Police Bhavan Kalaburagi

Police Bhavan Kalaburagi

Monday, July 20, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 178/2015  ಕಲಂ 87 Karnataka Police Act:.
ದಿನಾಂಕ 19.07.2015 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹೊಸಗೊಂಡಬಾಳ ಗ್ರಾಮದ ಚನ್ನಪ್ಪ ಪಲ್ಲೇದ್ ಇವರ ಖುಲ್ಲಾ ಜಾಗೆಯ  ಹತ್ತಿರ ಆರೋಪಿತರು ಸಾರ್ವಜನಿಕ ಸ್ಥಳೆದಲ್ಲಿ ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಶ್ರೀ. ಚಿತ್ತಂಜನ ಡಿ. ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 4240=00 ರೂ ,ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 112/2015  ಕಲಂ 87 Karnataka Police Act:.
ದಿನಾಂಕ: 19-07-2015 ರಂದು ಸಂಜೆ 7-55 ಗಂಟೆಗೆ ಮಾನ್ಯ ಸಿ.ಪಿ.ಐ. ಸಾಹೇಬರು ಕುಷ್ಠಗಿ ವೃತ್ತರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಮತ್ತು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, 5 ಜನ ಆರೋಪಿತರನ್ನು ಹಾಗೂ ಜೂಜಾಟದ ಹಣ 11,160=00 ರೂ ಮತ್ತು ಒಂದು ಹಳೆಯ ನ್ಯೂಜ್ ಪೇಪರ್, 52 ಇಸ್ಪೇಟ್ ಎಲೆಗಳನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಕುಷ್ಠಗಿ ಪಟ್ಟಣದ ರಾಯಚೂರು ರಸ್ತೆಯ ಅನ್ನಪೂಣಶ್ವರಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪೀಟ್-ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಫಿರ್ಯಾಧಿದಾರರು, ಎ.ಎಸ್.ಐ. ಪುಂಡಪ್ಪ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-36,  ಸಿಪಿಸಿ-105, 117, ಎಲ್ಲರೂ ಕೂಡಿ ರೇಡ್ ಮಾಡಿ 5 ಜನ ಆರೋಪಿತರನ್ನು ಹಾಗೂ ಇಸ್ಪೇಟ್ ಜೂಜಾಟದ ಒಟ್ಟು ಹಣ 11,160-00. 52 ಇಸ್ಪೇಟ್ ಎಲೆಗಳು ಹಾಗೂ ಒಂದು ಹಳೆ ನ್ಯೂಜ್ ಪೇಪರ್ನ್ನು ಅಲ್ಲದೇ 2 ಮೋಟಾರ್ ಸೈಕಲ್ ನಂ. ಕೆ.ಎ37 ಡಬ್ಲೂ-8417 ಬಜಾಜ್ ಡಿಸ್ಕವರಿ ಅ.ಕಿ. 20,000=00 ಹಾಗೂ ಕೆ.ಎ.37 ಎಲ್-1293 ಅ.ಕಿ. 30,000=00 ರೂಗಳು ಹಾಗೂ ಆರೋಪಿತರ ವಶದಲ್ಲಿದ್ದ 4 ಮೊಬೈಲ್ ಗಳನ್ನು ಜಪ್ತಿಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 111/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ:.
ದಿನಾಂಕ: 19-07-2015 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧಿದಾರರಾದ ರಾಮಪ್ಪ ತಂದೆ ಶಿವಪ್ಪ ಗಾಣಿಗೇರ ವಯ: 51 ವರ್ಷ ಜಾ: ಲಿಂಗಾಯತ ಉ: ಶಿಕ್ಷಕ ಸಾ: 5 ನೇ ವಾರ್ಡ ವಿದ್ಯಾನಗರ ಕುಷ್ಠಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನಂದರೆ, ದಿನಾಂಕ: 30-03-2013 ರಂದು ಫಿರ್ಯಾಧಿದಾರರು ತನ್ನ ಮನೆಯ ಅಡಚಣೆಗಾಗಿ 80,000=00 ರೂ ಗಳನ್ನು 100=00 ರೂಪಾಯಿಗೆ 10 ರೂಪಾಯಿಯಂತೆ ಆರೋಪಿತನ ತಂದೆಯ ಕಡೆಯಿಂದ ಸಾಲವಾಗಿ ಪಡೆದುಕೊಂಡಿದ್ದು, 5 ತಿಂಗಳ ವರೆಗೆ ಪ್ರತಿ ತಿಂಗಳು 8,000=00 ರೂಪಾಯಿಯಂತೆ ಬಡ್ಡಿಯನ್ನು ಕೊಟ್ಟಿದ್ದು ನಂತರ ಆರೋಪಿ ತಂದೆ ಲಕ್ಷ್ಮಣ ಬಡಿಗೇರ ರವರು ತೀರಿಕೊಂಡ ನಂತರ ಆರೋಪಿತನು ಹಿರಿಯರನ್ನು ಕೂಡಿಸಿ ಅಸಲು 80,000=00 ರೂಪಾಯಿಗೆ ಒಟ್ಟು ಬಡ್ಡಿ ಸೇರಿಸಿ 2,00,000=00 ರೂ ಮಾಡಿದ್ದು ಅದಕ್ಕೆ ಫಿರ್ಯಾಧಿ ಕಡೆಯಿಂದ ಬಾಂಡ್ ಬರೆಯಿಸಿಕೊಂಡಿರುತ್ತಾನೆ. ಹಾಗೂ ಫಿರ್ಯಾಧಿಯು 18 ಚಕ್ ಗಳನ್ನು ಕೊಟ್ಟಿದ್ದು ಅದರಲ್ಲಿ 5 ಚೆಕ್ ಗಳನ್ನು ಪ್ರತಿ ತಿಂಗಳು 10,000=00 ರೂ ಅಂತೆ ಡ್ರಾ ಮಾಡಿರುತ್ತಾನೆ. ಹಾಗೂ ಫಿರ್ಯಾಧಿಗೆ ಆರೋಪಿತನು ಇನ್ನೂ ಹಣ ಕೊಡುವದಿದೇ ಅಂತಾ ಆಗಾಗ್ಗೆ ಮನೆಯ ಹತ್ತಿರ ಬಂದು ಕಿರಿಕಿರಿ ಮಾಡುತ್ತಿದ್ದು ಆಗ ಫಿರ್ಯಧಿಯು 30,000=00 ರೂ ಕೊಟ್ಟಿದ್ದು ಮತ್ತು ಒಂದು ಸಾರಿ ಹನುಮಂತಪ್ಪ ಭಜಂತ್ರಿಯವರ  ಬ್ಯಾಂಕ್ ಖಾತೆಗೆ 20,000=00 ರೂಗಳನ್ನು ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 111/2015 ಕಲಂ. 3 &4 ಕರ್ನಾಟಕ ಮೀತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ ಮತ್ತು 420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 223/2015  ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 504 ಐ.ಪಿ.ಸಿ.
ದಿನಾಂಕ:- 19-07-2015 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಲ್ಲಿಕಾರ್ಜುನ ತಂದೆ ವೀರಭದ್ರಪ್ಪ ರಾಚನಗೌಡ್ರು, ವಯಸ್ಸು 43 ವರ್ಷ, ಜಾತಿ: ಲಿಂಗಾಯತ ಉ: ವ್ಯವಸಾಯ ಸಾ: ದಾಸನಾಳ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಟಿ.ಎನ್.ಎಸ್.ವಿ. ಪ್ರಸಾದ, ವಯಸ್ಸು 50 ವರ್ಷ, ಸಾ: ಗಂಗಾವತಿ ಎಂಬಾತನ ಹತ್ತಿರ ಗಂಗಾವತಿಯಲ್ಲಿ ವ್ಯವಸಾಯಕ್ಕಾಗಿ ದಿನಾಂಕ:- 30-03-2012 ರಂದು ರೂ. 80,000-00 ಗಳನ್ನು ಶೇಕಡಾ 10% ರ ಬಡ್ಡಿಯಂತೆ ಸಾಲ ಪಡೆದುಕೊಂಡಿದ್ದು, ಅದಕ್ಕೆ ಪ್ರತಿ ತಿಂಗಳು ತಪ್ಪದೇ ರೂ. 8,000-00 ಬಡ್ಡಿ ಕಟ್ಟುತ್ತಾ ಬಂದಿದ್ದು, ನಂತರ ನನಗೆ ಹಣ ವಾಪಸ್ ಕೊಡುವುದು ಆಗುವುದಿಲ್ಲಾ ಅಂತಾ ಹೇಳಿ ಸನ್ 2013 ನೇ ಸಾಲಿನಲ್ಲಿ ಟಿ.ಎನ್.ಎಸ್.ವಿ. ಪ್ರಸಾದ ಈತನು ನನ್ನ ಸಹಿಯನ್ನು ನಕಲಿ ಮಾಡಿಕೊಂಡು ರೂ. 9,08,863-00 ಗಳಿಗೆ ನನ್ನ ವಿರುದ್ಧ Ex-Party ಮಾಡಿಸಿದ್ದಾನೆ.  ನಂತರ ನಾನು ತೆಗೆದುಕೊಂಡ ಹಣಕ್ಕೆ ಪ್ರತಿ ತಿಂಗಳು ರೂ. 8,000-00 ಬಡ್ಡಿ ಹಣವನ್ನು ಕಟ್ಟುತ್ತಾ ಬಂದಿದ್ದು, 2013 ನೇ ಸಾಲಿನಲ್ಲಿ ಸಾಲಕ್ಕಾಗಿ ನನ್ನ ಹೊಲದಲ್ಲಿ ಬೆಳೆದ ಎಲ್ಲಾ ಫಸಲನ್ನು ಮಾರಿ ಈತನಿಗೆ ರೂ. 5,00,000-00 ಕೊಟ್ಟಿದ್ದು, ಇದರಿಂದ ನನಗೆ ಬಹಳ ಅನ್ಯಾಯವಾಗಿದೆ.  ಸಾಲದ್ದಕ್ಕೆ ಮತ್ತೆ ಈಗ 9,08,863-00 ರೂ. ಕೊಡಬೇಕು ಅಂತಾ ಹೇಳಿ ಬಾಯಿಗೆ ಬಂದ ಹಾಗೆ ಬೈದಿರುತ್ತಾನೆ.  ಕಾರಣ ಹೆಚ್ಚಿನ ಬಡ್ಡಿ ಹಣಕ್ಕಾಗಿ ನಕಲಿ ಪ್ರಾಮಿಸರಿ ನೋಟ್ ಸಹಿ ಮಾಡಿಕೊಂಡು ನನ್ನನ್ನು ಬೈದು ಕಿರುಕುಳ ನೀಡಿದ ಟಿ.ಎನ್.ಎಸ್.ವಿ. ಪ್ರಸಾದನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 223/2015 ಕಲಂ 4 ಕರ್ನಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004 ಮತ್ತು ಕಲಂ 504 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
5) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ. 73/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420, 506 ಐ.ಪಿ.ಸಿ :.
ದಿನಾಂಕ: 19-07-2015 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹನಮಂತ ತಂದೆ ವೀರಭದ್ರಪ್ಪ ಬಡಿಗೇರ ಸಾ: ಹನಮಸಾಗರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರನು ಈ ಹಿಂದೆ ಸುಮಾರು 2 1/2 ವರ್ಷಗಳ ಹಿಂದೆ ಹನಮಸಾಗರದ ಬಾಲಪ್ಪ ತಂದೆ ಹನಮಂತಪ್ಪ ಬೆಳಗಲ್ ಈತನ ಕಡೆಯಿಂದ 2 ಲಕ್ಷ ರೂಪಾಯಿ ಫಿರ್ಯಾದಿಯು ಸಾಲ ಪಡೆದಿದ್ದು ತಿಂಗಳಿಗೆ ನೂರಕ್ಕೆ (100/-) 4 ರೂಪಾಯಿಗಳಂತೆ ತಿಂಗಳಿಗೆ ಒಟ್ಟು 8000/- ರೂ ದಂತೆ ಇವತ್ತಿನ ವರೆಗೆ 2,40,000/- ರೂ ಬಡ್ಡಿಯನ್ನು ಫಿರ್ಯಾದಿಯಿಂದ ಆರೋಪಿಯು ಪಡೆದುಕೊಂಡಿರುತ್ತಾನೆ. ಫಿರ್ಯಾದಿಯು ಸಾಲ ಪಡೆಯುವಾಗ ಆರ್.ಡಿ.ಸಿ.ಸಿ ಬ್ಯಾಂಕ್ ಹನಮಸಾಗರದ 2 ಚೆಕ್ ಗಳನ್ನು ಸಹಿ ಮಾಡಿ ಆರೋಪಿತನಿಗೆ ಕೊಟ್ಟಿದ್ದು ಇವತ್ತಿನ ವರೆಗೂ ಸಾಲ ಕೊಡುತ್ತಾ ಬಂದಿದ್ದು ಆದರೂ ಕೂಡ ಆರೋಪಿತನು ಫಿರ್ಯಾದಿಗೆ ಇನ್ನೂ 2,00,000/- ರೂ ಕೊಡಲೇಬೇಕು ಅಂತಾ ಸಾಲದ ಕಿಟಿಕಿಟಿಯನ್ನು ಕೊಟ್ಟಿದ್ದು ಫಿರ್ಯಾದಿಯು ಆರೋಪಿತನಿಗೆ ಮೀತಿ ಮೀರಿದ ಬಡ್ಡಿ ಕೊಟ್ಟಿದ್ದರೂ ಕೂಡ ವಿನಾ ಕಾರಣ ಫಿರ್ಯಾದಿಗೆ ಹಣ ಕೊಡದಿದ್ದಲ್ಲಿ ನಿನ್ನ ಹೊಲ ಮನೆ ಜಪ್ತಿ ಮಾಡುತ್ತೇನೆ ಇಲ್ಲದಿದ್ದಲ್ಲಿ ತನ್ನ ಜನರಿಂದ ಜೀವದ ಬೆದರಿಕೆ ಹಾಕುತ್ತಾ ಬಂದಿದ್ದು ಸದರಿ ಆರೋಪಿ ಬಾಲಪ್ಪನು ಫಿರ್ಯಾದಿದಾರರನಿಗೆ ಸಾಲ ಕೊಟ್ಟಿದ್ದು ಫಿರ್ಯಾದಿಯು ಬಡ್ಡಿಯಂತೆ ಒಟ್ಟು 2,40,000/- ರೂಪಾಯಿ ಕೊಟ್ಟರು ಕೂಡ ಇನ್ನೂ 2,00,000/- ರೂಪಾಯಿ ಬಾಕಿ ಕೊಡಬೇಕೆಂದು ಸತಾಯಿಸುತ್ತಿದ್ದರಿಂದ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
6) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ. 73/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420, 506 ಐ.ಪಿ.ಸಿ :.
ದಿನಾಂಕ: 19-07-2015 ರಂದು ರಾತ್ರಿ 21-10 ಗಂಟೆಗೆ ಫಿರ್ಯಾದಿದಾರರಾದ ಶ್ರೀಶೈಲ ತಂದೆ ಶೇಖರಪ್ಪ ಪಲ್ಲೆದ ಸಾ: ಹನಮಸಾಗರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರನು ದಿನಾಂಕ: 29-05-2015 ರಂದು ಹನಮಸಾಗರದ ಬಾಲಪ್ಪ ತಂದೆ ಹನಮಂತಪ್ಪ ಬೆಳಗಲ್ ಈತನ ಕಡೆಯಿಂದ 4 ಲಕ್ಷ ರೂಪಾಯಿ ವ್ಯಾಪಾರಕ್ಕೆ ಪಡೆದುಕೊಂಡಿದ್ದು ಪಡೆದುಕೊಳ್ಳುವಾಗ ಅರ್ಬನ್ ಬ್ಯಾಂಕಿನ 2 ಖಾಲಿ ಚೆಕ್ಕಗಳಿಗೆ ಸಹಿ ಮಾಡಿ ಆರೋಪಿತನಿಗೆ ಕೊಟ್ಟಿದ್ದು ಫಿರ್ಯಾದಿಯು ಪ್ರತಿ ತಿಂಗಳು 16000/- ರೂಗಳಂತೆ ಇಲ್ಲಿಯವರೆಗೆ ಒಟ್ಟು 9,60,000/- ರೂಗಳನ್ನು ಬಡ್ಡಿಯಂತೆ ಕಟ್ಟಿದ್ದು ಇಷ್ಟು ಹಣ ಕೊಟ್ಟರು ಸಹಿತ ಇನ್ನೂ 4,00,000/- ರೂಪಾಯಿ ಅಸಲು ಹಣ ಕೊಡಬೇಕೆಂದು ಆರೋಪಿತನು ಫಿರ್ಯಾದಿದಾರರಿಗೆ ಸಾಲ ಕಿಟಿಕಿಟಿಯನ್ನು ಮಾಡಿರುತ್ತಾನೆ. ಫಿರ್ಯಾದಿದಾರನು ಆರೋಪಿತನಿಗೆ ಮೀತಿ ಮೀರಿದ ಬಡ್ಡಿ ಕೊಟ್ಟಿದ್ದರೂ ಕೂಡ ವಿನಾಕಾರಣ ಹಣ ಕೊಡದಿದ್ದಲ್ಲಿ ನಿನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇನೆ ಅಂತಾ ಹಾಗೂ ಇಲ್ಲದಿದ್ದಲ್ಲಿ ತನ್ನ ಜನರನ್ನು ಹಚ್ಚಿ ಜೀವದ ಬೆದರಿಕೆ ಹಾಕುತ್ತಾನೆ. ಇಲ್ಲಿಯವರೆಗೆ ಒಟ್ಟು 9,60,000/- ರೂಪಾಯಿ ಕೊಟ್ಟಿದ್ದರೂ ಸಹ ಇನ್ನೂ 4,00,000/- ರೂಪಾಯಿ ಕೊಡಬೇಕು ಅಂತಾ ಸತಾಯಿಸುತ್ತದ್ದ ಆರೋಪಿ ಬಾಲಪ್ಪನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
7) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 153/2015  ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 504, 506 ಐ.ಪಿ.ಸಿ :.

          ಫಿರ್ಯಾದಿದಾರರು ಸನ್ 2013 ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಆರೋಪಿ ಶಂಕರ ಇತನಿಂದ 50,000-00 ರೂ. ಗಳನ್ನು ಹಾಗೂ ಅಕ್ಟೋಬರ-2013 ರಲ್ಲಿ 50,000-00 ರೂ. ಗಳನ್ನು ಇದಾದ ನಂತರ ಪುನ: 23,000-00 ರೂ. ಗಳನ್ನು ನಂತರ ಮಾಹೆ ಮೇ-2014 ನೇ ಸಾಲಿನಲ್ಲಿ 03 ಲಕ್ಷ ರೂ. ಗಳನ್ನು ಈ ರೀತಿಯಾಗಿ ಒಟ್ಟು 4,23,000-00 ರೂ. ಗಳನ್ನು ಪಡೆದುಕೊಂಡಿದ್ದು ಆರೋಪಿತನು ಸದರಿ ಹಣಕ್ಕೆ ಶ್ಯೂರಿಟಿ ಆಗಿ ಫಿರ್ಯಾದಿದಾರರ ಮನೆಯನ್ನು ರೂ. 4,90,000-00 ಗಳಿಗೆ ಮಾರಾಟ ಮಾಡಿದ ಬಗ್ಗೆ ಸ್ವಾಧೀನ ರಹಿತ ಖರೀದಿ ಕರಾರು ಪತ್ರ ಬರೆಯಿಸಿಕೊಂಡಿದ್ದು ಅಲ್ಲದೇ ಹೆಚ್ಚುವರಿಯಾಗಿ 02 ಲಕ್ಷ ರೂ. ಗಳನ್ನು ಸಾಲ ಕೊಟ್ಟ ಹಾಗೆ ಬಾಂಡ್ ಬರೆಯಿಸಿಕೊಂಡಿದ್ದು ಸದರಿ ಸಾಲದ ಹಣಕ್ಕೆ ಫಿರ್ಯಾದಿಯು ಈಗಾಗಲೇ 03 ಲಕ್ಷ ರೂ. ಗಳನ್ನು ಮರಳಿಸಿದರು ಸಹ ಆರೋಪಿತನು ಹೆಚ್ಚಿನ ಬಡ್ಡಿಗಾಗಿ ಒತ್ತಾಯಿಸುತ್ತಾ ಇನ್ನು 12 ಲಕ್ಷ ರೂ. ಗಳು ಕೊಡುವುದು ಬಾಕಿ ಇರುವುದಾಗಿ ಹಾಗೂ ಫಿರ್ಯಾದಿಯಿಂದ ಪಡೆದುಕೊಂಡಿರುವ ಎಕ್ಸಿಸ್ ಬ್ಯಾಂಕಿನ ಸಹಿ ಮಾಡಿರುವ ಖಾಲಿ ಚೆಕ್ ಗಳನ್ನು ಬ್ಯಾಂಕಿಗೆ ಹಾಕಿ ಚೆಕ್ ಬೌನ್ಸ್ ಮಾಡಿ ಕೋರ್ಟದಲ್ಲಿ ಕೇಸ್ ಮಾಡುವುದಾಗಿ ಬೆದರಿಕೆ ಹಾಕಿದ್ದು ಅಲ್ಲದೇ ಹಣವನ್ನು ಕೊಡುವಂತೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ ಹಾಕಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 153/15 ಕಲಂ 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004 ಮತ್ತು ಕಲಂ 504, 506 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

No comments: