Police Bhavan Kalaburagi

Police Bhavan Kalaburagi

Monday, June 8, 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 08-06-2015 ರಂದು ಸ್ಟೇಷನ್ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ,ಎಮ ಬಿರಾದಾರ ಆಸ್ಪತ್ರೆ ಹಿಂದುಗಡೆ ಕಲ್ಯಾಣಕರ ಬಿಲ್ಡಿಂಗ ಹತ್ತಿರ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ. ಮನೋಹರ ಗಾಜರೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ,ಎಸ್,ಪಿ ಸಾಹೇಬ ಎ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಪಿ,ಎಮ ಬಿರಾದಾರ ಆಸ್ಪತ್ರೆ ಹಿಂದುಗಡೆ ಕಲ್ಯಾಣಕರ ಬಿಲ್ಡಿಂಗ ಹತ್ತೀರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1) ರೇವಣಸಿದ್ದಪ್ಪ ತಂದೆ ಗುಂಡುರಾವ ಪಾಟೀಲ ಸಾ: ದೇವಂತಗಿ ತಾ:ಆಳಂದ ಹಾವ: ಜೇವರ್ಗಿ ಕಾಲೋನಿ ಕಲಬುರಗಿ, 2) ಮಹಾದೇವ ತಂದೆ ರಾಮಚಂದ್ರ ಕಲ್ಯಾಣಶೆಟ್ಟಿ ಸಾ: ಬಾಳನಕೇರಿ ಆಳಂದ   3) ಬಾಬುರಾವ ತಂದೆ ಶರಣಪ್ಪ ದೊಣ್ಣುರಕರ ಸಾ: ಡೊಣ್ಣುರು ತಾ: ಆಳಂದ ಹಾವ: ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  4) ಫೀರೋಜ ಖಾನ ತಂದೆ ಮಜೀದ ಖಾನ ಸಾ: ಎಮ್.ಎಸ್.ಕೆ ಮಿಲ್ ಜೀಲಾನಾಬಾದ ಕಾಲೋನಿ ಕಲಬುರಗಿ 5) ದತ್ತಾತ್ರೇಯ ತಂದೆ ಗುರುಮೂರ್ತಿ ಸ್ಥಾವರಮಠ ಸಾ: ಡೊಣ್ಣುರು ತಾ:ಆ ಆಳಂದ ಹಾವ: ಮಾಣಿಕೇಶ್ವರಿ ಕಾಲನಿ ಕಲಬುರಗಿ 6) ಸಚೀನ ತಂದೆ ಚಂದ್ರಶೇಖರ ಪಾಟೀಲ ಸಾ: ಸುಲ್ತಾನಪೂರ ಗಲ್ಲಿ ಆಳಂದ ಇತನಿಂದ 7) ಗುರುನಾಥ ತಂದೆ ಶಿವುಕುಮಾರ ಮಣೂರ ಸಾ: ಜಾಜೀ ಬ್ಲ್ಯಾಕ್ ಐವಾನ ಇ ಶಾಹಿ ಕಲಬುರಗಿ 8) ವಿನೋಧಕುಮಾರ ತಂದೆ ಕಾಂತರಾವ ಕುಲಕರ್ಣಿ ಸಾ: ಮನೆ ನಂ- 234 ವಿದ್ಯಾ ನಗರ ಕಲಬುರಗಿ 9) ಯೋಗಿ ತಂದೆ ಸುಬಾಸ ಬಸೂತಕರ ಸಾ: ಆದರ್ಶ ನಗರ 2ನೇ ಫೇಸ್ ಕಲಬರುಗಿ  10) ಸೋಮನಾಥ ತಂದೆ ಹಣಮಂತರಾವ ಪಾಟೀಲ ಸಾ: ತೀರ್ಥ ತಾ: ಆಳಂದ ಜಿ: ಕಲಬುರಗಿ 10 ಜನರಲ್ಲಿದ್ದ  ಹಣ ಮತ್ತು ನೆಲದ ಮೇಲೆ ಬಿದ್ದ ಹಣ ಹೀಗೆ ಒಟ್ಟು. 57.500/- ರೂ. ಮತ್ತು 52 ಇಸ್ಪೆಟ್ ಎಲೆಗಳು ಮತ್ತು 9 ವಿವಿಧ ಕಂಪನಿಯ ಮೊಬೈಲ್ ಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ವೆಸಗಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಸಿದ್ರಾಮ ಜಮಾದಾರ ಸಾ : ಅಫಜಲಪೂರ  ರವರ ಮಗಳಾದ ಭಾಗ್ಯಶ್ರೀ  ಇವಳನ್ನು ದಿನಾಂಕ 18-05-2015 ರಂದು ಅಪಹರಣವಾದ ಬಗ್ಗೆ ಪ್ರಕರಣ ದಾಖಲಿಸಿದ್ದು ಸದರಿಯವಳು ಇಂದು ಮರಳಿ ಬಂದಿದ್ದು ಸದ್ರಿಯವಳನ್ನು ವಿಚಾರಿಸಲು ದಿನಾಂಕ 18-05-2015 ರಂದು ಸಾಯಂಕಾಲ ನಾನು ಲಕ್ಷ್ಮೀ ಗುಡಿಯ ಮುಂದಿನಿಂದ ಬರ್ಹಿದೇಶೆಗೆ ಹೋಗುತ್ತಿದ್ದಾಗ  ಮಲ್ಕಪ್ಪ ತಂದೆ ಶಂಕರ ದೊಡಮನಿ ಸಾ: ಶಿವಪೂರ ಇವನು ನಾನು ನಿಗೆ ಪ್ರಿತಿಸುತ್ತಿದ್ದು ಮದುವೆ ಮಾಡಿಕೊಳ್ಳುತ್ತೆನೆ ಅಂಥಾ ಅಂದಾಗ ನಾನು ನನಗು ನಿನಗು ಎನು ಸಂಬಂಧ ಅಂತಾ ಕೇಳಿದ್ದು ಅವನು ನನ್ನಂದಿಗೆ ಬರದೆ ಇದ್ದರೆ ಮದುವೆನು ಮಾಡಿಕೊಳ್ಳುವುದಿಲ್ಲಾ ಮತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಒತ್ತಾಯಪೂರಕವಾಠಗಿ ನನ್ನನ್ನು ಅಪಹರಿಕೊಂಡು ಹೋಗಿ  ಸಿಂದಗಿ ತಾಲೂಕಿನ ಮಾರ್ಸನಳ್ಳಿ ಗ್ರಾಮದ ತನ್ನ ಸಂಭಂದಿಕರ ಹೊಲದಲ್ಲಿನ ಮನೆಯಲ್ಲಿ ಇಟ್ಟು ಒತ್ತಾಯ ಪೂರ್ವಕವಾಗಿ ಜಬರಿ ಸಂಭೋಗ ಮಾಡಿ, ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆ. ಮತ್ತು ಹೊರಗೆ ಎಲ್ಲಿಗೂ ಹೋಗದಂತೆ ಹಾಗೂ ಯಾರ ಜೋತೆಯು ಮಾತಾಡಲು ಬಿಡದೆ 4-5 ದಿವಸಗಳ ನಂತರ ಸೊಲ್ಲಾಪೂರ, ತುಳಜಾಪೂರ ಮತ್ತು ಬೆಂಗಳುರ ನಗರಗಳಿಗೆ ಕರೆದುಕೊಂಡು ಹೋಗಿ ಸುತ್ತಾಡಿ ಇಂದು ದಿನಾಂಕ 06-06-2015 ರಂದು ಮಾರ್ಸನಳ್ಳಿ  ಗ್ರಾಮದಿಂದ ಕರೆದುಕೊಂಡು ಬಂದು ಅಫಜಲಪೂರ ಬಸ್ಸ ನಿಲ್ದಾಣದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ವಿಶ್ವವಿದ್ಯಾಲಯ ಠಾಣೆ : ಶ್ರೀ.ರಾಘವೇಂದ್ರ ಪಿ.ಎಸ್.ಐ (ಕಾ.ಸು) ವಿಶ್ವವಿದ್ಯಾಲಯ ಪೊಲೀಸ ಠಾಣೆ ಕಲಬುರಗಿ ರವರು ದಿನಾಂಕ: 07-06-2015 ರಂದು ಬೆಳಿಗ್ಗೆ ನಂದೂರ ಕೆ ಗ್ರಾಮದ ಕಮಾನ ಹತ್ತಿರ ಎರಡು ಟ್ರಾಕ್ಟರಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ನಂದೂರ ಕೆ ಗ್ರಾಮದ ಹತ್ತಿರ ಹೋಗಿ ನಂದೂರ ಗ್ರಾಮ ಸ್ವಲ್ಪ ದೂರದಲ್ಲಿ ಇರುವಾಗಲೆ ನಮ್ಮ ವಾಹನ ಮರೆಯಲ್ಲಿ ನಿಲ್ಲಿಸಿ ನಾವು ಹಾಗೂ ಪಂಚರು ನಡೆಯುತ್ತಾ ಬಾತ್ಮಿಯಂತೆ ನಂದೂರ ಕೆ ಗಾಮದ ಕಮಾನ ಹತ್ತಿರ ರಸ್ತೆಯ ಮೇಲೆ ಕಾಯುತ್ತಾ ನಿಂತಾಗ 11:00 ಗಂಟೆಗೆ ಸುಮಾರಿಗೆ ನಂದೂರ ಗ್ರಾಮದ ಕಡೆಯಿಂದ ಮರಳು ತುಂಬಿದ ಎರಡು ಟ್ಯ್ರಾಕ್ಟರಗಳು ಬರುವುದನ್ನು ಗಮನಿಸಿ ಕೈ ಸನ್ನೆ ಮಾಡಿ ನಿಲ್ಲಿಸಿ ನೋಡಲು ಎರಡು ಟ್ಯಾಕ್ಟರಗಳಲ್ಲಿ ಮರಳು ತುಂಬಿದ್ದು, ಟ್ಯಾಕ್ಟರ್ ನಂಬರ ನೋಡಲು 1) ಕೆಎ 32 ಟಿ.ಎ 7166 ಟ್ರ್ಯಾಲಿ ನಂ: ಕೆಎ 32 ಟಿ 1314-15 ಇದ್ದು ಚಾಲಕ ಹೆಸರು ವಿಚಾರಿಸಲು ರಾಘವೇಂದ್ರ ತಂದೆ ಸಾಯಿಬಣ್ಣ ಭೋವಿ, ಸಾ|| ಕಾಟಮ ದೇವರ ಹಳ್ಳಿ ಅಂತಾ ಹೇಳಿದ್ದು, ಇನ್ನೊದ್ದು ಟ್ರ್ಯಾಕ್ಟರ್ ನಂಬರ ನೋಡಲು ನಂಬರ ಪ್ಲೇಟ್ ಇರುವದಿಲ್ಲ ಇಂಜನ ನಂಬರ ನೋಡಲು 3100ELI43H438896F3 ಛಸ್ಸಿ ನಂಬರ MI3T11 ಚಾಲಕ ಹೆಸರು ವಿಚಾರಿಸಲು ಸಿದ್ದಲಿಂಗ ತಂದೆ ಕಲ್ಯಾಣಿ ಜಡಗಿ, ಸಾ|| ಕಾಟಮದೇವರ ಹಳ್ಳಿ ತಾ|| ಚಿತ್ತಾಪೂರ ಅಂತಾ ತಿಳಿಸಿದ್ದು ಸದರಿಯವರಿಗೆ ಮರಳು ಎಲ್ಲಿಂದ ತಂದಿರುವಿರಿ ಅಂತಾ ವಿಚಾರಿಸಲು ನಾವು ಚಿತ್ತಾಪೂರ ತಾಲೂಕಿನ ಕಾಟಮದೇವರ ಹಳ್ಳಿಯ ಕಾಗಿಣಾ ನದಿಯಿಂದ ತುಂಬಿಕೊಂಡು ನಗರದಲ್ಲಿ ಎಲ್ಲಾದರೂ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದೇವೆ ಅಂತಾ ಹೇಳಿದ್ದು ನಂತರ ಸದರಿ ಮರಳಿನ ದಾಖಲಾತಿ ಕೇಳಲು ಟ್ರ್ಯಾಕ್ಟರ್ ಟ್ರ್ಯಾಲಿಯ ಟೂಲ ಬಾಕ್ಸದಲ್ಲಿ ದಾಖಲಾತಿಗಳು ಇವೆ ಅಂತಾ ಹೇಳಿ ದಾಖಲಾತಿ ಹಾಜರ ಪಡಿಸುತ್ತೇವೆ ಅಂತಾ ಕುಸಿರಿಕೊಂಡು ಓಡಿ ಹೋಗಿದ್ದು ಇರುತ್ತದೆ. ಸದರಿ ಟ್ಯಾಕ್ಟರಗಳಲ್ಲಿ ಅಂದಾಜು 10,000/- ಬೆಲೆಬಾಳುವ ಮರಳು, ಎರಡು ಟ್ರ್ಯಾಕ್ಟರಗಳ ಅಂದಾಜು ಬೆಲೆ 3,00,000/- ಹೀಗೆ ಒಟ್ಟು 3,10,000/- ಬೆಲೆಬಾಳುವ ಮರಳು ಹಾಗೂ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ವಾಹನಗಳೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: