Police Bhavan Kalaburagi

Police Bhavan Kalaburagi

Thursday, July 16, 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಜಯಪ್ಪ ತಂದೆ ಮಾರೆಪ್ಪ ಸಾ : ಯಾದಗಿರಿ ರವರು ದಿನಾಂಕ 16-07-2015 ರಂದು ಮುಂಜಾನೆ ಜೇವರಗಿ ಪಟ್ಟಣದ ಹೊರ ವಲಯದಲ್ಲಿರುವ ಡಿಗ್ರಿ ಕಾಲೇಜು ಎದುರು ಜೇವರಗಿ ಶಹಾಪುರ ರೋಡಿನ ಮೇಲೆ ನನ್ನ ಮಗ ವಿಜಯಕುಮಾರ ವಯಾ : 8 ವರ್ಷ ಈತನು ಶಾಲೆಗೆ ಹೋಗುವ ಸಲುವಾಗಿ ರೊಡಿನ ಸೈಡಿನಲ್ಲಿ ನಿಂತುಕೊಂಡಿದ್ದಾಗ ಅದೇ ಸಮಯಕ್ಕೆ ಶಹಾಪುರ ಕಡೆಯಿಂದ ಬಂದ ಒಂದು ಓಮಿನಿ ಅಂಬ್ಯೂಲೆನ್ಸ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಸೈಡಿಗೆ ನಿಂತಿದ್ದ ನನ್ನ ಮಗನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಸ್ಥಳದಲ್ಲಿ ಮೃತಪಡಿಸಿ ಅಪಘಾತ ನಂತರ ತನ್ನ ವಾಹನದೊಂದಿಗೆ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನ ಬಾಹಿರವಾಗಿ ಲೇವಾ ದೇವಿ ವ್ಯವಹಾರ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪ್ರಕರಣಗಳು :
ಚೌಕ ಠಾಣೆ : ಶ್ರೀ. ನಾಗೇಂದ್ರ ತಂದೆ ವೀರಣ್ಣ ಮಾಕಾ ಉ: ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಾ: ಪ್ಲಾಟ ನಂ. 60, ಭಾಗ್ಯವಂತಿ ಕಾಲೂನಿ ಮುಕ್ತಾ ಟಾಕೀಜ ಹಿಂದುಗಡೆ, ಜೇವರಗಿ ರೋಡ ಕಲಬುರಗಿ ಇವರು ದಿನಾಂಕ: 15-7-2015 ರಂದು ನ್ಯೂ ಶಕ್ತಿ ಫೈನಾನ್ಸ ಆಳಂದ ರೋಡ ಶಿವಶಕ್ತಿ ಕಾಪ್ಲೆಕ್ಸ ಕಲಬುರಗಿರಲ್ಲಿ ಶ್ರೀ.ಪ್ರಾರ್ಶ್ವನಾಥ ಮತ್ತು ಇತರರು ಕೂಡಿಕೊಂಡು ಕಾನೂನು ಬಾಹಿರ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಆಕಸ್ಮಿಕ ದಾಳಿಯಲ್ಲಿ ಕಂಡು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಕರಜಗಿ ಗ್ರಾಮದ ಅಮಿನಪ್ಪ ತಂದೆ ತುಕಾರಾಮ ಸುಲ್ತಾನಪೂರ ಸಾ: ಕರಜಗಿ ಈತನು ಗ್ರಾಮದ ಜನರಿಗೆ, ರೈತರಿಗೆ, ವ್ಯಾಪಾರಸ್ತರಿಗೆ ಸಾಲದ ರೂಪದಲ್ಲಿ ಹಣವನ್ನು ಕೊಟ್ಟು, 100/- ರೈಪಾಯಿಗೆ ಶೇಕಡಾ 5 ರಂತೆ ತಿಂಗಳಿಗೆ ವಸೂಲು ಮಾಡುತ್ತಾ ಬಡವರ ರಕ್ತ ಹಿರುತ್ತಿದ್ದಾನೆ. ಸದರಿಯವನು ರಾಷ್ಟ್ರಿಕೃತ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ಬಡ್ಡಿದರ ಕ್ಕಿಂತಲು 3 - 4 ಪಟ್ಟು ಜಾಸ್ತಿ ಬಡ್ಡಿಯನ್ನು ತಗೆದುಕೊಂಡು ಗ್ರಾಮದ ರೈತರಿಂದ ಹಾಗು ವ್ಯಾಪಾರಸ್ತರಿಂದ ಮತ್ತು ಜನರಿಂದ ತಾನು ಕೊಟ್ಟ ಹಣಕ್ಕೆ ಮೀಟರ ಬಡ್ಡಿ ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾನೆ. ಸದರಿಯವನು ಮೀಟರ ಬಡ್ಡಿ ವ್ಯವಹಾರ ಮಾಡಲು ಸರ್ಕಾರದಿಂದಾಗಲಿ ಹಾಗೂ ಸಂಭಂದಪಟ್ಟ ಅದಿಕಾರಿಯವರಿಂದಾಗಲಿ ಯಾವುದೆ ಪರವಾನಿಗೆಯನ್ನು ಪಡೆದಿರುವುದಿಲ್ಲ. ಸದರಿಯವನು ಕಾನೂನು ಬಾಹಿರವಾಗಿ ಅನದಿಕೃತವಾಗಿ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾನೆ. ಅಂತಾ ಗ್ರಾಮದ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು ಸದರಿ ಅಮಿನಪ್ಪ ಸುಲ್ತಾನಪೂರ ಈತನು ಬಡ್ಡಿ ವ್ಯವಹಾರ ಮಾಡಲು ಸರ್ಕಾರದಿಂದಾಗಲಿ ಮತ್ತು ಸಂಬಂದ ಪಟ್ಟ ಅದಿಕಾರಿಯವರಿಂದಾಗಲಿ ಯಾವುದೆ ಪರವಾನಿಗೆ ಪಡೆಯದೆ ಕರಜಗಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಅನದಿಕೃತವಾಗಿ ಗ್ರಾಮದ ರೈತರಿಗೆ ರಾಷ್ಟ್ರಿಕೃತ ಬ್ಯಾಂಕುಗಳ  ಹಾಗೂ ಸಹಕಾರಿ ಬ್ಯಾಂಕುಗಳ ಬಡ್ಡಿ ದರಕ್ಕಿಂತಲು  3 – 4 ಪಟ್ಟು ಜಾಸ್ತಿ ಬಡ್ಡಿಯನ್ನು ಪಡೆದು ರೈತರಿಂದ ಮೀಟರ ಬಡ್ಡಿ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದರಿಂದ ಹಾಗೂ ಬಡ್ಡಿ ವ್ಯಾವಹಾರ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.    
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಖಾಜಪ್ಪ ಸುಲೇಕಾರ ಸಾ : ಜೈ ಭೀಮ ನಗರ ಅಫಜಲಪೂರ  ರವರು ತಮ್ಮ ಅತ್ತೆ ಮನೆಯಲಿದ್ದಾಗ ನಮ್ಮ ನೆಗೆಣಿಯಾದ ಲಕ್ಷ್ಮಿ ಇವಳು ನಮ್ಮ ಬಾಜು ಮನೆಯ ನಮ್ಮ ಸಣ್ಣ ಅತ್ತೆಯಾದ ಲಕ್ಷ್ಮಿಬಾಯಿ ಗಂಡ ಶ್ರೀಮಂತ ಇವರ ಜೋತೆ ನಮ್ಮ ಮನೆಯ ಮುಂದಿನ ಸಿಸಿ ರಸ್ತೆ ಮೇಲೆ ನಿಂತು ಮಾಡಾತಾಡುತಿದ್ದಾಗ ನಮ್ಮ ಅತ್ತೆ ಮನೆಯಿಂದ ಹೊರಗೆ ಹೋಗಿ ನಮ್ಮ ಸಣ್ಣ ಅತ್ತೆಯಾದ ಲಕ್ಷ್ಮಿಬಾಯಿ ಇವಳಿಗೆ ಯಾಕ ಲಕ್ಷ್ಮಿಬಾಯಿ ನನ್ನ ಸೋಸೆಗೆ ಬ್ಯಾರಿ ಆಗು ಅಂತ ಕಲಿಸ್ತಿ  ನಮ್ಮ ಮನೆ ಒಡಕ ಮಾಡ್ತಿ  ಇದು ಸರಿ ಅಲ್ಲಾ ಅಂತ ಅನ್ನುತಿದ್ದಾಗ ಲಕ್ಷ್ಮಿಬಾಯಿ ಗಂಡ ಶ್ರೀಮಂತ ಇವಳು ನಮ್ಮ ಅತ್ತೆಗೆ ಯಾಕೆ  ರಂಡಿ ನನಗ ಮನಿ ಒಡಕ ಮಾಡ್ತಿ ಅಂತ ಅಂತಿ ಬೋಸಡಿ ಅಂತ ಬೈಯುತಿದ್ದಾಗ ಅದೇ ಸಮಯಕ್ಕೆ ನಾನು ಮನೆಯಿಂದ ಹೊರಗೆ ಬಂದು ಯಾಕ್ರಿ ಅತ್ತಿ ಸುಮ್ನೆ ನಮ್ಮ ಅತ್ತೆಗೆ ಯಾಕ ಬೈತಿರಿ ಅಂತ  ಅನ್ನುದ್ದಾಗ ಅವರ ಮನೆಯಿಂದ ಅವರ ಮಕ್ಕಳಾದ 1) ಆಶಾ ಗಂಡ ಮಹೇಶ 2) ಸುನಿತಾ 3) ಸವಿತಾ 4) ಕಾವೇರಿ ಇವರೇಲ್ಲರು ಗುಂಪು ಕಟ್ಟಿಕೊಂಡು ನಮಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬಂದು ನನಗೆ ಆಶಾ ಇವಳು ಏನೇ ರಂಡಿ ಲಚ್ಚಿ ನಮ್ಮ ಅವ್ವಾಗ ಏನಂತ್ತಿ ಬೋಸಡಿ ಅಂತ ಅಂದು ನನ್ನ ಏಡ ಕಿವಿ ಹಿಡಿದು ಜಗ್ಗಿದ್ದರಿಂದ ನನ್ನ ಕಿವಿಯಲ್ಲಿನ ರಿಂಗ್  ಹರಿದು ನನ್ನ ಕಿವಿಗೆ ತಿವ್ರ ತರದ ರಕ್ತ ಗಾಯವಾಗಿದ್ದು ನಂತರ ಲಕ್ಚ್ಮಿಬಾಯಿ , ಸುನಿತಾ, ಸವಿತಾ , ಕಾವೇರಿ ಇವರು ನನಗೆ ನಮ್ಮ ಅತ್ತೆಗೆ ನೆಲಕ್ಕೆ ಹಾಕಿ ರಂಡೆರಾ ನಿಮ್ದು ಬಾಳ ಅದಾ ಅಂತ ಅಂದು ಕೈಯಿಂದ ಹೊಡೆದು ಹಾಗೂ ಕಾಲಿನಿಂದ  ಒದ್ದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಶ್ರೀಮಂತ ಸುಲೇಕರ  ಸಾ|| ಜೈ ಭೀಮ ನಗರ ಅಫಜಲಪೂರ ರವರ ಗಂಡನ ಹೆಸರಿನಲ್ಲಿ ಅಂಬೇಡ್ಕರ ಅಭಿವೃದ್ದಿ ನಿಗಮ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸರಕಾರದಿಂದ ಒಂದು ಬೋರವೇಲ್ ಮಂಜೂರು ಆಗಿದ್ದು ನಾವು ನಮ್ಮ ಹೊಲದಲ್ಲಿ ಬೋರ ಹಾಕಿಸಿದ್ದು .ನಮ್ಮ ಬಾಜು ಮನೆಯ ನಮ್ಮ ಬಾವನ ಮಗ ಅಂದರೆ ನನ್ನ ಗಂಡನ ಅಣ್ಣನ ಮಗನಾದ ಬಸವರಾಜ @ ಮಡಿವಾಳಪ್ಪ ತಂದೆ ಸಿದ್ದಪ್ಪ ಸುಲೇಕಾರ ಇತನು ಅವಾಗ ಅವಾಗ ನಮ್ಮ ಮನೆಯ ಮುಂದಿನಿಂದ ಹೋಗುವಾಗ ನನ್ನ ಗಂಡನಿಗೆ ರಂಡಿ ಮಗ ಶಿರಿಮ್ಯಾ  ನಮ್ಮ ಹೆಸರಿಗೆ ಮಂಜೂರಾದ ಬೋರವೇಲ್  ತಾನೆ ಹಾಕೊಂಡಾನ ಅಂತ ಬೈಯುತಿದ್ದನು ನಾವು ತಲೆ ಕೆಡಿಸಿಕೊಳ್ಳದೆ ಹಾಗೇ ಸುಮ್ನೆ ಒದರ್ತಾದ ಅಂತ ಸುಮ್ಮನಿದ್ದೇವು ದಿನಾಂಕ 15-07-2015 ರಂದು ನಾನು ನನ್ನ ಮಕ್ಕಳಾದ 1) ಆಶಾ ಗಂಡ ಮಹೇಶ 2) ಸುನಿತಾ 3) ಸವಿತಾ 4) ಕಾವೇರಿ   ಐದು ಜನರು ಮನೆಯಲಿದ್ದಾಗ ನಮ್ಮ ಮನೆಯ ಮುಂದೆ ಯಾರೋ ನಮಗೆ ಬೈದಂತೆ ಕೇಳಿಸಿ ನಾನು ಹಾಗೂ ನನ್ನ ಮಕ್ಕಳು ಮನೆಯಿಂದ ಹೊರಗೆ ಬಂದು ನೋಡಲಾಗಿ ನಮ್ಮ ಬಾಜು ಮನೆಯವರಾದ ಬಸವರಾಜ @ ಮಡಿವಾಳಪ್ಪ ತಂದೆ ಸಿದ್ದಪ್ಪ ಸುಲೇಕಾರ 2) ಖಾಜಪ್ಪ ತಂದೆ ಸಿದ್ದಪ್ಪ 3) ಹಂಪಯ್ಯ ತಂದೆ ಸಿದ್ದಪ್ಪ 4) ಉಮಾಕಾಂತ ತಂದೆ ಸಿದ್ದಪ್ಪ 5) ಲಕ್ಷ್ಮಿ ಗಂಡ ಖಾಜಪ್ಪ 6) ಮಾಂತಮ್ಮಾ ಗಂಡ ಸಿದ್ದಪ್ಪ ಇವರೇಲ್ಲರು ಗುಂಪು ಕಟ್ಟಿಕೊಂಡು ನಮ್ಮ ಮನಯ ಮುಂದೆ ಸಿಸಿ ರಸ್ತೆ ಮೇಲೆ ನಿಂತು ಅವಾಚ್ಯ ಶಬ್ದಗಳಿಂದ ನಮಗೆ ಬೈಯುತಿದ್ದರು ಬಸವರಾಜ @ ಮಡಿವಾಳಪ್ಪ ಇತನು ನನ್ನ ಗಂಡನಿಗೆ ರಂಡಿ ಮಗನಾ ಶಿರಿಮ್ಯಾ ಬಾ ಬೋಸಡಿಕೆ ಅಂತ  ಬೈಯುತಿದ್ದನು ಆಗ ನಾನು ಅವರು ಮನೆಯಲ್ಲಿ ಇಲ್ಲ ಯಾಕೆ ಬೈತಿ ಅಂತ ಅನ್ನುತಿದ್ದಾಗ ಲಕ್ಷ್ಮಿಬಾಯಿ ಇವಳು ರಂಡಿ ನಮ್ಮ ಬೋರವೇಲ್ ನಿವು ಹಾಕಿಕೊಂಡಿರಿ ಬೋಸಡಿ ಅಂತ ಬೈಯುತಿದ್ದಾಗ ಬಸವರಾಜ@ ಮಡಿವಾಳಪ್ಪ  ಇತನು ಅಲ್ಲೆ ಬಿದ್ದ ಒಂದು ಕಲ್ಲನ್ನು ತಗೆದುಕೊಂಡು ನನ್ನ ತಲೆಗೆ ಬಿಸಿ ಹೊಡೆದಾಗ ಸದರಿ ಕಲ್ಲು ನನ್ನ ತಲೆಗೆ ಬಡಿದು ರಕ್ತಗಾಯ ವಾಗಿ ನಾನು ಕೇಳಗೆ ಬಿದ್ದಾಗ ನನ್ನ ಮಕ್ಕಳಾದ  ಆಶಾ, ಸುನಿತಾ, ಸವಿತಾ ಇವರು ನನಗೆ ಹೊಡೆಯುವದನ್ನು ಬಿಡಿಸುತಿದ್ದಾಗ ಲಕ್ಷ್ಮಿ ಇವಳು ಆಶಾ ಇವಳಿಗೆ ಅಲ್ಲೆ ಬಿದ್ದ ಬಡಿಗೆಯಿಂದ ಕುತ್ತಿಗೆಗೆ ಹೊಡೆದು ಗುಪ್ತ ಪೆಟ್ಟಿ ಪಡಿಸಿರುತ್ತಾಳೆ ಅದೇ ಬಡಿಗೆ ಇಂದ ಸುನಿತಾ ಇವಳ ಏಡಗೈಗೆ ಹೊಡೆದು ಗುಪ್ತಪೆಟ್ಟು ಪಡಿಸಿದ್ದು ಇರುತ್ತದೆ ಸವಿತಾ ಇವಳಿಗೆ ಮಾಂತಪಮ್ಮ ಇವಳು ಹೊಟ್ಟೆಗೆ ಬೆನ್ನಿಗೆ ಕೈಯಿಂದ ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾರೆ ಅಂತಾ ಸಲಕ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

No comments: