ಗ್ರಾಮೀಣ ಠಾಣೆ : ದಿನಾಂಕ: 13/09/2015 ರಂದು 12-30 ಪಿಎಮ್ ಕ್ಕೆ ಅರ್ಜಿದಾರರು ಠಾಣೆಗೆ
ಹಾಜರಾಗಿ ನೀಡಿದ ಒಂದು ಲಿಖಿತ ದೂರಿನ ಸಾರಾಂಶವೆನೆಂದರೆ, ಮನೆಯಲ್ಲಿ ನನ್ನ ಹೆಂಡತಿ ಈಗ್ಗೆ 4-5 ದಿವಸಗಳಿಂದ ತವರು
ಮನೆಗೆ ಹೋಗಿದ್ದು ಮನೆಯಲ್ಲಿ ನಾನು ನನ್ನ ತಾಯಿ ಹಾಗೂ ಅಳಿಯ ಇರುತ್ತೇವೆ. ಹೀಗಿದ್ದು ದಿನಾಂಕ:
12/09/2015 ರಂದು ರಾತ್ರಿ 10-00 ಪಿಎಮ್ ವರೆಗೆ ನಾನು ಮೇಲಗಡೆ ಅಂತಸ್ತಿನ ಮನೆಯಲ್ಲಿದ್ದು ನಂತರ
ಮನೆ ಬಾಗಿಲು ಕೀಲಿ ಹಾಕಿಕೊಂಡು ಕೆಳಗಿನ ಮನೆಗೆ ಬಂದು ಅಮ್ಮ ಅಳಿಯನೊಂದಿಗೆ ಮಲಗಿರುತ್ತೇನೆ. ನಂತರ
ದಿನಾಂಕ: 13/09/2015 ರಂದು ಬೆಳಿಗ್ಗೆ 7-00 ಎಎಮ್ ಗಂಟೆಗೆ ಎದ್ದು ಮನೆಯ ಬಾಗಿಲು ತೆಗೆಯಲು ಬಾಗಿಲು ತೆರೆಯದ ಕಾರಣ
ನಾನು ಅಳಿಯ ಮಹಮ್ಮದ ಮೊಹತೆಶಮನೊಂದಿಗೆ ಹಿಂದಿನ ಬಾಗಿಲಿನಿಂದ ಬಂದು ನೋಡಲು ನಾವಿದ್ದ ಮನೆಯ ಬಾಗಿಲ
ಹೊರಗಿನ ಕೊಂಡಿಹಾಕಿದ್ದು ನಾವು ಅನುಮಾನ ಬಂದು ಮೇಲಗಡೆ ಮಾನೆಯ ಹತ್ತಿರ ಬಂದು ನೋಡಲು ಮೇಲಗಡೆ
ಮನೆಯ ಬಾಗಿಲ ಕೊಂಡು ಮುರಿದಿದ್ದು ನಾನು ಗಾಬರಿಯಿಂದ ಬಾಗಿಲು ತೆಗೆದು ಒಳಗೆ ಬಂದು ನೋಡಲು
ಬೆಡರೂಮನ ಅಲಮಾರಾದ ಲಾಕ ಮುರಿದಿದ್ದು ಅಲಮಾರಾದ ಬಾಗಿಲು ತೆರೆದಿರುತ್ತದೆ. ಮತ್ತು
ಅಲಮಾರಾದಲ್ಲಿದ್ದ ಬಟ್ಟೆ ಬರೆ ಸಾಮಾನುಗಳೆಲ್ಲ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಾನು
ಗಾಬರಿಯಿಂದ ಅಲಮಾರಾದಲ್ಲಿ ನೋಡಲು ಅಲಮಾರಾದಲ್ಲಿಟ್ಟಿದ್ದ 1) 20 ಗ್ರಾಂ ಬಂಗಾರದ ನೆಕಲೆಸ್ ಅ.ಕಿ=
48000/-ರೂ. 2) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 24000/-ರೂ. 3) 10 ಗ್ರಾಂ ಬಂಗಾರದ ಲಾಕೇಟ
ಅ.ಕಿ= 24000/-ರೂ. 4) ಪ್ರತಿ 3 ಗ್ರಾಂ ಬಂಗಾರದ ಒಟ್ಟು 15 ಗ್ರಾಂನ 5 ಉಂಗುರಗಳು ಅ.ಕಿ= 36000/-ರೂ 5) 05 ಗ್ರಾಂ ಬಂಗಾರದ ಕಿವಿಯೋಲೆ
ಅ.ಕಿ= 12000/-ರೂ ಹಿಗೆ ಒಟ್ಟು 60 ಗ್ರಾಂ ಬಂಗಾರದ ಅ.ಕಿ= 1,44,000/-ರೂ ಕಿಮ್ಮತ್ತಿನ ಬಂಗಾರದ
ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 12/09/2015 ರಂದು ರಾತ್ರಿ 10-00 ಪಿಎಮ್ ದಿಂದ ದಿನಾಂಕ:
13/09/2015 ರಂದು ಬೆಳಿಗ್ಗೆ 7-00 ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು
ಅಲಮಾರಾದ ಲಾಕರ್ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಕಳ್ಳತನವಾದ ನಮ್ಮ ಬಂಗಾರದ
ಆಭರಣಗಳನ್ನು ಪತ್ತೆ ಹಚ್ಚಿ ವಾಪಸ್ಸು ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಫಿತರ ವಿರುದ್ಧ
ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ
ಕೊಟ್ಟ ಅರ್ಜಿಯ ಸಾರಾಂಶದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಆಫಜಲಪೂರ ಠಾಣೆ : ದಿನಾಂಕ 12/09/2015ರಂದು 6.15¦.JªÀiï
ಕ್ಕೆ ಮಾನ್ಯ ನ್ಯಾಯಲಯ ಕರ್ತವ್ಯ
ನಿರ್ವಹಿಸುವ ನಮ್ಮ ಠಾಣೆಯ ಸಿ.ಪಿ.ಸಿ. 596 ರಮೇಶ ಇವರು ಶ್ರೀ ಮಂಜೂರ ಅಹ್ಮದ ತಂದೆ ಅಬ್ದುಲ ಕರೀಮ
ಅಗರಖೇಡ ಸಾ|| ಅಫಜಲಪೂರ ಇವರು ಮಾನ್ಯ ನ್ಯಾಯಲಯದಲ್ಲಿ ಮಾಡಿದ ದೂರು ¦.¹.£ÀA.
26/2015ನೇದ್ದು ತಂದು ಹಾಜರು
ಪಡಿಸಿದ್ದ ದಿನಾಂಕ 14/8/2015ರಂದು 12¦.JªÀiï.ಕ್ಕೆ ಆರೋಪಿತರು ಫಿರ್ಯಾಧಿಯ J.PÉ.mÁAiÀÄgÀ
ಶೋ ರೋಮಗೆ ನುಗ್ಗಿ ಫಿರ್ಯಾಧಿಗೆ
ಅವಾಚ್ಯ ಶಬ್ದಗಳಿಂದ ಬೈದು ಶೋ ರೋಮನಲ್ಲಿದ್ದ ಹೊಸ ಟೈಯರಗಳನ್ನು ಸುಟ್ಟು ಫಿರ್ಯಾಧಿ ಹಾಗೂ
ಫಿರ್ಯಾಧಿಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ
ಠಾಣೆ : ದಿನಾಂಕ
12/09/2015 ರಂದು 0930 ಗಂಟೆಗೆ ಫಿರ್ಯಾದಿ ಶ್ರೀಮತಿ ಸಂಗೀತಾ ಗಂಡ
ಶಿವಾನಂದ ಮದರಿ ವ||
28 ವರ್ಷ, ಜಾ|| ಮರಾಠಾ, ಉ|| ಮನೆಕೆಲಸ, ಸಾ|| ಮಾಡಿಯಾಳ ಇವಳು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾದಿ
ಸಲ್ಲಿಸಿದ್ದೇನೆಂದರೆ – ತನ್ನ
ಗಂಡನಾದ ಶಿವಾನಂದ ತಂದೆ ಕೃಷ್ಣಪ್ಪ ಮದರಿ ವ|| 30 ವರ್ಷ, ಜಾ|| ಮರಾಠಾ, ಉ|| ಒಕ್ಕಲುತನ, ಇವರು ಹೊಲದಲ್ಲಿನ ಲಾಗೋಡಿ ಮತ್ತು ಬೆಳೆ
ಸಂಭಂಧ ರೂಪಾಯಿ 2,00,000/-
( ಎರಡು ಲಕ್ಷ
ರೂಪಾಯಿ ) ಪ್ರಗತಿ ಕೃಷ್ಣಾ ಬ್ಯಾಂಕ ಮಾಡಿಯಾಳ ಮತ್ತು ಊರಲ್ಲಿ ಕೈಗಡ ಅಂತ ರೂಪಾಯಿ 2,00,000/- ( ಎರಡು ಲಕ್ಷ ರೂಪಾಯಿ ) ಸಾಲ ಪಡೆದು
ಮಾಡಿಯಾಳ ಗ್ರಾಮದ ಹೊಲ ಸರ್ವೆ ನಂ. 322 ನೇದ್ದರಲ್ಲಿ
ಮೆಣಸಿನಕಾಯಿ, ಉಳ್ಳಾಗಡ್ಡಿ, ಟೊಮಾಟೊ ಬೇಳೆ ಬೆಳೆದಿದ್ದು ಸಕಾಲಕ್ಕೆ ಮಳೆ
ಬರದಿದ್ದರಿಂದ ಬೋರವಲನಲ್ಲಿ ನೀರು ಕಡಿಮೆಯಾಗಿ ಮತ್ತು ಇಚ್ಚಿಚೆಗೆ ಸುರಿದ ಭಾರಿ ಮಳೆಯಿಂದಾಗಿ
ಬೆಳೆಗೆ ರೋಗ ಬಿದ್ದು ಬೆಳೆ ನಾಶವಾಗಿದ್ದರಿಂದ ತಾನು ಮಾಡಿದ ಸಾಲದ ಬಗ್ಗೆ ಮನನೊಂದು ದಿನಾಂಕ 12/09/2015 ರಂದು ಬೆಳಿಗ್ಗೆ 0600 ಗಂಟೆಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತ
ಸುಳ್ಳು ಹೇಳಿ ಹೊಲಕ್ಕೆ ಹೋಗಿ ಹೋಲದಲ್ಲಿನ ವಿದ್ಯೂತ ತಂತಿ ಹಿಡಿದು ಆತ್ಮ ಹತ್ಯೆ
ಮಾಡಿಕೊಂಡಿರುತ್ತಾನೆ. ಇದರ ಬಗ್ಗೆ ನನಗೆ ಯಾರ ಮೇಲೂ ಸಂಶಯ ವಗೈರೆ ಇಲ್ಲ ಮುಂದಿನ ಕ್ರಮ
ಕೈಕೊಳ್ಳಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಯು.ಡಿ.ಆರ್ ನಂ.
09/2015 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಚೌಕ ಠಾಣೆ : ದಿನಾಂಕ: 12.09.2015
ರಂದು 1300 ಗಂಟೆಗೆ ಶ್ರೀಮತಿ. ಸುನೀತಾಬಾಯಿ ಗಂಡ ತುಕಾರಾಮ ಕಾಂಬಳೆ ವಯ: 48 ವರ್ಷ ಸಾ: ಶಹಾಬಾದ
ಇವರು ಚೌಕ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾದು ಸಲ್ಲಿಸಿದ್ದು, ಸದರಿ
ಫಿರ್ಯಾದಿಯನ್ನು ಠಾಣೆಯಲ್ಲಿ ಸ್ವೀಕೃತವಾಗಿದ್ದು, ಸದರಿ ಫಿರ್ಯಾದಿಯ ಅರ್ಜಿಯ ಸಾರಾಂಶವೇನೆಂದರೆ, ನಾನು
ಶ್ರೀಮತಿ. ಸುನೀತಾ ಗಂಡ ದಿ,.ತುಕಾರಾಮ ಕಾಂಬಳೆ ವಯ; 48 ವರ್ಷ ಉದ್ಯೋಗ : ಸಫಾಯಿ ಜಾತಿ : ಪರಿಶಿಷ್ಟ ಜಾತಿ ಮಾದಿಗ ಸಾ: ಸ್ಟೇಷನ ಹತ್ತಿರ
ಇಂಜೀನ್ ಪೈಲ್ ಶಹಾಬಾದ ತಾ:ಚಿತ್ತಾಪೂರ ಜಿ:
ಕಲಬುರಗಿ ಇದ್ದು , ಈ ದೂರಿನ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಸಫಾಯಿ ಕೆಲಸ
ಮಾಡಿಕೊಂಡು ಮೂರು ಮಕ್ಕಳೊಂದಿಗೆ ಶಹಾಬಾದದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡ ತುಕಾರಾಮ ಇವರು
20 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ನನಗೆ ಒಟ್ಟು ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು
ಮಗಳಾದ ಶೋಭಾ ಇವಳಿಗೆ 2009 ನೇ ವರ್ಷದಲ್ಲಿ ಆಶ್ರಯ ಕಾಲೂನಿಯ ಕಲಬುರಗಿ ನಗರದ ಆನಂದ ಕಾಂಬಳೆ ಇವರ
ಮಗನಾದ ವಿನೋದ ತಂದೆ ಆನಂದ ಕಾಂಬಳೆ ಇವರೊಂದಿಗೆ ಸಂಪ್ರದಾಯದ ಪ್ರಕಾರ ಮದುವೆ
ಮಾಡಿಕೊಟ್ಟಿರುತ್ತೇವೆ. ನನ್ನ ಮಗಳು ಶೋಭಾ ಗಂಡ ವಿನೋದ ವಯ: 26 ವರ್ಷ ಇವಳಿಗೂ ಸಹ ಸದ್ಯ ಮೂರು ಜನ
ಮಕ್ಕಳಿರುತ್ತಾರೆ. ಇವಳು ಕಲಬುರಗಿಯಲ್ಲಿ ತನ್ನ
ಗಂಡನ ಮನೆ ಆಶ್ರಯ ಕಾಲೂನಿಯಲ್ಲಿ ( ಮಹಾತ್ಮಾ ಗಾಂಧಿ ಲಾರಿ ತಂಗುದಾಣ ) ಮಕ್ಕಳೊಂದಿಗೆ ವಾಸವಾಗಿರುತ್ತಾಳೆ.
ಹೀಗಿರುವಾಗ ಇಂದು ದಿನಾಂಕ: 12.09.2015 ರಂದು ಬೆಳೆಗ್ಗೆ
06-30 ಗಂಟೆ ಸುಮಾರಿಗೆ ನಾನು ಶಹಾಬಾದ ನನ್ನ ಮನೆಯಲ್ಲಿದ್ದಾಗ ನನ್ನ ತಂಗಿಯ ಮಗ ಅನೀಲ
ತಂದೆ ಧನರಾಜ ಇವರು ನನ್ನ ಮಗ ಗಣಪತಿ ಇವರ ಮೊಬೈಲಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ,
ನಿನ್ನ ಮಗಳು ತೀರಿಕೊಂಡಿದ್ದಾಳೆಂದು ನನ್ನ ಮಗನಿಗೆ ಫೋನ್ ಮಾಡಿರುವುದರಿಂದ ನಾನು ಗಾಬರಿಗೊಂಡು
ನನ್ನ ಮಗ ಗಣಪತಿ ಮತ್ತು ನನ್ನ ಇತರೆ ಸಂಭಂದಿಕರಿಗೆ ವಿಷಯ ತಿಳಿಸಿ ನಾವು ಎಲ್ಲರೂ ಕೂಡಿಕೊಂಡು
ಕಲಬುರಗಿಗೆ ಬೆಳೆಗ್ಗೆ 08-30 ಗಂಟೆಗೆ ಬಂದು ಆಶ್ರಯ ಕಾಲೂನಿಯಲ್ಲಿರುವ ನನ್ನ ಮಗಳು ವಾಸವಿದ್ದ
ಮನೆಗೆ ಬಂದು ನೋಡಿದಾಗ ನನ್ನ ಮಗಳಿಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿರುತ್ತಾರೆ. ನಾನು ನನ್ನ
ಮಗಳ ಕತ್ತಿನ ಮೇಲಿನ ಗಾಯಗಳಿರುವುದನ್ನು ನೋಡಿರುತ್ತೇನೆ. ನನ್ನ ಮಗಳ ಶವವನ್ನು ನೆಲದ ಮೇಲೆ
ಹಾಕಿರುತ್ತಾರೆ. ಈ ಘಟನೆಯನ್ನು ನನ್ನ ಅಳಿಯ ವಿನೋದ ತಂದೆ ಆನಂದ ಕಾಂಬಳೆ ಸಾ; ಆಶ್ರಯ ಕಾಲೂನಿ
ಕಲಬುರಗಿ (ಲಾರಿ ತಂಗುದಾಣ) ಈತನು ದಿನಾಂಕ: 11.09.2015 ರಂದು ರಾತ್ರಿಯಿಂದ 12.09.2015 ರ
ಬೆಳಗಿನ ಜಾವದ ಅವಧಿಯಲ್ಲಿ ನನ್ನ ಮಗಳಾದ ಶೋಭಾ ಇವಳಿಗೆ ಹೊಡೆದು ಕತ್ತು ಹಿಸುಕಿ ಕೊಲೆ
ಮಾಡಿರುತ್ತಾರೆ ಹಾಗೂ ಶೋಭಾಳ ಅತ್ತೆ ಮತ್ತು ಮಾವ ಇವರ ವಿಪರೀತ ಕಿರುಕುಳ ನೀಡಿರುವುದು ನನ್ನ ಮಗಳು
ಆಗಾಗ ತಿಳಿಸಿರುತ್ತಿದ್ದಳು. (ಕಿರುಕುಳ ಗಂಭೀರವಾಗಿತ್ತು ) ಸದರಿಯವರ ಮೇಲೆ ಕಾನೂನು ಕ್ರಮ
ಜರುಗಿಸಲು ವಿನಂತಿ. ಅಂತಾ ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 158/2015 ಕಲಂ 498 [ಎ] , 302, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಆಫಜಲಪೂರ ಠಾಣೆ : ನಾನು ಮಾಹಾದೇವಪ್ಪ ತಂದೆ ಲಗಮಣ್ಣ ಬಳಗಾರ ವ|| 35 ವರ್ಷ ಜಾ|| ಕುರುಬರು ಉ|| ಒಕ್ಕಲುತನ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ. ವಿಳಾಸದವನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು
ವಾಸವಾಗಿದ್ದೆನೆ. ನನ್ನ ಹೊಲ ಸರ್ವೆ ನಂಬರ 234 ನೇದ್ದಕ್ಕೆ ಹೊಂದಿ ನಮ್ಮೂರ ಅಮೋಗಿ ತಂದೆ ಸಿದ್ರಾಮ
ಕಾಮನಕೇರಿ ಇವರ ಹೊಲ ಇರುತ್ತದೆ. ಸದರಿ ಅಮೋಗಿ
ಈತನು ಗಳೆ ಹೊಡೆದಾಗೊಮ್ಮೆ ನನ್ನ ಹೊಲ ಹೊಡೆಯುತ್ತಾ ಬರುತ್ತಿರುತ್ತಾನೆ. ನಾನು ಅಮೋಗಿ ಈತನಿಗೆ ನನ್ನ ಹೊಲದಲ್ಲಿ ಹೆಚ್ಚಿಗೆ
ಹೊಡೆಯಬೇಡ ನಿನ್ನ ಹೊಲ ಎಷ್ಟು ಇರುತ್ತೊ ಅಷ್ಟು ಹೊಡೆ ಅಂತಾ ಹೇಳಿದಕ್ಕೆ ಅವನಿಗೂ ನನಗು ಜಗಳ ಆಗುತ್ತಾ ಬಂದಿರುತ್ತದೆ.ಇಂದು ದಿನಾಂಕ
11-09-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ಹೊಲದಲ್ಲಿದ್ದಾಗ ಸದರಿ ಅಮೊಗಿ ಈತನಿಗೂ
ನನಗು ಬಾಯಿ ಬಾಂದಾರಿ ಸಂಭಂದ ಜಗಳ ಆಗಿರುತ್ತದೆ. ಸಂಜೆ 7:00 ಗಂಟೆ ಸುಮಾರಿಗೆ ನಾನು ನಮ್ಮ
ಮನೆಯಿಂದ ಹೊರಗೆ ಹೊಗುತ್ತಿದ್ದಾಗ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಹೊಗುತ್ತಿದ್ದಾಗ ಅಮೋಗಿ
ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ಅಣ್ಣ ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ತಂಗಿಯ ಗಂಡ ಭೀಮಶಾ ತಂದೆ
ಬಸಣ್ಣ ಹಾದಿಮನಿ ಮೂರು ಜನರು ನನ್ನ ಎದುರಿಗೆ ಬಂದು, ಅವರಲ್ಲಿ ಅಮೋಗಿ ಈತನು
ಏನೊ ಭೋಸಡಿ ಮಗನೆ ಹೊಲದಲ್ಲಿ ನನ್ನ ಜೋತೆನೆ ಜಗಳ ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ
ಕೈಯಿಂದ ಹೊಡೆದನು ತುಕಾರಮ ಈತನು ಕಾಲಿನಿಂದ ಒದ್ದನು. ಆಗ ನನಗು ಅವರಿಗೂ ತೆಕ್ಕ ಮುಸ್ತಿ ಆಗುತ್ತಿದ್ದಾಗ
ಭೀಮಶಾ ಈತನು ನನ್ನನ್ನು ಹಿಡಿದುಕೊಂಡಾಗ ಅಮೋಗಿ ಈತನು ಅಲ್ಲೆ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಕಟ್ಟಿಗೆ ಒಡೆಯಲು ಇಟ್ಟಿದ
ಕೊಡಲಿಯನ್ನು ತಗೆದುಕೊಂಡು ನನ್ನ ತಲೆಯ
ಮೇಲೆ ಹೊಡೆದನು. ಆಗ ನಾನು ಕೆಳಗೆ ಬಿದ್ದಾಗ ಮೂರು ಜನರು ಕೂಡಿಕೊಂಡು ನನಗೆ ಕಾಲಿನಿಂದ ಒದ್ದಿರುತ್ತಾರೆ. ಸದರಿಯವರು
ನನಗೆ ಹೊಡೆಯುತ್ತಿದ್ದಾಗ ಶರಣಪ್ಪ ಭೋರಟ್ಟಿ, ಧರೇಪ್ಪ ಬಂಕಲಗಿ, ಸಾಯಬಣ್ಣ ಪೂಜಾರಿ ಹಾಗೂ
ಹಣಮಂತ ಮಿರಗಿ ಇವರು ಬಂದು ಜಗಳ ಬಿಡಿಸಿದರು, ಆಗ ಅಮೋಗಿ ಈತನು ಕೊಡಲಿಯನ್ನು
ಸಾಯಬಣ್ಣ ಇವರ ಮನೆಯ ಮುಂದೆ ಬಿಸಾಕಿ ಎಲ್ಲರೂ ಕೂಡಿ ಅಲ್ಲಿಂದ ಹೊದರು. ನಂತರ ನನ್ನ ಅಣ್ಣ ಜಾನಪ್ಪ
ಮತ್ತು ಶರಣಪ್ಪ ಇಬ್ಬರು ಕೂಡಿ ಜೀಪಿನಲ್ಲಿ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ
ಕರೆದುಕೊಂಡು ಬಂದಿರುತ್ತಾರೆ. ಸದರಿಯವರು ನನಗೆ ಹೊಡೆದರಿಂದ ನನ್ನ ತಲೆಗೆ ಬಾರಿ ರಕ್ತಗಾಯ ಮತ್ತು ಮೈ ಕೈಗೆ
ಗುಪ್ತಗಾಯವಾಗಿರುತ್ತದೆ. 1)ಅಮೋಗಿ ತಂದೆ ಸಿದ್ರಾಮ ಕಾಮನಕೇರಿ 2) ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ 3) ಭೀಮಶಾ ತಂದೆ ಬಸಣ್ಣ ಹಾದಿಮನಿ ಸಾ|| ಎಲ್ಲರೂ ಕರಜಗಿ ಇವರಿಗೂ ನನಗೆ ಹೊಲದ ಬಾಂದಾರಿ ಸಂಭಂದ ತಕರಾರು
ಇದ್ದು, ಅದೆ ದ್ವೇಷದಿಂದ ಮೂರು
ಜನರು ನನಗೆ ಇಂದು ದಿನಾಂಕ 11-09-2015 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ನನಗೆ ಅವಾಚ್ಯ
ಶಬ್ದಗಳಿಂದ ಬೈದು, ಕೈಯಿಂದ ಹೊಡೆದು
ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿ ಹಾಗೂ ನನಗೆ ಹಿಡಿದುಕೊಂಡು ಕೊಡಲಿಯಿಂದ ಹೊಡೆದು ತಲೆಗೆ ಬಾರಿ ರಕ್ತಗಾಯ ಪಡಿಸಿ
ದುಖಾಪತ ಪಡಿಸಿರುತ್ತಾರೆ ಕಾರಣ
ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೆಕೆಂದು ಗುನ್ನೆ ದಾಖಲಾಗಿರುತ್ತದೆ.
No comments:
Post a Comment