Police Bhavan Kalaburagi

Police Bhavan Kalaburagi

Thursday, July 30, 2015

Kalaburagi District Reported Crimes

ಮೊಸ ಮಾಡಿದ ಪ್ರಕರಣ :
ಚಿತ್ತಾಪೂರ ಠಾಣೆ : ಶ್ರೀ ಶ್ರೀನಿವಾಸ ತಂದೆ ರಂಗಣ್ಣ . ಸಿ :ಚಿತ್ತಾಪೂರ ತಹಶೀಲ್ದಾರ ಕಾರ್ಯಲಯದಲ್ಲಿ ಶಿರಸ್ಥೆದಾರ ಸಾ:ಲಿಂಗಸುರ ಜಿಲ್ಲಾ : ರಾಯಚೂರ ಹಾ::ತಹಶೀಲ ಕಾರ್ಯಲಯ ಚಿತ್ತಾಪೂರ ಜಿಲ್ಲಾ : ಕಲಬುರಗಿ  ರವರು ಚಿತ್ತಾಪೂರ ತಹಶೀಲ ಕಾರ್ಯಲಯದಲ್ಲಿ ಶಿರಸ್ಥೆದಾರ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು. ಎಸ್.ಬಿ.ಹೆಚ್. ಬ್ಯಾಂಕ ಚಿತ್ತಾಪೂರದಲ್ಲಿ ನಾನು ಎಸ್.ಬಿ. ಖಾತೆದಾರನಿದ್ದು. ಖಾತೆ ನಂಬರ 52159614800 ನೇದ್ದು ಇರುತ್ತದೆ. ಸದರ ಖಾತೆಗೆ .ಟಿ.ಎಮ್. ಕಾರ್ಡ ಪಡೆದಿದ್ದು ಅದರ 16 ಸಂಖ್ಯೆಗಳು 5211080009990876 ನೇದ್ದು ಇರುತ್ತವೆ. ಸದರ ಖಾತೆಗೆ ಪ್ರತಿ ತಿಂಗಳು ನನ್ನ ವೇತನ ಜಮಾ ಆಗುತ್ತದೆ. ಜಮಾ ಆದ ಬಗ್ಗೆ ತಕ್ಷಣವೆ ನನ್ನ ಮೊಬೈಲ ನಂಬರ 9449733123 ನೇದ್ದಕ್ಕೆ ಮಾಹಿತಿ ಸಂದೇಶ ಬರುತ್ತಿತ್ತು. ನನ್ನ ಎಸ್.ಬಿ.ಹೆಚ್. ಉಳಿತಾಯ ಖಾತೆಯಲ್ಲಿ ಒಟ್ಟು 1,13,540/-ರೂ, 12 ಪೈಸೆ. ( ಒಂದು ಲಕ್ಷ ಹದಿಮೂರು ಸಾವಿರ ಐದುನೂರಾ ನಲವತ್ತು ರೂಪಾಯಿ ಹನ್ನೆರಡು ಪೈಸೆ ) ಜಮಾ ಇದ್ದು. ದಿನಾಂಕ:-27/06/2015 ರಂದು ನನ್ನ 2015 ನೇ ಸಾಲಿನ ಜೂನ ತಿಂಗಳ ಸಂಬಳ 25592=00 ರೂ ನನ್ನ ಖಾತೆಗೆ ಜಮಾ ಆಗಿದ್ದು. ಜಮಾ ಆದ ಬಗ್ಗ ನನ್ನ ಮೋಬೈಲಗೆ ಯಾವುದೇ ಮಾಹಿತಿ ಸಂದೇಶ ಬರಲಿಲ್ಲ. ಸಮಯದಲ್ಲಿ ಒಟ್ಟು ನನ್ನ ಖಾತೆಯಲ್ಲಿ 1,39,132=00 ರೂ ಜಮಾ ಇದ್ದು. ದಿನಾಂಕ:-06/07/2015 ರಂದು ಮುಂಜಾನೆ 7 .ಎಮ್. ಸುಮಾರಿಗೆ ನನ್ನ ಮೊಬೈಲ ನಂ. 9449733123 ನೇದ್ದಕ್ಕೆ ಮೊಬೈಲ ನಂಬರ 7549347231 ದಿಂದ ಫೋನ ಮಾಡಿ ನಾವು ಎಸ್.ಬಿ.ಹೆಚ್. ಬ್ಯಾಂಕ ಹೆಡ್ ಆಫೀಸ್ ದಿಂದ ಮಾತಾಡುತ್ತಿದ್ದು. ನಿಮ್ಮ .ಟಿ.ಎಮ್. ಕಾರ್ಡ ಬ್ಲಾಕ ಆಗಿದೆ ನಿಮ್ಮ .ಟಿ.ಎಮ್. ಕಾರ್ಡದ ಮೇಲೆ ಇರುವ 16 ಸಂಖ್ಯೆಗಳನ್ನು ನೀವು ಹೇಳಿದರೆ ನಿಮ್ಮ .ಟಿ.ಎಮ್. ಕಾರ್ಡ 24 ಗಂಟೆಯೊಳಗಾಗಿ ಪುನ: ಎಕ್ಟಿವೇಷನ್ ಮಾಡಿ ಕೊಡುತ್ತೇವೆ ಅಂತ ಹೇಳಿದ್ದರಿಂದ , ನಾನು ಅವರು ಎಸ್.ಬಿ.ಹೆಚ್. ಬ್ಯಾಂಕ ಹೆಡ್ ಆಫೀಸ್ ನವರೆ ಇರಬಹುದೆಂದು ನಂಬಿ ನನ್ನ .ಟಿ.ಎಮ್. ಕಾರ್ಡ ಮೇಲೆ ಇರುವ 16 ಸಂಖ್ಯೆಗಳಾದ 5211 0800 0999 0876 ಸಂಖ್ಯೆಗಳು ಅವರಿಗೆ ಫೋನ ಮುಖಾಂತರ ಹೇಳಿದೇನು. ನಂತರ ಅವರು ನನ್ನ ಮೊಬೈಲಗೆ 6 ಸಂಖ್ಯೆಗಳುಳ್ಳ ಒಂದು ಸಂದೇಶವನ್ನು ಕಳಿಸಿ ನಂತರ ಸ್ವಲ್ಪ ಸಮಯ ಕಳೆದ ನಂತರ ಅವರು ಕಳಿಸಿದ 6 ಸಂಖ್ಯೆಗಳನ್ನು ಡಿಲಿಟ್ ಮಾಡಿರಿ ಅಂತ ಹೇಳಿ ಮತ್ತೊಂದು 6 ಸಂಖ್ಯೆ ಸಂದೇಶ ನನ್ನ ಮೊಬೈಲಗೆ ಕಳಿಸಿದ್ದು. ಮತ್ತೆ ಅವರು ಸದರ ನಂಬರ ಡಿಲಿಟ್ ಮಾಡಿ ಅಂತ ಹೇಳಿದಾಗ ನಾನು ಅವರಿಗೆ ಯ್ಯಾಕೆ ರೀತಿ ನಂಬರ ಕಳುಹಿಸಿ ಡಿಲಿಟ್ ಮಾಡಲು ಹೇಳುತ್ತಿದ್ದಿರಿ ಅಂತ ಕೇಳಿದ್ದಕ್ಕೆ ನಿಮ್ಮ .ಟಿ.ಎಮ್. ಕಾರ್ಡ ನಮ್ಮ ಅಂತರಜಾಲದಲ್ಲಿ ಸರ್ಚ ಮಾಡುತ್ತಿದ್ದೇವೆ ಅಂತ ಹೇಳಿದ ಮೇರೆಗೆ ನಾನು ನಂಬಿ ದಿನಾಂಕ:-06/07/2015 ರಿಂದ ದಿನಾಂಕ:-08/07/2015 ವರೆಗೆ ಅವರು ಕಳಿಸಿದ ನಂಬರಗಳನ್ನು ನಾನು ನನ್ನ ಮೊಬೈಲಗೆ ಬಂದ ನಂಬರಗಳು ಡಿಲಿಟ್ ಮಾಡುತ್ತಾ ಹೋದೇನು. ನಂಬರಗಳ ಪೈಕಿ ಕೆಲವೊಂದು ನಂಬರಗಳು ನಾನು ಪ್ರತೇಕವಾಗಿ ಲಿಖಿತ ರೂಪದಲ್ಲಿ ಬರೆದಿಟ್ಟಿದ್ದು. ಅವು 1] 615254 2] 168187 3] 122252 4] 846182 5] 227906 6] 310963 7] 954051 8] 605250 9] 399866 10] 526623 11] ಕಔಖ 00001659 ನೇದ್ದವುಗಳು ಇರುತ್ತವೆದಿನಾಂಕ:-08/07/2015 ರಂದು ನನಗೆ ಸಂಶಯ ಆಗಿದ್ದರಿಂದ ನನ್ನ ಬ್ಯಾಂಕ ಪಾಸಬುಕ್ ಎಂಟ್ರಿ ಮಾಡಿಸಿಕೊಂಡು ಬರೋಣಾ ಅಂತ ಚಿತ್ತಾಪುರದಲ್ಲಿರುವ ಎಸ್.ಬಿ.ಹೆಚ್. ಬ್ಯಾಂಕಿಗೆ ಹೊಗಿ ನನ್ನ ಪಾಸಬುಕ್ ಎಂಟ್ರಿ (ಕಾಲೋಚಿತ) ಮಾಡಿಸಲಾಗಿ ನನ್ನ ಖಾತೆಯಲ್ಲಿ ಕೇವಲ 8,634=00 ರೂ ಮಾತ್ರ ಉಳಿದಿದ್ದು ನೋಡಿ ನಾನು ಮ್ಯಾನೇಜರ ಹತ್ತಿರ ಹೋಗಿ ನನ್ನ ಖಾತೆಯಲ್ಲಿ ಜಮಾ ಇದ್ದ  1,39,132=00 ರೂಪಾಯಿಗಳಲ್ಲಿ 1,31000=00 ರೂಪಾಯಿ ಡ್ರಾ ಆಗಿದ್ದು ನಾನು ಯಾವುದೇ ಹಣ ಡ್ರಾ ಮಾಡಿಕೊಂಡಿರುವದಿಲ್ಲ ಅಂತ ಹೇಳಿದಾಗ , ಅವರು ನನಗೆ ಒಂದು ಲಿಖಿತ ಅರ್ಜಿ ಕೊಡಿ ಅಂತ ಹೇಳಿದಾಗ ನಾನು ಮಾನ್ಯ ವ್ಯವಸ್ಥಾಪಕರು ಎಸ್.ಬಿ.ಹೆಚ್. ಬ್ಯಾಂಕ ಚಿತ್ತಾಪೂರ ರವರಿಗೆ ದಿನಾಂಕ:-08/07/2015 ರಂದು ಲಿಖಿತ ರೂಪದಲ್ಲಿ ಅರ್ಜಿ ಬರೆದು ಕೊಟ್ಟೇನು. ನಂತರ ದಿನಾಂಕ:-14/07/2015 ರಂದು ಪುನ: ಬ್ಯಾಂಕಿನ ಮ್ಯಾನೇಜರ ರವರಿಗೆ ವಿಚಾರಿಸಲಾಗಿ ಅವರು ನೀವು ಸದರ ವಿಷಯದ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಅಂತ ಹೇಳಿ ಕಳಿಸಿದರು. ನನ್ನ ಎಸ್.ಬಿ ಹೆಚ್. ಬ್ಯಾಂಕ ಉಳಿತಾಯ ಖಾತೆ ನಂಬರ  52159614800 ನೇದ್ದರಲ್ಲಿ ಜಮಾ ಇದ್ದ ಒಟ್ಟು ಹಣ 1,39,132=00 ರೂಪಾಯಿಗಳಲ್ಲಿ ಮೇಲೆ ನಮೂದಿಸಿದ ಫೊನ ಮುಖಾಂತರ ನನ್ನ ಸದರ ಖಾತೆಯ .ಟಿ.ಎಮ್.ಕಾರ್ಡದ 16 ಸಂಖ್ಯೆಗಳು ಕೇಳಿ .ಟಿ.ಎಮ್. ಮುಖಾಂತರವೋ ಅಥವಾ ಆನಲೈನ ಮುಖಾಂತರವೋ ಹಣ ಡ್ರಾ ಮಾಡಿಕೊಂಡು ನನಗೆ ಮೊಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-07-2015 ರಂದು ಬನ್ನೇಟ್ಟಿ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮೀ ಗುಡಿಯ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿದ ತಕ್ಷಣ  ತನ್ನ  ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಸದರಿ ಟ್ರಾಕ್ಟರ  ಚಕ್ಕ ಮಾಡಲು, 1) ಜಾನಡೀರ ಕಂಪನಿಯ ಟ್ಯಾಕ್ಟರ ನಂ ಕೆಎ-32 ಟಿಎ-2049 ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿನ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಜಪ್ತಿಮಾಡಿಕೊಂಡು  ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ :
ಸೇಡಂ ಠಾಣೆ : ಕುಮಾರಿ ಇವಳು ಕಾಲೇಜಿಗೆ ಹೋಗುತ್ತಿದ್ದಾಗ ಶರಣಕುಮಾರ ತಂದೆ ಸಿದ್ದಣ್ಣ ತಳವಾರ ಸಾ:ಸಟಪಟನಳ್ಳಿ ಈತನು ನನಗೆ ನೋಡುವದು, ಮತ್ತು ನನಗೆ ನೋಡಿ ನಗುವದು ಚುಡಾಯಿಸುವದು ಮಾಡುತ್ತಿದ್ದನು. ಮತ್ತು ನಾನು ಅವನಿಗೆ ನಾನು ಈಗ ದೊಡ್ಡವಳಾಗಿದ್ದೇನೆ ನೀನು ರೀತಿ ಮಾಡುವದು ಸರಿಯಲ್ಲ ಅಂತಾ ಪುನಃ ಹೇಳಿದ್ದಾಗ ಅವನು ನನಗೆ ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ. ಅಂದಾಗ ನಮ್ಮ ಮಧ್ಯ ಪ್ರೀತಿ ಬೆಳೆದಿರುತ್ತದೆಹೀಗೆ ಅವನು ನನಗೆ ಬರುಬರುತ್ತಾ ಸುಮಾರು ದಿನಗಳು ಕಳೆದ ಮೇಲೆ ನಾವಿಬ್ಬರು ಮಾತನಾಡುವದು, ನಗುವದು ಮಾಡುತ್ತಿದ್ದೇವು. ಮತ್ತು ಆಗಾಗ ನಾವಿಬ್ಬರೂ ಫೋನನಲ್ಲಿ ಮಾತಾಡುತ್ತಿದ್ದೆವು. ನಂತರ ದಿನಾಂಕ 12/07/2015 ರಂದು ಮಧ್ಯಾನ ನಾನು ಒಬ್ಬಳೇ ಮನೆಯಲ್ಲಿದ್ದಾಗ ಸದರಿ ಶರಣಕುಮಾರ ಈತನು ನನಗೆ ನೀನು ನನ್ನ ಸಂಗಡ ಬಾ ನಾನು ನಿನಗೆ ಮದುವೆ ಮಾಡಿಕೊಳ್ಳುತ್ಥೇನೆ ಅಂತಾ ಪುಸಲಾಯಿಸಿ  ಅವನ ಹಳೆಯ ಮನೆಯಲ್ಲಿ ನನಗೆ ಜಬರದಸ್ತಿನಿಂದ ಎಳೆದುಕೊಂಡು ಹೋಗಿ ನನ್ನ ಬಾಯಿಗೆ ಎರಡೂ ಕೈಗಳಿಂದ ನಾನು ಚೀರದಂತೆ ಒತ್ತಿ ಹಿಡಿದು ನನಗೆ ಕೆಳಗೆ ಹಾಕಿ ನನ್ನ ಬಟ್ಟೆ ಬಿಚ್ಚಿ ನನಗೆ ಜಬರಿ ಸಂಭೋಗ ಮಾಡಿದನು. ನಂತರ ನಾನು ಅವನಿಗೆ ಬೈದಾಡುವದು ವಗೈರೆ ಮಾಡುತ್ತಿದ್ದಾಗ ಅವನು ವಿಷಯವನ್ನು ಯಾರಿಗಾದರೂ ನೀನು ಹೇಳಿದಲ್ಲಿ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದನು. ನಾನು ಅವನಿಗೆ ಅಂಜಿಕೊಂಡು ಸುಮ್ಮನಿದ್ದೆನು. ಶರಣಕುಮಾರನಿಗೆ ಎರಡು ಮೂರು ಸಲ ಭೇಟಿಯಾದಾಗ ನಾನು ಮದುವೆಯಾಗೋಣ ಅಂತಾ ಕೇಳಿದರೆ ಆತನು ಒಪ್ಪಲಿಲ್ಲ. ನನ್ನ ಮೇಲೆ ಬಲಾತ್ಕಾರ ಮಾಡಿದ ವಿಷಯವನ್ನು  ನಾನು ನಿನ್ನೆ ದಿನಾಂಕ 27/07/2015 ರಂದು ನನ್ನ ತಂದೆ ತಾಯಿಗೆ ತೀಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ



ಯಡ್ರಾಮಿ ಠಾಣೆ : ಶ್ರೀ ಮಲ್ಲಪ್ಪ ತಂದೆ ಬೈಲಪ್ಪ ನಡುಗಡ್ಡಿ ಸಾ: ನೆಲೋಗಿ ತಾ: ಜೆವರಗಿ ಇವರ ಕೊನೆಯ ಮಗಳಾದ ಮಾಂತಮ್ಮ ಇವಳಿಗೆ ಈಗ ಸುಮಾರು 6 ವರ್ಷಗಳ ಹಿಂದೆ ಕುಕನೂರ ಗ್ರಾಮದ ಸಾದಪ್ಪನಿಗೆ ಕೊಟ್ಟು ಮದುವೆ ಮಾಡಿದ್ದು, ಗಂಡ ಹೆಂಡರು ಅನ್ಯುನ್ಯವಾಗಿದ್ದರು. ಅಲ್ಲದೆ ನನ್ನ ಮಗಳಿಗೆ ಇನ್ನೂ ಮಕ್ಕಳಾಗಿರಲಿಲ್ಲ.  ಹೀಗಿದ್ದು ದಿನಾಂಕ: 20-07-2015 ರಂದು ನಾನು ನಮ್ಮ ಊರಲ್ಲಿ ಇದ್ದಾಗ ಸಾಯಂಕಾಲ ನಮ್ಮ ಅಳಿಯನಾದ ಸಾದೇವಪ್ಪ ಈತನು ಪೋನ ಮಾಡಿ ಹೇಳಿದ್ದೇನೆಂದರೆ , ಬೆಳ್ಳಗ್ಗೆ ಯಡ್ರಮಿಯ ಸಂತೆಗೆ ನನ್ನ ಹೆಂಡತಿಯಾದ ಮಾಂತಮ್ಮ ಹಾಗೂ ನನ್ನ ತಾಯಿಯಾದ ಮಹಾಲಿಂಗಮ್ಮ ಇಬ್ಬರು ಹೋಗಿದ್ದು, ಮರಳಿ ನನ್ನ ತಾಯಿ ಒಬ್ಬಳೆ ಬಂದು ಹೇಳಿದ್ದೇನೆಂದರೆ ಮಹಾಂತಮ್ಮ ನನ್ನೊಂದಿಗೆ ಹೋದವಳು ಪುನ ಸಂತೆಯಲ್ಲಿ ಎಲ್ಲಿಗೆ ಹೋಗಿದ್ದಾಳೊ ಏನೋ ಗೊತ್ತಿಲ್ಲಾ ಅಂತಾ ಹೇಳಿದ ವಿಷಯ ಕೇಳಿ ಇಲ್ಲಿಯೂ ಕೂಡಾ ನನ್ನ ಮಗಳು ಬಂದಿಲ್ಲಾ ಅಂತಾ ಹೇಳಿ ನಾವು ಹುಡುಕಾಡುತ್ತೇವೆ. ನೀವು ಹುಡುಕಿರಿ ಅಂತಾ ಹೇಳಿ ಅಲ್ಲಿಂದ ಇಲ್ಲಿಯವರೆಗೂ ಹುಡುಕಾಡಿದರು ನನ್ನ ಮಗಳಾದ ಮಾಂತಮ್ಮ ಇವಳು ಪತ್ತೆಯಾಗಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

No comments: