Police Bhavan Kalaburagi

Police Bhavan Kalaburagi

Friday, October 23, 2015

BIDAR DISTRICT DAILY CRIME UPDATE 23-10-2015



               ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-10-2015

zsÀ£ÀÆßgÀ ¥Éưøï oÁuÉ UÀÄ£Éß £ÀA. 266/2015, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 19-10-2015 ರಂದು ಫಿರ್ಯಾದಿ ಸುನೀಲ ತಂದೆ ತಾರಾಸಿಂಗ್ ಚೌವಾನ ವಯ: 18 ವರ್ಷ, ಸಾ: ಸಂಗೋಳಗಿ(ಡಿ) ತಾಂಡಾ ರವರ ಅಕ್ಕ ಸುನೀತಾ ಇವಳು ತನ್ನ ಮಗಳು ದೀಪಾ ಇವಳೊಂದಿಗೆ ದಸರಾ ಹಬ್ಬದ ಸಲುವಾಗಿ ಸಂಗೋಳಗಿ (ಡಿ) ತಾಂಡಾಗೆ ಫಿರ್ಯಾದಿಯ ಮನೆಗೆ ಬಂದಿದ್ದು, ಅಕ್ಕ ರೇಣುಕಾ ಇವಳು ಮದರ್ಗಿ ಗುಡಿ ತಾಂಡಾದಲ್ಲಿ ಇದ್ದು, ದಿನಾಂಕ 21-10-2015 ರಂದು ಫಿರ್ಯಾದಿಯು ತನ್ನ ಮೋಟಾರ ಸೈಕಲ ನಂ. ಕೆಎ-38/ಎಚ್-6632 ನೇದರ ಹಿಂದೆ ಅಕ್ಕ ಸುನೀತಾ ಮತ್ತು ಅವಳ ಮಗಳು ದೀಪಾ ಇವರನ್ನು ಕೂಡಿಸಿಕೊಂಡು ರೇಣುಕಾಳ ಭೇಟ್ಟಿಗಾಗಿ ಮದರ್ಗಿ ಗುಡಿ ತಾಂಡಾಗೆ ಹೋಗುತ್ತಿದ್ದಾಗ ಬೀದರ ಹುಮನಾಬಾದ ರೋಡ ಕಾರಂಜಾ ಡ್ಯಾಮ ದಾಟಿ ಸ್ವಲ್ಪ ಮುಂದೆ ಹೋದಾಗ ಮುಂದುಗಡೆ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ವಾಹನ ಅತಿವೇಗದಿಂದ ಹಾಗೂ ಅಜಾಗುರಕತೆಯಿಂದ ನಡೆಸುತ್ತ ಒಮ್ಮೆಲೆ ಕಟ್ಟಿತುಗಾಂವ ಗ್ರಾಮದಲ್ಲಿ ಹೊಗುವ ಕ್ರಾಸ್ ರಸ್ತೆಗೆ ಯಾವುದೇ ಸನ್ನೆ ಮಾಡದೇ ರಸ್ತೆಯ ಬಲಕ್ಕೆ ತಿರಿಗಿಕೊಂಡು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸಲಾರದೆ ಕಟ್ಟಿತುಗಾಂವ ಗ್ರಾಮದ ಕಡೆಗೆ ಓಡಿಸಿಕೊಂಡು ಹೋದನು, ಈ ಅಪಘಾತದಿಂದ ಮೂವರು ಕೆಳಗೆ ಬಿದ್ದು ಫಿರ್ಯಾದಿಯ ಬಲಮೊಳಕಾಲಿಗೆ ಮತ್ತು ಬಲ ಮೊಳಕೈಗೆ, ಬಲಗಡೆ ಹಣೆಗೆ, ಬಲಗೈ ಭುಜಕ್ಕೆ ತರಚಿದ ರಕ್ತಗಾಯವಾಗಿದ್ದು, ಅಕ್ಕ ಸುನೀತಾ ಇವಳಿಗೆ ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಅವಳು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅಷ್ಟರಲ್ಲಿ ರಸ್ತೆ ಮೇಲೆ ಬಂದ ಒಂದು ಆಟೋ ಚಾಲಕನಿಗೆ ಮನವಿ ಮಾಡಿ ಮೂವರು ಆ ವಾಹನದಲ್ಲಿ ಕುಳಿತು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬರುವಾಗ ಭಾರಿ ರಕ್ತಗಾಯಗೊಂಡ ಅಕ್ಕ ಸುನೀತಾ ಇವಳು ದಾರಿಮದ್ಯದಲ್ಲಿ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                          

No comments: