ಫಿರ್ಯಾದಿದಾರರು ಮತ್ತು ಅವರ
ಮಗನಾದ ರಿಶಿಕಾಂತ ವಯಃ 09 ವರ್ಷ ಇಬ್ಬರೂ ಸೌಭಾಗ್ಯ ಕಲ್ಯಾಣ ಮಂಟಪ ಕಡೆಯಿಂದ ತಮ್ಮ ಮನೆಗೆ
ನಡೆದುಕೊಂಡು ಹೋಗುತ್ತಿರುವಾಗ ಡಾಃ ಆವಂಟಿ ಇವರ ಮನೆಯ ಮುಂದೆ ರೋಡಿನ ಮೇಲೆ ಹೋಗುತ್ತಿರುವಾಗ
ಎದರುಗಡೆಯಿಂದ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ
ಮೂರುವರೆ (3 1/2)
ತೊಲೆ ಬಂಗಾರದ ಮಂಗಳಸೂತ್ರ ಅಃಕಿಃ 94,000/- ರೂ ಬೆಲೆ ಬಾಳುವುದನ್ನು
ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾನೆ. ಗಾಬರಿಗೊಂಡು ಸದರಿ ಮೊಟಾರ ಸೈಕಲ ನಂಬರ
ನೋಡಿರುವುದಿಲ್ಲಾ. ಕಾರಣ ಜಭರದಸ್ತಿಯಿಂದ
ಕಿತ್ತುಕೊಂಡು ಹೋದ ಬಂಗಾರದ ಮಂಗಳಸೂತ್ರ ಪತ್ತೆ ಮಾಡಿಕೊಡಬೇಕು ಮತ್ತು ಸದರಿ ಕಳ್ಳನ ಮೇಲೆ ಕಾನೂನು
ಕ್ರಮ ಕೈಗೊಳ್ಳಬೇಕು ಅಂತಾ ವಗೈರೆ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 59/2015 ಕಲಂ. 392
ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ
ಪೊಲೀಸ್ ಠಾಣೆ : ದಿನಾಂಕ 27.05.2015 ರಂದು ಶ್ರೀ ಬಸವ್ರಾಜ ಹೆಚ್.ಸಿ 160 ನೇದ್ದವರು ಸರ್ಕಾರಿ
ಆಸ್ಪತ್ರೆ ಜೇವರ್ಗಿಯಿಂದ
ಎಮ್.ಎಲ್.ಸಿ ವಿಚಾರಣೆ ಕುರಿತು ಸದರಿ ಆಸ್ಪತ್ರೆಗೆ ಭೆಟಿ ನಿಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ
ಗಾಯಾಳಿವಿಗೆ ವಿಚಾರಿಸಿದ್ದು ಸದರಿಯವನು ಫಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ “ ಇಂದು ದಿನಾಂಕ 27.05.2015 ರಂದು ಸಾಯಂಕಾಳಲ 5-15 ಗಂಟೆಯ ತನ್ನ ಮೋಟಾರು ಸೈಕಲ್ ನಂ ಕೆ.ಎ32ವಿ6725 ನೇದ್ದರ ಮೇಲೆ ಇಜೇರಿಯಿಂದ–ಜೇವರ್ಗಿ ಕಡೆಗೆ
ಬರುತ್ತಿದ್ದಾಗ ಚಿಗರಳ್ಳಿ ಇಜೇರಿ- ಚಿಗರಳ್ಳಿ ರೋಡ ಚಿಗರಳ್ಳಿ ಕ್ರಾಸ ಸಮೀಪ ರೋಡಿನ ಮೇಲೆ ಹೋಗುತ್ತಿದ್ದಾಗ ಆ ವೇಳೆಗೆ
ನನ್ನ ಎದುರಿಗೆ
ಅಂದರೆ ಚಿಗರಳ್ಳಿ ಕ್ರಾಸ ಕಡೆಯಿಂದ ಒಂದು ಮೋಟಾರ ಸೈಕಲ ನಂ ಕೆಎ32ಇಜೆ 9594 ನೇದ್ದರ ಸವಾರನು ಅತಿ ವೇಗ
ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಪಡೆಸಿ ನನಗೆ
ಗಾಯಗೋಳಿಸಿದವನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ವಗೈರೆ ಫಿರ್ಯಾದಿ ಸಾರಾಂಶದ ವನ್ನು ಪಡೆದುಕೊಂಡು ಮರಳಿ
ಠಾಣೆಗೆ ಇಂದು 20-15 ಗಂಟೆಗೆ ಬಂದು ಸದರಿಯವನ ಫಿರ್ಯಾದಿ ಹಾಜರ ಪಡೆಸಿದ್ದರಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 151/2015 ಕಲಂ 279. 337. ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
ಚಿತ್ತಾಪೂರ
ಪೊಲೀಸ್ ಠಾಣೆ : ದಿನಾಂಕ:-27/05/2015 ರಂದು 10 ಎ.ಎಮ್.ಕ್ಕೆ ಹಲಕಟ್ಟಿ ಗ್ರಾಮಕ್ಕೆ ಹೋಗಿದ್ದು ನನ್ನ ಮಗಳು ರೇಣುಕಾಗೆ ಅರಾಮ ಇಲ್ಲದ್ದರಿಂದ
ಆಸ್ಪತ್ರೆಗೆ ತೋರಿಸಿ ಕಳುಹಿಸಿ ಕೊಡಬೇಕು ಅಂತ ನಾನು ನನ್ನ ಮಗಳು ಹಾಗೂ ಎರಡು ಮೊಮ್ಮಕ್ಕಳೊಂದಿಗೆ
ಹಲಕಟ್ಟಾ ಗ್ರಾಮದಿಂದ ಜೀಪ ನಂ. ಕೆ.ಎ 20 ಎಮ್. 1967 ನೇದ್ದರಲ್ಲಿ ಕುಳಿತು ಚಿತ್ತಾಪೂರಕ್ಕೆ ಬರುತ್ತಿದ್ದಾಗ ಸದರಿ ಜೀಪ ಮಹೇಂದ್ರ ಮೈನಾಳಕರ
ಸಾ:ಅಂಬೇಡ್ಕರ ಕಾಲೋನಿ ವಾಡಿ ಈತನು ಚಲಿಸುತ್ತಿದ್ದು. ಈ ಜೀಪಿನಲ್ಲಿ ನಮ್ಮಂತೆ 4-5 ಪ್ಯಾಸೆಂಜರ ಜನರು
ಕುಳಿತ್ತಿದ್ದು. ಇಂದು 5.30 ಪಿ.ಎಮ್.ಕ್ಕೆ ಚಿತ್ತಾಪೂರ ಲಾಡ್ಜಿಂಗ ಕ್ರಾಸ ಹತ್ತಿರ ಜೀಪ ಬಂದು ನಿಂತಿದ್ದು. ಅದರಲ್ಲಿ
ಕುಳಿತ್ತಿದ್ದ ನಾವೆಲ್ಲ. ಪ್ಯಾಸೆಂಜರ ಜನರು ಮತ್ತು ಜೀಪ ಚಾಲಕ ಕೆಳಗಿಳಿಯಬೇನ್ನುವಷ್ಟರಲ್ಲಿ
ಎದುರುಗಡೆಯಿಂದ ೊಂದು ಟ್ಯಾಂಕರ ಚಾಲಕನು ಟ್ಯಾಂಕರನ್ನು ಅತೀ ವೇಗದಿಂದ ನಿಷ್ಕಾಳಜಿತನದಿಂದ
ಚಲಿಸಿಕೊಂಡು ಬಂದು ನಾವು ಕುಳಿತ್ತಿದ್ದ ಜೀಪಿಗೆ ಒಮ್ಮೇಲೆ ಡಿಕ್ಕಿ ಪಡಿಸಿದ್ದು. ಆಗ ಅದರಲ್ಲಿದ್ದ
ನಾವೆಲ್ಲರು ರೋಡಿನ ಎಡ ಮಗ್ಗಲಿಗೆ ನೆಲದ ಮೇಲೆ ಬಿದ್ದಿದ್ದರಿಂದ ನನ್ನ ಬಲ ಮೊಣಕೈ ಕೆಳಭಾಗ
ರಕ್ತಗಾಯ ಸೊಂಟಕ್ಕೆ , ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿದ್ದು. ನನ್ನ ಮಗಳು ರೇನುಕಾಗೆ ಎಡಗಲ್ಲದ ಕೆಳಗೆ ಅಂದಾಜು
5 ಫೀಟ ಉದ್ದ ಹರಿದು
ರಕ್ತಗಾಯವಾಗಿ ಎಡ ಬೆನ್ನಿನ ಸೊಂಟದಿಂದ ಮೇಲಭಾಗ ಭಾರಿ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ
ಸೋರಿದ್ದು. ಸೊಂಟದ ಬಲಭಾಗಕ್ಕೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿದ್ದು. ನನ್ನ
ಎರಡು ಮೊಮ್ಮಕ್ಕಳಿಗೆ ಯಾವುದೇ ಗಾಯ ಕಂಡು ಬಂದಿರುವದಿಲ್ಲ. ಸಂಗಡ ಇದ್ದ ಪ್ಯಾಸೆಂಜರ ಜನರನ್ನು
ನೋಡಿ ವಿಚಾರಿಸಲಾಗಿ ಬಸವರಾಜ ಕರನಾಳ ಈತನಿಗೆ ಟೊಂಕಕ್ಕೆ ಭಾರಿ ಗುಪ್ತಗಾಯವಾಗಿ
ಮುರಿದಂತ್ತಾಗಿದ್ದು, ಈತನ ಹೆಂಡತಿ ಸೌಭಾಗ್ಯಳಿಗೆ ಬೆನ್ನಿನ ನಡುಭಾಗ, ಬಲಗಣ್ಣಿನ ಕೆಳಭಾಗ ತರಚಿದಗಾಯ ವಾಗಿದ್ದು. ಬನ್ನಪ್ಪ ರಾಠೋಡ
ಈತನ ಬಲಗೈ ರೆಟ್ಟೆಗೆ, ಬಲ ಮಗ್ಗಲಿಗೆ ಗುಪ್ತಗಾಯಾವಾಗಿದ್ದು. ಮಶಮ್ಮ ಮುತ್ತಿಗೆ ಇವಳಿಗೆ ಬಲಗಾಲ ಮೊಣಕಾಲ ಕೆಳಗೆ
ರಕ್ತಗಾಯ, ತಲೆಯ ಮೇಲೆ ಮತ್ತು
ಹಲ್ಲುಗಳಿಗೆ ಗುಪ್ತಗಾಯಾವಾಗಿದ್ದು. ಚಾಲಕ ಮಹೇಂದ್ರ ಈತನಿಗೆ ಬಲ ತೊಡೆಗೆ , ಬಲ ಕುತ್ತಿಗೆಗೆ , ಎಡಗಾಲ ಪಾದಕ್ಕೆ , ಬಲ ಮೊಣಕೈಗೆ
ತರಚಿದ ರಕ್ತಗಾಯ ಮತ್ತು ಬಲ ಮಗ್ಗಲಿಗೆ ಗುಪ್ತ ಪೆಟ್ಟಾಗಿದ್ದು. ಟ್ಯಾಂಕರ ನಂ ನೋಡಲಾಗಿ ಕೆ.ಎ 32 ಸಿ 1783 ಅಂತ ಇದ್ದು.
ಚಾಲಕನು ಟ್ಯಾಂಕರ ಬಿಟ್ಟು ಓಡಿ ಹೋಗಿದ್ದು. ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಘಟನೆ ಅಲ್ಲಿಯೆ ಇದ್ದ ಸಾರ್ವಜನಿಕರು ನೋಡಿ
ನಮ್ಮೆಲ್ಲರನ್ನು ಖಾಸಗಿ ವಾಹನದಲ್ಲಿ ಚಿತ್ತಾಪೂರ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ
ಮಾಡಿರುತ್ತಾರೆ. ಸದರಿ ಟ್ಯಾಂಕರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ
ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 53/2015
ಕಲಂ:279,
337, 338, 304(ಎ) ಐ.ಪಿ.ಸಿ. ಸಂ. 187 ಐ.ಎಮ್.ವಿ. ಅಕ್ಟ್
ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಅಶೋಕ ನಗರ ಪೊಲೀಸ್ ಠಾಣೆ : ದಿನಾಂಕ
27-05-2015 ರಂದು ಸಂಜೆ 7 ಗಂಟೆಗೆ ಶ್ರೀಮತಿ ರಾಧಾ ಗಂಡ ದಿ: ಅರ್ಜುನ ನೂಲೆ ಉ-ಸಹಶಿಕ್ಷಕಿ
ಸ.ಹಿ.ಪ್ರಾ.ಶಾ. ಸಿಂದಗಿ (ಬಿ) ಸಾ: ಪ್ಲಾಟ ನಂ
298 ಜಿಡಿಎ ಲೇಔಟ ಘಾಟಗೇ ಲೇಔಟ ಕಲಬುರಗಿ ರವರು ಸಲ್ಲಿಸಿದ ಲಿಖಿತ ಅರ್ಜಿಯ ಸಾರಾಂಶವೆನೆಂದರೆ, ಇಂದು ದಿನಾಂಕ 27-05-2015 ರಂದು ಮದ್ಯಾಹ್ನ 1-30
ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಪ್ರಜ್ಜಲ ಇಬ್ಬರು ಮನೆಗೆ ಬೀಗ ಹಾಕಿ ನಮ್ಮ ದೂರದ
ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಚೋರಗುಮ್ಮಜ ಹತ್ತಿರದ ರಾಜ ಪಂಕ್ಷನ ಹಾಲಕ್ಕೆ
ಹೋಗಿದ್ದು. ಮರಳಿ 4-30 ಗಂಟೆಗೆ ಮನೆಗೆ ಬಂದು
ನೋಡಲು ಮುಖ್ಯ ಬಾಗಿಲು ಬೀಗ ಮುರಿದಿದ್ದು ಮತ್ತು ಅಡುಗೆ ಮನೆಯ ಬಾಗಿಲು ತೆರೆದಿದ್ದು. ಒಳಗಡೆ ಹೋಗಿ ನೋಡಲು ಬೆಡ್ ರೂಮಿನಲ್ಲಿದ್ದ ಕಪಾಟ
ತೆರೆದಿದ್ದು. ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದು ಯಾರೋ ಕಳ್ಳರು ಮದ್ಯಾಹ್ನ 1-30 ರಿಂದ 4-30 ರ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಬೀಗ
ಮುರಿದಿದ್ದು. ಅತೀಕ್ರಮ ಪ್ರವೇಶ ಮಾಡಿ ಅಲಮಾರಿ
ಮುರಿದ್ದು. ಈ ಕೆಳಗೆ ನಮೂದಿಸಿದ ಬಂಗಾರದ ಆಭರಣ
ಮತ್ತು ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. 1) ಬಂಗಾರದ ಉದ್ದ ಚೈನ ಸಟ್ 40ಗ್ರಾಂ 2) ಬಂಗಾರದ
ನಕಲೇಸ 20 ಗ್ರಾಂ 3)ಬಂಗಾರದ ಕಿವಿಯ ಜುಮಕಿ ಮತ್ತು ಕಿವಿಯ ಹೂಗಳು 2 ಜೊತೆ 10 ಗ್ರಾಂ 4) 10 ಬಂಗಾರದ ಸಣ್ಣ ಉಂಗುರಗಳು 50 ಗ್ರಾಂ
5) ಕರಿಮಣಿಯ 2 ಬಂಗಾರದ ತಾಳಿವುಳ್ಳ ಮಂಗಳಸೂತ್ರ
5 ಗ್ರಾಂ 6) ಬೆಳ್ಳಿಯ ಪೂಜಾ ಸಾಮಾನುಗಳು ಹೀಗೆ
ಒಟ್ಟು 125 ಗ್ರಾಂ ಬಂಗಾರದ ಆಭರಣಗಳು ಅ.ಕಿ 2,50,000/- ರೂ ಕಳ್ಳತನವಾಗಿದ್ದು ಪತ್ತೆ
ಹಚ್ಚಿಕೊಡಬೇಕೆಂದು ಅರ್ಜಿಯ ಸಾರಾಂಶದ ಮೇಲಿಂದ
ಠಾಣೆ ಗುನ್ನೆ ನಂ 78/2015 ಕಲಂ 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ
ಪೊಲೀಸ ಠಾಣೆ : ದಿನಾಂಕ 27-05-2015 ರಂದು 11:00
ಗಂಟೆಗೆ ಶ್ರೀ ಮಾಹಾಲಿಂಗ ತಂದೆ ನಿಂಗಪ್ಪ ಕಾಮನಕರ
ವಯ: 28 ವರ್ಷ ಜಾ: ಹೊಲೆಯ ಉ: ಮೇಕ್ಯಾನಿಕೆ ಕೆಲಸ
ಸಾ: ಹಿತ್ತಲಶೀರೂರ ಹಾ:ವ ಸನಸವಾಡಿ ಪುಣೆ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫೀರ್ಯಾದಿ
ನೀಡಿದ್ದು ಅದರ ಸಾರಾಂಶವೇನೆಂದರೆ ದಿನಾಂಕ
26-05-2015 ರಂದು ಸಾಯಂಕಾಲ 05:00 ಗಂಟೆಗೆ 1) ಬಾಬು
ತಂದೆ ಸಿದ್ದಪ್ಪ ಮಾಡಿಯಾಳ, 2) ಸತ್ಯಮ್ಮ
ಗಂಡ ಬಾಬು ಮಾಡಿಯಾಳ, 3) ಶಿವಕುಮಾರ ತಂದೆ ಬಾಬು ಮಾಡಿಯಾಳ, 4) ಶಿವಲಿಂಗಪ್ಪ ತಂದೆ ಬಾಬು ಮಾಡಿಯಾಳ, ಎಲ್ಲರೂ
ಸೇರಿ ನಮ್ಮ ಮನೆಯ ಮುಂದಿನ ಖುಲ್ಲಾ ಜಾಗದಲ್ಲಿ ನಮ್ಮೋಡನೆ ಜಗಳ ತಗೆದು ನನಗೆ ಬಾಬು ಇತನು ಕೈಯಿಂದ
ಬೆನ್ನ ಮೇಲೆ ಸತ್ಯಮ್ಮ ಇವಳು ನನ್ನ ಮುತ್ಯಾನಾದ ದೇವಿಂದ್ರ ತಂದೆ ಕಲ್ಲಪ್ಪ ಕಾಮನಕರ ಇವರಿಗೆ
ಕಲ್ಲಿನಿಂದ ಬಲಗಾಲಿನ ಹೆಬ್ಬಟ್ಟಿಗೆ ಹೊಡೆದಿರುತ್ತಾಳೆ, ಶಿವಕುಮಾರನು
ಬಾಬಾಸಾಬನಿಗೆ ಎದೆಯ ಮೇಲಿನ ಅಂಗಿ ಹಿಡೆದು ಜಗ್ಗಾಡಿ ಕೈಯಿಂದ ಬೆನ್ನ ಮೇಲೆ ಹೊಡೆ ಬಡೆ ಮಾಡಿ
ನಿಮ್ಮ ಅವ್ವನ ತುಲ್ಲ ನಿಮಗ ಜೀವ ಸಹಿತ ಬಿಡಂಗಿಲ್ಲ ಅಂತಾ ಬೈದಿರುತ್ತಾನೆ ನನ್ನ ತಂದೆಯಾದ
ನಿಂಗಪ್ಪ ಇವರಿಗೆ ಶಿವಲಿಂಗಪ್ಪನು ಕೈಯಿಂದ ಜಗ್ಗಾಡ ಬೆನ್ನ ಮೇಲೆ ಹೊಡೆದಿರುತ್ತಾನೆ ಮತ್ತು
ಕಲ್ಲಿನ ಡಿಗ್ಗಿಯಲ್ಲಿ ನುಗಿಸಿರುತ್ತಾನೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ
ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 73/2015 ಕಲಂ 341, 323, 324, 504,
506, ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment