ಅಪಘಾತ ಪ್ರಕರಣ
ಜೇವರ್ಗಿ ಪೊಲೀಸ ಠಾಣೆ: 08.05.2015 ರಂದು ಶ್ರೀ ಭಾಗಯ್ಯ ತಂದೆ ಜಾನಯ್ಯ
ಗುತ್ತೆದಾರ ಸಾ:
ಕಟ್ಟಿ ಸಂಗಾವಿ ರವರು ಠಾಣೆಗೆ ಹಾಜರಾಗಿ ಇಂದು
ದಿನಾಂಕ 08.05.2015 ಸಾಯಂಕಾಲ ತಾನು ಮತ್ತು ನನ್ನ ಗೆಳೆಯ ಸಿದ್ದಪ್ಪ @ ಸಿದ್ದು ತಂದೆ ಈರಪ್ಪ ಕುಂಬಾರ ಸಾ:ಕಟ್ಟಿ ಸಂಗಾವಿ ಇಬ್ಬರೊ
ಟಂಟಂ ವಾಹನ ನಂ ಕೆ.ಎ32ಸಿ1867 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಕಟ್ಟಿ
ಸಂಗಾವಿ ಬ್ರಿಡ್ಜ ಹತ್ತಿರ ಟಂಟಂ ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನಿಂದೆ ಟಂಟಂ ಅನ್ನು ಚಲಾಯಿಸುತ್ತಾ ಒಮ್ಮೆಲೆ
ಬ್ರೇಕ್ ಹಾಕಿ ಟಂಟಂ ಅನ್ನು ರೋಡಿನ ಬಲಸೈಡಿಗೆ ಪಲ್ಟಿ ಮಾಡಿದ್ದರಿಂದ ಸಿದ್ದಪ್ಪನಿಗೆ ಭಾರಿ ರಕ್ತ ಗಾಯವಾಗಿ
ಸಿದ್ದಪ್ಪನು ಸ್ಥಳದಲ್ಲಿಯೆ ಮೃತಪಟ್ಟಿದ್ದು ನನಗೊ ಸಹ ಸಣ್ಣ-ಪುಟ್ಟ ಗಾಯಗಳಾಗಿದ್ದು ಟಂಟಂ ಚಾಲಕನು ಟಂಟಂ ಅನ್ನು ಸ್ಥಳದಲ್ಲಿಯೆ ಬಿಟ್ಟು
ಓಡಿ ಹೋಗಿದ್ದು ಸದರಿ ಟಂಟಂ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಫಜಲಪೂರ ಠಾಣೆ:- ಶ್ರೀ ಬಾನು ಸಾ: ಕೋಡಿಗನೂರ ಇರವರು ದಿ: 04-05-2015 ರಂದು ಮಣೂರ ಗ್ರಾಮದ ಯಲ್ಲಮ್ಮಾ ದೇವಿ ಜಾತ್ರೆಗೆ ಕುದರಿಯ ಮೇಲೆ ಬಂದಿದ್ದು. ಜಾತ್ರೆ
ಮುಗಿಸಿಕೊಂಡು ಮರಳಿ ಕೋಡಿಗನೂರ ಗ್ರಾಮಕ್ಕೆ ಕುದರಿಯ ಮೇಲೆ ಹೋಗುತ್ತಿರುವಾಗ ರಾತ್ರಿ 8;30
ಗಂಟೆ
ಸುಮಾರಿಗೆ ಮಣೂರ ಕೂಡಿಗನೂರ ರಸ್ತೆಯಲ್ಲಿರುವ ಐಯಮ್ಮಾ ದೇವಿ ಗುಡಿಯ ಸಮೀಪ ಎದುರುಗಡೆಯಿಂದ
ಬರುತ್ತಿದ್ದ ಟ್ರ್ಯಾಕ್ಟರ್ ನಂ ಕೆ.ಎ-32/ಟಿ-6447 ಚಾಲಕನು ಅತೀವೆಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಎದುರುಗಡೆಯಿಂದ ಅಪಘಾತ ಪಡಿಸಿದ್ದು
ನನ್ನ ಬಲಗಾಲ ಮೊಳಕಾಳ ಕೆಳಗಿನ ಭಾಗದ ಮೇಲೆ ಆಗಿ ಭಾರಿ ರಕ್ತಗಾಯಪಡಿಸಿದ್ದು. ಟ್ರ್ಯಾಕ್ಟರ್ ಚಾಲಕನು ಅಪಘತಪಡಿಸಿ ಟ್ರ್ಯಾಕ್ಟರ್ ನಿಲ್ಲಿಸದೆ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂಧ ಟ್ರ್ಯಾಕ್ಟರ್ ಚಾಲಕನ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ದಿನಾಂಕ:08-05-2015 ರಂದು
ಶ್ರೀ ದೇವರಾಜ ತಂದೆ ಕಾಳಿದಾಸ ದುರ್ವೆ ಸಾ;
ಜೀವಣಗಿ ಇವರು ಠಾಣೆಗೆ ಹಾಜರಾಗಿ ನಾನು ದೆಹಲಿಯಲ್ಲಿ ವಾಸವಾಗಿದ್ದು ಅಲ್ಲಿಯೇ ಜ್ಯೋತಿಷ್ಯ
ಹೇಳಿಕೊಂಡು ಉಪ-ಜೀವಿಸುತ್ತೆನೆ ಜೀವಣಗಿ ಗ್ರಾಮದಲ್ಲಿ ನನ್ನ ಸ್ವಂತ ಮನೆಯಿದ್ದು, ನಾನು
ಆಗಾಗ ನನ್ನ ಪರಿವಾರದೊಂದಿಗೆ ನನ್ನ ಮನೆಗೆ ಬಂದು ಹೋಗುತ್ತಿರುತ್ತೇನೆ. ದಿನಾಂಕ:29-04-2015
ರಂದು ಜೀವಣಗಿ ಗ್ರಾಮ ಹಾಗೂ ಚಿತ್ತಾಪೂರ ಪಟ್ಟಣದಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಗಳು
ಇದ್ದ ಪ್ರಯುಕ್ತ ನಾನು ದಿಲ್ಲಿಯಿಂದ ಜೀವಣಗಿ ಗ್ರಾಮಕ್ಕೆ ಬಂದಿರುತ್ತೇನೆ,
ನಾನು ಜೀವಣಗಿ ಗ್ರಾಮಕ್ಕೆ ಬರುವಾಗ ನನ್ನ ಮನೆ ದುರಸ್ಥಿ ಮಾಡುವ ಸಲುವಾಗಿ ಹಾಗೂ ಇತರೆ
ಕೆಲಸಕ್ಕೆಂದು 1,50,000/- ನಗದು ಹಣ ಬಂಗಾರ ಹಾಗೂ ಇತರೆ
ದಾಖಲಾತಿ ಹಾಗೂ ಸಾಮಾನುಗಳನ್ನು ತೆಗೆದುಕೊಂಡು ಬಂದಿದ್ದು. ದಿ: 29-04-2015 ರಂದು ರಾತ್ರಿ 09-00
ಗಂಟೆಯ ಸುಮಾರಿಗೆ ಹಣ ಮೋಬಾಯಿಲಗಳು ಮತ್ತು ಇತರೆ ಸಾಮಾನುಗಳನ್ನು ಕೆಂಪು ಬಣ್ಣದ ವಿ.ಐ.ಪಿ
ಸುಟಕೇಸನಲ್ಲಿ ಇಟ್ಟು ಸೂಟಕೇಸಗೆ ಮತ್ತು ಮನೆಗೆ ಕೀಲಿ ಹಾಕಿಕೊಂಡು ಊರಲ್ಲಿ ತಿರುಗಾಡಿ ರಾತ್ರಿ
10-00 ಗಂಟೆಯ ಸೂಮಾರಿಗೆ ವಾಪಸ್ಸ ಮನೆಗೆ ಬಂದಾಗ ಮನೆಯ ಕೀಲಿಯನ್ನು ಯಾರೋ ರಾಡನಿಂದ ಮುರಿದು ಹಣ
ಮೋಬಾಯಿಲ ಮತ್ತು ಇನ್ನಿತರೆ ದಾಖಲಾತಿಗಳು ಇಟ್ಟಿದ್ದ ಸೂಕೇಸ ಕಿಲಿ ಮುರಿದು ಸೂಟಕೇಸನಲ್ಲಿದ್ದ 1)
ಹೆಚ.ಟಿ.ಸಿ ಕಂಪನಿಯ ಮೋಬಾಯಿಲ 2) ನೋಕಿಯಾ ಕಂಪನಿಯ ಮೋಬಾಯಿಲ 3) 4 ತೋಲೆಯ ಬಂಗಾರದ ಸಣ್ಣ
ಲಾಕಿಟಗಳು 4) ಐಡೆಂಟಿಟಿ ಕಾರ್ಡ 5) ಪ್ಯಾನ ಕಾರ್ಡ 6) ಡ್ರೈವಿಂಗ ಲೈಸೆನ್ಸ 7) ಹೆಲ್ತ ಇನ್ಸೂರೆನ್ಸ ಕಾರ್ಡ 8) ಸಿಂಡಿಕೇಟ ಬ್ಯಾಂಕ
ಎ.ಟಿ.ಎಮ ಕಾರ್ಡ 9) ಡೆಲ್ಲಿ ಮೇಟ್ರೋ ಕಾರ್ಡ 10) ಆಧಾರ ಕಾರ್ಡ ಹಾಗೂ ನಗದು ಹಣ 65-0000 ರೂ
ಹಾಗೂ ಇತರೆ ದಾಖಲಾತಿಗಳು ಸೇರಿ ಒಟ್ಟು 157,300-00
ರೂಪಾಯಿ ಕಿಮ್ಮತ್ತಿನ ಹಣ ಮತ್ತು ಬಂಗಾರದ ಸಾಮಾನುಗಳು ಹಾಗೂ ಮೋಬಾಯಿಲಗಳು ಯಾರೋ ಕಳ್ಳರು ದಿನಾಂಕ:29-04-2015
ರಂದು ರಾತ್ರಿ 09-00 ಪಿ.ಎಮನಿಂದ 10-00 ಪಿ.ಎಮದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋದ ಬಗ್ಗೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ್ ಠಾಣೆ :
ಪೊಲೀಸ್ ಪ್ರಕಟಣೆ
ಇಂದು ದಿನಾಂಕ. 08.05.2015 ರಂದು 13.00 ಗಂಟೆಗೆ
ಫಿರ್ಯಾಧಿದಾರರಾದ ಶ್ರೀಮತಿ ಉಷಾ
ಗಂಡ ರವಿತೇಜ ಸಾ|| ಹುಣಸಿಗಟ್ಟ ತಾ|| ಜಿ|| ತುಮಕೂರ ಹಾ||ವ|| ಮಾಮ ಅಪಾರ್ಟಮೆಂಟ ರಾಜಿವ್ ಗಾಂದಿ
ಫಾರ್ಮಸಿ ಕಾಲೇಜ ಹತ್ತಿರ ಹಳೇ ಜೇವರ್ಗಿ ರಸ್ತೆ
ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ; 24/04/2015 ರಂದು ನಾನು ನನಗೆ ಆರಾಮವಿರಲಾರದಕ್ಕೆ
ನನ್ನ ತವರು ಮನೆ ಮತ್ತಿಗಟ್ಟಾ ಗ್ರಾಮಕ್ಕೆ ಹೋಗಿದ್ದು ದಿನಾಂಕ. 25/04/2015 ರಂದು ಮುಂಜಾನೆ ನನ್ನ ಗಂಡ ರವಿತೇಜ ಇವರು ಬೆಳಿಗ್ಗೆ ಫೋನ ಮಾಡಿದ್ದು
ನಂತರ ಅಂದು ಮದ್ಯಾಹ್ನ 3.00 ಗಂಟೆ ನಂತರ ಅವರ ಮೊಬೈಲ ಸ್ವಿಚ್ಚ ಆಫ ಮಾಡಿದ್ದು ನಂತರ ದಿನಾಂಕ.
30/04/2015 ರಂದು ಬೆಳಿಗ್ಗೆ ಗುಲಬರ್ಗಾಕ್ಕೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಹಾಕಿದ್ದು ನಂತರ
ನಾನು ನನ್ನ ಗಂಡ ಕೆಲಸ ಮಾಡುತ್ತಿದ್ದ ಮೊಹನ ಲಾಡ್ಜ ಮತ್ತು ಹೊಟೇಲಕ್ಕೆ ಬಂದು ವಿಚಾರಿಸಲು ಚಾವಿಯು
ಹೊಟೇಲನಲ್ಲಿ ಬಿಟ್ಟು ಹೋಗಿದ್ದು ಚಾವಿ ತಗೆದುಕೊಂಡು ಹೋಗಿ ಮನೆ ತೆರೆದು ನೋಡಲು ಸಾಮಾನುಗಳೆಲ್ಲಾ
ಇದ್ದು ತಮ್ಮ ಬಟ್ಟೆಗಳು ತಗೆದುಕೊಂಡು ಹೋಗಿದ್ದು ನಾವು ಅಂದಿನಿಂದ ಅಲ್ಲಲ್ಲಿ ಹುಡುಕಾಡಿ
ವಿಚಾರಿಸಲು ಸಿಕ್ಕಿರುವುದಿಲ್ಲಾ
ಕಾಣೆಯಾಗಿರತ್ತಾನೆ. ಅವರು ಅಂದು ಮೈಮೇಲೆ ಇದ್ದ ಬಟ್ಟೆಗಳು ನನಗೆ ಗೊತ್ತಿರುವುದಿಲ್ಲ. ಎತ್ತರ ಅಂದಾಜು 6’
ಎತ್ತರ ಇದ್ದು,
ಕಪ್ಪು ಬಣ್ಣಯಿದ್ದು, ದೃಢವಾದ ಮೈಕಟ್ಟು ಇರುತ್ತದೆ,
ತಲೆಯ ಮೇಲೆ ಕಪ್ಪು
ಬಣ್ಣದ ಕೂದಲು. ಕನ್ನಡ,
ಹಿಂದಿ, ಮರಾಠಿ ಭಾಷೆಯಲ್ಲಿ
ಮಾತನಾಡುತ್ತಾನೆ. ಹಣೆಯ ಮೇಲೆ ಉಬ್ಬು ಇರುತ್ತದೆ. ಕಾರಣ ಮಾನ್ಯರು ನನ್ನ
ಗಂಡನನ್ನು ಪತ್ತೆ ಹಚ್ಚಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
No comments:
Post a Comment