ಕೊಲೆ ಪ್ರಕರಣ :
ಸೇಡಂ ಠಾಣೆ
: ದಿನಾಂಕ 10/06/2015 ರಂದು ಮಧ್ಯಾನ್ಹ ನನ್ನ ಗಂಡನು ಮನೆಗೆ ಬಂದು ಊಟ ಮಾಡುತ್ತಿದ್ದನು. ಅದೇ ಸಮಯಕ್ಕೆ
ನಮ್ಮ ಓಣಿಯ ಇಲಿಯಾಸ ತಂದೆ ಮಹೆಬೂಬಮಿಯ ಸಾ:ಮೋಮಿನಪುರ ಸೇಡಂ ಈತನು ಬಂದು ಮನೆ ಹೊರಗೆ ನಿಂತು ನನ್ನ
ಗಂಡನ ಹೆಸರು ತೆಗೆದುಕೊಂಡು ಕರೆದನು. ನನ್ನ ಗಂಡನು ಊಟ ಬಿಟ್ಟು ಬಾಗಿಲಿನಲ್ಲಿ ನಿಂತು ನೋಡಿ ಇಲಿಯಾಸ
ತನ್ನ ಹಣ ಕೇಳಲು ಬಂದಿರುತ್ತಾನೆ ಅಂತಾ ನನಗೆ ಹೇಳಿ ಕೈತೊಳೆದುಕೊಂಡು ಮನೆ ಹೊರಗೆ ಹೋದನು. ಮನೆಯ ಹೊರಗೆ
ಸ್ವಲ್ಪ ಮುಂದೆ ಇರುವ ಲಾಲೇ ಹೈದರ ಆಶರಖಾನ ಮುಂದೆ ರೋಡಿನ ಮೇಲೆ ಸದರಿ ಇಲಿಯಾಸ ತಂದೆ ಮಹೆಬೂಬಮಿಯ ಈತನು
ನನ್ನ ಗಂಡನ ಜೊತೆಗೆ ಬಾಯಿ ಮಾಡುವ ಮತ್ತು ಚೀರುವ ಸಪ್ಪಳ ಕೇಳಿ ನಾನು ಮತ್ತು ನನ್ನ ಮಕ್ಕಳು ಮನೆ ಹೊರಗೆ
ಬಂದು ನಿಂತು ನೋಡಲಾಗಿ ಸದರಿ ಇಲಿಯಾಸ ಈತನು ನನ್ನ ಗಂಡನಿಗೆ ಕೈಗಡ ತೆಗೆದುಕೊಂಡ ಹಣ ಕೊಡುವಂತೆ ಮಾಕೇ
ಲೌಡೇ ಮೇರೆ ಪೈಸೆ ದೇ ನೈತೋ ತೇರೆ ಖಲಾಸ ಕರತೂಂ ಅಂತಾ ನನ್ನ ಗಂಡನ ಅಂಗಿ ಹಿಡಿದು ಹಿಗ್ಗಾ ಮುಗ್ಗಾ ಮಾಡಿ ಹೊಟ್ಟೆಗೆ ಎದೆಗೆ ಕೈ ಮುಷ್ಥಿ ಮಾಡಿ
ಹೊಡೆಯ ಹತ್ತಿದ್ದನು. ಆಗ ನಾನು ಅಲ್ಲದೇ ನನ್ನ ಮೈದುನನಾದ ಯಾಸೀನ ತಂದೆ ಶೇಖ ಮಕಬೂಲ ಅಹ್ಮದ ಇಬ್ಬರೂ
ಕೂಡಿ ನನ್ನ ಗಂಡನಿಗೆ ಇಲಿಯಾಸನಿಂದ ಬಿಡಿಸಿಕೊಳ್ಳುವಷ್ಟರಲ್ಲಿಯೇ ಇಲಿಯಾಸ್ ಈತನು ನನ್ನ ಗಂಡನಿಗೆ ಕೊಲೆ
ಮಾಡುವ ಉದ್ದೇಶದಿಂದ ಜೋರಾಗಿ ಎಡಗಡೆ ಕಪಾಳಕ್ಕೆ ಹೊಡೆದಾಗ ನನ್ನ ಗಂಡನು ಒಮ್ಮೆಲೆ ಚಕ್ಕರ ಬಂದು ರೋಡಿನ
ಮೇಲೆ ಬಿದ್ದು ಬಿಕ್ಕುತ್ತಿದ್ದನು. ಇದನ್ನು ನೋಡಿ ಇಲಿಯಾಸ ಈತನು ಅಲ್ಲಿಂದ ಓಡಿ ಹೋದನು. ಆಗ ನಾನು
ಮತ್ತು ನನ್ನ ಮೈದುನನಾದ ಯಾಸಿನ ಇಬ್ಬರೂ ಕೂಡಿ ನನ್ನ ಗಂಡನ ಬಾಯಿಯಲ್ಲಿ ಸ್ವಲ್ಪ ನೀರು ಹಾಕಿದ್ದು ಅವನು
ಕುಡಿಯಲಿಲ್ಲ. ನಂತರ ತಕ್ಷಣ ಒಂದು ಅಟೋದಲ್ಲಿ ಹಾಕಿಕೊಂಡು ಸೇಡಂ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು
ತಂದು ಸೇರಿಕೆ ಮಾಡಿದಾಗ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ನನ್ನ ಗಂಡನು ಶೇಖ ಮಹೆಬೂಬ ಈತನು ಮೃತಪಟ್ಟಿರುತ್ತಾನೆ
ಅಂತಾ ತಿಸಿರುತ್ತಾರೆ ಅಂತಾ ಶ್ರೀಮತಿ ರಿಹಾನಾಬೇಗಂ ಗಂಡ ಶೇಖ ಮಹಿಬೂಬ ಸಾ : ಮೊಮಿನಪೂರ ಸೇಡಂ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಬಲತ್ಕಾರ ಮಾಡಿದ ಪ್ರಕರಣ :
ಮಾಡಬೂಳ
ಠಾಣೆ : ಈಗ್ಗೆ 5-6 ತಿಂಗಳು ಹಿಂದೆ ಕುಮಾರಿ ಇವಳು ತಮ್ಮ ಗ್ರಾಮದ ರಾಜು ಮಂಗಲಗಿ ಇವರ ಹೊಲಕ್ಕೆ ತೊಗರಿ ಬಡೆಯಲು ಕೂಲಿ
ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 12 ಗಂಟೆ ಸುಮಾರಿಗೆ ಹೋದಾಗ ನನಗೆ ಪರಿಚಯದ
ಲಕ್ಷ್ಮಣ ತಂದೆ ಗೋವಿಂದ ಬಂಡಿ ವಡ್ಡರ ಅವನ ಸಂಗಡ ಚಂದ್ರಶಾ ತಂದೆ ಹಣಮಂತ ಪೂಜಾರಿ ನನ್ನ ಹತ್ತಿರ ಬಂದವರೆ
ನಾನು ಹೊಲದ ಬದುವಿನ ಭಾಜು ನಾಲದಲ್ಲಿ ಚಂದ್ರಶಾ ಪೂಜಾರಿ
ಈತನು ಬಂದವನೆ ನನಗೆ ತೆಕ್ಕೆಗೆ ಹಿಡಿದು ನಾನು ಚಿರದಂತೆ ಬಾಯಿ ಒತ್ತಿ ಹಿಡಿದನು. ಆಗ ಲಕ್ಷ್ಮಣನು ಬಂದು
ನನ್ನ ಮೈಮೇಲಿನ ಲಂಗಾ ಮತ್ತು ಪುಲಕಾ ಬಿಚ್ಚಿದ ಜಬರಿ ಸಂಭೋಗ ಮಾಡಿದ್ದು ನಂತರ ಚಂದ್ರಶಾ ಪೂಜಾರಿ ಸಹ
ಜಬರಿ ಸಂಭೋಗ ಮಾಡಿ ಈ ವಿಷಯ ಯಾರ ಮುಂದೆ ಯಾದರು ಹೇಳಿದರೆ ನನಗೆ ಜೀವ ಸಹಿತ ಬಿಡುವುದಿಲ್ಲಾ. ಅಂತಾ
ಜೀವದ ಬೆದರಿಕೆ ಹಾಕಿ ಹೋದರು. ಅದರಿಂದ ಇಲ್ಲಿಯವರೆಗೆ ತಮ್ಮ ಮುಂದೆ ತಿಳಿಸಿರುವುದಿಲ್ಲಾ ಅಂತಾ ನನ್ನ
ಮುಂದೆ ಹೇಳಿರುತ್ತಾಳೆ ಅಂತಾ ಶ್ರೀ ಭೀಮರಾಯ ತಂದೆ ಸಿದ್ದಯ್ಯಾ ಬಂಡಿ ವಡ್ಡರ ಸಾ: ಇಂಗಿನಕಲ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ
: ದಿನಾಂಕ 09.06.2015 ರಂದು ರಾತ್ರಿ ಶ್ರೀಮತಿ ಬಸಮ್ಮ ಗಂಡ ಬಸವರಾಜ ಗುಡುರ ಸಾ|| ಶಖಾಪುರ ಎಸ್.ಎ ರವರು ತನ್ನ ಮಕ್ಕಳೋಂದಿಗೆ ನನ್ನ ಮನೆಯಲ್ಲಿದ್ದಾಗ ನಮ್ಮೂರಿನ ನಾಗಣ್ಣ ತಂದೆ ದೇವಪ್ಪ ತಳವಾರ ಈತನು ತನ್ನ ಸಂಗಡ 24 ಜನರೊಂದಿಗೆ ಗುಂಪುಕಟ್ಟಿಕೊಂಡು ಬಂದು ನಮಗೆ ಮೊನ್ನೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಾಗಣ್ಣನ ಸೋಸೆ ಸೋತ ವಿಷಯದ ವೈಶಮ್ಯದಿಂದ ನಮಗೆ ಅವಾಚ್ಯವಾಗಿ ಬೈದು ನನಗೆ ಸಿರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯತ್ ಹರಿದು ಜಾನುವಾರು ಸಾವು ಪ್ರಕರಣ :
ಚೌಕ ಠಾಣೆ : ದಿನಾಂಕ 10.06.2015
ರಂದು ಶ್ರೀ ರಾಮ
ತಂದೆ ರಾಣೋಜಿ ಗೌಳಿ ಸಾ:ಆದರ್ಶ ಶಾಲೆಯ ಹತ್ತಿರ ಗಂಜ ಬ್ಯಾಂಕ ಕಾಲೋನಿ ಕಲಬುರಗಿ
ಇವರು ದಿನಾಂಕ 10.06.2015 ರಂದು ಬೆಳಿಗ್ಗೆ 11 ಎ.ಎಂ.ಕ್ಕೆ ನಾನು ಮನೆಯಿಂದ ಎಮ್ಮೆಗಳನ್ನು
ಮೈಯಿಸಿಕೊಂಡು ಬರುವ ಕುರಿತು ಕಾಟನ ಮಾರ್ಕೇಟ ನೆಹರು ಗಂಜ ನೋವಾ ಅಂಗಡಿಯ ಮುಂದೆಗಡೆ ರಸ್ತೆಯ
ಬದಿಯಿಂದ ಎಮ್ಮೆಗಳನ್ನು ಹೊಡೆದುಕೊಂಡು ಸಂತೆಯಲ್ಲಿ ನೀರು ಕುಡಿಸಲು ಹೋಗಿದ್ದು ನಾಲೆಯಲ್ಲಿ ಕರೆಂಟ
ಹರಿದು ಬಂದಿದ್ದು ಗೊತ್ತಾಗದೇ ಒಮ್ಮೇಲೆ ಎರಡು ಎಮ್ಮೆಗಳು ನೀರು ಕುಡಿಯಲು ಹೋದಾಗ ಕರೆಂಟ ಹತ್ತಿ
ನಾಲೆಯಲ್ಲಿ ಬಿದ್ದು ಮೃತ ಪಟ್ಟಿದ್ದು ಎರಡು ಎಮ್ಮೆಗಳಲ್ಲಿ ಒಂದು ಎಮ್ಮೆ ಅಂದಾಜು ಕಿಮ್ಮತ್ತು 80,000/-
ರೂ, ಇನ್ನೊಂದು ಕೋಣದ ಅಂದಾಜು ಕಿಮ್ಮತ್ತು 40,000/-
ರೂ ಹೀಗೆ ಒಟ್ಟು ಎರಡು ಸೇರಿ 1,20,000/-
ರೂ ಆಗುತ್ತಿದ್ದು ಸದರಿ ಎರಡು ಎಮ್ಮೆಗಳು ನಾಲೆಯಲ್ಲಿ ನೀರು ಕುಡಿಯಲು ಹೋದಾಗ ನಾಲೆಯ
ಪಕ್ಕದಲ್ಲಿರುವ ಕೆ.ಇ.ಬಿ ಕರೆಂಟು ನೀರಿನಲ್ಲಿ ಹರಿದು ಎಮ್ಮೆಗೆ ಕರೆಂಟ ಶಾರ್ಟ ಹತ್ತಿ
ಸ್ಥಳದಲ್ಲಿಯೆ ಸತ್ತಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿಯಾದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಕಲ್ಲಪ್ಪ ಕುಂಬಾರ ಸಾ|| ಮಾಗಣಗೇರಾ ಇವರು ದಿನಾಂಕ 05-06-2015 ರಂದು ಮದ್ಯಾನ 3 ಗಂಟೆಯ ಸುಮಾರಿಗೆ ನಾನು, ನನ್ನ ಅಣ್ಣ ಈರಗಂಟೆಪ್ಪ ನನ್ನ ಅತ್ತಿಗೆಯಾದ ಶ್ರೀಮತಿ ಕಾಸಿಬಾಯಿ ಗಂಡ ಮಡಿವಾಳಪ್ಪ ಹಾಗು ಮಾವನಾದ ಸಿದ್ದಪ್ಪ ಮಲಕಪ್ಪ ಕುಂಬಾರ ನಾವೆಲ್ಲರೂ ಎಂದಿನಂತೆ ನಮ್ಮ ಕಬ್ಬಿನ ಹೊಲದಲ್ಲಿ ಬೆಳೆಗೆ ನೀರು ಬಿಡುತ್ತಿದ್ದಾಗ, ನಮ್ಮ ಹೊಲದ ಪಕ್ಕದಲ್ಲಿ ಸರ್ವೆ ನಂ 112 ರ ಜಮೀನು ಮಳ್ಳಿ ಗ್ರಾಮದ ಶ್ರೀ ಅಬ್ದುಲ್ ಮಜೀದ ರವರ ಹೊಲ ಇರುತ್ತದೆ. ಈ ಹೊಲವನ್ನು ಭೀಮಣ್ಣ ತಂದೆ ತಮ್ಮಣ್ಣ ಕೆಂಭಾವಿ ಇತನು ಲೀಜಿಗೆ ಹಾಕಿಕೊಂಡು ಸದರಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದು ಭೀಮಣ್ಣ ತಂದೆ ತಮ್ಮಣ್ಣ ಕೆಂಭಾವಿ ಹಾಗು ಇತನ ಮಗ ತಮ್ಮಣ್ಣ ತಂದೆ ಭೀಮಣ್ಣ ಇವರು ಹೊಲದಲ್ಲಿಯ ಹತ್ತಿ ಕಟ್ಟಿಗೆ ಬೆಂಕಿ ಹಚ್ಚುತ್ತಿದ್ದರು. ಬೆಡವೆಂದರು ಬೆಂಕಿಯನ್ನು ಹಚ್ಚಿ ಆ ಬೆಂಕಿಯು ನಮ್ಮ ಹೊಲದ ಕಬ್ಬಿಗೆ ಹತ್ತಿ ಕಬ್ಬು ಮತ್ತು ಕೃಷಿ ಬಳಕೆಯ ಪ್ಲಾಸ್ಟಿಕ್ ಪೈಪುಗಳು ಸುಟ್ಟು ಸುಮಾರು 2 ಲಕ್ಷ 20 ಸಾವಿರ ರೂಪಾಯಿಗಳಷ್ಟು ಸುಟ್ಟು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment