Police Bhavan Kalaburagi

Police Bhavan Kalaburagi

Monday, September 28, 2015

KALABURAGI DISTRICT REPORTED CRIMES.

ಮಹಿಳಾ ಪೊಲೀಸ ಠಾಣೆ : ದಿನಾಂಕ 27.09.2015 ರಂದು 7 ಪಿ.ಎಂಕ್ಕೆ ಪಿರ್ಯಾದಿದಾರರಾದ ಶ್ರೀಕಾಂತ ತಂದೆ ನಾರಾಯಣರಾವ ಮೆಂಗಜಿ ಅಧೀಕ್ಷಕರು ಸಾ: ಬಾಲಕಿಯರ ಬಾಲ ಮಂದಿರ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ತಮ್ಮ ಸಂಸ್ಥೆಯ ನಿವಾಸಿಯಾದ ಅರ್ಚನಾ ತಂದೆ ಕಮಲಾಕರ ವಯಸ್ಸು 17 ವರ್ಷ ಇವಳು ಸರಕಾರಿ ಫ್ರೌಡ ಶಾಲೆ ವಿಜಯನಗರ ಕಾಲೋನಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ 26.09.2015 ರಂದು 8 ಗಂಟೆಯ ಸುಮಾರಿಗೆ ಅರ್ಚನಾ ಹಾಗೂ ಇನ್ನುಳಿದ 12 ಜನ ಅದೇ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಅವರೆಲ್ಲರನ್ನು ನಮ್ಮ ಸಂಸ್ಥೆಯ ರಕ್ಷಕಿಯಾದ  ಕವಿತಾ ಇವರು ಎಲ್ಲಾ ಮಕ್ಕಳಿಗೆ ಶಾಲೆಗೆ ಬಿಟ್ಟು ಬಂದಿರುತ್ತಾರೆ. ಶಾಲೆಗೆ ಹೋದ 12 ಜನ ಮಕ್ಕಳು ಮರಳಿ 9 ಗಂಟೆಯ ಸುಮಾರಿಗೆ ಶಾಲೆ ಇರುವದಿಲ್ಲ ಅಂತಾ ಸಂಸ್ಥೆಗೆ ಬಂದಿರುತ್ತಾರೆ. ಅರ್ಚನಾ ಇವಳು ಸಂಸ್ಥೆಗೆ ಬರದೇ ಇರುವದರಿಂದ ಕೂಡಲೇ ಶಾಲೆಗೆ ಹೋಗಿ ಹುಡುಕಾಡಲಾಗಿ ಅರ್ಚನಾ ಇವಳು ಸಿಕ್ಕಿರುವದಿಲ್ಲ ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವದಿಲ್ಲ ಕಾರಣ ಕಾಣೆಯಾದ ಅರ್ಚನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ ಠಾಣೆ : ದಿನಾಂಕ 27/09/2015 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾದಿ ಶ್ರೀ ಸಿದ್ದಪ್ಪ ತಂದೆ ಶ ರಣಪ್ಪ  ಮದ್ದರಕಿ ಸಾ: ಜೇವರ್ಗಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅರ್ಜಿ ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 27-08-2015 ರಂದು ಮದ್ಯಾಹ್ನ 1.30  ಗಂಟೆಯಿಂದ 2.00 ಗಂಟೆಯ ಮದ್ಯದ ಅವದಿಯಲ್ಲಿ  ಯಾರೋ ಕಳ್ಳರು ಜೇವರ್ಗಿ ಪಟ್ಟಣದ ಜೇವರಗಿ ಪಟ್ಟಣದ ಎನ್.ಇ.ಎಸ್.  ಕಂಪ್ಯೂಟರ್ ಕೇಂದ್ರ ಎದುರುಗಡೆ ಸ್ಥಳದಲ್ಲಿ ನಿಲ್ಲಿಸಿದ ಪೀರ್ಯಾದಿಯ ಮೊಟಾರ್ ಸೈಕಲ್ ನಂ ಕೆ.ಎ.32-ಇ.ಹೆಚ್.-8013 ಅ.ಕಿ.24,000=00  ನೇದ್ದು  ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಾರಣ ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಾಗಿರುತ್ತದೆ.
ಗ್ರಾಮೀಣ  ಪೊಲೀಸ ಠಾಣೆ : ದಿನಾಂಕ 26-09-15 ರಂದು ಸಂಜೆ 7-15 ಗಂಟೆ ಸುಮಾರಿಗೆ  ಸದರ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿ ಪಟ್ಟಣ ಕ್ರಾಸ ಮತ್ತು ಸಾವಳಗಿ ಪಾಟಿ ಮಧ್ಯದಲ್ಲಿ ಬರುವ  ಕಲಬುರಗಿ 13 ಕಿ.ಮೀ. ಮೈಲಗಲ್ಲು ಎಡ ರೋಡ ಬದಿಯಿಂದ ಒಬ್ಬ ವ್ಯಕ್ತಿ ನಡೆದುಕೊಂಡು ಹೊರಟಿದ ವ್ಯಕ್ತಿಗೆ  ಆಳಂದ ರೋಡ ಕಡೆಯಿಂದ ಒಂದು ಬಿಳಿ ಬಣ್ಣದ ಲಾರಿ ಎಂಹೆಚ 12 ಎಫಝಡ 9305 ಲಾರಿ ಚಾಲಕ ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಡಿಕ್ಕಿ ಹೊಡೆದು ಅಪಘಾತ ಪಡಿಸಿ,  ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋದನು. ಸದರ ವ್ಯಕ್ತಿಗೆ ನೋಡಲಾಗಿ ಅವನ ಎಡಗೈ ರಟ್ಟೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ. ಬಲಗಾಲ ಮೊಳಕಾಲ ಮೇಲೆ, ಮತ್ತು ಕೆಳೆಗೆ  ಹಾಗೂ ಬಲ ಹುಬ್ಬಿನ ಮೇಲೆ  ಬಲ ತಲೆಯ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಎಡ ಕಿವಿಯಿಂದ ರಕ್ತ ಸೋರಿದ್ದು ಇರುತ್ತದೆ .ಎಡಗಾಲ ಹೆಬ್ಬಟ್ಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ದಾರಿಗೆ ಹೋಗು-ಬರುವ ಜನರು ಅವನ ಷರ್ಟು ಪ್ಯಾಂಟ ಕಿಸೆ ಚೆಕ್ಕ ಮಾಡಲಾಗಿ ಅವನ ಹತ್ತಿರ ಯಾವುದೇ ಡೈರಿ ಮತ್ತು ಮೋಬಾಯಿಲ್ ಸಿಗಲಿಲ್ಲಾ. ಇದರಿಂದಾಗಿ ಸದರ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವಯಸ್ಸಿವನಿದ್ದು, ಉದ್ದ ಮುಖ, ಉದ್ದ ಮೂಗು, ಬಡಕಲು ಮೈಕಟ್ಟು, ಸಾದಾಕಪ್ಪು ಮೈಬಣ್ಣವುಳ್ಳವನು ಇರುತ್ತಾನೆ. ಅವನು ನೀಲಿ ಮತ್ತು ಹಳದಿ ಬಣ್ಣದ ಚೌಕಡಿ ಷರ್ಟು,  ಕಪ್ಪು ಬಣ್ಣದ ಪ್ಯಾಂಟು, ನೀಲಿ ಬಣ್ಣದ ಝಾಂಗ ಧರಿಸಿರುತ್ತಾನೆ. ಅಂದಾಜ 5 ಅಡಿ 3 ಎತ್ತರ ಇರುತ್ತಾನೆ. ಸದರ ಅಪರಿಚಿತ ವ್ಯಕ್ತಿಯು ತನಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ  ನಿನ್ನೆ ದಿನಾಂಕ 26-09-15 ರಂದು ರಾತ್ರಿ 10-30 ಗಂಟೆಗೆ ಸರಕಾರಿ  ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಇಂದು ದಿನಾಂಕ 27-09-15 ರಂದು ಬೆಳಿಗ್ಗೆ ಗೊತ್ತಾಗಿ ಪೊಲೀಸ ಠಾಣೆಗೆ ಬಂದಿರುತ್ತೇನೆ. ಕಾರಣ ಅಪರಿಚಿತ ವ್ಯಕ್ತಿಗೆ ಅಪಘಾತಪಡಿಸಿ ಮರಣವನ್ನುಂಟು ಮಾಡಿದ ಹಟಕೇಶ್ವರ ಲಾರಿ ಎಂಹೆಚ 12 ಎಫಝಡ 9305 ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 378/2015 ಕಲಂ 279,304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಎಕ್ಟ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.


No comments: