ಗ್ರಾಮೀಣ ಠಾಣೆ : ದಿನಾಂಕ: 20/08/2015ರಂದು ಸಂಜೆ 6-30 ಗಂಟೆ ಸುಮಾರಿಗೆ
ಫಿರ್ಯಾದಿ ತನಗೆ ಬರಬೇಕಾದ ಪೇಮೆಂಟ ಹಣ 5000 ರೂ.
ಮತ್ತು ನನ್ನ ಹತ್ತಿರ ಇದ್ದ 3200 ರೂ. ಹಣ ತನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಕಂಪನಿಯಿಂದ
ಊಟ ಮಾಡಲು ಹುಮನಾಬಾದ ರಿಂಗರೋಡ ಹತ್ತಿರ ಬಂದು ಊಟ ಮಾಡಿಕೊಂಡಿದ್ದರಿಂದ ಮತ್ತು ಸಣ್ಣ ಪುಟ್ಟ
ಸಾಮಾನುಗಳು ಖರೀದಿಸಿದ್ದರಿಂದ ಆ ಹಣದಲ್ಲಿ 200 ರೂ. ಖರ್ಚಾಗಿದ್ದು, ನಿನ್ನೆ ರಾತ್ರಿ 8-00 ಗಂಟೆ ಸುಮಾರಿಗೆ ಕಂಪನಿಗೆ ಕಡೆಗೆ ನಡೆದುಕೊಂಡು ಹುಮನಾಬಾದ
ರಿಂಗ ರೋಡಿನ ಹೊಸ ಬಸ್ ಸ್ಟಾಪ ಹತ್ತಿರದಿಂದ
ಫೋನನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಫಿರ್ಯಾದಿ
ಹಿಂದಿನಿಂದ 3 ಜನರು ಒಂದು ಬಿಳಿ ಬಣ್ಣದ ಮೆಸ್ಟ್ರೋ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಬಂದವರೇ ಫಿರ್ಯಾದಿ ಎದುರು ಮೋಟಾರ ಸೈಕಲ ಅಡ್ಡಗಟ್ಟಿ ನಿಲ್ಲಿಸಿ ಮೂರು ಜನರೂ
ಮೋಟಾರ ಸೈಕಲನಿಂದ ಕೆಳಗೆ ಇಳಿದು ಫಿರ್ಯಾದಿಗೆ ತಡೆದು ನಿಲ್ಲಿಸಿ ಅವರಲ್ಲಿ ಒಬ್ಬನು ಫಿರ್ಯಾದಿಯ ನೋಕಿಯಾ ಮೋಬೈಲ್
ಜಬರದಸ್ತಿಯಿಂದ ಕಸಿದುಕೊಂಡನು. ಮತ್ತೊಬ್ಬನು ಫಿರ್ಯಾದಿ ಕುತ್ತಿಗೆಗೆ ಚಾಕು ಹಚ್ಚಿ ತೇರೆ ಪಾಸ ಕಿತನಾ ಪೈಸಾ ಹೈ
ನಿಕಾಲೋ ಅಂತ ಅಂದನು. ಅದಕ್ಕೆ ಅವರಿಗೆ ತನ್ನ ಹತ್ತಿರ ಹಣ
ಇಲ್ಲಾ ಅಂತಾ ಅಂದಿದ್ದಕ್ಕೆ ಇಬ್ಬರು ಫಿರ್ಯಾದಿ
ಕೀಸೆ ಚೆಕ್ ಮಾಡಿ ಎಡಗಡೆ ಪ್ಯಾಂಟನ ಕೀಸೆಯಲ್ಲಿದ್ದ 8000/-ರೂ ಜಬರದಸ್ತಿಯಿಂದ ಕಸಿದುಕೊಂಡರು.
ನಂತರ ನೂಕಿಸಿಕೊಟ್ಟು ತಾವು ತಂದಿದ್ದ ಮೋಟರ
ಸೈಕಲ ಮೇಲೆ ಮೂರು ಜನರು ಕುಳಿತುಕೊಂಡು ಸಿಟಿ ಕಡೆ ಓಡಿ ಹೋದರು. ಗಾಬರಿಯಲ್ಲಿ ಗಾಡಿ ನಂಬರ ನೋಡಲು
ಆಗಿರುವುದಿಲ್ಲಾ. ಸದರಿ ಮೂವರು ಅಂದಾಜು 20 ರಿಂದ 25 ವರ್ಷ ವಯಸ್ಸಿನವರಿದ್ದು ಮೂವರು ಪ್ಯಾಂಟ
ಶರ್ಟ ಧರಿಸಿದ್ದು, ಹಿಂದಿ ಭಾಷೆ ಮಾತಾಡುತ್ತಿದ್ದು ಮೂವರು ಎದುರು ಬಂದಲ್ಲಿ ಮತ್ತು ಮೆಸ್ಟ್ರೋ
ಮೋಟರ ಸೈಕಲ ನೋಡಿದಲ್ಲಿ ಗುರುತಿಸುತ್ತೇನೆ. ಜಬರದಸ್ತಿಯಿಂದ ಹಣ ಮತ್ತು ಮೋಬಾಯಿಲ್ ಕಸಿದುಕೊಂಡು
ಹೋದ ಕಳ್ಳರನ್ನು ಪತ್ತೆ ಹಚ್ಚಿ ನನ್ನ ಹಣ ಮತ್ತು ಮೋಬೈಲ್ ವಾಪಸ್ಸು ಕೊಡಿಸಿ ಅವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಕೊಟ್ಟ
ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 330/15 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಅಫಜಲಪೂರ ಠಾಣೆ: ದಿನಾಂಕ 20-08-2015 ರಂದು 06:40 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಶಿವಪೂರ ಬನ್ನಟ್ಟಿ ಗ್ರಾಮದ ಕಡೆಯಿಂದ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ
ಠಾಣಾ ಸಿಬ್ಬಂದಿ ಜನರಾದ ಸುರೇಶ ಪಿಸಿ-801,ಆನಂದ ಪಿಸಿ-1258, ರವರಿಗೆ ವಿಷಯ ತಿಳಿಸಿ ಪಂಚರಾದ 1) ಚಂದಪ್ಪ ತಂದೆ ರಮೇಶ
ಕೊಳಗೇರಿ 2) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ನಾನು ಹಾಗೂ
ನಮ್ಮ ಸಿಬ್ಬಂದಿಯವರು ಕೂಡಿಕೊಂಡು ಠಾಣೆಯ ಜಿಪಿನಲ್ಲಿ
06:50 ಪಿ.ಎಮ್ ಕ್ಕೆ ಹೊರಟು 06:55 ಪಿ ಎಮ್ ಕ್ಕೆ ಅಫಜಲಪೂರದ ಘತ್ತರಗಾ ರೋಡ ಲಕ್ಷ್ಮಿ ಗುಡಿ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಎರಡು
ಟ್ಯಾಕ್ಟರಗಳು ಬರುತ್ತಿದ್ದವು. ಸದರಿ ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟ್ಯಾಕ್ಟರಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ನೋಡಲಾಗಿ
ಒಟ್ಟು ಎರಡು ಟ್ಯಾಕ್ಟರಗಳಿದ್ದು, ಅವುಗಳನ್ನು ಚೆಕ್ ಮಾಡಿ ನೋಡಲು ಸದರಿ ಟ್ಯಾಕ್ಟರಗಳಲ್ಲಿ ಮರಳು
ತುಂಬಿದ್ದು ಇದ್ದು ಅವುಗಳ ನಂಬರ 1)JOHN DEERE ಕಂಪನಿಯ ಟ್ಯಾಕ್ಟರ ಇದ್ದು Chassis No- 1PY5050ECFA013268 Engine
No-PY3029T230704 2) JOHN DEERE ಕಪಂನಿಯ ಟ್ಯಾಕ್ಟರ ಇದ್ದು ನಂ KA-28
TB-8371 ಈ ರೀತಿ ಇರುತ್ತವೆ. ಸದರಿ ಟ್ಯಾಕ್ಟರಗಳಲ್ಲಿನ ಮರಳಿನ ಒಟ್ಟು ಅಂದಾಜು
ಕಿಮ್ಮತ್ತು 6,000/-
ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟ್ಯಾಕ್ಟರರಗಳನ್ನು ಪಂಚರ ಸಮಕ್ಷಮ 07:00 ಪಿ ಎಮ್ ದಿಂದ 07:40 ಪಿ ಎಮ್ ವರೆಗೆ ನಮ್ಮ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ
ಎರಡು ಟ್ಯಾಕ್ಟರಗಳನ್ನು ನಮ್ಮ ಸಿಬ್ಬಂದಿಯವರ ಸಹಾಯದಿಂದ ಮರಳಿ ಠಾಣೆಗೆ 07:50 ಪಿ ಎಮ್ ಕ್ಕೆ ಬಂದು ಸದರಿ ಮರಳು ತುಂಬಿದ ಎರಡು ಟ್ಯಾಕ್ಟರ
ಹಾಗೂ ಟ್ಯಾಕ್ಟರ ಚಾಲಕರ ಮೇಲೆ ಕಾನೂನು ಪ್ರಕಾರ
ಪ್ರಕರಣ ದಾಖಲಾಗಿರುತ್ತದೆ.
No comments:
Post a Comment