ನಿಂಬರ್ಗಾ ಠಾಣೆ : ದಿನಾಂಕ 22/08/2015 ರಂದು 1630 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿಠ್ಠಲ
ತಂದೆ ಬಳಿರಾಮ ಮೋರೆ ವ|| 54 ವರ್ಷ, ಜಾ|| ಮರಾಠಾ, ಉ|| ಒಕ್ಕಲುತನ, ಸಾ|| ಭೂಸನೂರ.
ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ – ನನಗೂ ಮತ್ತು ನಮ್ಮ ಹೊಲದ ಬಾಜು ಹೊಲದವನಾದ ತುಳಜಾರಾಮ
ತಂದೆ ನಿಂಗಪ್ಪ ಫುಲಾರ ಇವರಿಗೂ ನಮ್ಮ ಹೊಲ ಸರ್ವೆ ನಂ. 83/4 ನೇದ್ದರ ಸಂಭಂಧ ಸಿವಿಲ
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಆದರೆ ದಿನಾಂಕ 20/08/2015 ರಂದು
ಮಧ್ಯಾಹ್ನ 0300 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನನ್ನ ಹೊಲಕ್ಕೆ ಹೋಗಿ ನೋಡಲಾಗಿ
ನಮ್ಮ ಹೊಲದ ಬಂದಾರಿಯ ಮೇಲೆ 01] ಕಿಶನ ತಂದೆ ಸೋಪನ ಲವಟೆ, 02] ವಿಠ್ಠಲ
ತಂದೆ ನಿಂಗಪ್ಪ ಫುಲಾರ, 03] ವಿಜಯಕುಮಾರ ತಂದೆ ನಿಂಗಪ್ಪಾ ಫುಲಾರ, 04]
ಸಂಜು ತಂದೆ ವಿಠ್ಠಲ ಫುಲಾರ ಎಲ್ಲರೂ ಗಿಡಗಳನ್ನು ಕಡೆಯುತ್ತಿದ್ದು ಅದಕ್ಕೆ ನಾನು ನನ್ನ ತಕರಾರು
ಇದ್ದ ಬಗ್ಗೆ ಹೇಳಿದ್ದಕ್ಕೆ ಕಿಶನನು ಏ ರಂಡಿಮಗನೆ ತಕರಾರು ಕೊಡಲಿಕ್ಕೆ ನೀನ್ಯಾರು ಅಂತ ಬೈದು
ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಕಪಾಳ ಮೇಲೆ ಹೊಡೆದನು ನನ್ನ ಹೆಂಡತಿಯಾದ
ಸುಭದ್ರಾ ಇವಳು ಬಿಡಿಸಲು ಬಂದಾಗ ಅವಳಿಗೆ ವಿಠ್ಠಲನು ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ
ಬೆನ್ನ ಮೇಲೆ ಹೊಡೆದನು, ವಿಜಕುಮಾರ ಮತ್ತು ಸಂಜು ಇವರಿಬ್ಬರೂ ಈ ರಂಡಿಗೆ ಸೊಕ್ಕು ಬಹಳ
ಬಂದಾದ ಖಲಾಸ ಮಾಡಿರಿ ಅಂತ ಜೀವ ಭಯ ಹಾಕಿದ್ದಲ್ಲದೆ ನಮ್ಮ ಹತ್ತಿರ 10 ಬಡಿಗೆ ಅದಾವ ಅಂತ
ಭಯಪಡಿಸಿದ್ದಲ್ಲದೆ ನನಗೆ ಸಂಜು ಇತನು ಕಾಲಿನಿಂದ ಬೆನ್ನ ಮೇಲೆ ಒದ್ದಿರುತ್ತಾನೆ. ಅಷ್ಟರಲ್ಲಿ
ಶಾಂತಮಲ್ಲಪ್ಪ ತಂದೆ ಈರಪ್ಪ ನೆಲ್ಲೂರ ಮತ್ತು ಶರಣಪ್ಪ ತಂದೆ ಶಿವಲಿಂಗಪ್ಪ ನೀಲೂರ ಇಬ್ಬರೂ ಓಡಿ
ಬಂದು ಬಿಡಿಸಿರುತ್ತಾರೆ. ಜಗಳದಲ್ಲಿ ನನಗೆ ಮತ್ತು ನನ್ನ ಹೆಂಡತಿಗೆ ಗುಪ್ತಗಾಯಗಳಾಗಿದ್ದು ನಮಗೆ
ದವಾಖಾನೆಯ ಉಪಚಾರದ ಅಗತ್ಯವಿಲ್ಲ ಅಲ್ಲದೆ ಇದರ ಬಗ್ಗೆ ನಾನು ಮತ್ತು ನನ್ನ ಹೆಂಡತಿ ವಿಚಾರ ಮಾಡಿ
ಇಂದು ದಿನಾಂಕ 22/08/2015 ರಂದು ತಡವಾಗಿ ಠಾಣೆಗೆ ಬಂದು ಅರ್ಜಿ ಸಲ್ಲಿಸಿದ್ದು ಸದರಿಯವರ ಮೇಲೆ
ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ ಅಂತ ಕೊಟ್ಟ ಲೀಖಿತ ಫಿರ್ಯಾದಿ ಸಾರಾಂಶದ
ಮೇಲಿಂದ ನಿಂಬರ್ಗಾ
ಪೊಲೀಸ್ ಠಾಣೆಯ ಗುನ್ನೆ ನಂ 98/2015 ಕಲಂ 341, 447, 323, 354, 504, 506 ಸಂ. 34 ಐಪಿಸಿ ಪ್ರಕರಣ ದಾಖಲಾಗಿರುತ್ತದ.
ಗ್ರಾಮೀಣ
ಠಾಣೆ
: ದಿನಾಂಕ
20-08-15 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಕಲಬುರಗಿ ಹುಮನಾಬಾದ ರಿಂಗ ರೋಡಿನ ಹೊಸ
ಬಸ ಸ್ಟಾಪ ಹತ್ತಿರ ಮೋಬಾಯಿಲನಲ್ಲಿ ಮಾತಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಶ್ರೀ ಇಸಾಕ
ತಿಲಿಬಿನ ಇತನಿಗೆ ಮೂರು ಜನ 20 ರಿಂದ 25 ವರ್ಷ
ವಯಸ್ಸಿನವರು ಹಿರೋ ಮೆಸ್ಟ್ರೋ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಬಂದು ಇಸಾಕನಿಗೆ ಅಡ್ಡಗಟ್ಟಿ
ನಿಲ್ಲಿಸಿ, ಚಾಕು ತೋರಿಸಿ, ನಗದು ಹಣ 8000 ರೂ.
ಮತ್ತು ನೋಕಿಯಾ ಆಶಾ ಅ:ಕಿ: 5000/- ರೂ. ಒಟ್ಟು 13,000 ರೂ. ಬೆಲೆಬಾಳುವದನ್ನು ಜಬರ ದಸ್ತಿಯಿಂದ
ಕಸಿದುಕೊಂಡು ಹೋದ ಬಗ್ಗೆ ಗ್ರಾಮೀಣ ಪೊಲೀಸ
ಠಾಣೆಯಲ್ಲಿ ಗುನ್ನೆ ನಂ. 330/2015 ಕಲಂ 392 ಐಪಿಸಿ ಪ್ರಕರಣ ದಾಖಲಾಗಿರುತ್ತದೆ. ಮಾನ್ಯ ಪೊಲೀಸ
ಅಧೀಕ್ಷರಾದ ಶ್ರೀ ಅಮಿತಸಿಂಗ ಐ.ಪಿ.ಎಸ್. , ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷರಾದ ಶ್ರೀ
ಜಯಪ್ರಕಾಶ, ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಶ್ರೀ ವಿಜಯ ಅಂಚಿ ರವರ
ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ಶ್ರೀ ಎ. ವಾಜೀದ ಪಟೇಲ್ ಸಿಪಿಐ ಗ್ರಾಮೀಣ ವೃತ್ತ
ಕಲಬುರಗಿ ಮತ್ತು ಅವರ ತಂಡದವರಾದ ಶ್ರೀ
ಉದಂಡಪ್ಪ.ಮಣ್ಣೂರಕರ್ ಪಿ.ಎಸ್.ಐ. (ಅ.ವಿ.) ಮತ್ತು ಶ್ರೀ ಶರಣಬಸಪ್ಪ ಕೋಡ್ಲಾ. ಪಿ.ಎಸ್.ಐ.
(ಕಾ&ಸು), ಹಾಗೂ ಸಿಬ್ಬಂದಿಯವರಾದ
ಹುಸೇನಬಾಷಾ, ಶಿವುಕುಮಾರ, ಸಿದ್ರಾಮ ನಿಂಬರ್ಗಾ, ಸಲೀಮೋದ್ದಿನ್,
ಎಮ್.ಎ. ಬೇಗ, ದತ್ತಾತ್ರೇಯ,
ಶರಣು ಸಲಗರ , ಅಂಬಾಜಿ, ವಿಶ್ವನಾಥ, ಯಶ್ವಂತರಾವ, ಶರಣಗೌಡ, ರಾಜು ಗಂದೆ, ಆರಿಫ್ ಇವರುಗಳು
ಕೂಡಿಕೊಂಡು ಚುರುಕಿನ ದಾಳಿ ನಡೆಸಿ ದಿನಾಂಕ 22-08-15 ರಂದು ಆರೋಪಿತರಾದ 1) ಮಹ್ಮದ ರಫೀಕ ತಂದೆ ಸರ್ದಾರಮಿಯ್ಯಾ
ಖುರೇಷಿ ವ: 20 ವರ್ಷ ಜಾ:ಮುಸ್ಲಿಂ ಉ: ಖುರೆಷಿ ಕೆಲಸ ಸಾ: ಹಜ್ ಕಮಿಟಿ ಹತ್ತಿರ ಮಿಜಗುರಿ
ಕಲಬುರಗಿ 2) ಗೌಸ ಪಾಶಾ ತಂದೆ ಅನ್ವರ ಹುಸೇನ ಶೇಖ
ಅಬ್ದುಲ್ಲಾ ವ: 25 ವರ್ಷ ಉ: ಕ್ಲಿನರ ಸಾ: ಪೀರ ಕಟ್ಟಾ ಹತ್ತಿರ ಮಿಜಗುರಿ ಕಲಬುರಗಿ 3) ಖಾಸಿಂ
ಪಟೇಲ್ ತಂದೆ ಖಾಜಾ ಮೈನೊದ್ದಿನ್ ವಗ್ಡಡವಾಲೆ ವ:20 ವರ್ಷ ಉ: ಹಣ್ಣಿನ ವ್ಯಾಪಾರ ಸಾ: ಲಿಟಲ್
ಪ್ಲವರ ಶಾಲೆ ಹತ್ತಿರ ಇಸ್ಲಾಮಾಬಾದ ಕಾಲೊನಿ
ಕಲಬುರಗಿ ರವರನ್ನು ಹುಮನಾಬಾದ ರಿಂಗ ರೋಡಿನ ವಿಜಯಕರ್ನಾಟಕ ಪ್ರೆಸ ಹತ್ತಿರ ಇರುವ ಅತೀಕ
ಗ್ಯಾರೇಜ ಮುಂದುಗಡೆ ದಸ್ತಗಿರಿ ಮಾಡಿ ಅವರಿಂದ
ಸುಲಿಗೆ ಮಾಡಿದ ನಗದು ಹಣ 7500/ ರೂ ಮತ್ತು ನೋಕಿಯಾ ಆಶಾ ಮೋಬಾಯಿಲ್ ಅ;ಕಿ: 5000/-ರೂ. ಮತ್ತು
ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಹಿರೋ ಮೆಸ್ಟ್ರೋ ಮೋಟಾರ ಸೈಕಲ ಕೆಎ 32 ಇಜಿ 8628 ಅ:ಕಿ: 40,000/- ರೂ. ಹೀಗೆ ಒಟ್ಟು 52,500/- ರೂ. ಮುದ್ದೆ ಮಾಲು ಜಪ್ತಿ ಪಡಿಸಿಕೊಂಡು,
ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.
ಜೇವರ್ಗಿ ಠಾಣೆ : ದಿನಾಂಕ 22.08.2015 ರಂದು 15:30
ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು
ಸಾರಾಂಶವೆನೆಂದರೆ “ ದಿ: 21.08.2015 ರಂದು ಸಾಯಂಕಾಲ ೦6:30 ಗಂಟೆಯ ಸುಮಾರಿಗೆ ಕೇನಾಲ್ ಹತ್ತಿರ ಆಂದೋಲಾ ಕೆಲ್ಲೂರ ರಸ್ತೆಯ ಮೇಲೆ ನನ್ನ ಮಗಳು
ಕುಳಿತುಕೊಂಡು ಬರುತ್ತಿದ್ದ ಟಂಟಂ ನಂ ಕೆ.ಎ32ಸಿ4150 ನೇದ್ದಕ್ಕೆ ಎದುರುನಿಂದ ಬರುತ್ತಿದ್ದ ಆಟೋ
ನಂ ಕೆ.ಎ32ಸಿ0884 ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ
ಚಾಲಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗಳಿಗೆ ಭಾರಿ ರಕ್ತ ಗಾಯಪಡಿಸಿ ಅಪಘಾತದ ನಂತರ ತನ್ನ
ಟಂಟಂ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಕಾರಣ ಟಂಟಂ ನಂ ಕೆ.ಎ32ಸಿ0884 ನೇದ್ದರ
ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ”
ಅಂತಾ ಇತ್ಯಾದಿ ಫಿರ್ಯಾದಿ ಹೇಳಿಕೆ ಸಾರಾಂಶವನ್ನು ಪಡೆದುಕೊಂಡು ಮರಳಿ 23:15 ಗಂಟೆಗೆ ಠಾಣೆಗೆ
ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 228/15 ಕಲಂ 279. 338 ಐ.ಪಿ.ಸಿ
ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ .
No comments:
Post a Comment