Police Bhavan Kalaburagi

Police Bhavan Kalaburagi

Tuesday, July 21, 2015

Kalaburagi District Reported Crimes

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸೊಹೇಲ್ ಅಹೆಮ್ಮದ ತಂದೆ ಜಾಫರ ಹುಸೇನ ಸಾ:8ನೇ ಕ್ರಾಸ ಗೌಸ ನಗರ ತಾರಪೇಲ ಕಲಬುರಗಿ ರವರ ಗೆಳೆಯ ಇಮ್ರಾನ ಇತನು ಫೀರೋಜ ಮತ್ತು ಆಸೀಫ ಇಬ್ಬರಿಗೆ ಕೊಡಬೇಕಾದ ಸಾಲ ಕೊಡದೇ ತಲೆಮರಿಸಿಕೊಂಡು ತಿರುಗಾಡುತ್ತಿದ್ದು ಆತನ ಇರುವಿಕೆಯ ಬಗ್ಗೆ ಫಿರ್ಯಾದಿ ಸೋಹೆಲ್ ಅಹೆಮ್ಮದ ಇತನು ಸುಳಿವು ಕೊಟ್ಟಿದ್ದಾನೆ ಅಂತಾ ಆತನ ಮೇಲೆ ದ್ವೇಷ ಹೊಂದಿ  ಅದೇ ಉದ್ದೇಶದಿಂದ ಇಂದು ದಿನಾಂಕ:-20/07/2015 ರಂದು ಮದ್ಯಾಹ್ನ 02:30 ಗಂಟೆ ಸುಮಾರಿಗೆ ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಅವನಿಗೆ ಹಣ ಕೊಡುತ್ತೇನೆ ಅಂತಾ ಹುಮನಾಬಾದ ರಿಂಗ ರೋಡ ಹತ್ತಿರ ಬಂದಾಗ ಮಾತಾಡುತ್ತಾ ಒಳ ಉದ್ದೇಶದಿಂದ ಬಿಯರ ಬಾಟಲಿಯಿಂದ  ಬೆನ್ನಿಗೆ ಮತ್ತು ಎರಡು ಕೈಗಳ ಮಣಿಕಟ್ಟಿಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಸರಕಾರಿ ಆಸ್ಪತ್ರೆ ಜೇವರಗಿ ಮುಂದೆ ಜೇವರಗಿ ವಿಜಯಪುರ ಹೆದ್ದಾರಿ ಮೇಲೆ ನಾನು ನನ್ನ ಊರಿಗೆ ಹೋಗು ಕುರಿತು ಐ.ಬಿ ಗೇಟ್‌ ಕಡೆಗೆ ರಸ್ತೆ ದಾಟುತ್ತಿದ್ದಾಗ ಅದೇ ವೇಳೆಗೆ ಸಿಂದಗಿ ಕ್ರಾಸ್ ಕಡೆಯಿಂದ ಬಂದ ಒಬ್ಬ ಮೋಟಾರು ಸೈಕಲ್ ನಂ ಕೆ.ಎ33ಕ್ಯೂ5197 ನೇದ್ದರ ಸವಾರನು ತನ್ನ ಮೋಟಾರು ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಬಿಳಿಸಿ ಭಾರಿ ರಕ್ತಗಾಯಪಡಿಸಿ ತನ್ನ ಮೋಟಾರು ಸೈಕಲ್‌ ನೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಗುರುಶಾಂತಪ್ಪ ತಂದೆ ಯಂಕಪ್ಪ ಜಾನಕಾರ್ ಸಾ : ಚೆನ್ನೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: