ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ 70/2015 ಕಲಂ 279 337, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ :
ದಿನಾಂಕ: 27-06-2015 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಪಿರ್ಯಾದಾರರ ಮಗನಾದ ಮೃತ ಶರಣಪ್ಪ ಸಿಪಾಯಿ ಈತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-37/ಎಸ್-7965 ನೇದ್ದರ ಹಿಂದುಗಡೆ ಗಾಯಾಳು ಇಮಾಮಸಾಬ @ ಸದ್ದಾಂ ತಂದೆ ಖಾದರಸಾಬ ಸಾ: ರೇವಣಕಿ ಈತನಿಗೆ ಕೂಡಿಸಿಕೊಂಡು ಬೇವೂರದಿಂದ ಯಲಬುರ್ಗಾಕ್ಕೆ ಕುಡುಗುಂಟಿ ಸೀಮಾದಲ್ಲಿ ಬರುವ ಸಂಗಪ್ಪ ರೇವಣಕಿ ಇವರ ಹೊಲದ ಹತ್ತಿರ ಕೊರಮ್ಮನ ಹಳ್ಳದ ಸಮೀಪ ಬರುತ್ತಿರುವಾಗ ಅದೇ ಸಮಯಕ್ಕೆ ಅವರ ಎದುಗಡೆಯಿಂದ ಅಂದರೆ, ಯಲಬುರ್ಗಾ ಕಡೆಯಿಂದ ಬೇವೂರ ಕಡೆಗೆ ಯಾವುದೋ ಒಂದು ವಾಹನ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಸದರಿಯವರಿಗೆ ಹಾಗೂ ಅವರ ಮೋಟಾರ್ ಸೈಕಲನ್ನು ಲೇಕ್ಕಿಸದೇ ಜೋರಾಗಿ ಠಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಮೋಟಾರ ಸೈಕಲ ಸವಾರನಾದ ಶರಣಪ್ಪನ ತಲೆಗೆ, ಬಲಗೈಗೆ, ಬಲತೊಡೆಗೆ, ಬಲಗಾಲ ಮೊಣಕಾಲಕೆಳಗೆ, ಭಾರಿಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮೋಟಾರ್ ಸೈಕಲ ಹಿಂದೆ ಕುಳಿತುಕೊಂಡಿದ್ದ ಇಮಾಮಸಾಬನ ಬಲಬುಜಕ್ಕೆ, ತೆರಚಿದ ಗಾಯ, ಬಲಗಾಲ ತೊಡೆಗೆ, ಬಲಗಾಲು ಮೊಣಕಾಲು ಕೆಳಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ವಾಹನ ಚಾಲಕನು ಅಪಘಾತ ಮಾಡಿದ ನಂತರ ವಾಹನ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ 65/2015 ಕಲಂ 279 337, 338 ಐ.ಪಿ.ಸಿ:.
ದಿನಾಂಕ 27-06-2015 ರಂದು ಸಂಜೆ 04-15 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಒಂದು ಎಂ.ಎಲ್.ಸಿ ಬಂದಿದ್ದು ಠಾಣೆಯ ಶ್ರಿ ಮಾನಪ್ಪ ಹೆಚ್.ಸಿ-81 ರವರು ಆಸ್ಪತ್ರೆಗೆ ಹೋಗಿ ಒಂದು ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸು ಸಂಜೆ 06-15 ಗಂಟೆಗೆ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 27-06-2015 ರಂದು ಪಿರ್ಯಾದಿದಾರರಾದ ಶ್ರೀ ವೆಂಕಣ್ಣ ತಂದೆ ದಾಸಪ್ಪ ಶೆಟ್ಟರ, ವಯ : 55 ವರ್ಷ, ಜಾತಿ : ವೈಶ್ಯ, ಉ : ವ್ಯಾಪಾರ, ಸಾ : ಗುಮಗೇರ. ತಾ : ಕುಷ್ಟಗಿ ರವರು ಮನೆಯಲ್ಲಿದ್ದಾಗ ತಮ್ಮ ಸಂಬಂಧಿ ಮಾವನಾಗಬೇಕಾದ ಗೋಪಾಲ ಶೆಟ್ಟಿರವರ ಕಾರ ಪಲ್ಟಿಯಾಗಿ ಕುಷ್ಟಗಿ ಆಸ್ಪತ್ರೆಯಲ್ಲಿ ಇಲಾಜು ಕುರಿತು ದಾಖಲಾಗಿದ್ದು ಅಂತಾ ತಿಳಿದು ಹೋಗಿ ನೋಡಲಾಗಿ ವಿಷಯ ನಿಜವಿದ್ದು, ಪಿರ್ಯಾದಿದಾರರ ಸಂಬಂದಿ ಗೋಪಾಲ ಶೆಟ್ಟಿರವರನ್ನು ವಿಚಾರಿಸಲು ತಾವು ತನ್ನ ಹೆಂಡತಿ ಶಕ್ತಿನಗರದಲ್ಲಿದ್ದು ಆಕೆಯನ್ನು ಕರೆದುಕೊಂಡು ಬರಲು ಧಾರವಾಡದಿಂದ ಶಕ್ತಿನಗರಕ್ಕೆ ತಾನೊಬ್ಬನೆ ತನ್ನ ಪೋರ್ಡ ಟೈಟಾನಿಯಮ್ ಕಾರ ನಂ: ಕೆ.ಎ-30/ಎಂ6300 ನೇದ್ದರಲ್ಲಿ ತಾವರಗೇರಾ ಮುಖಾಂತರ ಹೋಗುತ್ತಿರುವಾಗ ತಾವರಗೇರಾದ ಶೋಭಾ ಪೆಟ್ರೊಲ್ ಬಂಕ್ ಹತ್ತಿರ ತನ್ನ ವಾಹನವನ್ನು ಅತೀವೆಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ಎದುರುಗಡೆಯಿಂದ ಒಂದು ವಾಹನ ಬಂದಿದ್ದು ಸೈಡ್ ತೆಗೆದುಕೊಳ್ಳಲು ಹೋದಾಗ ಕಾರ್ ಕಂಟ್ರೋಲ್ ಆಗದೇ ರಸ್ತೆಯ ಬಲಬದಿಯ ತೆಗ್ಗಿನಲ್ಲಿ ಪಲ್ಟಿಯಾಗಿದ್ದು ಆಗ ಸಮಯ ಮದ್ಯಾಹ್ನ 2-30 ಗಂಟೆಯಾಗಿರಬಹುದು. ನೋಡಲಾಗಿ ತನ್ನ ತಲೆಯ ಎಡಬದಿಗೆ, ಹಿಂದೆ ರಕ್ತಗಾಯ ಹಾಗೂ ಬೆನ್ನಿಗೆ ಒಳಪೆಟ್ಟಾಗಿದ್ದು ತನ್ನ ಕಾರ ಸಹ ಡ್ಯಾಮೇಜ್ ಆಗ ಬಗ್ಗೆ ತಿಳಿಸಿದರು. ನಂತರ ಆತನನ್ನು 108 ವಾಹನದಲ್ಲಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ದಾಖಲು ಮಾಡಿದ್ದು ಕಾರಣ ಸದರಿ ಕಾರ ಚಾಲಕ ಗೋಪಾಲ ಶೆಟ್ಟಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 39/2015 ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 27-06-2015 ರಂದು ರಾತ್ರಿ 8-20 ಗಂಟೆಗೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶ್ರೀ ಈಶ್ವರಪ್ಪ ತಂದೆ ಪರಪ್ಪ ಚಿಕ್ಕೊಪ್ಪ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 26-06-2015 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿದಾರರು ಭಾಗ್ಯನಗರ ರಸ್ತೆಯ ಮೇಲೆ ಸಾಯಿಬಾಬ ದೇವಸ್ಥಾನದ ಸಮೀಪ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಟಕ್ಕರಮಾಡಿ ಅಪಘಾತ ಮಾಡಿದ್ದು ಇದರಿಂದ ಫಿರ್ಯಾದಿದಾರರಿಗೆ ಬಲಕಾಲ ಪಾದದ ಹತ್ತಿರ ಭಾರಿ ಒಳಪೆಟ್ಟು, ಸೊಂಟಕ್ಕೆ ಒಳಪೆಟ್ಟು ಆಗಿದ್ದು, ಮೋಟಾರ್ ಸೈಕಲ್ ಸವಾರನ ಹೆಸರು ವಿಚಾರ ಮಾಡಿದ್ದು, ಅಲ್ಲಿ ಕತ್ತಲು ಇದ್ದ ಕಾರಣ ಮೋಟಾರ್ ಸೈಕಲ್ ನಂಬರ್ ಕಾಣಲಿಲ್ಲ. ನಿನ್ನೆ ನನಗೆ ನೋವು ಕಾಣಿಸದ ಕಾರಣ ಮನೆಗೆ ಹೋಗಿದ್ದು ಇಂದು ಬೆಳಿಗ್ಗೆ ಬಲಗಾಲ ಪಾದದ ಹತ್ತಿರ ಬಹಳಷ್ಟು ಬಾವು ಬಂದು ನಡೆದಾಡಲು ಆಗದ ಕಾರಣ ಶ್ರೀ ಮಹಾದೇವಿ ಎಲುಬು ಕೀಲು ಆಸ್ಪತ್ರೆಯಲ್ಲಿ ಎಕ್ಸರೆ ಮಾಡಿಸಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಕುರಿತು ಇಂದು ತಡವಾಗಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
No comments:
Post a Comment