ನಾಲ್ಕು ಜನ ಕುಖ್ಯಾತ ಯುವ ದರೋಡೆಕೋರರ ಬಂಧನ
ಗ್ರಾಮೀಣ
ಠಾಣೆ : ದಿನಾಂಕ.4-8-2015
ರಂದು ಎಜಾಜ ಪಟೇಲ್ ತಂದೆ ಖಾಜಾ ಪಟೇಲ ಸಾ;ಮಿಲ್ಲತನಗರ ಕಲಬುರಗಿ ಇವರು ಗ್ರಾಮೀಣ ಪೊಲೀಸ್ ಠಾಣೆಗೆ
ಹಾಜರಾಗಿ ಫಿರ್ಯಾದಿ ನೀಡಿದ್ದು ಏನೆಂದರೆ ದಿನಾಂಕ.3-8-2015 ರಂದು ತಾವು ಮತ್ತು ತಮ್ಮ 5
ಗೆಳೆಯರು ಕೂಡಿಕೊಂಡು ಮಿಲ್ಲತ ನಗರ ಹೊರವಲಯದ
ದಾವುಲ ಮಲಿಕ್ ಚಿಲ್ಲಾದ ಮುಂದೆ ಇರುವ ಹುಣಸೆ ಮರದ ಕೆಳಗೆ ಮದ್ಯಾನ 2-00 ಊಟ ಮಾಡುತ್ತಾ ಕುಳಿತಾಗ ಯಾರೋ ಅಪರಿಚಿತ
ವಯಸ್ಸು ಅಂದಾಜು 19-25 ವಯಸ್ಸಿನವರು 6-7 ಜನರು
ಎರಡು ಮೋಟಾರ ಸೈಕಲ ಮೇಲೆ ಬಂದು ತಲವಾರಗಳಿಂದ
ಅಂಜಿಸಿ ತಮ್ಮೆಲ್ಲರ ಕಿಸೆಯಿಂದ ಜಬರದಸ್ತಿಯಿಂದ 18000/- ರೂ ನಗದ ಹಣ ಹಾಗೂ 2 ಮೋಬಾಯಿಲಗಳು
ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಗೈರೆ ಕೊಟ್ಟ ಫಿರ್ಯಾದಿ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ದಿನಾಂಕ.4-8-2015 ರಂದು ಗುನ್ನೆ
ನಂ. 309/2015 ಕಲಂ. 395 ಐಪಿಸಿನೆದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ದರೋಡೆಕೋರರ ಪತ್ತೆ ಕುರಿತು ಮಾನ್ಯ ಶ್ರೀಅಮೀತ ಸಿಂಗ
ಐ.ಪಿ.ಎಸ್. ಎಸ್.ಪಿ.ಕಲಬುರಗಿ ಮತ್ತು ಮಾನ್ಯ
ಶ್ರೀ.ಜಯ ಪ್ರಕಾಶ ಅಪರ ಎಸ್.ಪಿ. ಕಲಬುರಗಿ ಹಾಗೂ ಮಾನ್ಯ ಶ್ರೀ. ವಿಜಯ ಅಂಚಿ ಡಿ.ಎಸ್.ಪಿ. ಗ್ರಾಮೀಣ
ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ ಸಿಪಿಐರವರಾದ ಶ್ರೀ.ಎ.ವಾಜೀದ
ಪಟೇಲ್ .ರವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್
ಠಾಣೆಯ ಪಿ.ಎಸ್.ಐ. (ಅವಿ) ರವರಾದ ಉದಂಡಪ್ಪಾ
.ಮಣ್ಣೂರಕರ , ಶರಣಬಸಪ್ಪಾ .ಕೆ. ಪಿ.ಎಸ್.ಐ. (ಕಾ&ಸೂ) ಹಾಗೂ ಸಿಬ್ಬಂದಿ ಜನರಾದ ಹುಸೇನ ಬಾಷ , ರಾಜಕುಮಾರ , ವಿಶ್ವನಾಥ , ಅಂಬಾಜಿ , ಕೇಶವ , ಕಂಠೆಪ್ಪಾ ,
ಶಿವಶರಣಪ್ಪಾ , ಶರಣಬಸ್ಸಪ್ಪಾ , ಈರಣ್ಣಾ ಜೀಪ ಚಾಲಕರಾದ ಬಂಡೆಪ್ಪಾ ರವರೆಲ್ಲರೊಂದಿಗೆ ಟೀಮನು ರಚಿಸಿಕೊಂಡು ದರೋಡೆಕೋರರ ಶೋಧ ಕಾರ್ಯದಲ್ಲಿ ತೊಡಗಿದಾಗ ಇಂದು
ದಿನಾಂಕ. 5-8-2015 ರಂದು ಬೆಳಗ್ಗೆ 8-30
ಗಂಟೆಗೆ ಕಲಬುರಗಿಯ ಚೋರ ಗುಮ್ಮದ ಹತ್ತಿರ ದರೋಡೆಕೊರರಾದ 1) ಸಲಾವುದ್ದಿನ ತಂದೆ
ಸಾಹೇಬ ಪಟೇಲ ವಯಾ:22 ವರ್ಷ ಜಾ:ಮುಸ್ಲಿಂ ಉ:ಪ್ಲಂಬರ ಕೆಲಸ ಸಾ:ಎಂ.ಎಸ್.ಕೆ ಮೀಲ ಜಿಲಾನಾಬಾದ
ಕಲಬುರಗಿ 2)ಮೆಹಿಬೂಬ ತಂದೆ ಹುಸೇನಸಾಬ ನಧಾಫ ವಯಾ:21 ವರ್ಷ ಜಾ:ಮುಸ್ಲಿಂ ಉ:ಫರ್ನಿಚರ ಕೆಲಸ
ಸಾ:ಮದಿನಾ ಮೀದ ಹಿಂದುಗಡೆ ಮದಿನಾ ಕಾಲೋನಿ ಕಲಬುರಗಿ 3)ಅಬ್ದುಲ್ ಕರೀಮ ತಂದೆ ಅಬ್ದುಲ್ ರೆಹಮಾನ
ಶೇಖ ವಯಾ:19 ವರ್ಷ ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ:ತಯ್ಯಾಬ ಮಜೀದ ಹತ್ತಿರ ಮಿಜಬಾ ನಗರ ಕಲಬುರಗಿ
4)ಶೇಖ ಇರಫಾನ ತಂದೆ ಶೇಖ ಅಬ್ದುಲ್ ಸೌದಾಗರ ವಯಾ:-23 ವರ್ಷ ಜಾ:ಮುಸ್ಲಿಂ ಉ:ಗೌಂಡಿ ಗುತ್ತೆದಾರ
ಸಾ:ತಯ್ಯಾಬ ಮಜೀದ ಹತ್ತಿರ ಮಿಜಬಾ ನಗರ ಕಲಬುರಗಿ ಇವರೆಲ್ಲರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕಾಲಕ್ಕೆ ದರೋಡೆಯಾದ 18,000/- ರೂ, ಎರಡು
ಮೋಬಾಯಿಲಗಳು , ಎರಡು ಮೋಟಾರ ಸೈಕಲಗಳು 03 ಲಾಂಗ
ತಲವಾರಗಳು ಹೀಗೆ ಅಂದಾಜು 70,000/-
ಕ್ಕಿಮ್ಮತ್ತಿನ ವಸ್ತುಗಳನ್ನು ಜಪ್ತಪಡಿಸಿಕೊಂಡಿದ್ದು , ದರೋಡೆಕೊರರಿಗೆ ನ್ಯಾಯಾಂಗಬಂಧನಕ್ಕೆ
ಕಳುಹಿಸಿದ್ದು ಇರುತ್ತದೆ.ಇನ್ನೂ ಮೂರು ಜನ ಆರೋಪಿತರಾದ 1) ಇಸ್ಮಾಯಿಲ್ , 2) ಹಬೀಬ , 3) ವಜೀರ
ಇವರು ತಲೆಮರೆಯಿಸಿಕೊಂಡಿದ್ದು ಇವರ ಪತ್ತೆಕುರಿತು
ಪೊಲೀಸ್ ರು ಜಾಲ ಬೀಸಿರುತ್ತದೆ , ಈ ಗ್ರಾಮೀಣ ವೃತ್ತ ದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು
ಸಿಬ್ಬಂದಿ ವರ್ಗಕ್ಕೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
No comments:
Post a Comment