Police Bhavan Kalaburagi

Police Bhavan Kalaburagi

Tuesday, July 14, 2015

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ಸಿದ್ಧಪ್ಪ ತಂದೆ ಅಯ್ಯಪ್ಪ  ತಳಕೇರಿ ಸಾ : ಕುಡಕಿ ತಾ : ಆಳಂದ ಜಿ : ಕಲಬುರಗಿ ರವರ ಮಗನಾದ ಕಬೀರದಾಸನು  ದಿನಾಂಕ 21-06-2015 ರಂದು ಪಟ್ಟಣ ಸಿಮಾಂತರದ ಠಾಕೂರ ದಾಬಾದ ಹಿಂದುಗಡೆ ಇರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನನ್ನ ಮಗನ ಮೋಟಾರ ಸೈಕಲ್ ಚಾವಿಯನ್ನು ಠಾಕೂರ ದಾಬಾದಲ್ಲಿ ಕೊಟ್ಟಿದ್ದು ಸದರ ಚಾವಿ ಬಗ್ಗೆ ವಿಚಾರಿಸಲು ಯಾರೊ ಸ್ಥಳಿಯರು ಮೂರು ಜನರು ಜೋತೆಗೆ ಬಂದು ಊಟದ ಆರ್ಡರ ಹೇಳಿ ಚಾವಿ ಕೊಟ್ಟು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ.  ನನ್ನ ಮಗ ಕಬೀರದಾಸನ ಮರಣದ ವಿಷಯದಲ್ಲಿ ನಿಜವಾದ ಸಂಗತಿ ಗೊತ್ತಾಗಿದ್ದು ಎನೆಂದರೆ ಕಬೀರದಾಸನು ಕಡಗಂಚಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ಮಗನಿಗೆ ಪರಿಚಯದವರಾದ ಲಕ್ಷ್ಮಣ ಧನ್ನಿ ಮತ್ತು ಪಾನ ಡಬ್ಬಿಯ ನಾಮದೇವ ಇವರಿಂದ 5000/- ರೂ ಕೈಗಡ ಹಣ ತೆಗೆದುಕೊಂಡಿದ್ದು ಆ ಹಣ ಮರಳಿಕೊಡಲು ತಡವಾಗಿದ್ದರಿಂದ ಲಕ್ಷ್ಮಣ ಧನ್ನಿ ಮತ್ತು ನಾಮದೇವ ಇವರು ಪದೆ ಪದೆ ಹಣ ಕೇಳಿ ತೊಂದರೆ ಕೊಡುತ್ತಿದ್ದು   ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದು ಆದಷ್ಟು ಬೇಗನೆ  ಅವರ ಹಣವನ್ನು ಕೊಡಲು ತಿಳಿಸಿದ್ದು ಇರುತ್ತದೆ. ದಿನಾಂಕ 12-07-2015 ರಂದು ನಾನು ಮತ್ತು ನನ್ನ ಮಗ ರಾಚಪ್ಪ ಸಂಬಂಧಿಕರು ಹಾಗು ಊರಿನ ಪ್ರಮುಖರು ಎಲ್ಲರು ಕೂಡಿಕೊಂಡು ಕಡಗಂಚಿಗೆ ಹೋದಾಗ ಗೊತ್ತಗಿದ್ದೆನೆಂದರೆ ದಿನಾಂಕ 19-06-2015 ರಂದು 1. ನಾಮದೇವ ತಂದೆ ಲಕ್ಷ್ಮಣರಾವ  ಧನ್ನಿ  2. ಕಾಶಿನಾಥ ತಂದೆ ಶಂಕರ ಚೆಂಗಟಿ  3. ವಿಜಯಕುಮಾರ ತಂದೆ ಸಾಯಿಬಣ್ಣಾ ಡೋಣಿ 4.ಸಿದ್ರಾಮಪ್ಪ ತಂದೆ ಅಂಬಣ್ಣಾ ವೈಜಾಪುರ ಸಾ : ಎಲ್ಲರು ಕಡಗಂಚಿ ತಾ : ಆಳಂದ ಜಿ : ಕಲಬುರಗಿ ರವರು ಕುಡಿಕೊಂಡು ಕಡಗಂಚಿ ಕ್ರಾಸ ಹತ್ತಿರ ಇರುವ ರಾಜಮಹಲ್ ವೈನಶಾಪನಲ್ಲಿ ಸರಾಯಿ ಕುಡಿದು ಅದರಲ್ಲಿ ನಾಮದೇವ ದನ್ನಿ ಇವನು ನನ್ನ ಮಗ ಕಬೀರದಾಸನಿಗೆ 2 ತಿಂಗಳ ಹಿಂದೆ ಕೊಟ್ಟ 500/- ರೂ ಹಣ ಮರಳಿ ಕೊಡು ಅಂತಾ ಜಗಳ ತೆಗೆದು ಅವಾಚ್ಯಶಬದ್ದಗಳಿಂದ ಬೈದು ನಿಗೆ ಸೊಕ್ಕು ಬಹಳ ಬಂದಿದೆ ನಿನಗೆ ಇವತ್ತು ಒಂದು ಗತಿ ಕಾಣಿಸಿಬಿಡುತ್ತೆವೆ ಅನ್ನುತ್ತಾ  ನಲ್ಕು ಜನರು ಮಾತನಾಡಿಕೊಂಡು ನನ್ನ ಮಗನಿಗೆ ಠಾಕೂರ ದಾಬಾಕ್ಕೆ ಊಟಕ್ಕೆ ಹೋಗೊಣ ಎಂದು  ಹೇಳಿ ಠಾಕೂರ ದಾಬಾಕ್ಕೆ ಮೊಟಾರ ಸೈಕಲಗಳ ಮೇಲೆ ಹೋಗಿ ಉಟಕ್ಕೆ ಆರ್ಡರ ಮಾಡುವ ಕಾಲಕ್ಕೆ ನಾಮದೇವ ಮತ್ತು ಸಂಗಡ ಮೂರು ಜನರು ಕೂಡಿ ಮತ್ತೆ ನನ್ನ ಮಗನೊಂದಿಗೆ ಜಗಳತೆಗೆದು ರಂಡಿ ಮಗನೇ ತೆಗೆದುಕೊಂಡ ಹಣ ಕೊಡು ಎಲೇ ಸೂಳೇಮಗನೇ ಅಂತಾ ಬೈಯ್ಯುತ್ತಿರುವಾಗ ಮಗನು ಸಧ್ಯ ನನ್ನ ಹತ್ತಿರ ಹಣವಿಲ್ಲಾ ಆಮೇಲೆ ಕೊಡುತ್ತೇನೆ. ಅಂತಾ ಹೇಳಿದ್ದಕ್ಕೆ ನಾಲ್ಕು ಜನರು ನನ್ನ ಮಗನಿಗೆ ದಾಬಾದ ಹಿಂದೆ ಇರುವ ಬಾವಿಯ ಹತ್ತಿರ ಕರೆದುಕೊಂಡು ಅಲ್ಲಿ ಈ ಸೂಳೇ ಮಗನೇ ಬಾವಿಯಲ್ಲಿ ನೂಕಿಸಿ ಕೊಲೆ ಮಾಡೋಣಾ ಅಂತಾ ನೂಕುನುಗ್ಗಲು ಮಾಡಿ,ನನ್ನ ಮಗನಿಗೆ ಬಾವಿಯಲ್ಲಿ ನೂಕಿಸಿ ಕೊಟ್ಟು ಸಾಕ್ಷಿ ಪುರಾವೆ ನಾಶಮಾಡಿಸಿ ಕೊಲೆ ಮಾಡಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ: 13-07-2015 ರಂದು ಸೇಡಂಕ್ಕೆ ಹೋಗಿ ಟ್ರ್ಯಾಕ್ಟರ ನಂ.ಕೆಎ-32-ಟಿ-4066 ನೇದ್ದನ್ನು ಚಲಾಯಿಸಿಕೊಂಡು ಸೇಡಂದಿಂದ ಕಲಬುರಗಿಗೆ ಬರುತ್ತಿರುವಾಗ ಮುಗುಟಾ ಕ್ರಾಸ ದಾಟಿ ಬ್ರೀಜನ ರಾಜ್ಯ ಹೆದ್ದಾರಿ ಮೇಲೆ 1 -30 ಪಿಎಂದ ಸುಮಾರಿಗೆ ಫಿರ್ಯಾದಿಯ ತಂದೆಯ ಎದುರುಗಡೆಯಿಂದ ಟಿಪ್ಪರ ನಂ.ಕೆಎ-49-1069 ನೇದ್ದರ ಚಾಲಕನ್ನು ತನ್ನ ಟಿಪ್ಪರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿಯ ತಂದೆ ಚಲಾಯಿಸಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತನಿಗೆ ಬಲ ತಲೆಗೆ, ಬಾಯಿಗೆ ,ಬಲಗಾಲಿನ ಮಂಡಿ ಹಾಗೂ ಹಿಮ್ಮಡಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ಟಿಪ್ಪರ ಚಾಲಕನಿಗೆ ಟಿಪ್ಪರ ಪಲ್ಟಿಯಾಗಿದ್ದರಿಂದ ಚಾಲಕನಿಗೂ ಸಹ ಅಲ್ಲಲ್ಲಿ ಗುಪ್ತ ಹಾಗೂ ರಕ್ತಗಾಯಗಳಾಗಿದ್ದು ಸದರಿ ಚಾಲಕನ ಹೆಸರು ಮಾರುತಿ ತಂದೆ ಶಿವರಾಜ ಪೂಜಾರಿ ಅಂತ ಘಟನಾ ಸ್ಥಳದಲ್ಲಿ ಹಾಜರಿದ್ದ ನೂರ ಇವರೂ ಫೋನ ಮುಖಾಂತರ ತಿಳಿಸಿದ ಮೇರೆಗೆ ಸದರಿ ಫಿರ್ಯಾದಿಯ ತಂದೆ ಹಾಗೂ ಚಾಲಕನಿಗೆ ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸದರಿ ಟಿಪ್ಪರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಭಾಷಾ ತಂದೆ ಮಕಬೂಲಶಹಾ ಸಾ : ಸಿದ್ದೇಶ್ವರ ಕಾಲೂನಿ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಅಮರೇಶ ಪಾಟೀಲ  ತಂದೆ ಬಸವಂತರಾವ  ಪಾಟೀಲ ಸಾ: ಮನೆ ನಂ 1-1165 (16/1) ಐವಾನಶಾಹಿ ರೋಡ ಕಲಬುರಗಿ ರವರದು ಸ್ವಂತ ಎರಡು ಟಿಪ್ಪರಗಳಿರುತ್ತವೆ. ಅದರಲ್ಲಿ ನಂಬರ್ ಎಮ್.ಹೆಚ್-13 ಎಕ್ಸ್-2064 ಹತ್ತು ಟೈರಗಳ ಟಾಟಾ ಕಂಪನಿಯ ಹೈವಾ ಟಿಪ್ಪರನ್ನು ಬೇಲೂರ ತಾಂಡಾ ರೋಡಿಗೆ ಇರುವ ಡೂರಡಾನಾ ಸ್ಟೋನ ಕ್ರಷರ್ ಕಂಕರ ಮಶೀನಲ್ಲಿ ಕಂಕರ ಹೊಡೆಯುವ ಕೆಲಸಕ್ಕೆ ಒಂದು ತಿಂಗಳಿಂದ ಬಿಟ್ಟಿರುತ್ತೇನೆ. ನನ್ನ ಟಿಪ್ಪರನ ಚಾಲಕನಾಗಿ ನಾರಾಯಣ ತಂದೆ ಡಾಕು ರಾಠೋಡ ಎಂಬುವರನ್ನು ಇಟ್ಟಿಕೊಂಡಿದ್ದು ಅವರು ದಿನಾಲು ಕೆಲಸ ಮುಗಿದ ನಂತರ ರಾತ್ರಿ ಶರೀಫ ಸಾಹೇಬರವರ ಡೂರಡಾನಾ ಸ್ಟೋನ ಕ್ರಷರ  ಕಂಕರ ಮಶೀನ ಹತ್ತಿರವೇ ನಿಲ್ಲಿಸುತ್ತಿರುತ್ತಾರೆ. ಹೀಗಿದ್ದು ಎಂದಿನಂತೆ ಕೆಲಸ ಮುಗಿಸಿ ದಿನಾಂಕ: 28/03/2015 ರಂದು ರಾಥ್ರಿ 10-30 ಪಿಎಮ್ ಕ್ಕೆ ನನ್ನ ಟಿಪ್ಪರ ಚಾಲಕ ಟಿಪ್ಪರನ್ನು  ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ: 29/03/2015 ರಂದು ಬೆಳಿಗ್ಗೆ 7-00 ಎಎಮ್  ಗಂಟೆಗೆ ಕಂಕರ ಮಶೀನ ಹತ್ತಿರ ಬಂದು ನೋಡಲು ತಾನು ರಾತ್ರಿ ನಿಲ್ಲಿಸಿದ್ದ ಟಿಪ್ಪರ ಕಾಣದ ಕಾರಣ ತಕ್ಷಣ ನನಗೆ ಫೋನ ಮಾಡಿ ವಿಷಯ ತಿಳಿಸಿದನು. ನಾನು ತಕ್ಷಣ ಬೇಲೂರ ತಾಂಡಾ ರೋಡಿಗೆ ಇರುವ ಡೂರಡಾನಾ ಸ್ಟೋನ ಕ್ರಷರ ಕಂಕರ ಮಶೀನಗೆ ಹೋಗಿ ನೋಡಲು ಹಕಿಕತ ನಿಜವಿರುತ್ತದೆ. ಆಗ ನಾನು ಮತ್ತು ಸ್ನೇಹಿತರಾದ ಕಲ್ಯಾಣಿ, ಶರೀಫ ಮತ್ತು ಚಾಲಕ ನಾರಾಯಣ ಸೇರಿಕೊಂಡು ಕಂಕರ ಮಶೀನ ಸುತ್ತ ಮುತ್ತ ಕಲಬುರಗಿಯಲ್ಲಿ ಮತ್ತು ಬಸವಕಲ್ಯಾಣ, ಹುಮನಾಬಾದ, ಜೈರಾಬಾದ, ಜೇವರ್ಗಿ, ಆಳಂದ, ಕಲಬುರಗಿಯ ಮುಂತಾದ ಕಡೆ ಎಲ್ಲಾ ಹುಡುಕಾಡಿದರೂ ನನ್ನ ಎಮ್.ಹೆಚ್.-13 ಎಎಕ್ಸ್-2064 ನಂಬರಿನ ಚೆಸ್ಸಿ ನಂ- MAT448099B3J27401 ಇಂಜಿನ ನಂ- BJ91803111J63184136 ಕಲರ್   ಬಿಳಿ-ನೀಲಿ  ಬಣ್ಣದ ಅ.ಕಿ= 1700000/-ರೂ ಕಿಮ್ಮತ್ತಿನದ್ದನ್ನು ಯಾರೋ ಕಳ್ಳರು ದಿನಾಂಕ: 28/03/2015 ರಂದು 10-30 ಪಿಎಮ್ ದಿಂದ ದಿನಾಂಕ: 29/03/2015 ರಂದು ಬೆಳಿಗ್ಗೆ 7-00 ಎಎಮ್ ಮಧ್ಯದ ಅವಧಿಯಲ್ಲಿ ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಆಭಯ ಸಿಂಗ್‌ ತಂದೆ ಸಂಜಯ ಸಿಂಗ್‌ ಸಾಃ ಮನೆ ನಂ 9-188 ಶಹಾಬಜಾರ ಕಟಗರಪೂರ ಕಲಬುರಗಿ ರವರ ರಾಯಲ್ ಎನಫಿಲ್ಡ್ ಮೊಟಾರ ಸೈಕಲ ನಂ ಕೆಎ 32  ಇ.ಇ 2626 ನೇದ್ದುನ್ನು  ದಿನಾಂಕಃ 07.07.2015 ರಂದು  11.30 ಗಂಟೆ ಸುಮಾರಿಗೆ ನನ್ನ ರಾಯಲ್ ಎನಫಿಲ್ಡ್ ಮೊಟಾರ ಸೈಕಲ ನಂ ಕೆಎ 32  ಇ.ಇ 2626 ನೇದ್ದ್ಕೆ ಸರಿಯಾಗಿ ಕೀಲಿ ಹಾಕಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ. ರಾತ್ರಿ 2.00 ಗಂಟೆಯ ಸುಮಾರಿಗೆ  ಮೂತ್ರ ವಿಸರ್ಜನೆ ಮಾಡುವಗೋಸ್ಕರ ಎದ್ದಾಗ ನಮ್ಮ ಮನೆಯ ಮುಂದೆ ನಾನು ನಿಲ್ಲಿಸಿದ ಮೋಟಾರ ಸೈಕಿಲ್‌  ಕಾಣಲ್ಲಿಲ್ಲ. ಆಗ ನಾನು ಗಾಬರಿಗೊಂಡು ನಮ್ಮ ತಂದೆಯವರಿಗೆ ಹಾಗೂ ನನ್ನ ಅಣ್ಣನಿಗೆ ಸದರಿ ವಿಷಯವನ್ನು ತಿಳಿಸಿದ್ದು  ಮತ್ತು ನನ್ನ ಸ್ನೇಹಿತರಿಗೂ ನನ್ನ ಮೋಟಾರ ಸೈಕಿಲ್‌ ಕಳುವಾದ ಬಗ್ಗೆ ಹೇಳಿದ್ದು ಇರುತ್ತದೆ. ನಂತರ ನಾನು ಹಾಗೂ ನಮ್ಮ  ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡಕಾಡಿದ್ದು ಪತ್ತೆ ಆಗಿರುವದಿಲ್ಲ .ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅದರ ಅಂದಾಜು ಕಿಮ್ಮತ್ತು 1,00,000/- ರೂ ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: