Police Bhavan Kalaburagi

Police Bhavan Kalaburagi

Thursday, June 4, 2015

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಕುರಕುಂಟಾ ಠಾಣೆ : ಶ್ರೀ ತಿರುಪತಿ ತಂದೆ ಯಂಕಪ್ಪ ಶಹಾಬಾದಕರ ಸಾ|| ಮದಕಲ ತಾ|| ಸೇಡಂ ರವರು ನಾನು ನಮ್ಮೂರ ಗ್ರಾಮ ಪಂಚಾಯತ ಅಧ್ಯಕ್ಷನಾಗಿ ಗ್ರಾಮದ ಅಭಿವೃದ್ದಿ ಕೆಲಸಗಳನ್ನು ಮಾಡಿ ಜನಪ್ರಿಯತೆ ಗಳಿಸಿರುತ್ತೆನೆ. ಇನ್ನೂ ಅಭಿವೃದ್ದಿ ಮಾಡುವ ಉದ್ದೇಶದಿಂದ ಮತ್ತು ಊರಿನ ಜನರ ಒತ್ತಾಯದ ಮೇರೆಗೆ ಮತ್ತೆ ಗ್ರಾಮ ಪಂಚಾಯತ ಸದಸ್ಯತ್ವಕ್ಕೆ ಸ್ಪರ್ಧೆ ಮಾಡಿದ್ದು ನನ್ನ ಹಾಗೆ ನನ್ನ ವಿರುದ್ದ  ನಮ್ಮೂರ ಶಾಮರಾವ ತಂದೆ ಹಣಮಂತು ನನ್ನ ವಿರುದ್ದ ಪ್ರತಿಸ್ಪರ್ಧೆ ಮಾಡಿರುತ್ತಾನೆ.  ದಿನಾಂಕ:-01-06-2015 ರಂದು ರಾತ್ರಿ ನಮ್ಮೂರಿನಲ್ಲಿ ಮನೆಮನೆ ಪ್ರಚಾರ ಮಾಡುತ್ತಾ  ಭಾವಾನಿಗೌಡ ಮನೆಯ ಹಿಂದಿನ ಸಿ.ಸಿ ರಸ್ತೆಯ ಮೂಖಾಂತರ ಮನೆಗೆ ಹೊರಟಾಗ ನಾನು ಮತ್ತೆ ಸ್ಪರ್ಧೆ ಮಾಡಿರುವದನ್ನು ಸಹಿಸದೆ ನಾನು ಪುನಃ ಗೆಲ್ಲುವ ಸಾಧ್ಯತೆ ಇರುವದ್ದರಿಂದ ನನ್ನ ವಿರುದ್ದ ನಿಂತ ಶಾಮರಾವ ತಂದೆ ಹಣಮಂತು ಇವನ ಪರವಾಗಿ ನಮ್ಮೂರ ಮೇಲ ಜಾತಿಯವರಾದ 1] ಸಾಬರೆಡ್ಡಿ ತಂದೆ ಹುಸರೆಡ್ಡಿ 2] ಭೀಮರೆಡ್ಡಿ ತಂದೆ ಹುಸರೆಡ್ಡಿ 3] ಶಿವರೆಡ್ಡಿ ತಂದೆ ಹುಸರೆಡ್ಡಿ 4] ಕೃಷ್ಣಾ ರೆಡ್ಡಿ ತಂದೆ ಜಗನ್ನಾಥರೆಡ್ಡಿ 5] ಭಾಸ್ಕರರಡ್ಡಿ ಮಾಸನ 6] ನಾಗಪ್ಪ ತಂದೆ ಭೀಮಪ್ಪ ಬಿಬ್ಬಳ್ಳಿ 7] ದೇವಪ್ಪ ತಂದೆ ಯಂಕಟ್ಟಪ್ಪ ಮಂತ್ರಿ 8] ಸಾಯಿರೆಡ್ಡಿ ತಂದೆ ಹಣಮರೆಡ್ಡಿ 9] ಶಾಮರಾವ ಇವರೆಲ್ಲರೂ ಬಂದು ನನಗೆ ವಡ್ಡ ಜಾತಿ ಸುಳ್ಯಾ ಮಕ್ಕಳೇ ಅಂತಾ ಜಾತಿ ಎತ್ತಿ ಬೈದು ನಾಗಪ್ಪ ಮತ್ತು ಶಾಮರಾವ ಇವರು ಗಟ್ಟಿಯಾಗಿ ಹಿಡಿದರು ಸಾಬರೆಡ್ಡಿ ಇತನು ಕಲ್ಲಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು. ಭೀಮರೆಡ್ಡಿ ಇತನು ಬಡಿಗೆಯಿಂದ ತೊಡೆಗಳಿಗೆ  ಹೊಡೆದು ಒಳಗಾಯ ಮಾಡಿದನು.  ಉಳಿದ ಶಿವರೆಡ್ಡಿ ಕೃಷ್ಣಾರೆಡ್ಡಿ ,ಬಾಸ್ಕರರೆಡ್ಡಿ ,ದೇವಪ್ಪ ಮತ್ತು ಸಾಯಿರೆಡ್ಡಿ ಇವರು ಕೈಗಳಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ.ಲಕ್ಷ್ಮಿಕಾಂತ ತಂದೆ ಶ್ರೀಮಂತ ದೊಡ್ಡಮನಿ, ಸಾ|| ಕುಸನೂರ ಇವರು ದಿನಾಂಕ: 02-06-2015 ರಂದು ನಮ್ಮ ಓಣಿಯ ಜಗನ್ನಾಥ ತಂದೆ ದಶರಥ ಪಟ್ಟೆದಾರ, ಭೀಮಶಾ ತಂದೆ ಹಣಮಂತ ಕುಮಸಿ, ಶಿವಕುಮಾರ ತಂದೆ ಸುಭಾಷ ಭಟ್ಟರಕಿ ಎಲ್ಲರೂ ಕೂಡಿ ನಮ್ಮ ಊರಿನ ಅಂಬಿಗರ ಔಡಯ್ಯ ಸರ್ಕಲ್ ಹತ್ತಿರ ಇರುವ ಮಲ್ಲಪ್ಪ ಹೊಟೆಲದಲ್ಲಿ ನೀರು ತೆಗೆದುಕೊಂಡು ಬರಲು ಹೋದಾಗ ಅಲ್ಲಿಯೆ ಇರುವ ಚಂದ್ರಕಾಂತ ಇವರ ಮನೆಯ ಎದುರುಗಡೆ ನಮ್ಮ ಊರಿನವರಾದ 1. ದೇವಾನಂದ ತಂದೆ ಪೀರಪ್ಪ ತಳವಾರ, 2. ಭೀಮಾಶಂಕರ ತಂದೆ ಪೀರಪ್ಪ ತಳವಾರ, 3. ಶಶಿಕುಮಾರ ತಂದೆ ಪೀರಪ್ಪ ತಳವಾರ, 4. ಪೀರಪ್ಪ ತಂದೆ ಭೀಮಶ್ಯಾ ತಳವಾರ, 5. ಅಂಬ್ರೇಷ ತಂದೆ ನಾಗಪ್ಪ ತಳವಾರ, 6. ಈರಣ್ಣ ತಂದೆ ಭೀಮಶ್ಯಾ ತಳವಾರ, 7. ಕಿರಣ ತಂದೆ ಈರಣ್ಣ ತಳವಾರ, 8. ಸೋಮಣ್ಣ ತಂದೆ ಹೊನ್ನಪ್ಪ ತೆಗನೂರ, 9. ಸಾಬಣ್ಣ ಹಳ್ಳಿ, 10. ಸುರೇಶ ತಂದೆ ಈರಣ್ಣ ತಳವಾರ 11. ಬಸವರಾಜ ತಂದೆ ಸೋಮಣ್ಣ ತಳವಾರ, 12. ಕಾಂತಪ್ಪ ತಂದೆ ಸೋಮಣ್ಣ ತೆಗನೂರ ಎಲ್ಲರೂ ಸಾ : ಕುಸನೂರ ಗ್ರಾಮ ಇವರು  ಜಾತಿ ನಿಂದನೆ ಮಾಡಿ, ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ರಾಡು, ಕೊಡಲಿಗಳನ್ನು ತೆಗೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೊಡಲಿಯಿಂದ ಹೊಡೆದು ರಕ್ತಗಾಯ ಮಾಡಿದ್ದು ಹಾಗೂ ಜಗನ್ನಾಥ ತಂದೆ ದಶರಥ ಪಟ್ಟೆದಾರ, ಭೀಮಶಾ ತಂದೆ ಹಣಮಂತ ಕುಮಸಿ, ಇವರಿಗೂ ಸಹ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಕುರಕುಂಟಾ ಠಾಣೆ : ಶ್ರೀ ಶಿವರೆಡ್ಡಿ ತಂದೆ ಹುಸರೆಡ್ಡಿ ಸಾ : ಮದಕಲ ರವರು ಮತ್ತು ದೇವಯ್ಯಾ ತಂದೆ ನರಸಯ್ಯಾ ಕಲಾಲ ಇವರಿಬ್ಬರೂ 2015 ರ ಗ್ರಾಮ ಪಂಚಾಯತ ಚುನಾವಣೆಗೆ  ಮದಕಲ ಗ್ರಾಮದ ಬ್ಲಾಕ ನಂ:- 02 ರಲ್ಲಿ ಪ್ರತಿಸ್ಪರ್ಧಿಗಳಾಗಿ  ಚುನಾವಣೆಗೆ ನಿಂತಿದ್ದು ದಿನಾಂಕ:- 01-06-2015 ರಂದು ರಾತ್ರಿ ವೇಳೆಯಲ್ಲಿ ಫಿರ್ಯಾಧಿ ಮತ್ತು ಆತನ ವಿರುದ್ದ ಸ್ಪರ್ಧಿಸುತ್ತಿರುವ ದೇವಯ್ಯಾ ಇಬ್ಬರೂ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದು ಫಿರ್ಯಾಧಿಯು ರಾತ್ರಿ ಮಾಣಿಕಪ್ಪ ಕಿರಾಣಿ ಅಂಗಡಿ ಮುಂದೆ ನಿಂತಾಗ ದೇವಯ್ಯಾ ತಂದೆ ನರಸಯ್ಯಾ ಕಲಾಲ ಮತ್ತು ಆತನ ಅಣ್ಣನಾದ ಪಾಪಯ್ಯಾ ಇಬ್ಬರೂ ಕೂಡಿಕೊಂಡು ಫಿರ್ಯಾಧಿಯನ್ನು ಕೊಲೆ ಮಾಡುವ ಉದ್ದೇಶದಿಂದ 1] ಸಂತೋಷರೆಡ್ಡಿ ತಂದೆ ವೆಂಕಟರೆಡ್ಡಿ 2] ಸಂದೀಪರೆಡ್ಡಿ ತಂದೆ ವೆಂಕಟರೆಡ್ಡಿ 3] ಸುಮನರೆಡ್ಡ ತಂದೆ ವೆಂಕಟರೆಡ್ಡಿ 4]ರುಕ್ಮಾರೆಡ್ಡಿ ತಂದೆ ಮಲ್ಲರೆಡ್ಡಿ 5] ಅಂಜಿಲಪ್ಪ ಗಡಗು 6]ವೆಂಕಟರೆಡ್ಡಿ ತಂದೆ ಮಲ್ಲರೆಡ್ಡಿ ಸಾ|| ಎಲ್ಲರೂ ಮದಕಲ ಗ್ರಾಮ ಇವರಿಗೆ ದೇವಯ್ಯಾ ತಂದೆ ನರಸಯ್ಯಾ ಕಲಾಲ ಮತ್ತು ಆತನ ಅಣ್ಣನಾದ ಪಾಪಯ್ಯಾ ತಂದೆ ನರಸಯ್ಯಾ ಕಲಾಲ ಪ್ರಚೋದನೆ ನೀಡಿದ್ದು ಇವರೆಲ್ಲಾ ಅಕ್ರಮಕೂಟ ಕಟ್ಟಿಕೊಂಡು ಫಿರ್ಯಾಧಿಗೆ ಕೋಲೆ ಮಾಡುವ ಉದ್ದೇಶದಿಂದ ದಾಳಿ ಮಾಡಿದ್ದು  ಸಂದೀಪರೆಡ್ಡಿ ತಂದೆ ವೆಂಕಟರೆಡ್ಡಿ ಇತನು ಫಿರ್ಯಾಧಿಗೆ ಚಾಕುವಿನಿಂದ ತಲೆಗೆ ಹಲ್ಲೆ ಮಾಡಿದ್ದು ರಕ್ತಗಾಯಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸಿದ್ದಮ್ಮ ಗಂಡ ಅಂಬಾರಾಯ ಪೂಜಾರಿ, ಸಾ : ಬೋಳೆವಾಡ ಗ್ರಾಮ  ಇವರು  ನಮ್ಮೂರಿನ ಪಂಚಾಯಿತಿ ಚುನಾವಣೆಗೆ ನಿಂತಿದ್ದು, ದಿನಂಕ: 02/06/2015 ರಂದು ನಾನು ನಮ್ಮೂರ ಎಲ್ಲಾ ಮನೆಗಳಿಗೆ ತೆರಳಿ ನನಗೆ ಓಟು ಕೊಡಲು ಕೇಳೀಳಕೊಂಡಿದ್ದು. ನಂತರ 11:30 ಗಂಟೆಗೆ ನಮ್ಮೂರ ಪ್ರಾಥಮಿಕ ಶಾಲೆ ಮತಗಟ್ಟೆ ಕೇಂದ್ರಕ್ಕೆ ಹೋಗಿ ನನ್ನ ಓಟು ಹಾಕಿ ಮರಳಿ ಶಾಲೆಗೆ ಹೋಗಿ 100 ಅಡಿ ಅಂತರದಲ್ಲಿ ಹಾಕಿದ ಸುಣ್ಣದ ಗೆರೆ ಹತ್ತಿರ ನಮ್ಮೂರ 1) ಶರಣಪ್ಪ  ತಂದೆ ಕಾಮಣ್ಣ ಹದನೂರ, 2) ಮಹಾಂತಪ್ಪ ತಂದೆ ಶರಣಪ್ಪ ಹದನೂರ, 3) ಸಿದ್ದಲಿಂಗಯ್ಯ ತಂದೆ ಶರಣಪ್ಪ ಹದನೂರ, 4) ಮಂಜುನಾತ ತಂದೆ ಶರಣಪ್ಪ ಹದನೂರ, 5) ನಿಂಗಮ್ಮ ಗಂಡ ಶರಣಪ್ಪ ಹದನೂರ, 6) ಶೇಷಮ್ಮ ಗಂಡ ಶರಣಪ್ಪ ಹದನೂರ ಎಲ್ಲರೂ ಸೇರಿಕೊಂಡು ನಾನು ಬರುವುದನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈದು, ನಮಗೆ ಓಟ ಕೇಳಿಲ್ಲ ರಂಡಿ ನಿಹ್ಯಾಂಗ ಗೆಲ್ಲತಿ ಬೋಸಡಿ ನೋಡತ್ತೀನಿ ಅಂತಾ ಬೈಯ್ದು, ಎಲ್ಲರೂ ಒಮ್ಮಿಲಿ ಬಂದು ನೀ ರಂಡಿ ಊರ ಉದ್ದಾರ ಮಾಡತೀ ಬೋಸಡಿ ಅಂತಾ ಅಂದು ಕೂದಲು ಹಿಡಿದು ಎಳೆದಾಡಿ, ಕಲ್ಲಿನಿಂದ ಹೊಡೆದು, ಹೊಟ್ಟೆಗೆ ಹೊಡೆದು, ಕುಪಪ್ಸ ಹಿಡಿದು ಹರೆದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಶರಣಪ್ಪ ತಂದೆ ಕಾಮಣ್ಣ ಹದನೂರ, ಸಾ : ಬೋಳೆವಾಡ ಗ್ರಾಮ ಇವರು ಊರಿನ ಸರಕಾರಿ ಪ್ರಾಥಮಿಕ ಶಾಲೆಯ ಎದುರು ರಸ್ತೆಯ ಮೇಲೆ ನಾನು ಗ್ರಾಮ ಪಂಚಾಯತ ಚುನಾವಣೆಯ ಪ್ರಯುಕ್ತ ಮತದಾನ ಮಾಡಿ ಬಂದು ನಿಂತಾಗ ನಮ್ಮ  ಊರಿನ 1) ರೇವಣಸಿದ್ದಪ್ಪ ಪೂಜಾರಿ, 2) ಮಾಳಪ್ಪ ಪೂಜಾರಿ, 3) ಅಂಬಾರಾಯ ಪೂಜಾರಿ, 4) ಸಿದ್ದಮ್ಮ ಪೂಜಾರಿ, 5) ಭಾರತ ಪೂಜಾರಿ, 6) ಅಣವೀರ ಪೂಜಾರಿ, 7) ಮಂಜುನಾಥ ಪೂಜಾರಿ, 8) ಮಲ್ಲಪ್ಪ ಪೂಜಾರಿ ಎಲ್ಲರೂ ಬೋಳೆವಾಡ ಗ್ರಾಮ ಇವರು ಬಂದುನನಗೆ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಕೈ ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿದ್ದರಿಂದ ನನಗೆ ಗುಪ್ತಗಾಯವಾಗಿದ್ದು, ಮಹಾಂತೇಶ ಬಿಡಿಸಲು ಬಂದಾಗ ಅವನಿಗೂ ಹೊಡೆಬಡೆ ಮಾಡಿ ನಮ್ಮ ಇಬ್ಬರಿಗೆ ದುಃಖಾಪತಗೊಳಿಸಿದ್ದರಿಂದ ನಮಗೆ ಗುಪ್ತಗಾಯ & ತರಚಿದ ಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಚಾಂದಪಟೇಲ ತಂದೆ ಖಾಸಿಂ ಪಟೇಲ, ಸಾ : ಕೋಟನೂರ (ಡಿ) ರವರು ದಿನಾಂಕ: 02/06/2015 ರಂದು ಸಾಯಂಕಾಲ ಮನೆಗೆ ಕಿರಾಣಿ ಸಾಮಾನು ತರಲು ನಮ್ಮೂರ ನಜೀರ ತಂದೆ ರುಕ್ಮೋದ್ದಿನ ಇವರ ಕಿರಾಣಿ ಅಂಗಡಿಗೆ ಹೋಗಿ ಕಿರಾಣಿ ಖರೀದಿಸಿಕೊಂಡು ಮನೆಗೆ ಹೋಗಲು ಜೇವರ್ಗಿ-ಕಲಬುರಗಿ ರಸ್ತೆಯಲ್ಲಿ ನಡೆಯುತ್ತಾ ಹೊರಟಾಗ ಜೇವರ್ಗಿ ಕಡೆಯಿಂದ ಒಬ್ಬ ಮೊಟರ ಸೈಕಲ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದವನೆ ನನಗೆ ಹಿಂದಿನಿಂದ ಡಿಕ್ಕಿ ಪಡಿಸಿ ನಾನು ಕೆಳಗೆ ಬಿದ್ದು, ನನ್ನ ಬಲಗಾಲಿಗೆ ಗುಪ್ತಗಾಯವಾಗಿದ್ದು, ಆಗ ಘಟನೆ ನೋಡಿ ನಜೀರ ತಂದೆ ರುಕ್ಮೋದ್ದಿನ ಈತನು ಓಡಿ ಬಂದು ನನಗೆ ಎಬ್ಬಿಸಿ ನನಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಕೆಎ 32 ಎಸ್ 4612 ನೇದ್ದರ ಚಾಲಕ ಸ್ವಲ್ಪ ನಿಂತ ರೀತಿ ಮಾಡಿ ತನ್ನ ವಾಹನ ತೆಗೆದುಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 02.06.2015 ರಂದು ಸಾಯಂಕಾಲ ಶ್ರೀ ಶಾಂತನಗೌಡ ತಂದೆ ಬಸನಗೌಡ ಮೇಟಿ ಸಾ : ಕಕ್ಕಸಗೇರಿ. ತಾ : ಶಹಾಪುರ. ರವರು ಮತ್ತು ನಮ್ಮೂರ ಹಣಮಂತ ಕುಳಿತುಕೊಂಡು ಹೋಗುತ್ತಿದ್ದ ಕೃಸರ್ ಜೀಪ ವಾಹನ ನಂ ಕೆ.ಎ36ಎಮ್9271 ನೇದ್ದರ ಚಾಲಕನು ತನ್ನ ಜೀಪ್‌ ಅನ್ನಿ ಅತಿ ವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿ ಜೇವರಗಿಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪ ನಿಂತಿದ್ದ ಕಮಾಂಡರ್ ಜೀಪ ನಂ ಕೆ.ಎ33ಎಮ್579 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಕಾರಣ ಸದರಿ ಕಮಾಂಡರ್ ಜೀಪ ಮುಂದೆ ಚಲಿಸಿ ಮುಂದೆ ನಿಂತಿದ್ದ ಬುಲೇರೋ ಜೀಪ್‌ ನಂ ಕೆ.ಎ32ಎನ್2703 ನೇದ್ದಕ್ಕೆ ಡಿಕ್ಕಿಯಾಗಿ ವಾಹನ ಜಖಂ ಗೊಂಡಿದ್ದು ಹಾಗು ಕೃಸರ್ ಜೀಪ್‌ ನಲ್ಲಿ ಕುಳಿತಿದ್ದ ಹಣಮಂತ ಈತನಿಗೆ ಸಣ್ಣ ಪುಟ್ಟ ಗಾಯಗೊಳಿಸಿ ಸದರಿ ಕೃಸರ್ ಜೀಪ್‌ ಅನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: