ನಿಂಬರ್ಗಾ
ಠಾಣೆ : ಆಳಂದ ತಾಲೂಕಿನ
ಧುತ್ತರಗಾಂವ ಗ್ರಾಮದ ಶ್ರೀ ವಿರೇಶ್ವರ ದೇವಸ್ಥಾನದಲ್ಲಿಯ ಬೆಳ್ಳಿಯ ಮೂರ್ತಿಗಳು ಹಾಗೂ ಕಲಬುರಗಿಯ
ಕೊರಂಟಿ ಹನುಮಾನ ದೇವರ ಬೆಳ್ಳಿಯ ಕವಚ ಕಳ್ಳತನ ಪತ್ತೆ ಮಾನ್ಯ ಶ್ರೀ ಅಮೀತಸಿಂಗ್ ಐ.ಪಿ.ಎಸ್. ಪೊಲೀಸ
ಅಧೀಕ್ಷಕರು ಕಲಬುರಗಿ, ಮಾನ್ಯ ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ರವರ ಮಾರ್ಗದರ್ಶನದಲ್ಲಿ
ಹಾಗೂ ಮಾನ್ಯ ಶ್ರೀ ಎಸ್.ಎಲ್. ಝಂಡೆಕರ ಡಿ.ಎಸ್.ಪಿ ಆಳಂದ ಉಪ ವಿಭಾಗ ಮತ್ತು ಮಾನ್ಯ ಶ್ರೀ ಮಾಹಾನಿಂಗಪ್ಪ ನಂದಗಾಂವಿ ಡಿ.ಎಸ್.ಪಿ.(
ಎ ) ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ
ಶ್ರೀ ಬಾಸು ಚವ್ಹಾಣ ಸಿ.ಪಿ.ಐ ಆಳಂದ , ಶ್ರೀ ಸಂತೋಷ ರಾಠೋಡ ಪಿ.ಎಸ್.ಐ ನಿಂಬರ್ಗಾ, ಶ್ರೀ ಮಾಹದೇವ ಪಂಚಮುಖಿ ಪಿ.ಎಸ್.ಐ
ಆಳಂದ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಮಹ್ಮದ ಇಸ್ಮಾಯಿಲ್ ಹೆಚ್.ಸಿ. 75., ಸಿರಾಜೊದ್ದಿನ
ಪಟೇಲ ಹೆಚ್.ಸಿ. 138, ಭದ್ರಪ್ಪ ಹೆಚ್.ಸಿ. 295, ಅಂಬಾರಾಯ ಪಿ.ಸಿ. 395 ಚಂದ್ರಶೇಖರ ಪಿ.ಸಿ 670 , ,ಸೈಬಣ್ಣಾ ಪಿ.ಸಿ. 835,
ಶ್ರೀಶೈಲ ಪಿ.ಸಿ. 362 , ಕಲ್ಯಾಣಿ ಪಿ.ಸಿ. 265,
ದಶರಥ ಎಪಿಸಿ 23, ಗುರುರಾಜ ಪಿ.ಸಿ. 1087, ರವರ ತಂಡವು
ಆರೋಪಿ ಚಿನ್ನು @ ಚಿನ್ನಪ್ಪ ತಂದೆ ಮುಗಲಪ್ಪ ಕಲ್ಲೆಮೂಡ ಸಾ: ವಡ್ಡರ ಕಾಲೂನಿ ಮೈಲೂರ ರೋಡ
ಬೀದರ ಇತನಿಗೆ ಹಿಡಿದು ಆರೋಪಿಯಿಂದ ಧುತ್ತರಗಾಂವ ಗ್ರಾಮದ ಶ್ರೀ ವಿರೇಶ್ವರ ದೇವಸ್ಥಾನದಲ್ಲಿ
ಬೆಳ್ಳಿಯ ಮೂರ್ತಿಗಳು ಮತ್ತು ಗುಲಬರ್ಗಾ ಪಟ್ಟಣದ ಕೊರಂಟಿ ಹನುಮಾನ ದೇವರ ಬೆಳ್ಳಿಯ ಕವಚ ಹಾಗೂ ಬೀದರ ಜಿಲ್ಲೆಯ ಮಂಠಾಳ ಗ್ರಾಮದ ಚೌಕಿ ಮಠದ
ಗುರುಲಿಂಗೇಶ್ವರ ದೇವರ ಬೆಳ್ಳಿಯ ಕಿರೀಟ ಹೀಗೆ ಒಟ್ಟು 20 ಕೆ.ಜಿ ಯಷ್ಟು ಬೆಳ್ಳಿಯ ವಸ್ತುಗಳು
ಇವುಗಳ ಒಟ್ಟು ಕಿಮ್ಮತ್ತು ಸುಮಾರು 7,00,000 /- ರೂ. ಬೆಲೆಯ ಬಾಳುವ
ಮಾಲನ್ನು ಜಪ್ತಿ ಪಡಿಸಿಕೊಂಡು ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಪ್ರಕರಣದಲ್ಲಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಿರುಕಳ ನೀಡಿ ಆತ್ಮಹತ್ಯಮಾಡಿಕೊಳ್ಳುವಂತೆ ಮಾಡಿದ
ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ
ಅರ್ಜುನ ತಂದೆ ಶರಣಪ್ಪಾ ದಿನಸಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ ಇವರ ಮಗಳಾದ ಶರಣಮ್ಮಾ ಇವಳು
ಮಹಾಗಾಂವ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ಈಗ ಸುಮಾರು 6
ತಿಂಗಳಿಂದ ನಮ್ಮ ಓಣಿಯ ರಾಹುಲ ತಂದೆ ಬಾಬುರಾವ ಜನವಾಡ ಈತನು ನನ್ನ ಮಗಳಾದ ಶರಣಮ್ಮ ಇವಳು ಶಾಲೆಗೆ
ಹೋಗುವಾಗ ಮತ್ತು ಶಾಲೆಯಿಂದ ಮರಳಿ ಮನೆಗೆ ಬರುವಾಗ ಅವಳಿಗೆ ಹಿಂಬಾಲಿಸುವುದು,
ಚುಡಾಯಿಸುವುದು. ಮಾಡುತ್ತಾ ಬಂದು ನಿನ್ನೆ ದಿನಾಂಕ: 26-07-2015 ರಂದು ಮಧ್ಯಾಹ್ನ ರಾಹುಲ ಈತನು ನನ್ನ
ಮಗಳು ಮನೆಯಲ್ಲಿ ಒಬ್ಬಳೇ ಇರುವದನ್ನು ನೋಡಿ, ಮನೆಗೆ ಹೋಗಿ ಅವಳ ಹೆಸರಿನಿಂದ ಕೂಗುವುದು ಮತ್ತು ಬಾಗಿಲು
ಬಡಿಯುವುದು ಇತ್ಯಾದಿ ಮಾಡಿದ್ದರಿಂದ ನಮ್ಮ ಓಣಿಯವರು ಇದನ್ನು ನೋಡಿದ್ದರಿಂದ ಶರಣಮ್ಮಾ ಇವಳು ತನಗೆ
ಓಣಿಯವರ ಮುಂದೆ ಆದ ಅವಮಾನವನ್ನು ನೊಂದುಕೊಂಡು ಮತ್ತು ರಾಹುಲ ಈತನು ನೀಡುತ್ತಿದ್ದ ಕಿರುಕುಳದಿಂದ
ಬೇಸತ್ತು ಮನೆಯಲ್ಲಿ ಸಮೀಪದಲ್ಲಿರುವ ಅಕ್ಕ ಮಹಾದೇವಿ ಹಳ್ಳದ ನೀರಿನಲ್ಲಿ ಮುಳಗಿ
ಮೃತಪಟ್ಟಿರುತ್ತಾಳೆ. ಆಕೆಯ ಸಾವಿಗೆ ರಾಹುಲ ಈತನು ನೀಡಿದ ಕಿರುಕುಳವೇ ಕಾರಣ ಆದ್ದರಿಂದ ಸದರಿ
ರಾಹುಲ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ದರೊಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಆಳಂದ
ಠಾಣೆ : ದಿನಾಂಕ 26/07/2015 ರಂದು ಆಳಂದ-ತೆಲೆಕುಣಿ
ರೋಡಿನ ಚಡಾವದಲ್ಲಿ ಗುಲಾಮ ಮುಲ್ಲಾರವರ ಹೊಲದಲ್ಲಿ ಇದ್ದ ದರ್ಗಾದ ಸಮೀಪ ರೋಡಿನ ಮೇಲೆ ಯಾರೋ ಕೆಲವು
ಜನರು ರೋಡಿಗೆ ಅಡ್ಡ ವಾಹನಗಳು ಹಚ್ಚಿ ಹಗ್ಗಾ ಹಾಕಿ ದರೋಡೆ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ
ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ
ಸ್ಥಳದಿಂದ ದೂರದಲ್ಲಿ ಜೀಪ್ ನಿಲ್ಲಿಸಿ ಸಾವಕಾಶವಾಗಿ ನಡೆದುಕೊಂಡು ಹೋಗಿ ಗಿಡಗಂಟಿ ಮರೆಯಲ್ಲಿ
ನಿಂತು ನೋಡಲಾಗಿ ಸದರಿ ರೋಡಿಗೆ ಎರಡು ಮೋಟರ ಸೈಕಲ ಅಡ್ಡ ನಿಲ್ಲಿಸಿ ಇಬ್ಬರು ರೋಡಿನ ಎರಡು ಬದಿಗೆ
ಹಗ್ಗ ಹಿಡಿದು ನಿಂತಿದ್ದು ಇಬ್ಬರು ರೋಡಿನ
ಎರಡುಬದಿಗೆ ಕಲ್ಲು ಹಾಕುತ್ತಿದ್ದು ಇನ್ನಿಬ್ಬರು ಕೈಯಲ್ಲಿ ರಾಡುಗಳನ್ನು ಹಿಡಿದುಕೊಂಡಿದ್ದು
ಸದರಿಯವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿಗೆ ಹೋಗಿ ಬರುವ ವಾಹನಗಳಿಗೆ ತಡೆದು ದರೋಡೆ ಮಾಡಲು
ಸಿದ್ದತೆ ಮಾಡಿಕೊಳ್ಳುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 1) ಉಮೇಶ ತಂದೆ ದತ್ತು ಪವಾರ ಸಾ:
ದರ್ಗಾಶಿರೂರ 2) ರಾಮು ತಂದೆ ದಾದು ಕಾಳೆ ಸಾ: ರಾಜವಾಳ 3) ಸೋಮನಾಥ ತಂದೆ ಬಗ್ಗು ಚವ್ಹಾಣ ಸಾ:
ಕಮಸೂರ ನಾಯಕ ತಾಂಡಾ 4) ಬೈರು ತಂದೆ ಕಲ್ಲು ಪವಾರ
ಸಾ: ದರ್ಗಾ ಶಿರೂರ 5) ಕಲ್ಯಾಣಿ ತಂದೆ ಸಾಲು
ಪವಾರ ಸಾ: ದರ್ಗಾ ಶಿರೂರ 6) ಜಗನಾಥ ತಂದೆ ರತನು ಪವಾರ ಸಾ: ಕಮಸೂರ ನಾಯಕ ತಾಂಡ ಇವರುಗಳನ್ನು
ವಶಕ್ಕೆ ತೆಗೆದುಕೊಂಡು ಸದರಿಯವರಿಂದ ದರೊಡೆ ಮಾಡಲು ಬಳಸಲು ತಂದಿದ್ದ ಬಜಾಜ ಪ್ಲಾಟಿನಮ್
ಮೋ.ಸೈಕಲ: ನಂ ಕೆಎ 32 ಯ 6916 ಮತ್ತು ಡಿಸ್ಕೋವರಿ ರೆಡ್ & ಸಿಲ್ವರ್ ಕಲರ್
ಮೋ.ಸೈಕಲ ನಂಬರ ಕೆಎ 32 ಇಇ 4668 ಮೊಟಾರ ಸೈಕಲ್ಗಳನ್ನು ಮತ್ತು ಕಬ್ಬಿಣದ ರಾಡಗಳು, ಕಾರದ ಪುಡಿ, ನೂಲಿನ ಹಗ್ಗ ಮತ್ತು ಕಲ್ಲುಗಳನ್ನು
ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಳಂದ ಠಾಣೆ : ದಿನಾಂಕ 26-07-2015 ರಂದು ಆಳಂದ-ಖಜೂರಿ
ರೋಡಿನ ಚಿತಲಿ ಚೆಡೌನ ಹತ್ತಿರ ಇರುವ ವಿಶ್ವನಾಥ ಜಾದವ ಸಾ:ಚಿತಲಿ ಇವರ ಲಿಂಬಿ ತೋಟದ ಹೊಲಕ್ಕೆ
ಹತ್ತಿಕೊಂಡಿದ್ದ ರೋಡಿಗೆ ಯಾರೋ ಕೆಲವು ಜನರು ರೋಡಿಗೆ ಅಡ್ಡ ವಾಹನಗಳು ಹಚ್ಚಿ ಹಗ್ಗಾ ಹಾಕಿ ದರೋಡೆ
ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ
ಬಂದ ಸ್ಥಳದಿಂದ 100 ಪೀಟ ದೂರದಲ್ಲಿ ಜೀಪ್ ನಿಲ್ಲಿಸಿ ಸವಕಾಶವಾಗಿ ನಡೆದುಕೊಂಡು ಹೋಗಿ ಗಿಡಗಂಟಿ
ಮರೆಯಲ್ಲಿ ನಿಂತು ನೋಡಲಾಗಿ ಸದರಿ ರೋಡಿಗೆ ಒಂದು ಜೀಪ ಹಾಗು ಒಂದು ಮೋಟರ ಸೈಕಲ ಅಡ್ಡ ನಿಲ್ಲಿಸಿ
ಇಬ್ಬರು ರೋಡಿನ ಎರಡು ಬದಿಗೆ ಹಗ್ಗ ಹಿಡಿದು
ನಿಂತಿದ್ದು ಇಬ್ಬರು ರೋಡಿನ ಎರಡುಬದಿಗೆ ಕಲ್ಲು ಹಾಕುತ್ತಿದ್ದು ಇನ್ನಿಬ್ಬರು ಕೈಯಲ್ಲಿ
ರಾಡುಗಳನ್ನು ಹಿಡಿದುಕೊಂಡಿದ್ದು ಸದರಿಯವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿಗೆ ಹೋಗಿ ಬರುವ
ವಾಹನಗಳಿಗೆ ತಡೆದು ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುವುದನ್ನು ಖಚಿತ ಪಡಿಸಿಕೊಂಡು ದಾಳೀ ಮಾಡಿ
1) ಬಾಹಾದ್ದೂರ ತಂದೆ ಗೌನು ಕಾಳೆ ಸಾ: ಶೆಕಾಪೂರ 2)
ಅಂತ್ಯಾ ತಂದೆ ಗೊವಿಂದ ಚವ್ಹಾಣ ಸಾ: ಮೋಘಾ (ಬಿ) 3) ನರಸಿಂಗ ತಂದೆ ಹರಿಶ್ಚಂದ್ರ ಪವಾರ ಸಾ; ಶೆಕಾಪೂರ 4) ಬೆಸ್ಯಾ
ತಂದೆ ಸುನೀಲ ಪವಾರ ಸಾ: ಶೆಕಾಪೂರ ಇತನ ಕೈಯಲ್ಲಿ 5) ಸುರೇಶ ತಂದೆ ಪದ್ಮು ಕಾಳೆ ಸಾ: ರಾಜೋಳ 6) ಬಿಕ್ಕು ತಂದೆ ರಘುನಾಥ ಪವಾರ ಸಾ: ಶೆಕಾಪೂರ
ರವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರು ದರೋಡೆ ಮಾಡಲು ಬಂದಿದ್ದ ಬಗ್ಗೆ ತಿಳಿಸಿದ್ದರಿಂದ ಕೃತ್ಯಕ್ಕೆ
ಬಳಸಿದ ಮಹೇಂದ್ರ ಕಂಪನಿಯ ಜೀಪ ನಂ ಎಮ್‌ಎಚ್ 24
ಸಿ 1463 ಮತ್ತು ಹಿರೋ ಸ್ಲೆಂಡರ್ ಮೋ.ಸೈಕಲ
ನಂಬರ ಕೆಎ 32 ಇಜಿ 5424 ಸದರಿಯವರಿಂದ ಒಂದು 3 ಪೀಟ ಉದ್ದದ ಎರಡು ರಾಡು, ಹಿಡಿ ಗಾತ್ರದ ಕಲ್ಲು ಒಂದು
ನೂಲಿನ ಹಗ್ಗ ಅಂದಾಜು 40 ಪೀಟ ಉದ್ದವುಳ್ಳದ್ದು, 250 ಗ್ರಾಂದಷ್ಟು ಖಾರದ ಪುಡಿ ವಶಪಡಿಸಿಕೊಂಡು
ಸದರಿಯವರೊಂದಿಗೆ ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment