ಕೊಲೆ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀಮತಿ ಖಾನಾಬಾಯಿ ಗಂಡ ಅಮೋಗಿ ಸಾಲುಟಗಿ ಸಾ : ಹಿಂಚಗೇರಾ ತಾ : ಅಫಜಲಪೂರ ರವರು ಹೊಲ ಮನೆ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ
ಉಪಜೀವಿಸುತ್ತಿರುತ್ತೇನೆ. ನನ್ನ ಅತ್ತೆ ಮಾವಂದಿರರಿಗೆ 4 ಜನ ಗಂಡು ಮಕ್ಕಳಿದ್ದು
1) ಮಾಳಪ್ಪ, 2) ನನ್ನ ಗಂಡ ಅಮೋಗಿ, 3) ಭೀರಪ್ಪ, 4) ಕಾಮಣ್ಣ ಅಂತ ಹೀಗೆ 4 ಜನ ಅಣ್ಣತಮ್ಮಂದಿರರು ಇರುತ್ತಾರೆ.
ಮಾಳಪ್ಪ ಮತ್ತು ಬೀರಪ್ಪ ರವರು ಪ್ರತ್ಯಕ ಮನೆ ಮಾಡಿಕೊಂಡಿದ್ದು, ನನ್ನ ಗಂಡ ಮತ್ತು ಮೈದುನ ಕಾಮಣ್ಣ ಒಟ್ಟಿಗೆ ಇರುತ್ತಾರೆ. ಹಿಂಚಗೇರಿ ಗ್ರಾಮದಲ್ಲಿ ನಮ್ಮ ಹಿರಿಯರ ಮನೆ ಇದ್ದು, ನಮ್ಮೊಂದಿಗೆ ನಮ್ಮ ಭಾವ ಮಾಳಪ್ಪ ಮತ್ತು ಆತನ ಮಕ್ಕಳಾದ ಹಿರಗೆಪ್ಪ, ನಾಗಪ್ಪ, ಮಹಾಂತಪ್ಪ ರವರು ಜಗಳ ಮಾಡಿದ್ದರಿಂದ ನಾನು ಮತ್ತು ನನ್ನ ಗಂಡ ಮಕ್ಕಳು ಹಾಗು ನಮ್ಮ ಮೈದುನ ಕಾಮಣ್ಣ ರವರೆಲ್ಲರು ನಮ್ಮ ಹೊಲದಲ್ಲಿರುವ
ಮನೆಯಲ್ಲಿ ವಾಸವಾಗಿರುತ್ತೇವೆ. ನಮ್ಮ ಮೈದುನ
ಕಾಮಣ್ಣನಿಗೆ ಇಬ್ಬರು ಹೆಂಡಂದಿರರಿದ್ದು, ಮೊದಲನೆ ಹೆಂಡತಿ ನನ್ನ ಗಂಡನ ಅಕ್ಕನ ಮಗಳಾದ ಶೀಲವಂತಿ ಇದ್ದು, ಎರಡನೆಯವಳು
ಲಕ್ಷ್ಮೀಬಾಯಿ ಅಂತಾ ಇರುತ್ತಾಳೆ. ಶೀಲವಂತಿ
ತವರು ಮನೆ
ಹಿಂಚಗೇರಿ ಗ್ರಾಮವೆ ಇರುತ್ತದೆ, ಸದರಿಯವಳು ತನ್ನ ಗಂಡನಿಗೆ
ನಮ್ಮಿಂದ ಬೇರೆಯಾಗಿ ಪ್ರತ್ಯೇಕ ಮನೆ ಮಾಡಿಕೊಂಡು
ಇರುವಂತೆ ಹೇಳಿದ್ದು ಅದಕ್ಕೆ ನಮ್ಮ ಮೈದುನನು ಒಪ್ಪದಿದ್ದರಿಂದ ಶೀಲವಂತಿ ಇವಳು ಈಗ ಸುಮಾರು 4
ವರ್ಷಗಳ ಹಿಂದೆ
ನಮ್ಮ ಮೈದುನನೊಂದಿಗೆ ಜಗಳ ಮಾಡಿಕೊಂಡು ಹೋಗಿ ತನ್ನ ತವರು
ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ನಮ್ಮ ಮೈದುನನ ಎರಡನೆ ಹೆಂಡತಿಯಾದ ಲಕ್ಷ್ಮೀಬಾಯಿಯು ತನ್ನ ತಾಯಿಯ ಕಣ್ಣಿನ ಆಪರೇಷನ್ ಆಗಿದ್ದರಿಂದ ತನ್ನ ತಾಯಿಗೆ ನೋಡಿಕೊಳ್ಳುವರು
ಯಾರು ಇರದ ಕಾರಣ ತನ್ನ ತಾಯಿಯನ್ನು ನೋಡಿಕೊಳ್ಳಲು ಸುಮಾರು
2 ತಿಂಗಳ ಹಿಂದೆ ತನ್ನ ತವರೂರಾದ ದೇಸಾಯಿ ಕಲ್ಲೂರ ಗ್ರಾಮಕ್ಕೆ ಹೋಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ಕಳೆದ ವರ್ಷ
ಏಪ್ರೀಲ್ ತಿಂಗಳಲ್ಲಿ ನಮ್ಮ ಭಾವ ಮಾಳಪ್ಪನು ಊರಲ್ಲಿರುವ ನಮ್ಮ
ಹಿರಿಯರ ಮನೆ ಮಾರಾಟ ಮಾಡಲು ನಿರ್ಧರಿಸಿದಾಗ ನನ್ನ ಗಂಡ ಮತ್ತು ನನ್ನ ಮೈದುನ ಕಾಮಣ್ಣ ರವರು ಮನೆ ಮಾರಾಟ ಮಾಡದಂತೆ ನಮ್ಮ ಭಾವನೊಂದಿಗೆ
ತಕರಾರು ಮಾಡಿದ್ದರಿಂದ ನನ್ನ ಭಾವ ಮಾಳಪ್ಪ ಮತ್ತು ಆತನ ಮಕ್ಕಳು
ನನ್ನ ಗಂಡನೊಂದಿಗೆ ಜಗಳಾ ಮಾಡಿ ಕೊಡ್ಲಿಯಿಂದ ಹೊಡೆದಿದ್ದರು. ಆ ಸಮಯದಲ್ಲಿ ನಾವು ಅವರ ಮೆಲೆ ಕೇಸು ಮಾಡಿಸಿರುತ್ತೇವೆ. ಊರಲ್ಲಿಯ ಮನೆ
ಮಾರಾಟ ಮಾಡದಂತೆಯ ತಕರಾರು ಮಾಡಿದ್ದರಿಂದ ಮತ್ತು
ಶೀಲವಂತಿಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಂಡಿದ್ದರಿಂದ ನನ್ನ ಭಾವ ಮತ್ತು ಆತನ ಮಕ್ಕಳು ಹಾಗು ನಮ್ಮ ಮೈದುನನ ಮೊದಲನೆಯ ಹೆಂಡತಿ ಶೀಲವಂತಿ ಮತ್ತು
ಆಕೆಯ ತಮ್ಮ ಶರಣಪ್ಪ ಜಿಡ್ಡಿಮನಿ ಇವರು ನಮ್ಮ ಮತ್ತು
ನಮ್ಮ ಮೈದುನನ ಮೇಲೆ ವೈಮನಸ್ಸು ಹೊಂದಿದ್ದರು. ದಿನಾಂಕ
13-06-2015 ರಂದು
ಬೆಳಿಗ್ಗೆ ನಾನು ಮತ್ತು ನಮ್ಮ ಮೈದುನ ಕಾಮಣ್ಣ ಇಬ್ಬರು ಹೊಲದಲ್ಲಿನ ಮನೆಯಿಂದ ರೇಷನ ತೆಗೆದುಕೊಂಡು ಹೋಗಲು ಹಿಂಚಗೇರಿ ಗ್ರಾಮದ
ಬಸ್ಸ ನಿಲ್ದಾಣದ ಹತ್ತಿರ ಇದ್ದಾಗ, 1] ನಮ್ಮ ಭಾವ ಮಾಳಪ್ಪ, 2] ಹಿರಗೆಪ್ಪ, 3] ನಾಗಪ್ಪ, 4] ಮಹಾಂತಪ್ಪ, 5] ನಮ್ಮ ಅಣ್ಣತಮ್ಮಕಿಯ ಯಲ್ಲಪ್ಪ ತಂದೆ
ಬೀಮಶಾ ಸಾಲುಟಗಿ, 6] ಶರಣಪ್ಪ ತಂದೆ ಭೀಮಶಾ ಜಿಡ್ಡಿಮನಿ
ಇವರೆಲ್ಲರು ಮನೆ ಮಾರಾಟದ ತಕರಾರಿನ ಹಾಗು ಶೀಲವಂತಿಗೆ
ಬಿಟ್ಟು ಬೇರೆ ಮದುವೆ ಮಾಡಿಕೊಂಡಿರುವ ವೈಮನಸ್ಸಿನಿಂದ ಹಾಗು ಶೀಲವಂತಿ ರವರ ಒಳಸಂಚಿನಿಂದ ಸದರಿಯವರೆಲ್ಲರು ಒಟ್ಟುಗೂಡಿ ನನ್ನ
ಮೈದುನನೊಂದಿಗೆ ಜಗಳ ತೆಗೆದು ಅಲ್ಲೆ ಬಾಜು ಗಟರನಲ್ಲಿ ಹಾಕಿ
ಹೊಡೆಯುತ್ತಿದ್ದಾಗ ಆಜು ಬಾಜು ಅಂಗಡಿಯವರು ಬಿಡಿಸಲು ಹೋದಾಗ ಅವರನ್ನು ಕೇಳದೆ ಹಾಗೆ ಹೊಡೆಯುತ್ತಿದ್ದರು, ಹಿರಗೆಪ್ಪನು ತನ್ನಲ್ಲಿದ್ದ ಚಾಕುವಿನಿಂದ ಕಾಮಣ್ಣನ ಹೊಟ್ಟೆಗೆ 4-5 ಸಲ ಹೊಡೆದನು. ಜಗಳ ಬಿಡಿಸಲು ಹೋದ
ಆಜು ಬಾಜು ಅಂಗಡಿಯವರು ನಾವು ಜಗಳ ಬಿಡಿಸಿದರು ಬಿಡಲಿಲ್ಲಾ, ಕಾಮಣ್ಣನಿಗೆ ಚಾಕುವಿನಿಂದ ಹೊಡೆದು ಖಲಾಸ ಮಾಡಿದರು ಅಂತಾ
ಅನ್ನುತ್ತಿದ್ದರು. ನಂತರ ಕಾಮಣ್ಣನಿಗೆ ಹೊಡೆದವರು ಅಲ್ಲಿಂದ
ಹೋದಾಗ ಕಾಮಣ್ಣನ ಮಗ ತ್ರೀಮೂರ್ತಿ ಮತ್ತು ನಮ್ಮ ಅಣ್ಣತಮ್ಮಕಿಯ ಶಿವರಾಯ ಸಾಲುಟಗಿ ರವರು ಬಂದು ಕಾಮಣ್ಣನಿಗೆ ಉಪಚಾರ ಸಲುವಾಗಿ ಗಟರದಿಂದ
ಹೊರಗೆ ತೆಗೆದು ರಸ್ತೆಯಲ್ಲಿರುವ ಬಸವೇಶ್ವರ ಚೌಕ
ಹತ್ತಿರ ಇಟ್ಟಾಗ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ
ಠಾಣೆ : ಶ್ರೀ ಮಹ್ಮದ ಅಬ್ದುಲ
ಕರೀಮ ತಂದೆ ಅಬ್ದುಲ ಗಫಾರ ಸಾ: ಟಿಪ್ಪೂಸೂಲ್ತಾನ ಚೌಕ ಎದರುಗಡೆ ಆಯುಶ ಮಜೀದ ರಿಂಗ ರೋಡ ಕಲಬುರಗಿ
ಇವರು ದಿನಾಂಕ: 13-06-2015 ರಂದು ಬೆಳಗ್ಗೆ ಹೈದರಾಬಾದ ದಿಂದ ಕಲಬುರಗಿಗೆ ತಾನು ಹಾಗು ತನ್ನ
ಸಂಬಂದಿಕರಾದ ಏಜಾಜ ಅಹೇಮದ್ ಹಾಗು ಅವರ ಹೆಂಡತಿ
ಅತುಫಾ ಹಾಗು ಇಬ್ಬರು ಮಕ್ಕಳು ಕೂಡಿ ಕಾರ ನಂ ಎಪಿ/09-ಎಟಿ-5335 ನೇದ್ದರಲ್ಲಿ ಕುಳಿತು ಬ
ರುತ್ತಿದ್ದಾಗ ಮುಧೋಳ ಗೇಟ ದಾಟಿ ಮುಂದೆ ಸುಮಾರು 1 ½ ಕಿಮಿ ದೂರದಲ್ಲಿ ಸೇಡಂ ಕಡೆಗೆ ಹೋಗುತ್ತಿದ್ದಾಗ ಬೆಳಗ್ಗೆ
11:45 ಗಂಟೆಯ ಸುಮಾರಿಗೆ ಎದರುಗಡೆ ಸೇಡಂ ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ
ವೇಗ ಹಾಗು ನಿಷ್ಕಾಳಜೀತನದಿಂದ ನಡೆಯಿಸುತ್ತಾ ಬಂದು ರಸ್ತೆಯ ಎಡಬದಿಯಿಂದ ಹೊಗುತ್ತಿದ್ದ ನಮ್ಮ
ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇದರಿಂದ ನಮ್ಮ ಕಾರು ಲಾರಿಯ ಕೆಳಗೆ ಸಿಕ್ಕಿಬಿದ್ದು,
ನಮಗೇಲ್ಲರೀಗು ಭಾರಿಗಾಯವಾಗಿದ್ದು, ಆಗ ರಸ್ತೆಯಿಂದ ಹೊಗಿ ಬರುವ ಸಾರ್ವಜನಿಕರು ಬಂದು ನಮಗೆ
ಕಾರಿನಿಂದ ಹೊರೆಗೆ ತೆಗೆದಿದ್ದು, ಕಾರ ನಡೆಯಿಸುತ್ತಿದ್ದ ಎಜಾಜ ಅಹೇಮದ್ ತಂದೆ ಮಹ್ಮದ ಪಾಶಾ
ಖಾದರಿ ಸಾ: ಶಂಕರಪಲ್ಲಿ ಹಾ:ವ : ಹೈದರಾಬಾದ ಈತನು ಎದೆಗೆ ಹಾಗು ಇತರೆ ಕಡೆ ಭಾರಿಗಾಯಹೊಂದಿ
ಸ್ಥಳದಲ್ಲಿಯ ಮೃತ ಪಟ್ಟಿದ್ದು ನನಗೆ ಹಾಗು ಎಜಾಜನ ಹೆಂಡತಿಯಾದ ಅತುಫಾ ಹಾಗು ಈತನ ಮಕ್ಕಳಾದ ಅಲೀದಾ
ಸೀದಾ ಹಾಗು ಅಲಿಖಾ ಇವರಿಬ್ಬರಿಗೆ ಭಾರಿಗಾಯವಾಗಿದ್ದು, ನಮಗೆ ಒಂದು ಖಾಸಗಿ ಜೀಪನಲ್ಲಿ ತಂದು
ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ನಮಗೆ ಹೆಚ್ಚಿನ ಉಪಚಾರ
ಕುರಿತು ಅಂಬುಲೆನ್ಸನಲ್ಲಿ ಯುನೈಡೈಟ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಎಜಾಜ
ಅಹೇಮದನ ಹೆಂಡತಿಯಾದ ಅತುಫಾ ಇವಳು ಉಪಚಾರ ಹೊಂದುತ್ತಾ ಗುಣಮುಖವಾಗದೆ ಮೃತ ಪಟ್ಟಿದ್ದು, ನಾವು
ಉಪಚಾರ ಹೊಂದುತ್ತಿದ್ದು ಸದರಿ ಅಪಘಾತ ಪಡಿಸಿದ ಲಾರಿ ನಂ ಕೆಎ/28-1441 ನೇದ್ದು ಇದ್ದು. ಇದರ
ಚಾಲಕ ಹೆಸರು ಆನಂದ ತಂದೆ ಅಂಬು ಪವಾರ ಸಾ: ಸೇಡಂ ಅಂತಾ ತಿಳಿದು ಬಂದಿದ್ದು ಈತನಿಗು ಸಹ ರಕ್ತಗಾಯ
ಹಾಗು ಗುಪ್ತಗಾಯಗಳಾಗಿದ್ದು, ಈತನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಯಾದ ಬಗ್ಗೆ ತಿಳಿದು
ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ
ಬಜಾರ ಠಾಣೆ : ದಿನಾಂಕ 13-06-2015 ರಂದು ಠಾಣಾ ವ್ಯಾಪ್ತಿಯಲ್ಲಿಯ ಸ್ಟೇಷನ ಏರಿಯಾದ ಒನವೇ ರೋಡನಲ್ಲಿ ಸುರಭಿ ಲಾಡ್ಜ ಹತ್ತೀರ ರಸ್ತೆಯ ಪಕ್ಕದಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಮೂವರು ಮಟಕಾ ಜೂಜಾಟ
ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ (ಕಾಸು) ಸ್ಟೇಷನ ಬಜಾರ
ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸುರಭೀ ಲಾಡ್ಜ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಮೂವರು ಹೋಗಿ
ಬರುವ ಸಾರ್ವಜನಿಕರಿಂದ 1/-
ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸುತ್ತುವರೆದು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಗಂಗಾಧರ ತಂದೆ ಹಣಮಂತ್ರಾಯ ಹುಳಗೇರಿ ಸಾಃ ಬೋಳೆವಾಡ ತಾ.ಜಿಃ ಕಲಬುರಗಿ 2. ರೇವಣಸಿದ್ದಪ್ಪ ತಂದೆ ಶಿವಲಿಂಗಪ್ಪಾ ನೆಲ್ಲೂರ ಸಾಃ ಹಡಲಗಿ ತಾಃ ಆಳಂದ ಜಿಲ್ಲಾಃ ಕಲಬುರಗಿ 3. ರಾಮು ತಂದೆ ಲಕ್ಷ್ಮಣ ಕಾವೇರಿ ಸಾಃ ಸೊನ್ನ ತಾಃ ಜೇವರ್ಗಿ ಜಿಲ್ಲಾಃ
ಕಲಬುರಗಿ
ಅಂತಾ ತಿಳಿಸಿದ್ದು ಸದರಿಯವರಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು
ಹಣ 1440/-
ರೂ ಮತ್ತು ಒಂದು ಬಾಲ ಪೆನ್ನು ಹಾಗು ಎರಡು ಮಟಕಾ ಬರೆದ ಚೀಟಿ ಜಪ್ತಿಮಾಡಿಕೊಂಡು ಆರೋಪಿ
ಮತ್ತು ಮುದ್ದೆ ಮಾಲು ಸಮೇತ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment