Police Bhavan Kalaburagi

Police Bhavan Kalaburagi

Saturday, May 30, 2015

Kalaburagi District Reported Crimes

ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಚಂದ್ರಕಾಂತ ರಾಠೋಡ ಸಾ|| ಮಾದಾಬಾಳ ತಾಂಡಾ ರವಎ ಮಗಳಾದ ಕುಮಾರಿ ಇವಳು ದಿನಾಂಕ 29-05-2015 ರಂದು 6;30 ಪಿ.ಎಂ ಸುಮಾರಿಗೆ ನನ್ನ ಮಗಳು ಬೈಹಿರದೆಸೆಗೆ ಹೋಗಿದ್ದು  ಸ್ವಲ್ಪಹೊತ್ತಾದ ನಂತರ ನನ್ನ ಮಗಳು ಗಾಬರಿಗೊಂಡು ಓಡುತ್ತಾ ಬಂದು ಹೇಳಿದ್ದೇನೆಂದರೆ, ನಾನು ಮತ್ತು ತಂಗಿ ಕೂಡಿ ಬೈಹಿರದೆಸೆಗೆ ಶಿವಪ್ಪಾ ಕರಜಗಿ ರವರ ಹೊಲದ ಅರಣಿಯ ಮೇಲಿಂದ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಬ್ಬನು ಮೋಟರ ಸೈಕಲ ತೆಗೆದುಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ನಿಮ್ಮ ತಾಂಡಾದಲ್ಲಿ ಮೋತಿರಾಮ ಎಂಬುವನು ಯಾರು ಅಂತಾ ಕೇಳಿದನು, ಆಗ ನಾನು ಗಾಬರಿಗೊಂಡು ನಮಗೆ ಗೊತ್ತಿಲ್ಲಾ ಅಂತಾ ಹೇಳಿ ಮುಂದೆ ಹೊರಟೆನೆ, ತನ್ನ ಬೈಕನ್ನು ಸ್ಥಳದಲ್ಲೆ ನಿಲ್ಲಿಸಿ ನನ್ನ ಹಿಂದೆ ಬಂದು ನನ್ನ ಕೈಹಿಡಿದು ಎಳೆದು ಏ ಲಂಬಾಣಿ ನಿನಗ ಮೋತಿರಾಮ ಯಾರು ಅಂತಾ ಗೊತ್ತಿಲ್ಲಾ ಅಂತಾ ಅಂತಿಯಾ ಅಂದು ನನ್ನ ಕೈಹಿಡಿದು ಎಳೆಯುತ್ತಿದ್ದನು, ಆಗ ನಾನು ಅವನ ಕೈಗೆ ಕಚ್ಚಿ ಅವನಿಂದ ಬಿಡಿಸಿಕೊಂಡು ಓಡುತ್ತಿದ್ದಾಗ ಪುನಃ ಅವನು ನನಗೆ ಹಿಡಿದು ಎಡಗಡೆ ರಟ್ಟೆಯ ಮೇಲೆ ಕಚ್ಚಿದನು, ನಂತರ ನನ್ನ ಮೈ ಮೇಲಿನ ಚುಡಿದಾರನ್ನು ಹಿಂದಿನಿಂದ ಹರಿದು ನೆಲದ ಮೇಲೆ ಕೆಡವಿದನು. ಇವತ್ತು ನಿನಗ ಬಿಡುವುದಿಲ್ಲಾ ಮಾಡೆ ಬಿಡುತ್ತೇನೆ ಅಂತಾ ಅನ್ನುತ್ತಿದ್ದಾಗ ನಾನು ಅವನಿಂದ ತಪ್ಪಿಸಿಕೊಂಡು ಓಡಿ ಬಂದಿರುತ್ತೇನೆ. ಅಂತಾ ಹೇಳಿದಳು. ನಂತರ ಅವನ ಹೆಸರು ಕೇಳಲಾಗಿ ಅಫಜಲಪೂರದ ಬಸವರಾಜ ತಂದೆ ಗುರಪ್ಪಾ ಅಳ್ಳಗಿ ಎಂಬುವನು ಇರುತ್ತಾನೆ ಅಂತಾ ತಿಳಿಸಿದಳು. ಸದರಿ ನನ್ನ ಮಗಳು ಅಪ್ರಾಪ್ತ ವಯಸ್ಸಿನವಳಿದ್ದು, ಇವಳು ಬಹಿರದೇಸೆಗೆ ಹೋದಾಗ  ಮೇಲ್ಕಂಡ ಬಸವರಾಜ ಅಳ್ಳಗಿ ಎಂಬುವನು ತಡೆದು ನಿಲ್ಲಿಸಿ, ಜಾತಿ ನಿಂದನೆ ಮಾಡಿ, ದೈಹಿಕ ಹಲ್ಲೆ ಮಾಡಿ, ಅತ್ಯಾಚಾರ ಎಸಗಲು ಪ್ರಯತ್ನ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ವ್ಯಕ್ತಿ ಸಾವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 29.05.2015 ರಂದು ಮಧ್ಯಾನ್ಹ ಮಾರಡಗಿ ಎಸ್.ಎ ಗ್ರಾಮದ ಶ್ರೀ. ಯಲ್ಲಮ್ಮ ದೇವಿ ಗುಡಿಯ ಪಕ್ಕದ ಬೇವಿನ ಗಿಡದ ಕೆಳಗೆ ಶ್ರೀ ಶರಣಪ್ಪ ತಂದೆ ಸಂಗಪ್ಪ ಕಂಚಲಕಾಯಿ ಸಾ|| ವರ್ಚನಳ್ಳಿ ಮತ್ತು ನಿಂಗಪ್ಪತಂದೆ ಭೀಮಪ್ಪ ಶೆಟ್ಟಿಗೇರ ಹಾಗು ಇತರ ಜನರು ಊಟಕ್ಕೆ ಕುಳಿತಾಗ ಆ ಸಮಯಕ್ಕೆ ಒಮ್ಮೇಲೆ ಆಕಸ್ಮಿಕವಾಗಿ ಮಳೆ-ಗಾಳಿ ಜೋರಾಗಿ ಬಂದು ಒಮ್ಮೇಲೆ ಸೀಡಿಲು ಬಂದು ಅದರ ಶಾಖ ನನಗೆ ಮತ್ತು ನಿಂಗಪ್ಪ ಶೆಟ್ಟಿಗೇರ ಹಾಗು ಇತರರಿಗೆ ತಗಲಿದ್ದು ಅದರಲ್ಲಿ ನಿಂಗಪ್ಪನಿಗೆ ತಲೆಗೆ ಎದೆಗೆ ಶಾಖ ತಗಲಿ ಅವನಿಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದಾಗ ಸಾಯಂಕಾಲ ಪರತಬಾದ್ ಸಮೀಪ ಸಿಡಿಲಿನ ಶಾಖದಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಜೇವರಗಿ ಠಾಣೆ : ದಿನಾಂಕ 29-05-2015 ರಂದು ಮದ್ಯಾನ್ಹ ಜೇವರ್ಗಿ ಪಟ್ಟಣದ .ಪಿ.ಎಮ್.ಸಿ  ಯಾರ್ಡ ಹತ್ತಿರ ಸಾರ್ವಜನಿಕ ರಸ್ತೆಯ ಬಾತ್ಮಿದಾರನಿಂದ ಫೋನ ಮೂಲಕ ಬಾತ್ಮೀ ಬಂದಿದ್ದೆನೆಂದರೆ ಒಬ್ಬ ಮನುಷ್ಯನು  ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಪ್ರಿಯದರ್ಶನಿ ಉಡಪಿ ಹೋಟಲ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆ ಮೇಲೆ ಒಬ್ಬನು 1 ರೂಪಾಯಿಗೆ 80- ರೂಪಾಯಿ ಕೊಡುತ್ತನೆ ಅಂತ ಹೇಳಿ, ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು, ದಾಳಿ ಮಾಡಿ ಅವನಿಗೆ ಹಿಡಿದುಕೊಂಡು ಹೆಸರು ವಿಳಾಸ ಕೇಳಿ ವಿಚಾರಿಸಲಾಗಿ ಅವನು ತನ್ನ ಹೆಸರು ಚೆನ್ನಬಸ್ಸು ತಂದೆ ಶರಣಪ್ಪ ಕಂಟಿ ಸಾ: ಜನಿವಾರ ಹಾವ: ಲಕ್ಷ್ಮೀ ಚೌಕ ಜೇವರ್ಗಿ ಅಂತಾ ತಿಳಿಸಿದನು,ಅವನಿಂದ ಮಟಕಾ ಜೂಜಾಟಕ್ಕೆ ಬಳಸಿದ  ನಗದು ಹಣ 500/-ರೂ. ಮತ್ತು ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ಔಶಪಡಿಸಿಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

No comments: