ಅಪಘಾತ ಪ್ರಕರಣಗಳು :
ಯಡ್ರಾಮಿ
ಠಾಣೆ : ದಿನಾಂಕ 15-06-2015
ರಂದು ಮೃತ ಅಬ್ದುಲ್ ಬಾಶಾ ಇತನು ಏತ ನಿರಾವರಿ ಕಾಲುವೆ ನಿರ್ಮಿಸುವ ಕೆಲಸದಲ್ಲಿದ್ದಾಗ ಹಿಟಾಚಿಯ
ಮಾಲಿಕ ತನ್ನ ಬುಲೇರೋ ಗಾಡಿಯಲ್ಲಿ ಡೀಸಲ್ ಕೊಟ್ಟು ವಾಪಸ್ ಬರುತ್ತಿದ್ದಾಗ ಅಬ್ದುಲ್ ಬಾಶಾ ಇತನು
ಹಿಟಾಚಿ ನಿಲ್ಲಿಸಿ ಮೇಲುಗಡೆ ಕೆನಾಲ್ ರೋಡಿನ ಮೇಲೆ ಬರುತ್ತಿದ್ದಂತೆ ಬುಲೆರೋ ವಾಹನ ಸಂಖ್ಯೆ ಕೆ ಎ
28 ಎನ್ 6491 ನೆದ್ದರ ಚಾಲಕನಾದ ಯಲ್ಲಪ್ಪ ಇತನು ತನ್ನ ವಾಹನ ನಿರ್ಲಕ್ಷತನದಿಂದ ನೆಡೆಸಿಕೊಂಡು
ಬಂದು ಮೃತ ಅಬ್ದುಲಬಾಶಾ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಆತನು ಕೆಲಸಕ್ಕೆ ನಿಂತ ಹಿಟಾಚಿಯ ಚೈನಿನ
ಮೇಲೆ ಬಿದ್ದಾಗ ಅವನ ಎಡಗಾಲ ಮೊಳಕಾಲಿನ ಮೇಲ್ಭಗಾದಲ್ಲಿ ಎರಡು ಕಡೆ ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಸರಕಾರಿ
ಆಸ್ಪತ್ರೆ ಶಹಾಪೂರ ಒಯ್ದು ಸೇರಿಕೆ ಮಾಡಿದಾಗ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ಡಾ|| ವಿನೋದಕುಮಾರ ಇವರು ಠಾಣೆಗೆ ದಿನಾಂಕ 15-06-2015 ರಂದು
ಸಾಯಂಕಾಲ ತಮ್ಮ ಕಾರ ಟಿಪಿ ನಂ
ಕೆಎ-25-ಟಿಎ-007437 ಚೆಸ್ಸಿ ನಂ MDHHSNAW5E8-014755
ನೇದ್ದರಲ್ಲಿ ನನ್ನ ಸಂಬಂದಿಕರಿಗೆ ರೈಲ್ವೇ ಸ್ಟಷನಕ್ಕೆ ಬಿಟ್ಟು ವಾಪಸ್ಸ ಮನೆಗೆ ಬರುವ
ಕುರಿತು ಐವಾನ-ಈ-ಷಾಹಿ , ಗುಲ್ಲಾಬಾವಾಡಿ, ಏಷಿಯನ್ ಮಹಲ,ಮುಖಾಂತರ ಡಿ.ಎ.ಆರ್ ಮೇನ ಗೆಟ ಕಡೆಗೆ ಕಾರ
ಚಲಾಯಿಸಿಕೊಂಡು ಹೋಗುವಾಗ ಹಳೆ ಡಿಪಿಓ ಕ್ರಾಸ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂ
ಕೆಎ-36-ಕೆ-6424 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೆಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನ್ನ ಕಾರಿಗೆ ಹಿಂದಿನಿಂದ ಬಂದು ಕಾರಿನ ಬಲಗಡೆ ಹಿಂದಿನ ಡೋರಿಗೆ
ಡಿಕ್ಕಿಪಡಿಸಿ ಹಾಗೆ ಎಡಗಡೆ ಹಿಂದಿನ ಬಂಪರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾರ ಡ್ಯಾಮೇಜ ಮಾಡಿ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿ
ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ
ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಮಲಕಾಜಪ್ಪ ಸುತಾರ ಸಾ|| ಭೂಸನೂರ ರವರು ತನ್ನ
ಮನೆಯ ಜಾಗೆಯ ಸಂಭಂಧ ತನ್ನ ನಗೇಣಿಯ ಸೊಸೆಯಾದ ಅನಿತಾ ಗಂಡ ಗುರುನಾಥ ಸುತಾರ ಇವಳು ದಿನಾಂಕ 14-06-2015 ರಂದು ಸಾಯಂಕಾಲ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ
ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿ ನೂಕಿಸಿಕೊಟ್ಟು ಜೀವ ಭಯ ಪಡಿಸಿರುತ್ತಾಳೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment