ಗ್ರಾಮೀಣ ಪೊಲೀಸ ಠಾಣೆ : ದಿನಾಂಕ: 12/08/2015 ರಂದು ಅರ್ಜಿದಾರರು 2-15
ಪಿ.ಎಮ್ ಕ್ಕೆ ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ದೂರಿನ ಸಾರಾಂಶವೆನೆಂದರೆ, ತಾನು ಟೆಂಟ
ಹೌಸ್ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು ಈಗ್ಗೆ 3 ತಿಂಗಳ ಹಿಂದೆ ನಂ ಕೆಎ-32 ಇಜೆ-5759
ಬಜಾಜ ಪಲ್ಸರ 220 ಮೋಟರ ಸೈಕಲನ್ನು ಖರೀದಿಸಿರುತ್ತೇನೆ. ಹೀಗಿದ್ದು ದಿನಾಂಕ: 17/06/2015 ರಂದು ಸಾಯಂಕಾಲ
ಮಿಲ್ಲತನಗರದಲ್ಲಿರುವ ನನ್ನ ಸಂಬಂಧಿಕರ ಮನೆಗೆ ಹೋಗಿ ತನ್ನ ಮೋ/ಸೈಕಲನ್ನು ಹೊರಗಡೆ
ನಿಲ್ಲಿಸಿದ್ದು ಅಂದು ತಡರಾತ್ರಿಯಾಗಿದ್ದರಿಂದ ಊಟ
ಮುಗಿಸಿ ತನ್ನ ಮೋ/ಸೈಕಲನ್ನು ಕಂಪೌಂಡ ಒಳಗಡೆ ನಿಲ್ಲಿಸಿ ಲಾಕ ಮಾಡಿಕೊಂಡು ಹೋಗಿ ಮಲಗಿಕೊಂಡಿರುತ್ತಾನೆ.
. ನಂತರ ದಿ: 17/06/2015 ರಂದು ಬೆಳಿಗ್ಗೆ 06-30 ಎಎಮ್ ಕ್ಕೆ ಎದ್ದು ಹೊರಗೆ ಬಂದು ನೋಡಲು ತಾನು
ರಾತ್ರಿ ನಿಲ್ಲಿಸಿದ್ದ ತನ್ನ ಕೆಎ-32 ಇಜೆ-5759 ಬಜಾಜ ಪಲ್ಸರ 220 ಕಪ್ಪು ಬಣ್ಣದ ಚೆಸ್ಸಿ ನಂ- MD2A13EZ2FCK02074 ಇಂಜಿನ ನಂ- DKZCFK89891 ಇರುವ ಅ.ಕಿ= 105000/-ರೂ ಕಿಮ್ಮತ್ತಿನ ಮೋಟರಸೈಕಲ ಕಾಣಿಸಲಿಲ್ಲ. ತಕ್ಷಣ ತಾನು
ಮತ್ತು ಸಂಬಂಧಿಕನೊಂದಿಗೆ ಏರಿಯಾದಲ್ಲಿ ಸುತ್ತ ಮುತ್ತ ಮತ್ತು ನಗರದ ಇತರೆ ಕಡೆ ಎಲ್ಲಾ
ಹುಡುಕಾಡಿದರೂ ಸಿಗಲಿಲ್ಲ. ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಫೀರ್ಯಾದಿ
ಸಲ್ಲಿಸುತ್ತಿರುತ್ತೇನೆ ಕಾರಣ ದಿ: 17/06/2015 ರಂದು 00-30 ರಿಂದ 17/06/2015 ರಂದು 6-30
ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಲಾಕ ಮಾಡಿ ನಿಲ್ಲಿಸಿದ್ದ ತನ್ನ ಬಜಾಜ ಪಲ್ಸರ 220 ಮೋಟರ
ಸೈಕಲ ಅ.ಕಿ= 105000/-ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.. ಕಾರಣ ಕಳ್ಳತನವಾದ ನನ್ನ ಮೋಟರ ಸೈಕಲನ್ನು ಪತ್ತೆ ಹಚ್ಚಿ ಕಳ್ಳತನ ಮಾಡಿದ ಆರೋಪಿತರ ವಿರುದ್ಧ
ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 319/2015 ಕಲಂ 379 ಐಪಿಸಿ ಪ್ರಕಾರ ಪ್ರಕರಣ
ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 12/08/2015 ರಂದು
1630 ಗಂಟೆಗೆ
ಫಿರ್ಯಾದಿದಾರರಾದ ಶ್ರೀ ರವಿ ತಂದೆ ಲಗಮಣ್ಣ ಅತ್ತೆ ವ|| 30 ವರ್ಷ, ಜಾ|| ಮಾಲಗಾರ, ಉ|| ಒಕ್ಕಲುತನ, ಸಾ|| ಹಡಲಗಿ ಇವರು
ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ – ದಿನಾಂಕ 11/08/2015 ರಂದು
0800 ಗಂಟೆಗೆ
ಹಳೆಯ ವೈಷಮ್ಯ ಕಟ್ಟಿಕೊಂಡು ಗುರಪ್ಪ ತಂದೆ ಮಹಾಂತಪ್ಪ ಕಲ್ಲೂರ ಮತ್ತು ಇತರರೂ ಕೂಡಿ ಹೊಲ ಸರ್ವೆ
ನಂ. 50/3 ರಲ್ಲಿ
ಅಕ್ರಮ ಕೂಟ ಕಟ್ಟಿಕೊಂಡು ಜಗಳ ತೆಗೆಯುವ ಉದ್ದೇಶದಿಂದ ಕೈಯಲ್ಲಿ ಕೊಡಲಿಯೊಂದಿಗೆ ನುಗ್ಗಿ
ಫಿರ್ಯಾದಿ ಮತ್ತು ಆತನ ಅಣ್ಣನಿಗೆ ಅವಾಚ್ಯವಾಗಿ ಬೈದು ಕೊಡಲಿಯಿಂದ ಬೆನ್ನ ಮೇಲೆ ಮತ್ತು ಕೈಯಿಂದ
ಹೊಟ್ಟೆಯ ಮೇಲೆ ಗುದ್ದಿ ಹಲ್ಲೆ ಮಾಡಿದ್ದಲ್ಲದೆ ಜೀವ ಭಯ ಪಡಿಸಿದ್ದು ಅಲ್ಲದೆ ಹೊಲದಲ್ಲಿನ ಬೋರವೇಲ
ಮತ್ತು ಹನಿ ನೀರಾವರಿಯ ಪೈಪಗಳನ್ನು ನಾಶಪಡಿಸಿ 1,25,000/- ರೂಪಾಯಿಯಷ್ಟು
ನಷ್ಟವುಂಟುಮಾಡಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟು ಲೀಖಿತ
ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯ ಗುನ್ನೆ ನಂ 94/2015 ಕಲಂ
447, 143, 147,
148, 323, 324, 427, 504, 506, ಸಂ 149 ಐಪಿಸಿ
ನೇದ್ದರಲ್ಲಿ
ಪ್ರಕರಣ ಪ್ರಕರಣ ದಾಖಲಾಗಿರುತ್ತದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:12/08/2015 ರಂದು ಸಾಯಂಕಾಲ 7.00 ಗಂಟೆಗೆ ಪಿರ್ಯಾದಿ ಶ್ರೀ
ಅಮೃತ ತಂದೆ ಹಣಮಂತ ಡಿಗ್ಗಿ ವ||53 ಸಾ|| ಗಂಗಾನಗರ ಶ್ರೀ ನಿಜಶರಣ ಅಂಬಿಗರ ಚೌಡಯ್ಯಾ ಸಂಘದ ಜೀರ್ಣೋದ್ದಾರದ
ಅದ್ಯಕ್ಷರು ಬ್ರಹ್ಮಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ
ಲೀಖಿತ ಪಿರ್ಯಾದಿ ಸಲ್ಲಿಸಿದ್ದು ಎನೆಂದರೆ ಗಂಗಾನಗರದ ಜೈ ಹನುಮಾನದ ದೇವಸ್ಥಾನದ ದೇಣಿಗೆ
ಹುಂಡಿಯನ್ನು ದಿ|| 11/08/15 ಹಾಗೂ 12/08/15 ರ ಮದ್ಯ
ರಾತ್ರಿಯಲ್ಲಿ ದೇವಸ್ಥಾನದ ಮೇನ ಚನಾಲಿಗೇಟಿನ ಒಂದು ಕೀಲಿ ಮುರಿದು ಹಾಗೂ ದೇಣಿಗೆ ಹುಂಡಿಯ ಎರಡು
ಕೀಲಿ ಮುರಿದು ಅದರಲ್ಲಿಯ ಸುಮಾರು 20,ರಿಂದ 23 ಸಾವೀರ
ರೂಪಾಯಿಗಳಷ್ಟು ಹಣ ಯಾರೊ ಕಳ್ಳರು ಕಳುವ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಹಚ್ಚಿ ಕೊಡಬೇಕು ಅಂತಾ
ಲೀಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ.114/15 ಕಲಂ: 457,380 ಐ,ಪಿ,ಸಿ, ನೇದ್ದಕ್ಕೆ ಪ್ರಕರಣ ದಾಖಲಾಗಿರುತ್ತದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ:11/08/2015
ರಂದು ರಾತ್ರಿ 10.00 ಗಂಟೆಯ ವರೆಗೆ ಪಿರ್ಯಾದಿ ಶ್ರೀಮತಿ ಸುಮೀತ್ರಾಬಾಯಿ ಗಂಡ ಶಿವಶರಣಪ್ಪಾ ಅಣಕಲ ವ:50
ವರ್ಷ ಇವರ ಹೇಳಿಕೆ ಕಲಬುರಗಿ ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ
ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆ, ದಿನಾಂಕ:10/08/2015
ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗ ಬಸವರಾಜ ಇತನು ತನ್ನ
ಜೊತೆಯಲ್ಲಿ 2-3 ಜನರೊಂದಿಗೆ ಬಂದವನೆ ಏ ಅವ್ವಾ ನಿನ್ನ
ಹೆಸರಿನಲ್ಲಿ ಕೇರಿಭೊಸಗಾ ಗ್ರಾಮದಲ್ಲಿರುವ 16 ಎಕರೆ ಭೂಮಿ ನನ್ನ ಹೆಸರಿಗೆ ಮಾಡಿಸಿ ಕೊಡುತ್ತಿ ಇಲ್ಲಾ ಏನು ಈಗ ನಿನ್ನ ಸುದ್ದಿ ಏನಿದೆ
ಅಂತಾ ಹೇಳಿದಾಗ ನಾನು ನನ್ನ ಮೂರು
ಮಕ್ಕಳ ಹೆಸರಿನಿಂದ ಮಾಡುತ್ತೇನೆ. ನಿನ್ನ ಒಬ್ಬನ ಹೆಸರಿನಿಂದ ಏಕೆ ಮಾಡಬೇಕು ಅಂತಾ ಹೇಳಿದಾಗ ನನ್ನ ಮಗ ಬಸವರಾಜ ಇತನು ನನಗೆ
ಕೊಲೆ ಮಾಡುವ ಉದ್ದೇಶದಿಂದ ಒಂದು ಚಾಕುವಿನಿಂದ ನನ್ನ ಕುತ್ತಿಗೆಯ
ಮೇಲೆ ಏರಡು ಸಲ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ.
ಇನ್ನೂಳಿದ 2-3 ಜನರು
ನನಗೆ ಕಲ್ಲಿನಿಂದ ಮತ್ತು
ಕೈಯಿಂದ ಬಲ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಗುಪ್ತಗಾಯಪಡಿಸಿರುತ್ತಾರೆ. ಆಗ ನಾನು ಚಿರಾಡಲು ನಮ್ಮ ಮನೆಯ
ಅಕ್ಕಪಕ್ಕದ ಜನರು ಬಂದು ಜಗಳ ಬಿಡಿಸಿರುತ್ತಾರೆ. ನನ್ನ ಮಗನ
ಜೊತೆಯಲ್ಲಿ ಬಂದ 2-3 ಜನರಿಗೆ ನಾನು ನೋಡಿದರೆ ಗುರುತಿಸುತ್ತೇನೆ. ಅವರ ಹೆಸರು ವಿಳಾಸ ಗೊತ್ತಿರುವದಿಲ್ಲಾ. ನನಗೆ
ರಕ್ತಗಾಯ ಹಾಗೂ ಗುಪ್ತಗಾಯ ಆಗಿರುವದರಿಂದ ಅಲ್ಲಿಂದ ಸಾರ್ವಜನಿಕರು ಒಂದು
ಅಂಬುಲೇನ್ಸ ವಾಹನ ಕರೆಯಿಸಿ ಅದರಲ್ಲಿ ಹಾಕಿ ಉಪಚಾರ
ಕುರಿತು ಕಲಬುರಗಿ ನಗರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಕಾರಣ ನನ್ನ ಮಗ ಬಸವರಾಜ ಇತನು ಆಸ್ತಿಯ
ಸಂಬಂಧ ತನ್ನ ಜೊತೆಯಲ್ಲಿ 2-3 ಜನರೊಂದಿಗೆ ಬಂದು ಕೊಲೆ ಮಾಡುವ ಉದ್ದೇಶದಿಂದ ನನಗೆ ಚಾಕುವಿನಿಂದ ಹಾಗೂ
ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯ
ಪಡಿಸಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಪಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ರಾತ್ರಿ 10.30
ಗಂಟೆಗೆ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ
ರಾಘವೇಂದ್ರ ನಗರ
ಪೊಲೀಸ ಠಾಣೆ ಗುನ್ನೆ.ನಂ.113/2015 ಕಲಂ:323,324,307,448 ಸಂ:34 ಐಪಿಸಿ
ನೇದ್ದರ ಪ್ರಕಾರ ಪ್ರಕರಣ
ದಾಖಲಾಗಿರುತ್ತದೆ.
No comments:
Post a Comment