ಹಲ್ಲೆ ಪ್ರಕರಣಗಳು
ಯಡ್ರಾಮಿ ಠಾಣೆ : ಶ್ರೀ ಮಲ್ಲಣ್ಣಗೌಡ ತಂದೆ ಗುರಪ್ಪಗೌಡ
ಹೊಸಗೌಡ್ರ ಸಾ||
ಕುಳಗೇರಾ ಇವರ ಹೊಲ
ಕುಳಗೆರಾ ಸೀಮಾಂತರದ ಸರ್ವೆ ನಂ 115 ನೆದ್ದರಲ್ಲಿ 21 ಎಕರೆ ಜಮೀನು ಇರುತ್ತದೆ. ನಮ್ಮ ಹೊಲದ ಮೆಲ್ಭಾಗದಲ್ಲಿ
ಶಿವಣ್ಣಗೌಡ ಇವರ ಹೊಲ ಇದ್ದು. ನಮಗೂ ಮತ್ತು ನಮ್ಮ
ಅಣ್ಣ ಶಿವಣ್ಣಗೌಡನಿಗೂ ಹೊಲದಲ್ಲಿಯ ಬಾಂದಿನಲ್ಲಿ ಎತ್ತುಗಳು ತಿರುಗುವ ವಿಷಯದಲ್ಲಿ ಆಗಾಗ ತಂಟೆ ತಕರಾರು
ಆಗುತ್ತಾ ಬಂದಿದ್ದು ದಿನಾಂಕ 09-06-2015 ರಂದು
ಬೆಳಿಗ್ಗೆ ಹೊಲಕ್ಕೆ ಗಳೆ ಹೊಡೆಯಲು ಹೊದಾಗ ಶಿವಣ್ಣಗೌಡ
ತಂದೆ ಗುರಪ್ಪಗೌಡ ಹೊಸಗೌಡ್ರ ಹಾಗು ಇನ್ನೊಬ್ಬ ಕುಡಿ ಅವಚ್ಯವಾಗಿ ಬೈದು ಕೊಲೆ ಮಾಡುವ ಉದ್ದೆಶದಿಂದ
ಅವರಿಬ್ಬರು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು
ಮಾರಣಾಂತಕ ಹಲ್ಲೆ ಮಡಿ ಕೊಲೆ ಮಾಡಲು ಪ್ರಯತ್ನಿ ಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.:
ಯಡ್ರಾಮಿ ಠಾಣೆ : ಶ್ರೀ ಅಶೋಕ ತಂದೆ ಶಿವಣ್ಣಗೌಡ ಹೊಸಗೌಡ್ರ
ಸಾ|| ಕುಳಗೇರಾ ಇವರ ಹೊಲ
ಕುಳಗೆರಾ ಸೀಮಾಂತರದ ಸರ್ವೆ ನಂ 115 ನೆದ್ದರಲ್ಲಿ 21 ಎಕರೆ ಜಮೀನು ಇರುತ್ತದೆ. ನಮ್ಮ ಹೊಲದ ಕೆಳ ಭಾಗದಲ್ಲಿ
ನಮ್ಮ ಕಾಕಾ ಮಲ್ಲಣ್ಣಗೌಡ ತಂದೆ ಗುರಪ್ಪಗೌಡ ಇವರ ಹೊಲವು ಇರುತ್ತದೆ. ನಮಗೂ ಮತ್ತು ನಮ್ಮ ಕಾಕಾ ಮಲ್ಲಣ್ಣಗೌಡನಿಗೂ
ಹೊಲದಲ್ಲಿಯ ಬಾಂದಿನಲ್ಲಿ ಎತ್ತುಗಳು ತಿರುಗುವ ವಿಷಯದಲ್ಲಿ ಆಗಾಗ ತಂಟೆ ತಕರಾರು ಆಗುತ್ತಾ ಬಂದಿದ್ದು ದಿನಾಂಕ 09-06-2015 ರಂದು ಬೆಳಿಗ್ಗೆ ನಾನು ನನ್ನ
ತಂದೆ ಇಬ್ಬರೂ ಗಳೆ ಹೊಡೆಯಲು ಹೊಲಕ್ಕೆ ಹೊದೆವು. ಹೊಲದಲ್ಲಿ ನನ್ನ ಕಾಕಾ ಮಲ್ಲಣ್ಣಗೌಡ ಇತನು ನಿನ್ನೆ
ತನ್ನ ಹೊಲದಲ್ಲಿ ಟ್ರಾಕ್ಟರ್ ಹೊಡೆದು ನಮ್ಮ ಹೊಲದಲ್ಲಿ ಟ್ರಾಕ್ಟರ್ ತಿರುವಿಕೊಂಡು ಹೊಗಿದ್ದು ನೋಡಿ.
ನಾನು ಮತ್ತು ನನ್ನ ತಂದೆ ಶಿವಣ್ಣಗೌಡ ಇಬ್ಬರು ಕೂಡಿಕೊಂಡು ಮಲ್ಲಣ್ಣಗೌಡ ಇತನಿಗೆ ಯಾಕೆ ನಮ್ಮ ಹೊಲದಲ್ಲಿ
ಟ್ರಾಕ್ಟರ್ ತಿರಿವಿಕೊಂಡು ಹೊಗಿದ್ದಿ ಅಂತಾ ಕೆಳಿದ್ದಕ್ಕೆ 1. ಮಲ್ಲಣ್ಣಗೌಡ ತಂದೆ ಗುರಪ್ಪಗೌಡ ಹೊಸಗೌಡ್ರ 2. ಅನೀಲ ಕುಮಾರ ತಂದೆ ಭೀಮಣ್ಣಗೌಡ ಹೊಸಗೌಡ್ರ 3. ದೊಡ್ಡಪ್ಪಗೌಡ ತಂದೆ ಗುರಪ್ಪಗೌಡ ಹೊಸಗೌಡ್ರ 4. ಭೀಮಣ್ಣಗೌಡ ತಂದೆ ಭೀಮಣ್ಣಗೌಡ ಹೊಸಗೌಡ್ರ ಹಿಗೆಲ್ಲರೂ
ಕೂಡಿಕೊಂಡು ಕೈ ಯಲ್ಲಿ ಕೊಡಲಿ,
ಬಡಿಗೆ ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯವಾಗಿ
ಬೈದು ಕೈಯಿಂದ ಬಡಿಗೆಯಿಂದ, ರಾಡಿನಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 09.06.2015 ರಂದು ರಾತ್ರಿ ಶ್ರೀ ನಾಗಣ್ಣ ತಂದೆ
ದೇವಪ್ಪ ತಳವಾರ ಸಾ|| ಶಖಾಪುರ ಎಸ್.ಎ ರವರು ತನ್ನ ಮಕ್ಕಳೋಂದಿಗೆ ಮನೆಯಲ್ಲಿದ್ದಾಗ ರಾಮಣ್ಣಗೌಡ ತಂದೆ ಮಲ್ಲಣ್ಣಗೌಡ
ಮಾಲಿಪಾಟೀಲ. ಸಂಗಡ 21 ಜನರು ಸಾ|| ಎಲ್ಲರು ಶಖಾಪುರ ಎಸ್.ಎ ಗ್ರಾಮ ರವರು ಗುಂಪುಕಟ್ಟಿಕೊಂಡು
ತಮ್ಮ ಕೈಗಳ್ಳಿ ಬಡಿಗೆಗಳನ್ನು ಹಿಡಿಕೊಂಡು ನನ್ನ ಮನೆಯೋಳಗೆ ಅಕ್ರಮ ಪ್ರವೇಶ ಮಾಡಿ ಮೊನ್ನೆ ನಡೆದ
ಗ್ರಾಮ ಪಂಚಾಯತ ಚುನಾವಣೆಯ ವೈಶಮ್ಯದಿಂದ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ನನಗೆ
ಮತ್ತು ನನ್ನ ಮಕ್ಕಳಿಗೆ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 10-062015 ರಂದು ಸ್ಟೇಷನ ಬಜಾರ ಠಾಣಾ
ವ್ಯಾಪ್ತಿಯ ಕಳಿಂಗ ಲಾಡ್ಜ ಎದುರಗಡೆಯಲ್ಲಿ
ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ
ಮೇರೆಗೆ ಶ್ರೀ ಎಸ್.ಎಸ್ ದೊಡ್ಮನಿ ಪಿ.ಎಸ್.ಐ
ಸ್ಟೇಷನ್ ಬಜಾರ ಪೊಲೀಸ್
ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಶ್ರೀ ಮಹಾನಿಂಗ ನಂದಗಾವಿ ಡಿ,ಎಸ್,ಪಿ ಸಾಹೇಬ ಎ ಉಪ-ವಿಭಾಗ ಕಲಬುರಗಿ, ಮಾನ್ಯ ಶ್ರೀ ರಾಜಶೇಖರ ಹಳಗೊದಿ
ಪಿಐ ಸ್ಟೇಶನ ಬಜಾರ ಠಾಣೆ ರವರ ಮಾರ್ಗದರ್ಶನದಲ್ಲಿ ಠಾಣಾ ವ್ಯಾಪ್ತಿಯ
ಕಳಿಂಗ ಲಾಡ್ಜ ಹತ್ತಿರ ಹೋಗಿ ಮರೆಯಾಗಿ ನಿಂತು
ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ
ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ನಾನು ಮತ್ತು
ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1. ಮಳೆಂದ್ರ
ತಂದೆ ಶಿವಾನಂದ ಕಲ್ಲಮನಿ
ಸಾ: ಶಹಬಾದ ರಿಂಗ್ ರೋಡ ಕಲಬುರಗಿ 2. ಬಾಬುರಾವ ತಂದೆ ಶಿವಶರಣಪ್ಪ ದಣ್ಣುರಕರ ಸಾ:ನ್ಯೂ
ರಾಘವೇಂದ್ರ ಕಾಲೋನಿ ಕಲಬುರಗಿ 3. ಗುರುನಾಥ ತಂದೆ ಶಿವಕುಮಾರ ಮಣೂರ ಸಾ: ಐ ವಾನ್ ಶಾಯಿ
ಜಾಜಿ ಬ್ಲಾಕ್ ಕಲಬುರಗಿ 4. ಅಬಿಶೇಕ ತಂದೆ ಗುಂಡಪ್ಪಾ ಪಾಟೀಲ್
ಸಾ: ಆಳಂದ ಚೇಕ್ ಪೊಸ್ಟ
ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 4850/- ರೂ. ಮತ್ತು 52 ಇಸ್ಪೆಟ್ ಎಲೆಗಳನ್ನು
ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment