ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
ದಿನಾಂಕ:
02-08-2015 ರಂದು ರಾತ್ರಿ 9:00 ಗಂಟೆಗೆ ಶ್ರೀ ವಾಹಾಜ್ಬಾಬಾ ಅದ್ಯಕ್ಷರು
ತಾಮಿರ್-ಎ-ಮಿಲ್ಲತ್ರವರು ಚೌಕ್ ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿಯ ಮೇಲಿಂದ ಚೌಕ್
ಪೊಲೀಸ್ ಠಾಣೆಯ ಗುನ್ನೆ ನಂ: 126/2015 ಕಲಂ 295 (ಎ) ಐ.ಪಿ.ಸಿ. ಪ್ರಕಾರ ಪ್ರಕರಣವನ್ನು
ಸಂಪಾದಕರು ವಿಜಯವಾಣಿ ದಿನ ಪತ್ರಿಕೆಯ ವಿರುದ್ಧ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಇಂದು ದಿನಾಂಕ: 06-08-2015 ರಂದು ಬೆಳಿಗ್ಗೆ 11:15 ಗಂಟೆಗೆ ಸುಮಾರು
60-80 ಮುಸ್ಲಿಂ ಸುಮುದಾಯದ ಜನರು ಶ್ರೀ ವಾಹಾಜ್ಬಾಬಾ ರವರ ನೇತೃತ್ವದಲ್ಲಿ ಕೂಡಲೇ ಮೇಲ್ಕಂಡ
ಪ್ರಕರಣದ ಆರೋಪಿತರಿಗೆ ದಸ್ತಗಿರಿ ಮಾಡುವಂತೆ ಪೊಲೀಸ್ ಭವನ ಕಲಬುರಗಿ ಎದುರುಗಡೆ ಪ್ರತಿಭಟನೆ
ಮಾಡಿದ್ದು, ಅಪರ ಪೊಲೀಸ್ ಅಧೀಕ್ಷಕರು ಕಲಬುರಗಿರವರು ಪ್ರತಿಭಟನಾಕಾರರಿಗೆ
ಭೇಟಿಯಾಗಿ ಮನವಿ ಪತ್ರ ಸ್ವೀಕರಿಸಿ ಇಂದು ಸಾಯಂಕಾಲ 5:00 ಗಂಟೆಯೊಳಗಾಗಿ ನಿಮ್ಮ ಬೇಡಿಕೆಯು ಬಗ್ಗೆ
ಇತ್ಯರ್ಥಪಡಿಸಿ ನ್ಯಾಯ ಒದಗಿಸಲಾಗುವುದು ಎಂದು ಕೊಟ್ಟ ಭರವಸೆಯ ಮೇರೆಗೆ ಪ್ರತಿಭಟನಾಕಾರರು
ಮದ್ಯಾಹ್ನ 12:15 ಗಂಟೆಗೆ ಶಾಂತರೀತಿಯಾಗಿ ಹೊರಟು ಹೋಗಿರುತ್ತಾರೆ.
ನಂತರ ಇಂದು ಸಾಯಂಕಾಲ 4:30 ಗಂಟೆಗೆ 1) ಶ್ರೀ ವಾಹಾಜ್ಬಾಬಾ
ಅದ್ಯಕ್ಷರು ತಾಮಿರ-ಎ-ಮಿಲ್ಲತ್, 2) ಶ್ರೀ ಅಬ್ದುಲ್ ರಹಿಮ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರು, 3) ಶ್ರೀ ಶೇಖ ಸಿರಾಜುದ್ದಿನ್
ಮಾಜಿ ಅದ್ಯಕ್ಷರು ಎಸ್.ಡಿ.ಪಿ.ಐ.ರವರನ್ನು ಪೊಲೀಸ್ ಭವನ ಕಲಬುರಗಿಗೆ ಕರೆಯಿಸಿ ಮಾನ್ಯ ಐ.ಜಿ.ಪಿ.
ಸಾಹೇಬರ ಕಾರ್ಯಾಲಯದಲ್ಲಿ ಸಭೆ ನಡೆಸಿ ಮಾನ್ಯ
ಐ.ಜಿ.ಪಿ. ಸಾಹೇಬರು ಭರವಸೆಕೊಟ್ಟು ಈ ವಿಷಯದ ಬಗ್ಗೆ ಕಾನೂನು ಪ್ರಕಾರ ಕ್ರಮ
ತೆಗೆದುಕೊಳ್ಳಲಾಗುವುದು ಮತ್ತು ಮೇಲಾಧಿಕಾರಿಯವರಿಗೆ ಮಾಹಿತಿ ಕೊಡಲಾಗಿದೆ. ಈ ವಿಷಯವನ್ನು ಅತೀ
ಗಂಭೀರ ಎಂದು ಪರಿಗಣಿಸಿದ್ದು ಇರುತ್ತದೆ ಎಂದು ಸಭೆಯಲ್ಲಿ ತಿಳುವಳಿಕೆ ಹೇಳಿದ್ದರಿಂದ ಮೇಲ್ಕಂಡ
ಮುಖಂಡರು ಅದಕ್ಕೆ ಒಪ್ಪಿಕೊಂಡು ಹೊರಟು ಹೋಗಿರುತ್ತಾರೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ
ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 06-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು
ಟ್ರಾಕ್ಟರದಲ್ಲಿ ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ
ಬೀಲೂ ಎಎಸ್ಐ ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನೂರ ರೋಡ ಡಿಗ್ರಿ
ಕಾಲೇಜ ಹತ್ತಿರ ಇದ್ದಾಗ ಎದುರುಗಡಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು , ಸದರಿ ಟ್ರಾಕ್ಟರ ಚಾಲಕನು ನಮ್ಮ ಜೀಪನ್ನು ನೋಡಿ ತನ್ನ
ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟ್ರಾಕ್ಟರ ಚಕ್ಕ ಮಾಡಲು ಸದರಿ
ಟ್ರಾಕ್ಟರದಲ್ಲಿ ಮರಳು ಇತ್ತು, ಸದರಿ ಟ್ರಾಕ್ಟರ ನೋಡಲಾಗಿ
ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇದ್ದು
ಅದರ ಇಂಜಿನ ನಂಬರ NNHY06807 ಅಂತ ಇದ್ದು ಸದರಿ
ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 3,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ
ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಮಾಡಿ ಜೀವದ ಭಯ ಪಡಿಸಿದ್ದರಿಂದ ಆತ್ಮ
ಹತ್ಯ ಮಾಡಿಕೊಂಡ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 05/08/2015 ರಂದು ಮದ್ಯಾಹ್ನ 3-30 ಗಂಟೆಗೆ
ನಮ್ಮ ಮನೆಯಲ್ಲಿ ನನ್ನ ಮಗಳು ವಯಾ: 16 ವರ್ಷ ಇವಳು ಮನೆಯಲ್ಲಿದ್ದಾಗ ಅದೆ ಸಮಯಕ್ಕೆ ನಮ್ಮೂರ ರಾಮಪ್ಪ ತಂದೆ ಚಂದಪ್ಪ ಖಂಡಪ್ಪಗೋಳ
ಇತನು ನಮ್ಮ ಮಗಳಿಗೆ ಜಬರದಸ್ತಿತಿಂದ ಸಂಭೋಗಾ ಮಾಡಿರುತ್ತಾನೆ. ಅದೆ ವೇಳೆಗೆ ವಿಷಯ ಗೊತ್ತಾಗಿ ರಾಮಪ್ಪನ ತಂದೆ ಚಂದಪ್ಪ ,ತಾಯಿ
ಬಸಮ್ಮ ಅಣ್ಣ ಸಿದ್ದಪ್ಪ ಇವರು ನಮ್ಮ ಮನೆಗೆ ಬಂದು ನನ್ನ ಮಗ ನಿಮ್ಮ ಮಗಳಿಗೆ ಕೆಡಸಿದರೆನಾಯಿತು ಇದ್ದರೆ ಇರಲಿ ಈ ಸುಳಿ
ಸಾಯಿಲಿ ಅಂತಾ ನಮಗೆ ಸಿಕ್ಕ ಪಟ್ಟೆ ಬೈದು ಜೀವದ ಬಯಾ ಹಾಕುತ್ತಿದ್ದಾಗ ನಮ್ಮ ಮಗಳು ಈರಮ್ಮ ಇವಳು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು
ಮನನೊಂದು ಇನ್ನೊಂದು ರೂಮಿನ ಒಳಗೆ ಹೋಗಿ
ಕ್ರೀಮಿನಾಶಕ ಎಣ್ಣೆ ಕುಡಿದಿರುತ್ತಾಳೆ ಅವಳಿಗೆ
ಉಪಚಾರ ಕುರಿತು ಜೇವರ್ಗಿ ಸರಕಾರಿ ಆಸ್ಪತ್ರೆಗೆ ತಂದಾಗ ಸಾಯಂಕಾಲ 4-15 ಗಂಟೆಗೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ
ಈಶ್ವರಪ್ಪ ತಂದೆ ಲಕ್ಷ್ಮಣ ಟಣಕೇದಾರ ಸಾ: ಕೊಡಚಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment