ಆಳಂದ ಪೊಲೀಸ್ ಠಾಣೆ
: ದಿನಾಂಕ :25/08/2015 ರಂದು 09:00 ಎ.ಎಮ್‌ಕ್ಕೆ ಪಿರ್ಯಾದಿ ಶ್ರೀ.ಮಲ್ಲಿನಾಥ ತಂದೆ ಶಂಕರೆಪ್ಪಾ ಹಾರಕೆ ವಯಾ: 49 ವರ್ಷ ಜಾ: ಜಾಡರ ಉ:ಸರಕಾರಿ ನೌಕರ ಸಾ: ರೇವಣಸಿದ್ದೇಶ್ವರ ಕಾಲೋನಿ ಆಳಂದ ಠಾಣೆಗೆ ಹಾಜರಾಗಿ ಕನ್ನಡದಲ್ಲಿ
ಟೈಪ ಮಾಡಿದ ಲಿಖಿತ ಅರ್ಜಿ ತಂದು ಹಾಜರು ಪಡಿಸಿದರ ಸಾರಾಂಶವನೆಂದರೆ ನಾನು ಸಾವಳೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಗಳು ಅಂತಾ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತೇನೆ. ರಾಮಲಿಂಗ ಕುಟಿರ ಅಂತಾ ಹೆಸರಿನ ನಮ್ಮ ಮನೆ ಆಳಂದದ ರೇವಣಸಿದ್ದೇಶ್ವರ ಕಾಲೋನಿಯ ರಸ್ತೆಗೆ ಇರುತ್ತದೆ. ನಮ್ಮದೊಂದು ಬಜಾಜ ಪ್ಲಾಟಿನಾ ಮೋ.ಸೈಕಲ ನಂ ಕೆಎ 32 ಎಕ್ಸ್ 9263 ಇದ್ದು ಅದನ್ನು ಮನೆಯ ಮುಂದಿನ ಹಾಲಿನಲ್ಲಿ ಸೈಡಲಾಕ ಹಾಕಿ ನಿಲ್ಲಿಸಿ ಅದರ ಚಾವಿ ಮನೆಯ ಒಳಗಿನ ಹಾಲಿನ ಟೇಬಲ ಮೇಲೆ ಇಟ್ಟುರುತ್ತೇನೆ. ದಿನಾಂಕ 24/08/2015 ರಂದು ರಾತ್ರಿ 9:00 ಗಂಟೆಗೆ ಎಂದಿನಂತೆ ನಾನು , ನನ್ನ ಹೆಂಡತಿ ಧಾನಮ್ಮ , ಮಗಳು ವೈಷ್ಣವಿ ಊಟ ಮಾಡಿ ಮಲಗುವ ಕೋಣೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 25/08/2015 ರಂದು ಬೆಳಗಿನ 4:00 ಗಂಟೆಗೆ ನನಗೆ ಎಚ್ಚರವಾದಾಗ ನನ್ನ ಪಕ್ಕದಲ್ಲಿ ಇಟ್ಟ ನನ್ನ ಮೋಬೈಲ ಕಾಣಿಸಲಿಲ್ಲ ನಂತರ ಹೊರಗೆ ಹಾಲಿನಲ್ಲಿ ಹುಡುಕಾಡುವಾಗ ಹಾಲಿನ ಬಾಗಿಲದ ಒಳಕೊಂಡಿಗಳು ಮುರಿದು ಕೆಳಗಡೆ ಬಿದಿದ್ದು ನೋಡಲಾಗಿ ಆಲಮರಿಯ ಒಳಗಿದ್ದ ಲಾಕರ ಒಂದು ಹೊರಗಡೆ ಹಾಲಿನಲ್ಲಿ ಇರುವ ಟೇಬಲ ಮೇಲೆ ಇದ್ದದ್ದು ಕಂಡು ಬಂದು ಸದರಿ ಲಾಕರಿದಲ್ಲಿ ಇದ್ದ ಈ ಕೆಳಕಂಡ ಸಾಮಾನುಗಳು 1) 35 ಗ್ರಾಂ ಘಂಟನ ಬಂಗಾರದ ಮಂಗಳ ಸೂತ್ರ ಅ:ಕಿ:70;000 ರೂ 2) 20 ಗ್ರಾಂ 4 ಬಂಗಾರದ ಸುತ್ತುಉಂಗರುಗಳು ಅ:ಕಿ: 40,000 ರೂ 3) 5 ಗಾಂ ಬಂಗಾರದ ಲಾಕೇಟ ಅ:ಕಿ: 10,000 ರೂ 4) 7 ಗ್ರಾಂ ಬಂಗಾರದ ಕೀವಿ ಓಲೆ ಹಳ್ಳದ್ದು ಅ:ಕಿ: 10,000 ರೂ 5) 4 ಗ್ರಾಂ ಬಂಗಾರದ 2 ಮಾಟಿ ಅ:ಕಿ: 8000 ರೂ 6) ಒಂದು ಜೋಡಿ ಬೆಳ್ಳಿಯ ಕುಂಕುಮ ಡೆಬ್ಬಿ ಅ:ಕಿ: 1000 ರೂ 7) ಒಂದು ಜೋಡಿ ಬೆಳ್ಳಿ ಸಮಯ ಅ:ಕಿ: 2000 ರೂ 8) ನಗದು ಹಣ 8000 ರೂ ಇಟ್ಟಿದು ಖಾಲಿ ಲಾಕರ ಕಂಡುಬಂದಿರುತ್ತದೆ ಹಾಗೂ 9) ಒಂದು ನೋಕಿಯಾ ಕಂಪನಿಯ ಮೋಬೈಲ ಸೆಟ್ ಐಎಮ್ಇಐ ನಂ
354609050388289, 354609050388297 ಅದರಲ್ಲಿ ಇದ್ದ ಸೀಮ್ ನಂ:9449661267 ಅದರ ಹಾಗು ಒಂದು ಓನಿಡಾ ಕಂಪನಿಯ ಮೋಬೈಲ ಎರಡರ ಅ:ಕಿ: 4000 ರೂ 10) ಒಂದು ಬಜಾಜ ಪ್ಲಾಟಿನಾ ಮೋ.ಸೈಕಲ ನಂ ಕೆಎ 32 ಎಕ್ಸ್ 9263 ಅ:ಕಿ: 15000 ರೂಪಾಯಿ ಹೀಗೆ ಒಟ್ಟು 1,68,000 ರೂ ಕಿಮ್ಮತ್ತಿನ ಮಾಲು ಯಾರೂ ಕಳ್ಳರು ಒಳಕೊಂಡಿ ಮುರಿದು ದಿನಾಂಕ 24/08/2015 ರ ರಾತ್ರಿ 11 ಗಂಟೆಯಿಂದ ದಿನಾಂಕ 25/08/2015 ರ ಬೆಳಗಿನ 4:00 ಗಂಟೆಯ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ಅದರಂತೆ ನಮ್ಮ ಮನೆಯ ಪಕ್ಕದ ಶ್ರೀಶೈಲ ತಂದೆ ಮಾಹಾದೇವ ಬಿಜಾಪೂರೆ ವಯಾ: 30 ವರ್ಷ ಜಾ: ಲಿಂಗಾಯತ ತಳವಾರ ಉ: ಆರ್ಎಮ್ಪಿ ವೈದ್ಯ ಇವರ ಮನೆಯ ಕೀಲಿ ಮುರಿದು ಮನೆಯಲ್ಲಿ ಇದ್ದ 5 ಗ್ರಾಂ ಬಂಗಾರದ ಉಂಗುರ ಅ:ಕಿ 10,000 ರೂಪಾಯಿ ಹಾಗು ಒಂದು ಗ್ರಾಂದ 2 ಬಂಗಾರದ ತಾಳಿ ಅ:ಕಿ: 4000 ರೂಪಾಯಿ , ಒಂದು ಲ್ಯಾಪಟಾಪ್ ಟಿ.ವ್ಹಿ. ಅ:ಕಿ:800 ರೂಪಾಯಿ , 50 ಗ್ರಾಂದ ಬೆಳ್ಳಿಯ ಬ್ರಾಸಲೇಟ ಅ:ಕಿ: 1200 ರೂಪಾಯಿ, 10 ಸೀರೆಗಳು ಅ:ಕಿ:5000 ರೂಪಾಯಿ ಮತ್ತು ಸಿಗ್ಮಾ ಮೋಬೈಲ ಸಟ್ ಅ:ಕಿ: 500 ರೂಪಾಯಿ ಹೀಗೆ ಒಟ್ಟು 21,500 ರೂಪಾಯಿರಷ್ಟು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು ಇರುತ್ತದೆ. ಹೀಗೆ ಒಟ್ಟು ನನ್ನ ಮತ್ತು ಶ್ರೀಶೈಲನ ಮನೆಯಲ್ಲಿ ಇದ್ದ ಬಂಗಾರ ಬೆಳ್ಳಿ ಹಾಗು ಇತರೆ ಸಾಮಾನುಗಳು ಒಟ್ಟು 1,89,500 ರೂಪಾಯಿ ಕಿಮ್ಮತ್ತಿನ ಮಾಲು ಮತ್ತು ಹಣವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳತನವಾದ ಮಾಲಿನ ಹಾಗು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ಮೇಲೆ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕಾರ
ಪ್ರಕರಣ ದಾಖಲಗಿರುತ್ತದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24-08-2015 ರಂದು ರಾತ್ರಿ 10.20
ಗಂಟೆಗೆ ಕಾಟೇಪ್ಪಾ ತಂದೆ ಗೊವಿಂದಪ್ಪಾ ಇತನು ಜಿಲ್ಲಾ ಸರಕಾರಿ ಆಸ್ಪತ್ರೆಯ ಕ್ರಾಸ ಹತ್ತಿರ
ಬರುವ ಹಳೆ ಸಿಂಡಿಕೇಟ ಬ್ಯಾಂಕ ಹತ್ತಿರ ಬರುವ ಎಟಿಎಮ ಹತ್ತಿರದಿಂದ ವಾಯು ಮಾಪನ ಕಂಪೌಡ ಗೊಡೆ
ಹತ್ತಿರ ಏಕಿ ಮಾಡುವ ಸಂಬಂದ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಯಾವುದೊ ಒಂದು ಕಾರ ಚಾಲಕನು
ತನ್ನ ಕಾರನ್ನು ಅತೀ ವೇಗ ಹಾಗೂ
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾಟೇಪ್ಪಾ ಇತನಿಗೆ ಡಿಕ್ಕಿ ಪಡಿಸಿ ಅಫಘಾತ ಮಾಡಿ ಆತನ ತಲೆಗೆ
ಭಾರಿ ಗುಪ್ತಪೆಟ್ಟು ಬೆನ್ನಿಗೆ ತರಚಿದ ಗಾಯ ಹಾಗು ಮೈಯಲ್ಲಾ ಒಳಪೆಟ್ಟು ಗೊಳಿಸಿ ಕಾರ ಸಮೇತವಾಗಿ
ಆರ ಟಿ ಓ ಕ್ರಾಸ ರೊಡ ಕಡೆಗೆ ಓಡಿ ಹೊಗಿದ್ದು ಕಾಟೇಪ್ಪ ಇತನು ಉಪಚಾರ ಕುರಿತು ರಾತ್ರಿ ಸರಕಾರಿ
ಆಸ್ಪತ್ರೆಗೆ ಹೊಗಿ ಉಪಚಾರ ಕುರಿತು ಸೇರಿಕೆಯಾಗಿ ಅಫಘಾತದಲ್ಲಿ ಆದ ಗಾಯ ಫಲಕಾರಿಯಾಗದೆ ದಿನಾಂಕ
25-08-2015 ರಂದು ಬೆಳಿಗ್ಗೆ 7.25 ಗಂಟೆಗೆ ಕಾಟೇಪ್ಪಾ ಇತನು ಸರಕಾರಿ
ಆಸ್ಪತ್ರೆಯಲ್ಲಿ ತೀರಿಕೊಂಡಿರುತ್ತಾನೆ ಪ್ರಕರಣ ದಾಖಲಗಿರುತ್ತದೆ.
No comments:
Post a Comment