ನಿಂಬರ್ಗಾ ಪೊಲೀಸ ಠಾಣೆ : ಇಂದು ದಿನಾಂಕ 24/05/2015
ರಂದು 1100 ಗಂಟೆಗೆ ಶ್ರೀಮತಿ ಶಾಂಭವಿ ಗಂಡ ರೇವಣಸಿದ್ದ ಸಿಂಘೆ ವ|| 70 ವರ್ಷ, ಜಾ|| ಹೊಲೆಯ, ಉ|| ಹೊಲ ಮನೆಕಲಸ, ಸಾ|| ಧುತ್ತರಗಾಂವ ಇವರು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ – ತನ್ನ ಬಾಜು ಹೊಲದವನಾದ ರಾಜಕುಮಾರ ತಂದೆ ಶಂಕರ ರಂಜೇರಿ ಇತನೊಂದಿಗೆ ಸುಮಾರು 2
ವರ್ಷಗಳಿಂದಲೂ
ಹೊಲದ ಬಂದಾರಿ ಸಂಭಂಧ ತಕರಾರು ನಡೆದಿದ್ದು ದಿನಾಂಕ
23/05/2015 ರಂದು
ಬೆಳಿಗ್ಗೆ 0800 ಗಂಟೆಗೆ ಸದರಿಯವನು ತನ್ನ ಹೊಲಕ್ಕೆ ನುಗ್ಗಿ
ಗಳೆ ಹೂಡಿದ್ದು ಯಾಕೆ ಅಂತ ಕೇಳಿದ್ದಕ್ಕೆ
ಆಪಾದಿತನು ಫಿರ್ಯಾದಿಗೆ ಬಾರಕೋಲ ಗುಣಿಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾನೆ
ಅಲ್ಲದೆ ಓಡಿ ಹೋಗುವಾಗ ಮಂಗಳ ಸೂತ್ರ ಹಿಡಿದು ಜಗ್ಗಿದ್ದರಿಂದ
ಮಂಗಳ ಸೂತ್ರ ಹರಿದಿರುತ್ತದೆ. ಕಾರಣ ದೌರ್ಜನ್ಯ ಎಸಗಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ
ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 70/2015 ಕಲಂ 447, 324, 354, 504
ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಕಾಯ್ದೆ 1989 ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಮಲಾಪೂರ ಪೊಲೀಸ ಠಾಣೆ : ದಿನಾಂಕ:23-05-2015 ರಂದು 17-45
ಗಂಟೆಗೆ ಕಲಬುರಗಿ ನಿಸ್ತಂತು ಕೋಣೆಯಿಂದ ಆರ.ಟಿ.ಎ ಎಮ.ಎಲ.ಸಿ ವಸೂಲಾಗಿದ್ದು. ಸದರ ಎಮ.ಎಲ.ಸಿ
ವಿಚಾರಣೆ ಕುರಿತು ಇಂದೇ 22-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ
ಉಪಚಾರದಲ್ಲಿದ್ದ ಗಾಯಾಳು ಸುನೀಲ ತಂದೆ ದೇವೀಂದ್ರಪ್ಪ ಬೇಳಕೋಟಿ ವ:23ವರ್ಷ ಜಾ:ಕುರುಬರ
ಉ:ಒಕ್ಕಲುತನ ಸಾ:ದಸ್ತಾಪೂರ ಗ್ರಾಮ ತಾ:ಜಿ:ಕಲಬುರಗಿ ಮೋ.ನಂ-8105732441 ಇವರ ಹೇಳಿಕೆ
ಫಿರ್ಯಾಧನ್ನು ಪಡೆದುಕೊಂಡಿದ್ದು. ಅದರ ಸಾರಾಂಶವೇನಂದರೆ. ದಿನಾಂಕ:23-05-2015 ರಂದು ಮದ್ಯಾಹ್ನ
12-30 ಗಟೆ ಸೂಮಾರಿಗೆ ನನ್ನ ಸ್ನೇಹಿತರಾದ ರಾಜು ದಂಡಿನ ಮತ್ತು ಜೈಭೀಮ ಖೇಡ ಇವರು ಕೂಡಿಕೊಂಡು
ರಾಜುನ ಮೋಟರ ಸೈಕಲ ಮೇಲೆ ಕುಳಿತುಕೊಂಡು ನಮ್ಮ ಮನೆಗೆ ಬಂದು ಕಮಲಾಪೂರದಲ್ಲಿ ನಮ್ಮ ಸ್ನೇಹಿತನನ್ನು
ಭೇಟಿಯಾಗಿ ಬರೋಣಾ ನಡೆ ಅಂತಾ ನನ್ನನ್ನು ತನ್ನ ಮೋಟರ ಸೈಕಲ ಮೇಲೆ ಬರುವಂತೆ ಹೇಳಿದ್ದು. ಆಗ ನಾನು
ಒಂದೇ ಮೋಟರ ಸೈಕಲ ಮೇಲೆ ಮೂರು ಜನರು ಹೋಗುವುದು
ಬೇಡಾ ಅಂತಾ ಹೇಳಿದರು ಕೇಳದೆ ಒತ್ತಾಯ ಮಾಡಿ ರಾಜು ಈತನು ತನ್ನ ಮೋಟರ ಸೈಕಲ ಮೇಲೆ ನನಗೆ ಮತ್ತು
ಜೈಭೀಮನಿಗೆ ಕೂಡಿಸಿಕೊಂಡು ದಸ್ತಾಪೂರನಿಂದ ಹೋರಟು ಕಮಲಾಪೂರಕ್ಕೆ ತಲುಪಿ ನಮ್ಮ ಸ್ನೇಹಿತನ್ನು
ಬೇಟಿ ಮಾಡಿ ನಂತರ ಮರಳಿ ನಮ್ಮ ಗ್ರಾಮಕ್ಕೆ ಬರುವ ಕುರಿತು ರಾಜು ದಂಡಿನ ಈತನು ಚಲಾಯಿಸುತಿದ್ದ
ಮೋಟರ ಸೈಕಲ ಮೇಲೆ ಕುಳಿತು ಕಮಲಾಪೂರದಿಂದ ಕಲಬುರಗಿ ಹುಮನಾಬಾದ ಎನ.ಹೆಚ-218 ರಸ್ತೆಯ ಮಾರ್ಗವಾಗಿ
ದಸ್ತಾಪೂರ ಕಡೆಗೆ ಬರುತಿದ್ದಾಗ ರಾಜು ದಂಡಿನ ಈತನು ತಾನು ಓಡಿಸುತಿದ್ದ ಮೋಟರ ಸೈಕಲನ್ನು ಅತಿವೇಗ
ಮತ್ತು ಅಲಕ್ಷತನದಿಂದ ಚಲಾಯಿಸುತಿದ್ದಾಗ ಹಿಂದೆ
ಕುಳಿತಿದ್ದ ನಾವಿಬ್ಬರು ರಾಜನಿಗೆ ಮೋಟರ ಸೈಕಲನ್ನು ನಿಧಾನವಾಗಿ ಚಲಾಯಿಸು ಅಂತಾ ಎಷ್ಟು ಹೇಳಿದರು
ಕೆಳದೆ ಹಾಗೆ ಅತಿವೇಗ ಮತ್ತು ಅಲಕ್ಷತನದಿಂದ ಮೋಟರ ಸೈಕಲನ್ನು ಚಲಾಯಿಸುತ್ತಾ ಬಂದು ನಾವದಗಿ
ಸೇತುವೆ ಹತ್ತೀರ ತಿರುವುನಲ್ಲಿ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಮೋಟರ ಸೈಕಲನ್ನು
ಸ್ಕೀಡ್ಡ ಮಾಡಿ ಅಪಘಾತ ಪಡಿಸಿದನು. ಅಷ್ಟ್ರಲ್ಲಿ ಹಿಂದುಗಡೆ ಕ್ರೂಜರ ಜೀಪನಲ್ಲಿ ಬರುತಿದ್ದ
ನಮ್ಮೂರ ದಶರಥ ತಂದೆ ಗುಂಡಪ್ಪ ದಂಡಿನ ಇವರು ಬಂದು ರಸ್ತೆಯ ಮೇಲೆ ಬಿದ್ದಿದ್ದ ನಮಗೆ ಎಬ್ಬಿಸಿ
ನೋಡಲಾಗಿ ನನ್ನ ಬಲಗಣ್ಣಿನ ಹತ್ತೀರ ರಕ್ತಗಾಯವಾಗಿದ್ದು ಎರಡು ಕೈಕಾಲುಗಳಿಗೆ ತರಚಿದಗಾಯ ಮತ್ತು
ಟೊಂಕಕ್ಕೆ ಗುಪ್ತಗಾಯವಾಗಿದ್ದು. ಜೈಭೀಮನಿಗೆ ನೋಡಲಾಗಿ ಆತನ ಬಲಗಣ್ಣಿನ ಹತ್ತೀರ ಗದ್ದಕ್ಕೆ ಬಲಗಾಲ
ಪಾದದಕ್ಕೆ ರಕ್ತಗಾಯವಾಗಿ ತಲೆಗೆ ಗುಪ್ತಗಾಯವಾಗಿದ್ದು ಬೇಹುಸ್ಸಾಗಿದ್ದನು. ರಾಜುನಿಗೆ
ನೋಡಲಾಗಿ ಆತನ ಹಣೆಗೆ ಎರಡು ಕೈ ಕಾಲುಯಗಳಿಗೆ
ರಕ್ತಗಾಯವಾಗಿದ್ದು. ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿದ್ದು. ಆಗ ದಶರಥ ದಂಡಿನ ಇವರು 108 ಅಂಬುಲೆನ್ಸಗೆ ಕರೆಮಾಡಿ ಕರೆಯಿಸಿ
ನಮಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಈ ಅಪಘಾತವು
ಇಂದು ಮದ್ಯಾಹ್ನ 02-00 ಗಂಟೆಯ ಸೂಮಾರಿಗೆ ಜರುಗಿರುತ್ತದೆ ಮತ್ತು ಅಪಘಾಗೊಂಡ ಮೋಟ್ರ ಸೈಕಲನಂ
ಕೆಎ-32 ಇಇ-6461 ನೇದ್ದು ಇರುತ್ತದೆ.ಕಾರಣ ಈಅಪಘಾತ ಪಡಿಸಿದ ಮೋಟರ ಸೈಕಲನಂ- ಕೆಎ-32 ಇಇ-6461
ನೇದ್ದರ ರಾಜು ತಂದೆ ದಶರಥ ದಂಡಿನ ಸಾ:ದಸ್ತಾಪೂರ
ಈತನ ಮೇಲೆ ಸೂಕ್ತ ಕಾನೂನ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆಫಿರ್ಯಾಧನ್ನು ಪಡೆದುಕೊಂಡು
ಇಂದು ದಿನಾಂಕ:24-05-2015 ರಂದು ಮುಂಜಾನೆ 00-30 ಗಂಟೆಗೆ ಠಾಣೆಗೆ ಬಂದು ಫಿರ್ಯಾಧಿದಾರರು
ನೀಡಿದ ಹೇಳಿಕೆ ಫಿರ್ಯಾಧನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆನಂ-51/2015ಕಲಂ.279,337,338 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ. ಇಂದು ದಿನಾಂಕ 24-05-2015 ರಂದು
ಬೆಳಗ್ಗೆ 10-30 ಎ.ಎಮ್. ಕ್ಕೆ ಶ್ರೀ ವಿಠಲ ತಂದೆ
ಗುಂಡಪ್ಪಾಮೇಲಕೇರಿ ಸಾ; ಖೇರ್ಡಾ(ಕೆ) ಇವರು ಠಾಣೆಗೆ ಹಾಜರಾಗಿ ಸದರಿ ಪ್ರಕರಣಕ್ಕೆ ಸಂಭಂದಿಸಿದಂತೆ ಹೇಳಿಕೆ ನೀಡಿದ ಸಾರಾಂಶವೆನೆಂದರೆ
ರಸ್ತೆ ಅಪಘಾತದಲ್ಲಿ ದು:ಖಾಪತಗೊಂಡಿದ್ದ ನನ್ನ ಅಣ್ಣನ ಮಗನಾದ ಜೈ ಭೀಮ ತಂದೆ ಅಣ್ಣಪ್ಪಾ ಇತನನ್ನು
ನೋಡುವ ಸಂಭಂದ ಕಲಬುರಗಿಯ ಯುನಿಟೇಡ್ ಆಸ್ಪತ್ರೆಗೆ ಬಂದು ನೋಡಲು ನನ್ನಅಣ್ಣನ ಮಗ ಆಸ್ಪತ್ರೆಯಲ್ಲಿ
ಉಪಚಾರ ಪಡೆಯುತ್ತಿದ್ದು , ಸದರಿಯವನು ಬೇವಸಯಾಗಿದ್ದು, ಸದರಿಯವನಿಗೆ ವೈಧ್ಯರು ಉಪಚಾರ ನೀಡುತ್ತಿದ್ದು ಈ ಬಗ್ಗೆ ನನ್ನ
ಹೆಂಡಿತಿಯಾದ ಲಕ್ಷ್ಮಿಬಾಯಿಗೆ ವಿಚಾರಿಸಲು
ತಿಳಿಸಿದೆನೆಂದರೆ ನಿನ್ನ ದಿನಾಂಕ 23-05-2015
ರಂದು ಮಧ್ಯಹ್ನಾ 2-00 ಗಂಟೆಗೆ ಸುಮಾರಿಗೆತಮ್ಮ ಗ್ರಾಮದ ರಾಜು ಈತನು
ಮೋಟಾರ ಸೈಕಲ್ ನಂ ಕೆಎ-32-ಇಇ-6461 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ
ನಾವದಗಿ ಬ್ರಡ್ಜ್ ನಲ್ಲಿ ಸ್ಕೀಡ ಮಾಡಿ ಅಪಘಾತ ಪಡಿಸಿದು ಸದರಿ ಮೋಟಾರ ಸೈಕಲ್ ಮೇಲೆ ಕುಳಿತ ಜೈ
ಭೀಮ ಮತ್ತು ಅದೆ ಗ್ರಾಮದ ಸುನೀಲ ರಕ್ತಗಾಯ ಮತ್ತುಗುಪ್ತಗಾಯವಾಗಿದ್ದು, ಸದರಿಯವರಿಗೆ ಉಪಚಾರ
ಕುರಿತು ಆಸ್ಪತ್ತ್ರೆಗೆ ಸೇರಿಕೆ ಮಾಡಿದ್ದು, ಈ ಬಗ್ಗೆ ಸುನೀಲ ಈತನು ಮೋಟಾರ ಸೈಕಲ್ ಚಾಲಕ ರಾಜುನ ವಿರುದ್ಧ
ಕಮಲಾಪೂರ ಪೊಲೀಸ ಠಾಣೆಗೆಠಾಣಾಧಿಕಾರಿಗಳಿಗೆ ದೂರು ಸಲ್ಲಿಸಿರುತ್ತಾನೆ ಅಂತ ತಿಳಿಸಿದ್ದು
ಇರುತ್ತದೆ. ಇಂದು ದಿನಾಂಕ 24-05-2015
ರಂದು ಬೆಳಗ್ಗೆ 08-00 ಗಂಟೆಗೆ
ಜೈ ಭೀಮ ಈತನು ಯುನಿಟೇಡ್ ಆಸ್ಪತ್ರೆಗೆ ಉಪಚಾರದಿಂದ ಗುಣಮುಖ ಹೊಂದದೆ ಮೃತಪಟ್ಟಿದ್ದು
ಇರುತ್ತದೆ. ಸದರಿ ಜೈ ಭೀಮ ಈತನ ಶವವನ್ನು ಸರ್ಕಾರಿ ಆಸ್ಪತ್ರಗೆ ತೆಗೆದುಕೊಂಡು
ಹೋಗಲು ನನ್ನ ಸಂಭಂದಿಕರಿಗೆ ತಿಳಿಸಿ ನಾನು
ಕಮಲಾಪೂರ ಪೊಲೀಸ ಠಾಣೆಗೆ ಹಾಜರಾಗಿ ಜೈ ಭೀಮ ಈತನು
ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಗೈರೆ ಹೇಳಿಕೆ
ನೀಡಿದರ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 51/2015 ಕಲಂ,
279.337.338 ಐಪಿಸಿ ನೇದ್ದರಲ್ಲಿ ಕಲಂ.304(ಎ) ಐಪಿಸಿ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment