ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ
ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಮಾಹಾದೇವಯ್ಯ ತಂದೆ ಶಿವಯ್ಯ ಮಠಪತಿ ಇವರು ತಮ್ಮ ಅಧಿಕಾರದ
ಅವದಿಯಲ್ಲಿ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಕಾಣಿಯಾಗಿ ಕೊಟ್ಟ 15 ಕೆಜಿ
ಚಿನ್ನವನ್ನು ಹಾಗೂ 21 ಕೆಜಿ ಬೆಳ್ಳಿಯನ್ನು ಕಳ್ಳತನದಿಂದ ತಗೆದುಕೊಂಡು
ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ಭಾಗ್ಯವಂತಿ ದೇವಸ್ಥಾನಕ್ಕೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗೂ
ಮತ್ತು ಸರ್ಕಾರಕ್ಕು ಮೋಸ ಮಾಡಿದ್ದಾರೆ ಎಂದು ಘತ್ತರಗಾ ಗ್ರಾಮದ 1) ಸಿದ್ದನಗೌಡ
ತಂದೆ ಗೆಡ್ಡಪ್ಪಗೌಡ ಪಾಟೀಲ 2) ಸಿದ್ದಪ್ಪ
ತಂದೆ ದುಂಡಪ್ಪ ಗುಡೇದ 3) ದಿಲೀಪ ತಂದೆ ದತ್ತಾತ್ರೇಯ ರಾವ ಕುಲಕರ್ಣಿ 4) ಬಸವರಾಜ
ತಂದೆ ಪ್ರಭು ಅಮ್ಮಣ್ಣಿ 5) ಚಂದ್ರಕಾಂತ ತಂದೆ ಮಲ್ಲೇಶಪ್ಪ ಬೇಲೂರ 6) ಲಕ್ಕಪ್ಪ
ತಂದೆ ಮೌಲಾಲಿ ನಿಂಬರ್ಗಿ 7) ಚಂದಪ್ಪ ತಂದೆ ಶೆಟ್ಟೆಪ್ಪ ಬಟ್ಟರ್ಕಿ 8) ಶಿವಕಾಂತ
ತಂದೆ ಭೀಮಶಾ ಸಿಂಗೆ 9) ಚಂದ್ರಕಾಂತ ತಂದೆ ಕಲ್ಲಪ್ಪ ನಾವಡಗಿ 10) ನಾರಾಯಣರಾವ
ತಂದೆ ವೇಂಕಟರಾವ ಕುಲಕರ್ಣಿ ಇವರುಗಳು ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ, ಅದರಂತೆ
ಮಾನ್ಯ ನ್ಯಾಯಾಲಯವು ಯಾವುದೆ ದಾಖಲಾತಿಗಳು ಲಬ್ಯವಿಲ್ಲದ ಕಾರಣ ಸದರಿ ನಡೆದ ಅವ್ಯವ್ಯೆಹಾರದ ಬಗ್ಗೆ
ಇಲಾಖೆ ವಿಚಾರಣೆಯನ್ನು ಮಾಡಿ ವರದಿ ಕೊಡುವಂತೆ ಆದೇಶಿಸಿದ ಮೇರೆಗೆ, ದಾರ್ಮಿಕ
ದತ್ತಿ ಇಲಾಖೆ ಸದರಿ ಅವ್ಯವಹಾರದ ಬಗ್ಗೆ ವಿಚಾರಣೆಯನ್ನು ಕೈಕೊಂಡು ದಿನಾಂಕ 15-06-2013 ರಂದು
ಈ ಹಿಂದೆ ಇದ್ದ ಸದರಿ ಮಾಹಾದೆವಯ್ಯ ತಂದೆ ಶಿವಯ್ಯ ಮಠಪತಿ ಗ್ರಾಮ ಲೆಕ್ಕಿಗ ಮತ್ತು ಕಾರ್ಯದರ್ಶಿ
ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಾ ಇವರ ಮೇಲೆ ಕ್ರಮೀನಲ್ ಮೋಕದ್ದಮೆ ದಾಖಲಿಸುವಂತೆ ಹಾಗೂ
ಸದರಿ ಅವದಿಯಲ್ಲಿ ಕರ್ತವ್ಯ ನಿರ್ವಹಿಸಿದ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ವಿಚಾರಣೆಗೆ
ಒಳಪಡಿಸಬೇಕು ಅಂತಾ ಘೋಷಿಸಿರುತ್ತಾರೆ. ಅದರಂತೆ ಸದರಿ ಆದೇಶದ ಮೇಲಿಂದ ಸದರಿ ಅವ್ಯವಹಾರದ
ವಿಷಯವಾಗಿ ನಮ್ಮ ಇಲಾಖೆ ಸರ್ಕಾರದೊಂದಿಗೆ ಹಾಗೂ ಸಂಭಂದಪಟ್ಟ ಇಲಾಖೆಯವರೊಂದಿಗೆ ಪತ್ರ ವ್ಯವಹಾರ
ಮಾಡಿ ಸೂಕ್ತ ಕ್ರಮ ಕೈಕೊಳ್ಳಲು ಪ್ರಕರಣ ದಾಖಲಿಸಲು ತಡವಾಗಿರುತ್ತದೆ. ಅದರಂತೆ
ಇಂದು ದಿನಾಂಕ 25-07-2015
ರಂದು
ನಮ್ಮ ಮೇಲಾದಿಕಾರಿಗಳು ನನಗೆ ಸದರಿ ನಡೆದ ಅವ್ಯವಹಾರದ ಬಗ್ಗೆ ಮಾಹಾದೆವಯ್ಯ ತಂದೆ ಶಿವಯ್ಯ ಮಠಪತಿ
ಗ್ರಾಮ ಲೆಕ್ಕಿಗ ಮತ್ತು ಕಾರ್ಯದರ್ಶಿ ಶ್ರೀ ಭಾಗ್ಯವಂತಿ ದೇವಸ್ಥಾನ ಘತ್ತರಗಾ ಇವರ ಮೇಲೆ
ಕ್ರೀಮಿನಲ್ ಮೋಕದ್ದಮೆ ದಾಖಲಿಸಲು ಆದೇಶಿಸಿದ ಮೇರೆಗೆ ನಾನು ಇಂದು ಠಾಣೆಗೆ ಬಂದಿರುತ್ತೆನೆ. ಸದರಿ
ಮಾಹಾದೆವಯ್ಯ ತಂದೆ ಶಿವಯ್ಯ ಮಠಪತಿ ಇವರು ದಿನಾಂಕ 17-09-2001 ರಿಂದ ದಿನಾಂಕ 21-06-2007 ರವರೆಗೆ
ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ, ದೇವಸ್ಥಾನದ ಕಾರ್ಯದರ್ಶಿಯಾಗಿ ಕರ್ತವ್ಯ
ನಿರ್ವಹಿಸಿರುತ್ತಾರೆ. ಸದರಿಯವರು ತಮ್ಮ ಅದಿಕಾರದ ಅವದಿಯಲ್ಲಿ ಶ್ರೀ
ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಕಾಣಿಕೆಯಾಗಿ ಕೊಟ್ಟ 15 ಕೆಜಿ
ಚಿನ್ನ (
ಈ
ಹಿಂದೆ ಇದ್ದ ಅಂದಾಜು ಕಿಮ್ಮತ್ತು 75,00,000/- ರೂ) ಹಾಗೂ 21 ಕೆಜಿ
ಬೆಳ್ಳಿ (ಈ
ಹಿಂದೆ ಇದ್ದ ಅಂದಾಜು ಕಿಮ್ಮತ್ತು 1,47,000/- ರೂ) ಯನ್ನು ಕಳ್ಳತನದಿಂದ
ತಗೆದುಕೊಂಡು ಹೋಗಿ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು ಹಾಗೂ ಅದಕ್ಕೆ ಸಂಬಂದಪಟ್ಟ
ದಾಖಲೆಗಳನ್ನು ತಗೆಂದುಕೊಂಡು ಹೋಗಿ ತಮ್ಮ ಅದಿಕಾರ ದುರುಪಯೋಗ ಮಾಡಿಕೊಂಡಿದ್ದು ಇಲಾಖಾ
ವಿಚಾರಣೆಯಿಂದ ದೃಡ ಪಟ್ಟಿರುತ್ತದೆ ಸದರಿ ಮಾಹಾದೇವಯ್ಯ ಇವರು ಒಟ್ಟು 76,47,000/- ರೂ
ಕಿಮ್ಮತ್ತಿನ ಚಿನ್ನ ಮತ್ತು ಬೆಳ್ಳಿಯನ್ನು ತಮ್ಮ ಸ್ವಂತಕ್ಕೆ ತಗೆದುಕೊಂಡು ಶ್ರೀ ಭಾಗ್ಯವಂತಿ
ದೇವಸ್ಥಾನಕ್ಕೂ ಹಾಗೂ ದಾರ್ಮಿಕ ದತ್ತಿ ಇಲಾಖೆಗೂ ಮತ್ತು ಸರ್ಕಾರಕ್ಕು ಮೋಸ ಮಾಡಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.07.2015 ರಂದು ಸಾಯಂಕಾಲ 05:15 ಗಂಟೆಗೆ ಜೇವರಗಿ ಶಹಾಪುರ
ಮೇನ್ ರೊಡ ಅವರಾದ್ ಕ್ರಾಸ್ ಹತ್ತಿರ ಶಹಾಪುರ ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ33ಎಫ್0295 ನೇದ್ದನ್ನು
ನಮ್ಮ ಚಾಲಕನು ನಡೆಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಟಿಪ್ಪರ್ ನಂ ಕೆ.ಎ51ಬಿ1252 ನೇದ್ದರ
ಚಾಲಕನು ತನ್ನ ಟಿಪ್ಪರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಬಸ್
ಗೆ ಡಿಕ್ಕಿ ಪಡಿಸಿ ಹಾನಿ ಮಾಡಿ ತನ್ನ ಟಿಪ್ಪರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ
ಅಂತಾ ಶ್ರೀ ಪರಸಪ್ಪ ತಂದೆ ನರಸಪ್ಪ ಹಜಾರೆ ಸಾ|| ಹಂದಗಿನುರ ತಾ|| ಸಿಂದಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕನ ಮೇಲ ಅತ್ಯಾಚಾರ
ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 27-07-2015 ರಂದು ಬೆಳಗ್ಗೆ 6 ಗಂಟೆಗೆ ತಾನು ಮತ್ತು ತನ್ನ ಅತ್ತೆಯಾದ
ಹಮೀದಾ ಇಬ್ಬರು ತನ್ನ ಮಾವ ಹೊಲ ಮಾಡಿದ ಹೊಲದಲ್ಲಿಯ ಉರುವಲು ಕಟ್ಟಿಗೆ ತರಲು ಹೊದಾಗ ಶ್ರೀಶೈಲ ತಂದೆ ದುಂಡಪ್ಪ ಹಲಕಾನವರ ಸಾ : ಕೊಣಶೀರಸಗಿ ಗ್ರಾಮ ತಾ: ಜೇವರ್ಗಿ ಇವನು ನೊಂದ
ಬಾಲಕನಿಗೆ ಬಾಯಿ ಒತ್ತಿ ಹಿಡಿದು ಬಾವಿಯಲ್ಲಿ ಒಯ್ದು ಜಭರಿ ಗುದ ಸಂಭೋಗ ಮಾಡಲು
ಪ್ರಯತ್ನಿಸುತ್ತಿದ್ದಾಗ ತಾನು ನಿರಾಕರಿಸಿದಾಗ ಆರೋಪಿತನು ಹೊಡೆದು ಜೀವದ ಬೆದರಿಕೆ ಹಾಕಿ ಜಭರಿ ಗುದ
ಸಂಬೋಗ ಮಾಡುತ್ತಿದ್ದಾಗ ಬಾಲಕನ ಅತ್ತೆ ಹಮೀದಾ ಬರುತ್ತಿದ್ದಂತೆ ಆರೋಪಿತನು ಬಿಟ್ಟು ಓಡಿ
ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment