ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 09-08-2015 ರಂದು ಸಾಯಂಕಾಲ ರಾಘವೇಂದ್ರ
ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ದೇವರದಾಸಿಮಯ್ಯ ನಗರದಲ್ಲಿ ಇಸ್ಪೇಟ್ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಕೆ.ಎಂ
ಸತೀಶ ಪಿ.ಐ ಬ್ರಹ್ಮಪೂರ ಠಾಣೆ, ರಾಘವೇಂದ್ರ ನಗರ ಪೊಲೀಸ ಠಾಣೆಯ ಡಬ್ಲೂ.ಹೆಚ್.ಕೊತ್ವಾಲ್ ಪಿಎಸ್‌ಐ ಹಾಗೂ ಸಿಬ್ಬಂದಿ ಮತ್ತು
ಪಂಚರೊಂದಿಗೆ ಸ್ಥಳಕ್ಕೆ ಹೋಗಿದಾಳಿ ಮಾಡಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ತಮ್ಮ ಹೆಸರು 1) ಮಲ್ಲಿಕಾರ್ಜುನ ತಂದೆ ಶಿವಶಂಕರ ವನ್ನಾಸಡೆ ಸಾ:ದೇವಿನಗರ ಆಳಂದ ರಸ್ತೆ ಕಲಬುರಗಿ 2) ಅಜೀತ ಕುಮಾರ ತಂದೆ ರಾಜೇಂದ್ರ ಹುಣಸಗಿ ಸಾ:ಮಾಲಗತ್ತಿ ತಾ:ಚಿತ್ತಾಪುರ ಜಿ:ಕಲಬುರಗಿ 3) ಬಸವರಾಜ ತಂದೆ ಗೋಪಾಲ ರಾವ
ಕಾಳಂಗೆ ಸಾ:ಆಳಂದ ಚಕಪೋಸ್ಟ್ ಹತ್ತಿರ ಕಲಬುರಗಿ 4)
ಬಾಬುಮೀಯ್ಯಾ ತಂದೆ ಚಾಂದಸಾಬ ಶೇಖ ಸಾ:ರಾಣೇಶ ಪೀರ ದರ್ಗಾ ಹತ್ತಿರ ಕಲಬುರಗಿ 5) ಶಿವಾನಂದ ತಂದೆ ಶಂಕರ ಪಾಟೀಲ ಸಾ:ದೇವಿನಗರ ಕಲಬುರಗಿ 52 ಇಸ್ಪೀಟ್ ಎಲೆಗಳು ಮತ್ತು ನಗದು ಹಣ 32120/-ರೂ ದೊರೆತಿದ್ದು ಇರುತ್ತದೆ.
ಸದರಿ 5 ಜನ ಆರೋಪಿ ಹಾಗೂ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ವಶಕ್ಕೆ ತೆಗೆದುಕೊಂಡು ಋಆಘವೇಂದ್ರ
ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರೈತರ ಹೊಲದಲ್ಲಿ ಹಾಕಿದ ಬೋರವಲಗಳಲ್ಲಿಯ ಸಬ್ಮರಿಶಿಬಲ್ ಮೋಟರ ಕಳ್ಳತನ ಮಾಡಿದ 3 ಜನ ಆರೋಪಿತರ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 08/08/2015 ರಂದು ಶ್ರೀ ಚಂದ್ರಕಾಂತ ತಂದೆ ಶಿವಶರಣಪ್ಪ
ನಾಗನಹಳ್ಳಿ, ಸಾ: ನಂದೂರ (ಬಿ) ಗ್ರಾಮ ರವರ ಹೊಲದ ಸರ್ವೆ ನಂ: 97/5 ರಲ್ಲಿ 10 ಎಕರೆ ಜಮೀನು ಇದ್ದು,
ಸದರಿ ಜಮೀನಿನಲ್ಲಿ ಬಾಳೆ ತೊಗರೆ, ಹಾಗೂ ಸೂರ್ಯಪಾನ ಬೆಳೆ ಬೆಳೆದಿದ್ದು ಇರುತ್ತದೆ ಹೊಲದ
ಆಕಾರ ಮಾಡುವ ಸಲುವಾಗಿ ಸದರಿ ಹೊಲದಲ್ಲಿ ಒಂದು ಕೊಳವೆ ಭಾವಿ ತೋಡಿಸಿದ್ದು ಅದಕ್ಕೆ ಸಬ್ಮರಿಶಿಬಲ್
ಮೋಟರ ಅ||ಕಿ|| 15,000/- ರೂ. ಕೂಡಿಸಿದ್ದು ಇರುತ್ತದೆ. ದಿನಾಂಕ: 07/08/2015 ರಂದು ಸಾಯಂಕಾಲ 7:00 ಗಂಟೆಯ ವರೆಗೆ ಹೊಲದಲ್ಲಿ ಕೆಲಸ ಮಾಡಿ ರಾತ್ರಿ ನನ್ನ ಹೊಲದ ಮೊಟರ ಬಂದ್ ಮಾಡಿ ಮನೆಗೆ
ಬಂದಿರುತ್ತೇನೆ. ಇಂದು ದಿನಾಂಕ: 08/08/2015 ರಂದು ಬೆಳಿಗ್ಗೆ 0800 ಗಂಟೆಗೆ ಹೊಲಕ್ಕೆ ಹೋಗಿ ನೋಡಲು ಕೊಳೆವೆ ಬಾವಿಯಿಂದ
ಯಾರೋ ರಾತ್ರಿ ವೇಳೆಯಲ್ಲಿ ಪೈಪನ್ನು ಎತ್ತಿ ಒಳಗೆ ಇದ್ದ ಸಬ್ಮರಿಶಿಬಲ್ ಮೋಟರ ಅ||ಕಿ||15,000/- ಮತ್ತು 250 ಪೀಟ್ ಕೆಬಲ್ ವೈಯರ್ ಅ||ಕಿ||4800/- ಅದನ್ನು ಹೊರಗೆ ತೆಗೆದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನನ್ನಂತೆ
ನಮ್ಮ ನಮ್ಮೂರ ಸೀಮೆಯಲ್ಲಿದ್ದ 1)ಸೈಯದ ನಯಿಮ್ ಹುಸೇನಿ 2)ಬಸಪ್ಪ ಭಜಂತ್ರಿ, 3)ಪ್ರಭುಗೌಡ ಬಿರಾದಾರ,
4)ಶ್ರೀಮಂತ ನಾಟೀಕಾರ, 5)ಮಳ್ಳೇಪ್ಪಗೌಡ ಬಿರಾದಾರ, 6)ನೀಲಕಂಠಪ್ಪ ಗೌಡ ಬಿರಾದಾರ, 7)ಮಾನಸಿಂಗ್ ನಾಮು, 8)ಸೈದಪ್ಪ ನಾಟೀಕಾರ,
9)ಮಾಪ್ಪಣ್ಣ ಹದನೂರ, 10)ವಿಶ್ವನಾಥ ಜಾಧವ ಇವರ ಹೊಲದಿಂದ ಕಳೆದ 1 ತಿಂಗಳಿಂದ ಆಗಾಗ ರಾತ್ರಿ ವೇಳೆಯಲ್ಲಿ 11 ಸಬ್ಮರಿಶಿಬಲ್ ಮೋಟರಗಳನ್ನು ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳ್ಳತನವಾದ ನನ್ನ ಸಬ್ಮಿರಿಶಿಬಲ್ ಮೋಟರ ಮತ್ತು ಕೇಬಲ್ ವೈಯರ್
ಎಲ್ಲಾ ಸೇರಿ 19800/-
ಬೆಲೆಬಾಳುವ ವಸ್ತುಗಳನ್ನು ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 09/08/2015 ರಂದು ಮದ್ಯಾಹ್ನ 1:00 ಗಂಟೆಯ ಸುಮರಿಗೆ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇರುವಾಗ
ಮೊಟರ ಸೈಕಲ ನಂ:ಕೆಎ 32 ಇಹೆಚ್ 8452 ನೇದ್ದರ ಮೇಲೆ ಮುರು ಜನರು ನಮ್ಮ ಜೀಪ
ಎದುರು ಬಂದು ನಮ್ಮನ್ನು ನೋಡಿ ಒಮ್ಮಿಂದೊಮ್ಮಲೆ ಸದರಿ ಮೊಟರ ಸೈಕಲನ್ನು ತಿರುವಿಕೊಂಡು
ಅತೀವೇಗವಾಗಿ ಹೋಗುತ್ತಿರುವಾಗ ನಮಗೆ ಅನುಮಾನ ಬಂದು ಬೆನ್ನತ್ತಿ ಹಿಡಿದು ಅವರ ಹೆಸರು ವಿಳಾಸ
ವಿಚಾರಿಸಲು ಸಮರ್ಪಕವಾಗಿ ಉತ್ತರ ಕೊಡದೆ ಇದುದ್ದರಿಂದ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ತಂದು
ಕುಲಂಕುಶವಾಗಿ ವಿಚಾರಣೆ ಮಾಡಲು ಅವರು ತಮ್ಮ ಹೆಸರು 1) ಮರಲಿಂಗಯ್ಯ ತಂದೆ ಮಲಕಯ್ಯ ಕಲಾಲ, ಸಾ|| ನಂದೂರ ಬಿ ಗ್ರಾಮ, 2) ಮಂಜುನಾಥ ತಂದೆ ಹಣಮಂತ ಮಾಶಾಳ, ಸಾ|| ನಂದೂರ ಬಿ ಗ್ರಾಮ, 3) ಸಿದ್ದು@ಸಿದ್ರ್ಯಾ ತಂದೆ ಸಾಬಣ್ಣ
ನಾಟೀಕಾರ, ಸಾ|| ನಂದೂರ ಬಿ ಗ್ರಾಮ ಅಂತಾ ತಿಳಿಸಿದ್ದು, ನಾವು ಕಳೆದ 1 ತಿಂಗಳಿಂದ ನಮ್ಮೂರ ಸೀಮೆಯಲ್ಲಿ ಹೊಲದಲ್ಲಿ ಹಾಕಿರುವ ಬೋರವೆಲಗಳಿಂದ ರಾತ್ರಿ ವೇಳೆಯಲ್ಲಿ ಮೊಟರ ತೆಗೆದು ಒಂದು ಜಾಗೆಯಲ್ಲಿ
ಅವುಗಳನ್ನು ಮಾರಾಟ ಮಾಡಲು ಬಚ್ಚಿಟ್ಟಿದ್ದನ್ನು ತಪ್ಪು ಒಪಿಕೊಂಡಿದ್ದು ನಂತರ ನಂದೂರ ಗ್ರಾಮದ
ಬಳಗಾರ ಹಳ್ಳದ ಹತ್ತಿರ ಗಿಡಗಂಟೆಗಳಲ್ಲಿ ಕಳ್ಳತನ ಮಾಡಿ ಮಾರಾಟ ಮಾಡಲು ಮುಚ್ಚಿಟ್ಟಿದ್ದ 11 ಬೋರವೇಲ್ ಮೋಟರ ಅ||ಕಿ|| 1,65,000 ಮತ್ತು 250 ಫೀಟ್ ಕೇಬಲ್ ವೈಯರ ಅ||ಕಿ|| 4800/- ಹೀಗೆ ಒಟ್ಟು 1,69,800/-
ಬೆಲೆಬಾಳುವ ವಸ್ತುಗಳನ್ನು ಜಪ್ತ
ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ,
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಫಿಯಾ ಬೇಗಂ
ಗಂಡ ಮಿರ್ಜಾ ಫೆರೋಜ ಬೇಗ ಸಾ: ಮನೆ ನಂ 6-22 ಮುಸ್ಲಿಂ ಚೌಕ ಗಂಜ ರಸ್ತೆ ಕಲಬುರಗಿ ಇವರು ದಿನಾಂಕ 03.08.2014 ರಂದು ನಮ್ಮ ತಂದೆ
ತಾಯಿಯವರು ಮಿರ್ಜಾ ಪೇರೋಜ ಬೇಗ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಢಿಕೊಟ್ಟಿದ್ದು ಮದುವೆ
ಕಾಲಕ್ಕೆ ಪಲ್ಸರ್ ಬೈಕ್ ಒಂದು ವರೆ ತೊಲೆ ಬಂಗಾರ ಮತ್ತು ಇತರೇ ಗ್ರಹ ಬಳಕೆಯ ಸಾಮಾನುಗಳು ಕೊಟ್ಟು
ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಢಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ 3
ದಿವಸಗಳ ನಂತರ ನನ್ನ ಗಂಡ ಪೇರೋಜ ಬೇಗ್,ಮಾವ ಮಿರ್ಜಾ ಅಸ್ಲಂ
ಬೇಗ್ ಅತ್ತೆ ಜಕಿಯಾ ಬೇಗಂ, ನಾದಿನಿಯರಾದ ತಬಸ್ಸುಮ್ ಅಸ್ಮಾ ಹಾಗೂ ನೌಶಿನ್ ಹಾಗೂ ನಾದಿಯಾದ ತಬಸ್ಸುಮ ಇವರ
ಗಂಡ ಖದೀರ ಹಾಗೂ ನನ್ನ ಗಂಡನ ಸೋದರ ಮಾವನಾದ ಖಯ್ಯೂಮ್ ಇವರೆಲ್ಲರೂ ಕೂಡಿಕೊಂಡು “ಯೆ ಶಾದಿ ಕರ್ಕೆ ಹಮ್ ಲುಕ್ಸಾನ್
ಮೆ ಹೈ ಶಾದಿ ಸೇ ಪಹಲೇ ಹಮ್ ಲೋಗ್ ಕಾರ್ ಔರ್ ಪ್ಲಾಟ್ ಮಾಂಗೆಥೇ ಮಗರ ತೇರಾ ಬಾಪ್ ನೇ ಶಾದಿ ಹೋನೆಕೆ
ಬಾದ ದೇತೆ ಬೊಲಕೆ ಅಬಿ ನಹಿ ದಿಯೇ” ಅಂತಾ ನನಗೆ ಹೊಡೆಯತೊಡಗಿದರು ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನಾದಿನಿಯರಾದ ಆಸ್ಮಾ, ನೌಸಿನ ಇವರು ನನ್ನ ಕೈ ಕಾಲು
ಹಿಡಿದು ನನ್ನ ಗಂಡ ಮಾವ,
ಅತ್ತೆ ಮನ ಬಂದಂತೆ
ಹೊಡೆದರು. ಮರುದಿವಸ ಈ ವಿಷಯವನ್ನು ನಮ್ಮ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ಬಂದು ನನ್ನ ಗಂಡ
ಹಾಗೂ ಅವರ ಮನೆಯವರಿಗೆ ಬುದ್ದಿವಾದ ಹೇಳಿದರು. ಸ್ವಲ್ಪ ದಿವಸ ಚೆನ್ನಾಗಿದ್ದು ಮತ್ತೆ ಅದೇ ರೀತಿ
ತವರು ಮನೆಯಿಂದ ಒಂದು ಪ್ಲಾಟು ಮತ್ತು ಮನೆ ಕಟ್ಟಲು 10 ಲಕ್ಷ ಹಣ , ಹಾಗೂ ಕಾರು ತೆಗೆದುಕೊಂಡು ಬಾ
ಅಂತಾ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು
ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿದರು.ದಿನಾಂಕ 03-08-2015 ರಂದು 5-30 ಪಿ.ಎಮ್
ಕ್ಕೆ ನನ್ನ ಅತ್ತೆ, ಮಾವ, ನಾದಿನಿಯರೆಲ್ಲರೂ ಹಾಗೂ ನಾದಿನಿ
ಗಂಡ ಮತ್ತು ನನ್ನ ಗಂಡನ ಸೋದರ ಮಾವ ಇವರೆಲ್ಲರೂ ಸೇರಿಕೊಂಡು ಮದುವೆಯಾಗಿ ಒಂದು ವರ್ಷವಾದರೂ ನಿನ್ನ ತವರು ಮನೆಯಿಂದ ನಾವು
ಕೇಳಿರುವ ಒಂದು ಪ್ಲಾಟು ಮತ್ತು ಮನೆ ಕಟ್ಟಲು 10 ಲಕ್ಷ ರೂ. ಹಣ , ಹಾಗೂ ಕಾರು ತೆಗೆದುಕೊಂಡು ಬಾ
ಅಂತಾ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು
ನನಗೆ ನೆಲಕ್ಕೆ ಕೆಡವಿ ಕತ್ತು ಹಿಡಿದು ಹೊಡೆಯುತ್ತಿದ್ದರು ಆಗ ನಾನು ತಪ್ಪಿಸಿಕೊಂಡು ನನ್ನ ತವರು
ಮನೆಗೆ ಬಂದಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪರಶುರಾಮ ತಂದೆ ಹೇಮಲು ರಾಠೋಡ ಉ: ಗ್ರಾಮ ಪಂಚಾಯತ ಸದಸ್ಯ ಇಟಗಾ
[ಕೆ] ರವರು ಹಿರಿಯ ಮಗನಾದ ಸುನಿಲ ಇವನು ಕಲಬುರಗಿಯ ಎಸ್.ಬಿ ಕಾಲೇಜದಲ್ಲಿ ಬಿ.ಎ 3ನೇ ಸೆಮಿಸ್ಟರ
ದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾನೆ ದಿನಾಲು ನಮ್ಮೂರ ಇಟಗಾ[ಕೆ] ದಿಂದ ಕಾಲೇಜಗೆ ಹೋಗಿ
ಬರುತ್ತಾನೆ. ದಿನಾಂಕ 28/07/2015 ರಂದು ಮುಂಜಾನೆ 8:30 ಗಂಟೆಗೆ ನನ್ನ ಹಿರಿಯ ಮಗ ಸುನಿಲನು
ಕಾಲೇಜಿಗೆ ಹೋಗುವದಿದೆ ಎಂದು ಹೇಳಿ ನಡುವಿನ ಮಗ ಅನೀಲನಿಗೆ ಕರೆದುಕೊಂಡು ಮೊಟರ ಸೈಕಲ ಮೇಲೆ
ಕಲಬುರಗಿಯ ಎಸ್.ಬಿ ಕಾಲೇಜಗೆ ಹೋಗಿದ್ದರು. ರಾಮ ಮಂದಿರ ಹತ್ತಿರ ಅವನು ತನ್ನ ಬ್ಯಾಂಕ ಖಾತೆಯಲ್ಲಿದ್ದ
18000/-ರೂಪಾಯಿಯನ್ನು ಎ.ಟಿ.ಎಮ್ ದಿಂದ ವಿಡ್ರಾಲ್ ಮಾಡಿಸಿ ಅನೀಲನಿಗೆ ಕೊಟ್ಟು ಮನೆಯಲ್ಲಿ
ಕೊಡುವಂತೆ ಹೇಳಿರುತ್ತಾನೆ. ನಂತರ ಎಸ.ಬಿ. ಕಾಲೇಜ ಒಳಗಡೆ ಹೋಗುವಾಗ ಕೇವಲ 20 ರೂಪಾಯಿ
ಇಟ್ಟುಕೊಂಡಿದ್ದು ಸಂಜೆ 4:30 ಗಂಟೆ ಫೊನ ಮಾಡುತ್ತೇನೆ ಎಂದು ಹೇಳಿ ಅನೀಲನಿಗೆ ಕಳುಹಿಸಿರುತ್ತಾನೆ
ಎಂದು ಅನೀಲ ಬಂದು ನನಗೆ ಹೇಳಿದ್ದು ಆ ದಿವಸ ಸುನೀಲನು ಸಂಜೆ ವೇಳೆಗೆ ಫೋನ ಮಾಡಿರುವುದಿಲ್ಲಾ .
ರಾತ್ರಿ 10 ಗಂಟೆಯಾದರೂ ಮನೆಗೆ ಬರಲಾರದಕ್ಕೆ ನಾನು ಅವನ ಗೆಳೆಯರಿಗೆ ಫೋನ ಮಾಡಿ ಕೇಳಿದ್ದು ಎಲ್ಲೂ
ಸಿಕ್ಕಿರುವುದಿಲ್ಲಾ. ಈಗ ಸುಮಾರು 4-5 ದಿವಸಗಳಿಂದ ಎಲ್ಲಾ ಕಡೆ ಹುಡುಕಾಡುತ್ತಿರುವಾಗ ನಮ್ಮೂರ
ಕಿಶನ ಬದ್ದು ಎನ್ನವರು ಫೋನ ಮಾಡಿ ಎಲ್ಲಿ ಯಾಕ್ ಹುಡುಕುತ್ತಿದ್ದಿ ನಿನ್ನ ಮಗ
ಬಾಂಬೆಯಲ್ಲಿದ್ದಾನೆ. ಗೀತಾ ಎನ್ನುವಳ ಜೊತೆ ಮಧುವೆ ಮಾಡುತ್ತಿದ್ದೇವೆ ಬೇಕಾದರೆ ಹೋಗಿ ನಿಲ್ಲಿಸು
ಎಂದು ಹೇಳಿರುತ್ತಾನೆ. ಯಾಕೆಂದರೆ ನಾನು ಈ ವರ್ಷ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ವರ್ದಿಸಿದಾಗ
ಅವನು ಬಾಂಬೆಯಿಂದ ಬಂದು ನನ್ನ ವಿರುದ್ದ ತನ್ನ ಅಣ್ಣನ ಮಗನಿಗೆ ನಿಲ್ಲಿಸಿದ್ದು ಚುನಾವಣೆಯಲ್ಲಿ
ಸೊತಿದ್ದರಿಂದ ಇದರ ಸೇಡು ತೀರಿಸುತ್ತೇನೆ ಎಂದು ಹೇಳಿದನು. ಅದಕ್ಕೆ ನನ್ನ ಮಗ ಕಾಣೆಯಾಗಿರುವ
ಹಿಂದೆ ಕಿಶನ ಬದ್ದು, ರಾಮಿಬಾಯಿ ಗಣಪತಿ, ಗೀತಾ ಗಣಪತಿ ರವರ ಕೈವಾಡ ಇರುವ
ಬಗ್ಗೆ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೊಕ ನಗರ ಠಾಣೆಯಲ್ಲಿ
ಪ್ರಕರಣ ದಾಖಲಿಸಲಾಗಿದೆ.
No comments:
Post a Comment